Friday 8 May 2015

dhammapada/jaravagga/11.6/mallikaa

ಸಂತರ ಧಮ್ಮಕ್ಕೆ ಮುಪ್ಪಿಲ್ಲ
ವೈಭವಯುತ ರಾಜ ರಥಗಳು ಶಿಥಿಲವಾಗುತ್ತವೆ, ಹಾಗೆಯೇ ಶರೀರಕ್ಕೂ ಸಹಾ ಜರೆ ತಪ್ಪಿದ್ದಲ್ಲ. ಆದರೆ ಸಂತರ ಧಮ್ಮಕ್ಕೆ ಜರೆಯಿಲ್ಲ. ಸಂತರು ಸಜ್ಜನರಿಗೆಲ್ಲಾ ಧಮ್ಮವನ್ನು ಪ್ರಕಟಿಸುತ್ತ ಹೋಗುವರು.’’       (151)
ಗಾಥ ಪ್ರಸಂಗ 11:6
ರಾಣಿ ಮಲ್ಲಿಕಾಳು ಎಲ್ಲಿ ಹುಟ್ಟಿರುವಳು ?

                ಶ್ರಾವಸ್ಥಿಯ ಹೂಗಾರನ ಮಗಳೇ ಮಲ್ಲಿಕಾ. ಆಕೆಯು ಅತ್ಯಂತ ಸುಂದರಳು, ಸುಶೀಲಳು, ಸಹೃದಯಗಳು, ಪ್ರಾಜ್ಞಳು ಆಗಿದ್ದಳು. ಆಕೆ ತನ್ನ ಹದಿನಾರನೇ ವಯಸ್ಸಿನಲ್ಲಿರುವಾಗ ಬುದ್ಧ ಭಗವಾನರನ್ನು ಕಂಡು ಭಕ್ತಿಯು ಹೆಚ್ಚಿ ಭಗವಾನರ ಪಾದಕ್ಕೆ ವಂದಿಸಿ ಆಹಾರವನ್ನು ದಾನ ಮಾಡಿದಳು. ಆ ದಾನದ ಫಲವಾಗಿ ಅಂದೇ ಆಕೆಯು ರಾಜ ಪಸೇನದಿಗೆ ಆಕಷರ್ಿತಳಾಗಿ ಪಟ್ಟದ ರಾಣಿಯು ಸಹಾ ಆದಳು. ಅಂದು ರಾಜನು ಅಜಾತಶತ್ರುವಿನಿಂದ ಸೋತು ಹಿಂತಿರುಗಿದ್ದನು. ಆಗ ಮಲ್ಲಿಕಾಳ ಹಾಡಿನಿಂದ ಆಕಷರ್ಿತನಾಗಿ ನಂತರ ಆಕೆಯ ರೂಪಕ್ಕೆ ಮನಸೋತು, ಆಕೆಯ ಸಾಂತ್ವನದಿಂದ ಪೂರ್ಣವಾಗಿ ಆಕೆಯನ್ನು ಬಯಸುವವನಾಗಿ ಅಂದೇ ಆಕೆಯನ್ನು ವಿವಾಹವಾಗಿ ಆಕೆಯನ್ನು ಪಟ್ಟದ ರಾಣಿಯನ್ನಾಗಿಸಿದನು.
                ಆಕೆಯು ಬಡವರಿಗೆ ಉದ್ಧಾರ ಮಾಡಿದಳು. ಬುದ್ಧರ ಪ್ರಧಾನ ಪೋಷಕರಲ್ಲಿ ಆಕೆಯು ಪ್ರಧಾನಳಾಗಿದ್ದಳು. ಆಕೆ ಮಾಡಿದ ಸಂಘದಾನಕ್ಕೆ ಮಿತಿಯಿರಲಿಲ್ಲ. ಶ್ರೇಷ್ಠ ಕರಿ ಮರಗಳಿಂದಾದ ಭವ್ಯವಾದ ಧಮ್ಮ ಸಭಾಂಗಣವನ್ನು ಸಹಾ ಆಕೆ ನಿಮರ್ಿಸಿದಳು.
