Saturday 6 June 2015

dhammapada/buddhavagga/14.1/magandiyaa

             14. ಬುದ್ಧ ವಗ್ಗ
ಬುದ್ಧರು ಅನುಪಮ ಅನಂತ ಸಾಮಥ್ರ್ಯರು
ಯಾರ ಜಯವು ಯಾರಿಂದಲೂ, ಯಾವುದರಿಂದಲೂ ಅಪಜಯವಾಗದೇ, ಜಯಿಸಿದ ಲೋಕಗಳ ಕಲ್ಮಶಗಳು ಯಾರನ್ನು ಹಿಂಬಾಲಿಸುವುದಿಲ್ಲವೋ ಅಂತಹ ಬುದ್ಧರು ಅನಂತ ವ್ಯಾಪ್ತಿವುಳ್ಳವರು, ಅಂತಹವರನ್ನು ಯಾವ ಹಾದಿಯಿಂದ ನೀನು ಶೋಧಿಸುವೆ?       (179)
ಯಾರಲ್ಲಿ ಜಾಲದಲ್ಲಿ ಸಿಕ್ಕಿಸಿಕೊಳ್ಳುವ, ಗೊಂದಲದಲ್ಲಿ ಸಿಲುಕುವ, ವಿಷಯವಾದ ತನ್ಹಾ ಇಲ್ಲವಾಗಿದೆಯೋ ಅಂತಹ ಅನಂತ ವ್ಯಾಪ್ತಿವುಳ್ಳವರಿಗೆ ಹಾದಿಯೇ ಇಲ್ಲ. ಅಂತಹವರನ್ನು ಯಾವ ಹಾದಿಯಿಂದ ನೀನು ಶೋಧಿಸುವೆ.              (180)
ಗಾಥ ಪ್ರಸಂಗ 14:1
ಬುದ್ಧರಲ್ಲಿ ವಿವಾಹ ಪ್ರಸ್ತಾಪ ಮಾಡಿದ ಬ್ರಾಹ್ಮಣ


                ಕುರು ರಾಜ್ಯದಲ್ಲಿ ಮಾಗಂಡಿಯನೆಂಬ ಬ್ರಾಹ್ಮಣನಿದ್ದನು. ಆತನಿಗೆ ಮಾಗಂಡಿಯಾ ಎಂಬ ಮಗಳಿದ್ದಳು. ಆಕೆಯು ಅನುಪಮ ಸೌಂದರ್ಯ ಹೊಂದಿದ್ದಳು. ಆಕೆಯನ್ನು ವಿವಾಹವಾಗಲು ಶ್ರೀಮಂತರು ಮತ್ತು ಸಮಾಜದಲ್ಲಿ ಉಚ್ಛ ಪದವಿಯಲ್ಲಿರುವ ಬ್ರಾಹ್ಮಣರು ಮತ್ತು ಕ್ಷತ್ರಿಯರು ಆಕೆಯನ್ನು ವಿವಾಹವಾಗಲು ಬಯಸಿದರು ಮತ್ತು ಪ್ರಯತ್ನಿಸಿದರು. ಮಾಗಂಡಿಯನ ಬಳಿಗೆ ಬಂದು ನಿನ್ನ ಮಗಳನ್ನು ನಮಗೆ ಧಾರೆ ಎರೆ ಎಂದು ಯಾಚಿಸಿದರು. ಆದರೆ ಮಾಗಂಡಿಯನು ನೀವು ನನ್ನ ಮಗಳಿಗೆ ಸರಿಯಾದ ಜೋಡಿಯೇ ಅಲ್ಲ ಎಂದು ಎಲ್ಲರಿಗೂ ನಿರಾಕರಿಸಿದನು.
