Saturday 6 June 2015

dhammapada/buddhavagga/14.6/aggidatta

ತ್ರಿಶರಣುವಿಗೆ ಮೀರಿದ ಶ್ರೇಷ್ಠ ಶರಣಿಲ್ಲ
ಯಾವಾಗ ಭಯವು ಪೀಡಿಸುವುದೋ ಆಗ ಬಹಳಷ್ಟು ಮಾನವನು ಬೆಟ್ಟಗಳಿಗೆ, ಕಾಡುಗಳಿಗೆ, ಮರಗಳಿಗೆ, ಮಂದಿರಗಳಿಗೆ, (ಪೂಜಾ ಸ್ಥಳಗಳಿಗೆ) ಶರಣು ಹೋಗುತ್ತಾರೆ.                (188)
ಆದರೆ ಅಂತಹ ಯಾವ ಶರಣು ಕ್ಷೇಮಕರವಲ್ಲ ಮತ್ತು ಅಂತಹ ಯಾವುದೂ ಉತ್ತಮ ಶರಣು ಅಲ್ಲ! ಅಂತಹ ಶರಣುವಿನಿಂದ ಯಾರೊಬ್ಬರೂ ದುಃಖಗಳಿಂದ ಮುಕ್ತರಾಗಲು ಸಾಧ್ಯವಿಲ್ಲ.                (189)
ಆದರೆ ಯಾರು ಬುದ್ಧರಲ್ಲಿ, ಧಮ್ಮದಲ್ಲಿ ಮತ್ತು ಸಂಘದಲ್ಲಿ ಶರಣು ಹೋಗುವರೋ ಅಂತಹವರು ಮಾತ್ರ ಸಮ್ಮಾ ಪ್ರಜ್ಞಾದಿಂದಾಗಿ ನಾಲ್ಕು ಆರ್ಯಸತ್ಯಗಳನ್ನು ಅರಿಯುತ್ತಾರೆ.   (190)
ಅದೆಂದರೆ ದುಃಖ ಸತ್ಯ, ದುಃಖ ಸಮುದಾಯ ಸತ್ಯ (ಕಾರಣ) ದುಃಖ ನಿರೋಧ ಸತ್ಯ ಮತ್ತು ಆರ್ಯ ಅಷ್ಠಾಂಗಿಕ ಮಾರ್ಗ ಸತ್ಯ, ಇವುಗಳನ್ನು ಅರಿಯುತ್ತಾರೆ.         (191)
ಇಂತಹ ಶರಣು ಕ್ಷೇಮಕರವಾಗಿದೆ, ಇಂತಹ ಶರಣು ಉತ್ತಮೋತ್ತಮವಾಗಿದೆ, ಇಂತಹ ಶರಣುವಿನಲ್ಲಿ ಶರಣು ಹೋದಾಗ ದುಃಖವೆಲ್ಲದರಿಂದ ಮುಕ್ತರಾಗಬಹುದು. (192)
ಗಾಥ ಪ್ರಸಂಗ 14:6
ಪರಪಂಥದ ನಾಯಕ ಅಗ್ಗಿದತ್ತನ ಶರಣಾಗತಿ