                ಭಗವಾನರಲ್ಲಿಯು ಆಕೆ ಉತ್ತಮ ಪ್ರಾಜ್ಞಭರಿತ ಪ್ರಶ್ನೆಗಳನ್ನು ಕೇಳುತ್ತಿದ್ದಳು. ಒಮ್ಮೆ ಪಸೇನದಿಯು ಕೆಟ್ಟ ಸ್ವಪ್ನಗಳನ್ನು ಕಂಡು ಭಯಭೀತನಾಗಿ ಬ್ರಾಹ್ಮಣರ ಸಲಹೆಯಂತೆ ಪ್ರಾಣಿಬಲಿಯ ಯಾಗ ಮಾಡಿಸುವವನಿದ್ದನು. ಆದರೆ ಮಲ್ಲಿಕಾಳ ಸಲಹೆಯಂತೆ ಆತನು ಬುದ್ಧರನ್ನು ಕಂಡು ಅದರ ಯತಾರ್ಥತೆ ಕೇಳಿ ಶಾಂತಿ ಪಡೆದನು.
                ಮುಂದೆ ಪಸೇನದಿಯು ವಾಸಭಖತ್ತಿಯಳಿಗೆ ವಿವಾಹವಾಗಲು ಮಲ್ಲಿಕಾ ಮತ್ಸರ ಪಡಲಿಲ್ಲ. ಬದಲಾಗಿ ಆಕೆಯನ್ನು ತನ್ನ ಸೋದರಿಯಂತೆ ನೋಡಿಕೊಂಡಳು. ಒಮ್ಮೆ ಪಸೇನದಿಯು ಮಲ್ಲಿಕಾಳಲ್ಲಿ ಸಣ್ಣ ಜಗಳ ಮಾಡಿಕೊಂಡಾಗ ಭಗವಾನರು ಈರ್ವರನ್ನೂ ಒಟ್ಟುಗೂಡಿಸಿದರು. ಪಸೇನದಿ ಮತ್ತು ಮಲ್ಲಿಕಾ ಇವರು ಹಿಂದಿನ ಜನ್ಮಗಳಿಂದಲೂ ಆದರ್ಶ ದಂಪತಿಗಳು ಎಂದು ಎರಡುಬಾರಿ ಅವರ ಹಿಂದಿನ ಜನ್ಮಗಳ ವೃತ್ತಾಂತವನ್ನು ತಿಳಿಸಿದ್ದರು. ಅವನ್ನು ನಾವು ಕಿನ್ನರಜಾತಕ ಮತ್ತು 519 ಜಾತಕದಲ್ಲಿ ಕಾಣಬಹುದು.
                ಹೀಗೆ ಆಕೆಯ ಇಡೀ ಜೀವನದಲ್ಲಿ ನಾವು ಕೇವಲ ಸದ್ವರ್ತನೆ, ಸಹೃದಯತೆ, ಧಮ್ಮ ಪ್ರೇಮ ಕಾಣಬಹುದು. ಆದರೆ ಒಂದು ಘಟನೆಯಲ್ಲಿ ಮಾತ್ರ ಆಕೆ ಸ್ಮೃತಿ ತಪ್ಪಿದ್ದಳು. ಅದೆಂದರೆ: ಒಂದುದಿನ ರಾಣಿ ಮಲ್ಲಿಕಾಳು ಸ್ನಾನದ ಕೊಠಡಿಯಲ್ಲಿ ಕಾಲನ್ನು ತೊಳೆಯುತ್ತಿದ್ದಳು. ಆಗ ಆಕೆಯ ಸಾಕು ನಾಯಿಯು ಕಾಮದಿಂದ ಹಿಂದಿನಿಂದ ಹತ್ತಲು ಪ್ರಯತ್ನಿಸುತ್ತಿತ್ತು. ಆದರೆ ಆಕೆಯು ಅದನ್ನು ಓಡಿಸುವ ಬದಲು, ಆಟವೆಂದು ಪರಿಗಣಿಸಿ ಮೋದಪಟ್ಟಳು, ಸುಮ್ಮನಿದ್ದಳು. ಕಿಟಕಿಯಿಂದ ಈ ದೃಶ್ಯವನ್ನು ರಾಜ ಪಸೇನದಿಯು ಕಂಡು ಆಕೆ ಹೊರಬಂದಾಗ ಓ ತುಚ್ಛ ಸ್ತ್ರೀಯೆ! ನಾಯಿಯೊಂದಿಗೆ ಸ್ನಾನಗೃಹದಲ್ಲಿ ಏನನ್ನು ಮಾಡುತ್ತಿದ್ದೆ? ನಾನು ಕಣ್ಣಾರೆ ಕಂಡಿರುವುದನ್ನು ನಿರಾಕರಿಸಬೇಡ.