                ಒಂದುದಿನ ಭಗವಾನರು ಈ ದಿನ ಯಾರಿಗೆ ಜ್ಞಾನೋದಯ ಉಂಟುಮಾಡಲಿ ಎಂದು ಮಹಾಕರುಣಾ ಸಮಾಪತ್ತಿಯಲ್ಲಿ ವೀಕ್ಷಿಸಿದಾಗ ಅವರಿಗೆ ಮಾಗಂಡಿಯ ದಂಪತಿಗಳು ಕಾಣಿಸಿದರು. ಹೀಗಾಗಿ ಭಗವಾನರು ಅವರನ್ನು ಭೇಟಿ ಮಾಡಲು ನಿರ್ಧರಿಸಿದರು. ಆ ಬ್ರಾಹ್ಮಣನು ಪ್ರತಿನಿತ್ಯ ಊರ ಹೊರಗೆ ಅಗ್ನಿಯನ್ನು ಕಾಯುತ್ತಿದ್ದನು. ಹೀಗಾಗಿ ಭಗವಾನರು ಪಿಂಡಪಾತ್ರೆ ತೆಗೆದುಕೊಂಡು ಅದೇ ಸ್ಥಳದಲ್ಲಿ ಹೋದರು. ಮಾಗಂಡಿಯ ಬ್ರಾಹ್ಮಣನು ಭಗವಾನರ ಪರಮ ದಿವ್ಯ ಸೌಂದರ್ಯವನ್ನು ವೀಕ್ಷಿಸಿದನು. ಕೂಡಲೇ ಹೀಗೆ ನಿರ್ಧರಿಸಿದನು. ಈ ಮಾನವನಿಗೆ ಸರಿಸಾಟಿಯಾದ ಮಾನವ ಮತ್ತೊಬ್ಬನಿಲ್ಲ, ಖಂಡಿತವಾಗಿ ಈತನೇ ನನ್ನ ಮಗಳಿಗೆ ಯೋಗ್ಯನಾದ ವರನಾಗಿರುವನು. ನಾನು ಈತನಿಗೆಯೇ ನನ್ನ ಮಗಳನ್ನು ಧಾರೆ ಎರೆಯುವೆನು ಹೀಗೆ ನಿರ್ಧರಿಸುತ್ತಾ ಆತನು ಭಗವಾನರ ಹತ್ತಿರ ಬಂದನು. ಹಾಗು ಹೀಗೆ ಹೇಳಿದನು: ಪೂಜ್ಯರೇ, ನನಗೆ ಒಬ್ಬಳೇ ಮಗಳಿದ್ದಾಳೆ. ಹಾಗು ನಾನು ಆಕೆಗಾಗಿ ವರನನ್ನು ಹುಡುಕುತ್ತಾ ವ್ಯರ್ಥ ಶ್ರಮ ಮಾಡಿದೆನು. ಆಕೆಗೆ ಸರಿಸಾಟಿಯಾದ ವರ ಸಿಗಲಿಲ್ಲ. ಹೀಗಾಗಿ ನಾನು ಆಕೆಯನ್ನು ಯಾರಿಗೂ ನೀಡಲಿಲ್ಲ. ಆದರೆ ನೀವೇ ಆಕೆಗಾಗಿ ಸಮಂಜಸ ವರ ಆಗಿದ್ದೀರಿ. ನಾನು ನಿಮಗೆ ನನ್ನ ಮಗಳನ್ನು ಧಾರೆ ಎರೆಯಲು ಬಯಸುತ್ತೇನೆ. ನಾನು ಆಕೆಯನ್ನು ಕರೆತರುವವರೆಗೂ ಕಾಯುತ್ತಿರಿ ಎಂದು ಹೇಳಿ ಆತುರವಾಗಿ ಹೊರಟನು. ಆದರೆ ಭಗವಾನರು ಅದಕ್ಕೆ ಸಮ್ಮತಿಯಾಗಲಿ ಅಥವಾ ತಿರಸ್ಕಾರವಾಗಲಿ ಏನನ್ನೂ ಮಾಡಲಿಲ್ಲ. ಹಾಗೆಯೇ ಆ ಬ್ರಾಹ್ಮಣನು ಹೇಳಿದಂತೆ ಅದೇ ಸ್ಥಳದಲ್ಲಿ ಉಳಿಯಲೂ ಇಲ್ಲ. ಬದಲಾಗಿ ಅಲ್ಲಿಂದ ಸ್ವಲ್ಪ ದೂರದ ಸ್ಥಳದಲ್ಲಿ ನಿಂತರು.
                ಇತ್ತ ಬ್ರಾಹ್ಮಣನು ಆಕೆಗೆ ಉತ್ತಮ ವಸ್ತ್ರಗಳಿಂದ ಮತ್ತು ಆಭರಣಗಳಿಂದ ಅಲಂಕೃತಗೊಳಿಸಿ, ಆಕೆಯನ್ನು ಕರೆತಂದನು. ಆದರೆ ಅತನು ನಿಲ್ಲಿಸಿದ್ದ ಸ್ಥಳದಲ್ಲಿ ಭಗವಾನರು ಆತನಿಗೆ ಕಾಣಿಸಲಿಲ್ಲ. ಎಲ್ಲಿ ಆ ದಿವ್ಯಪುರುಷ, ನಾನು ಆತನಿಗೆ ಇಲ್ಲೇ ಇರುವಂತೆ ಕೇಳಿಕೊಂಡಿದ್ದೆ. ಹಾಗೆಯೇ ಹುಡುಕುತ್ತ ಆತನಿಗೆ ಭಗವಾನರು ಪಾದಮುದ್ರಿತ ಚಿಹ್ನೆ ಕಾಣಿಸಿತು. ತಕ್ಷಣ ಆತನು ಪತ್ನಿಗೆ ಅದನ್ನು ತೋರಿಸಿದನು. ಇದು ಅವರದೇ ಪಾದಚಿಹ್ನೆಗಳಾಗಿವೆ. ಆ ಪಾದ ಚಿಹ್ನೆಗಳನ್ನು ವೀಕ್ಷಿಸಿದ ಪತ್ನಿಯು ಲಕ್ಷಣ ಶಾಸ್ತ್ರಜ್ಞೆಯಾಗಿದ್ದಳು. ಆಕೆ ಹೀಗೆ ಹೇಳಿದಳು: ಸ್ವಾಮಿ, ಈ ಪಾದಚಿಹ್ನೆ ಹೊಂದಿರುವವರು ಇಂದ್ರಿಯಸುಖಕಾಮಿಗಳಾಗಿರುವುದಿಲ್ಲ.