                ಪ್ರಭು ನಾನು ಕೇವಲ ಮುಖ, ಕೈಕಾಲುಗಳನ್ನು ಮಾತ್ರ ತೊಳೆಯುತ್ತಿದ್ದೆನು ಹೊರತು ಬೇರೇನು ಮಾಡಲಿಲ್ಲ.
                ಹಾಗಾದರೆ ನಾನು ಕಂಡಿದ್ದು ಸುಳ್ಳೆ.
                ಪ್ರಭು, ಈ ಸ್ನಾನದ ಕೊಠಡಿಯು ವಿಚಿತ್ರವಾದುದು, ಇದರಲ್ಲಿ ಯಾರೇ ಪ್ರವೇಶಿಸಲಿ, ಎರಡೆರಡರಂತೆ ಕಾಣುತ್ತದೆ, ನೀವು ನಾನು ಹೇಳುವುದರಲ್ಲಿ ನಂಬಿಕೆಯಿಲ್ಲದಿದ್ದರೆ ನೀವೇ ಒಳಗೆ ಹೋಗಿ, ನಾನು ಕಿಟಕಿಯಲ್ಲಿ ವೀಕ್ಷಿಸುವೆ ಎಂದಳು ರಾಣಿ.
                ಗಲಿಬಿಲಿಯಾದ ರಾಜನು ಸ್ನಾನ ಕೊಠಡಿಗೆ ಹೋದನಂತರ ರಾಣಿಯು ಹೀಗೆ ಕಿರುಚಿದಳು: ಓಹ್ ಪ್ರಭು, ಆ ಹೆಣ್ಣು ಮೇಕೆಯೊಂದಿಗೆ ಏಕೆ ಅಸಭ್ಯವಾಗಿ ವತರ್ಿಸುತ್ತಿದ್ದೀರಿ?
                ಓಹ್, ನಾನೇನೂ ಮಾಡಿಲ್ಲ, ಇಲ್ಲಿ ಯಾವ ಹೆಣ್ಣು ಮೇಕೆಯು ಇಲ್ಲ ಎಂದನು. ರಾಜ ದಿಗ್ಭ್ರಮೆಗೊಂಡನು.
                ಪ್ರಭು, ನಾನು ಕಣ್ಣಾರೆ ಕಂಡಿದ್ದೇನೆ ಎಂದು ಸುಳ್ಳು ಹೇಳಿದಳು. ರಾಜನಿಗೆ ದಿಗ್ಭ್ರಮೆಯಾಯಿತು.
                ನೋಡಿದಿರಾ, ನಾನು ಆಗಲೇ ಹೇಳಿದ್ದೆ, ಈ ಕಿಟಕಿಯಿಂದ ವಿಚಿತ್ರವಾಗಿ ಇಲ್ಲಸಲ್ಲದ್ದು ಕಾಣುತ್ತೇ ಎಂದು, ನೀವು ನಂಬಲಿಲ್ಲ ಎಂದು ಸುಳ್ಳು ಹೇಳಿ ಅಷ್ಟೇನೂ ಬುದ್ಧಿವಂತನಲ್ಲದ ರಾಜನಿಗೆ ನಂಬಿಸಿಬಿಟ್ಟಳು.
                ಆ ದಿನದಿಂದ ಧಾಮರ್ಿಕಳಾದ ರಾಣಿಗೆ ತಾನು ಸುಳ್ಳು ಹೇಳಿದ್ದು ಸಾಲದೆ, ರಾಜನ ಮೇಲೂ ಇಲ್ಲದ ಆರೋಪ ಹೊರಿಸಿದ್ದಕ್ಕೆ ಪಶ್ಚಾತ್ತಾಪಪಟ್ಟಳು. ದುರಾದೃಷ್ಟವಶಾತ್ ಆಕೆಯು ಸಾವಿಗೆ ಸಮೀಪಿಸುತ್ತಿರುವಾಗಲು ಆಕೆಯು ತಾನು ಮಾಡಿದ್ದ ಪುಣ್ಯ ಕಾರ್ಯಗಳನ್ನು ನೆನೆಯಲಿಲ್ಲ. ಬದಲಾಗಿ ರಾಜನಿಗೆ ಸುಳ್ಳು ಹೇಳಿ ಆರೋಪ ಹೊರಿಸಿದ ನೆನಪಿನಲ್ಲೇ ಆಕೆ ಸಾವನ್ನಪ್ಪಿದಳು. ಪರಿಣಾಮವಾಗಿ (ಜವನ ಯೋಚನಾ ಕ್ಷಣದಲ್ಲಿ ಹೀಗಾದಾಗ) ನಿರಯದಲ್ಲಿ ಹುಟ್ಟಿದಳು. ಆಕೆಯ ಶವಸಂಸ್ಕಾರದ ನಂತರ ರಾಜನು ಬುದ್ಧರಲ್ಲಿ ಮಲ್ಲಿಕಾಳ ಪುನರ್ಜನ್ಮದ ಬಗ್ಗೆ ಕೇಳಲು ಬಂದನು.
                ಭಗವಾನರಿಗೆ ರಾಜ ಪಸೇನದಿ ಕೇಳಲು ಇಚ್ಛಿಸುವ ಪ್ರಶ್ನೆ ತಿಳಿದುಹೋಯಿತು. ಅದಕ್ಕೆ ಇರುವಂತೆಯೇ ಉತ್ತರಿಸಿದರೆ, ಆತನು ಧಮ್ಮದ ಮೇಲೆ ವಿಶ್ವಾಸಹೀನನಾಗಿ ಧಮ್ಮದ ದಾರಿ ತಪ್ಪುವ ಸಾಧ್ಯತೆಯಿತ್ತು. ಆದರೆ ಆಕೆ ಪುನಃ ಏಳು ದಿನದ ನಂತರ ತುಸಿತಾ ದೇವಲೋಕದಲ್ಲಿ ಹುಟ್ಟುವುದು ಭಗವಾನರಿಗೆ ತಿಳಿದಿತ್ತು. ಆದರೆ ಅದನ್ನು ಮುಂಚೆಯೇ ಹೇಳುವ ಹಾಗಿಲ್ಲ. ಹೀಗಾಗಿ ಭಗವಾನರು ಪಸೇನದಿಯು ಭಗವಾನರಲ್ಲಿ ಆ ಪ್ರಶ್ನೆಯನ್ನು ಪ್ರಶ್ನಿಸಬಾರದೆಂದು ಸಂಕಲ್ಪಿಸಿದರು.
                ಇದರ ಪರಿಣಾಮವಾಗಿ ಏಳು ದಿನಗಳ ಕಾಲ ಪಸೇನದಿಯು ಈ ಪ್ರಶ್ನೆ ಕೇಳಲು ಬಂದರೂ, ಮರೆತು ಹೋಗುತ್ತಿದ್ದನು. ಧಮ್ಮವಾಲಿಸಿ ಸಾಂತ್ವನ ಪಡೆದು ಹೋಗುತ್ತಿದ್ದನು.