                ಓ ಹೆಂಡತಿಯೇ, ನೀನು ಪ್ರತಿ ಹನಿಯಲ್ಲೂ ಮೊಸಳೆಯನ್ನೇ ಕಾಣುವೆ, ನಾನು ಆತನಿಗೆ ಒಪ್ಪಿಸಿದ್ದೇನೆ, ಆತನು ನಿರಾಕರಿಸಲಿಲ್ಲ.
                ನೀವು ಏನೇ ಹೇಳಿರಿ, ಈ ಪಾದಚಿಹ್ನೆ ಮಾತ್ರ ಇಂದ್ರಿಯ ಭೋಗಿಗಳದ್ದಲ್ಲ.
                ಹೆಂಡತಿಯೇ, ಇದಕ್ಕೆ ದೊಡ್ಡ ಜಗಳವಾಡಬೇಡ, ನನ್ನ ಜೊತೆ ನಿಶ್ಶಬ್ಧವಾಗಿ ಬಾ ಎಂದು ಆ ಬ್ರಾಹ್ಮಣನು ಆ ಪಾದಚಿಹ್ನೆಗಳನ್ನು ಹಿಂಬಾಲಿಸುತ್ತಾ ಬುದ್ಧರನ್ನು ಕಂಡನು. ಇವರೇ ಅವರು ಎಂದು ಪತ್ನಿ ಮಗಳಿಗೆ ತೋರಿಸಿ, ಬುದ್ಧರ ಬಳಿಗೆ ಬಂದನು. ಪೂಜ್ಯರೇ, ನನ್ನ ಮಗಳಿಗೆ ಧಾರೆ ಎರೆಯಲು ಬಂದಿರುವೆ.
                ಆಗ ಭಗವಾನರು ನನಗೆ ನಿಮ್ಮ ಮಗಳು ಬೇಕಾಗಿಲ್ಲ ಎಂದರು. ಆದರೆ ನಿಮ್ಮೊಂದಿಗೆ ಸ್ವಲ್ಪ ಹೇಳಬೇಕಾಗಿದೆ ಆಲಿಸಿರಿ ಎಂದಾಗ, ಬ್ರಾಹ್ಮಣನು ಹೇಳಿ ಕೇಳುತ್ತೇವೆ ಎಂದನು. ಆಗ ಭಗವಾನರು ತಮ್ಮ ಅಭಿನಿಷ್ಕ್ರಮಣದ ಸಂಗತಿಗಳನ್ನು ಹೇಳಿದರು. ಆಗ ಭಗವಾನರು ಕಂಥಕ ಕುದುರೆಯೇರಿ ಚೆನ್ನನೊಡನೆ ಮನೆಯ ಜೀವನ ತ್ಯಾಗ ಮಾಡಿದ್ದು, ನಂತರ ನಗರದ ಪ್ರವೇಶದ್ವಾರದ ಬಳಿ ಮಾರನು ಬೋಧಿಸತ್ವರು ಹಿಂತಿರುಗಿದರೆ ಏಳನೆಯ ದಿನದಂದೇ ಚಕ್ರವತರ್ಿಯಾಗಲಿರುವರು ಎಂದು ಹೇಳಿದಾಗಲೂ, ಬೋಧಿಸತ್ವರು ನನಗೆ ಅದು ಬೇಕಾಗಿಲ್ಲ ಎಂದು ಉತ್ತರಿಸಿದಾಗ, ಮಾರನು ಅವರ ಅಭಿನಿಷ್ಕ್ರಮಣಕ್ಕೆ ಕಾರಣ ಕೇಳಿದಾಗ ಸಮ್ಮಾ ಸಂಬೋಧಿ ಪ್ರಾಪ್ತಿ ಎಂದು ಹೇಳಿದ್ದು, ಆಗಿನಿಂದ ಮಾರನು ಅವರ ಹಿಂದೆ ಅಣು ತಪ್ಪಿಗಾಗಿ ಆರು ವರ್ಷ ಹಿಂಬಾಲಿಸಿದರೂ, ಕ್ಷಣವೂ ಸಹಾ ಮನಸ್ಸಿನಲ್ಲಿಯೂ ತಪ್ಪಾಗಿ ಯೋಚಿಸಿಲ್ಲ ಎಂದು ವಿವರಿಸಿದರು.