                ಏಳು ದಿನಗಳ ನಂತರ ರಾಣಿ ಮಲ್ಲಿಕಾಳು ತನ್ನ ಹಿಂದಿನ ಪುಣ್ಯ ಕರ್ಮಗಳ ಫಲದಿಂದಾಗಿ ತುಸಿತಾ ದೇವರಲ್ಲಿ ಜನ್ಮಿಸಿದಳು. ಈಗ ರಾಜನಿಗೆ ಹೇಳುವ ಸಕಾಲ ಎಂದು ಭಗವಾನರು ಆಹಾರಕ್ಕಾಗಿ ರಾಜ ಪಸೇನದಿಯ ಬಳಿಗೆ ಹೋದರು. ಊಟೋಪಚಾರದ ನಂತರ ಪಸೇನದಿಯು ಭಗವಾನರಲ್ಲಿ ಹೀಗೆ ಪ್ರಶ್ನಿಸಿದನು:
                ಭಗವಾನ್, ರಾಣಿ ಮಲ್ಲಿಕಾಳು ಎಲ್ಲಿ ಹುಟ್ಟಿರುವಳು ?
                ಓ ಮಹಾರಾಜ! ಮಲ್ಲಿಕಾಳು ತುಸಿತಾ ದೇವಲೋಕದಲ್ಲಿ ಜನಿಸಿದ್ದಾಳೆ.
                ರಾಜನು ಆನಂದಿತನಾಗಿ ಹೀಗೆ ನುಡಿದನು: ಸುಗತಿ ಬಿಟ್ಟರೆ ಬೇರೆ ಎಲ್ಲಿ ತಾನೇ ಆಕೆ ಹುಟ್ಟಬಲ್ಲಳು? ಆಕೆಯು ಸದಾ ಸತ್ಕರ್ಮಗಳ ಬಗ್ಗೆಯೇ ಯೋಚಿಸುತ್ತಿದ್ದಳು. ಮಾರನೆಯ ದಿನ ಭಗವಾನರಿಗೆ ಏನನ್ನು ದಾನವಾಗಿ ಅಪರ್ಿಸಲಿ ಎಂದೇ ಯೋಚಿಸುತ್ತಿದ್ದಳು. ಭಗವಾನ್, ಆಕೆ ಹೊರಟಮೇಲೆ ನಾನು ನಿಮ್ಮ ನಮ್ರ ಶಿಷ್ಯನಾಗಿದ್ದೇನೆ, ನನಗೆ ಏನನ್ನು ಮಾಡಬೇಕೆಂಬುದೇ ಗೊತ್ತಿಲ್ಲ.

                ಆಗ ಭಗವಾನರು ಆತನಿಗೆ ಹೀಗೆ ನುಡಿದರು: ರಾಜ, ನಿನ್ನ ತಂದೆ ಹಾಗು ಪೂವರ್ಿಕರ ರಥಗಳನ್ನು ನೋಡು, ಇವೆಲ್ಲವು ಸಹಾ ಶಿಥಿಲವಾಗಿ ನಿಷ್ಪ್ರಯೋಜಕವಾಗಿವೆ. ಇದರಂತೆಯೇ ನಿನ್ನ ಶರೀರ ಸಹಾ. ಇದು ಸಹಾ ಮುಪ್ಪು ಮತ್ತು ಮರಣಕ್ಕೆ ಗುರಿಯಾಗುವುದು, ಕೇವಲ ಶೀಲವಂತನ ಧಮ್ಮಕ್ಕೆ ಮಾತ್ರ ಮುಪ್ಪಿಲ್ಲ ಎಂದು ಹೇಳಿ ಮೇಲಿನ ಗಾಥೆ ನುಡಿದರು.

No comments:

Post a Comment