                ಆರು ವರ್ಷಗಳು ಕಳೆದಾಗ, ಬೋಧಿವೃಕ್ಷದ ಅಡಿಯಲ್ಲಿ ಅವರು ಸಮ್ಮಾಸಂಬೋಧಿ ಪ್ರಾಪ್ತಿಮಾಡಿ ವಿಮುಕ್ತಿಯ ನಿಕಟದಲ್ಲಿದ್ದಾಗ ಮಾರನ ಸೋತು ಅತ್ತಿದ್ದೆಲ್ಲಾ ಹೇಳಿದರು. ಆಗ ಮಾರನ ಮೂವರು ಕುಮಾರಿಯರಾದ ತನ್ಹಾ, ಆರತಿ, ರಾಗ ಈ ಮೂವರು ಅದ್ವಿತೀಯ ಸೌಂದರ್ಯವನ್ನು ಹೊಂದಿದ್ದರು. ಅವರ ದೇಹ ಮಾನವರಂತೆ ಕಶ್ಮಲದಿಂದ ಕೂಡಿರಲಿಲ್ಲ. ಹಾಗೆಯೇ ದಿವ್ಯಕಾಂತಿ, ದಿವ್ಯಸ್ಪರ್ಶ, ದಿವ್ಯ ಗಂಧ, ದಿವ್ಯಸ್ಪರ್ಶ, ದಿವ್ಯರೂಪಗಳಿಂದ ಕೂಡಿದವರಾಗಿದ್ದರು. ಅವರು ತಂದೆಯ ಸೋಲನ್ನು ಕಂಡು ಮರುಗಿ, ಬುದ್ಧರನ್ನು ಉದ್ರೇಕಿಸಲು ಶತಾಯಗತಾಯ ಪ್ರಯತ್ನಪಟ್ಟರೂ ನಾನಾ ವಯಸ್ಸಿನ ಆಕೃತಿಯಲ್ಲಿ, ನಾನಾ ವಿಧವಾದ ರೂಪ ಆಕಾರಗಳಿಂದಲೂ, ನೂರಾರು ರೀತಿಯ ವೈವಿಧ್ಯತೆಯನ್ನು ಪ್ರದಶರ್ಿಸಿದರೂ ಬುದ್ಧರ ಕಣ್ಣಾಗಲಿ, ಚಿತ್ತದ ಯೋಚನೆಯಾಗಲಿ ಪಕ್ಕಕ್ಕೆ ಸರಿದಿರಲಿಲ್ಲ. ನಾವೆಲ್ಲಾ ನಿಮ್ಮ ಚರಣದಾಸಿಯರು ಎಂದು ಹೇಳಿದಾಗಲೂ, ನೃತ್ಯ, ಗೀತೆ, ಇತ್ಯಾದಿಗಳಿಂದ ಸೆಳೆಯಲು ಯತ್ನಿಸಿ ವಿಫಲವಾಗಿದ್ದನ್ನು ಹೇಳಿದರು. ನಂತರ ಭಗವಾನರು ಹೀಗೆ ಹೇಳಿದರು: ಮಾಗಂಡಿಯ, ಆಗ ಮಾರನ ಕುಮಾರಿಯರಿಂದಲೇ ವಿಚಲಿತನಾಗದ ನನಗೆ ಕಲ್ಮಶಗಳಿಂದ ಕೂಡಿರುವ ದೇಹ ಹೊಂದಿರುವ ನಿನ್ನ ಮಗಳಿಗೆ ವಶನಾಗುವೆನೇ, ನಾನು ನನ್ನ ಪಾದದಿಂದಲು ಸ್ಪಶರ್ಿಸಲು ನಿರಾಕರಿಸುತ್ತೇನೆ ಎಂದರು. ಆಗ ಮಾಗಂಡಿಯ ದಂಪತಿಗೆ ಜ್ಞಾನೋದಯವಾಗಿ ಅನಾಗಾಮಿಗಳಾದರು. ಆದರೆ ಮಗಳು ಮಾಗಂಡಿಯಳು ಇದು ನನಗೆ ಅಪಮಾನ, ಪ್ರತಿಕಾರ ತೀರಿಸುವೆ ಎಂದು ದ್ವೇಷದ ಸಂಕಲ್ಪ ಮಾಡಿದಳು. ಆ ಸಮಯದಲ್ಲೇ ಬ್ರಾಹ್ಮಣ ದಂಪತಿಗೆ ಈ ಮೇಲಿನ ಗಾಥೆಯನ್ನು ನುಡಿದಿದ್ದರು.




No comments:

Post a Comment