                ಕೋಸಲ ರಾಜ್ಯದಲ್ಲಿ ಅಗ್ಗಿದತ್ತನೆಂಬ ರಾಜಪುರೋಹಿತನಿದ್ದನು. ಕೋಸಲದ ದೊರೆ ಮಹಾಕೋಸಲನು ನಿಧನನಾದಾಗ, ಪಸೇನದಿಯು ಮಹಾರಾಜನಾದನು. ತಂದೆಯ ಮೇಲಿನ ಗೌರವದಿಂದಾಗಿ ಆತನು ಅಗ್ಗಿದತ್ತನಿಗೆ ಪುನಃ ರಾಜಪುರೋಹಿತನನ್ನಾಗಿಸಿದನು. ರಾಜನು ಅಗ್ಗಿದತ್ತನಿಗೆ ಅಪಾರ ಗೌರವ ನೀಡುತ್ತಿದ್ದನು. ಗುರುಗಳೇ ಬನ್ನಿ, ಕುಳಿತುಕೊಳ್ಳಿ ಎಂದೆಲ್ಲಾ ಸಂಬೋಧಿಸಿ ಗೌರವ ನೀಡುತ್ತಿದ್ದನು. ಕೆಲದಿನಗಳ ನಂತರ ಅಗ್ಗಿದತ್ತ ಈ ರೀತಿ ಚಿಂತಿಸಿದನು. ಈ ರಾಜನು ನನಗೆ ಅಪಾರ ಗೌರವ ನೀಡುತ್ತಿರುವನು. ಆದರೆ ಇದೇರೀತಿಯಲ್ಲಿ ರಾಜರ ಕೃಪೆಯಲ್ಲಿ ಉಳಿಯುವುದು ಅಸಾಧ್ಯದ ವಿಷಯವಾಗಿದೆ. ರಾಜನ ಕೃಪೆಯಿಂದಾಗಿ ಗೃಹಸ್ಥ ಜೀವನವು ಸುಮಧುರ. ಆದರೆ ಅದು ಯುವಕನಾಗಿದ್ದರೆ ಮಾತ್ರ, ಸಮಾನ ವಯಸ್ಕನಾಗಿದ್ದರೆ ಮಾತ್ರ ಸಮಂಜಸವಾದುದು, ನಾನಾದರೂ ವೃದ್ಧನಾಗಿದ್ದೇನೆ. ಆದ್ದರಿಂದ ನಾನು ಸಾಧುವಾಗಿಬಿಡುತ್ತೇನೆ ಎಂದು ಆತನು ರಾಜನಲ್ಲಿ ಅಪ್ಪಣೆ ಪಡೆದು, ತನ್ನ ಐಶ್ವರ್ಯವನ್ನು ಒಂದುವಾರ ಕಾಲ ದಾನಮಾಡಿ, ಆತನು ಲೌಕಿಕ ಜೀವನದಿಂದ ನಿವೃತ್ತನಾದನು, ಸಮಣನಾದನು. ಆತನಿಗೂ ಅಪಾರ ಶಿಷ್ಯರು ಸಿಕ್ಕಿದರು.

                ಅಗ್ಗಿದತ್ತನು ಅಂಗ, ಮಗಧ, ಕುರು ರಾಜ್ಯಗಳ ಗಡಿಪ್ರದೇಶದಲ್ಲಿ ವಾಸವಾಗಿದ್ದನು. ಆತನ ವಾಸಸ್ಥಳವು ಈ ಮೂರು ರಾಜ್ಯಗಳನ್ನು ಸೇರಿತ್ತು. ಆತನು ತನ್ನ ಅನುಯಾಯಿಗಳಿಗೆ ಈ ರೀತಿ ಬೋಧನೆ ಮಾಡಿದನು: ಮಿತ್ರರೇ, ನಿಮ್ಮಲ್ಲಿ ಕಾಮಯುತ ಯೋಚನೆಯಾಗಲಿ, ದುರಾಸೆಯುತ ಯೋಚನೆಯಾಗಲಿ, ಕ್ರೂರಯುತ ಯೋಚನೆಯಾಗಲಿ, ದ್ವೇಷಯುತ ಯೋಚನೆಗಳು ಉಂಟಾದರೆ ನೀವು ನದಿಯ ಮಣ್ಣನ್ನು ಹೂಜಿಯಲ್ಲಿ ತುಂಬಿ, ಇಲ್ಲಿ ಚೆಲ್ಲಿ ಅವನ್ನು ಬರಿದು ಮಾಡಬೇಕು ಎಂದು ಆಜ್ಞಾಪಿಸಿದರು. ಆ ಮೂಢರು ಅದರಂತೆ ತಮ್ಮಲ್ಲಿ ಕೆಟ್ಟ ಆಲೋಚನೆ ಹೊಮ್ಮಿದಂತೆಲ್ಲಾ ನದಿಯಿಂದ ಮಣ್ಣನ್ನು ತಂದು ತಂದು ಆತನಿರುವ ಸ್ಥಳದಲ್ಲಿ ಸುರಿಯುತ್ತಿದ್ದರು. ಹೀಗಾಗಿ ಅಲ್ಲಿ ಒಂದು ಸಣ್ಣ ಗುಡ್ಡವೇ ನಿಮರ್ಾಣವಾಗಿತ್ತು. ಆತನ ಈ ಕೃತ್ಯದಿಂದ ಉತ್ತೇಜಿತರಾದ ಭಕ್ತಾಧಿಗಳು ಆತನಿಗೆ ಅಪಾರ ಕಾಣಿಕೆಗಳನ್ನು ನೀಡಲು ಆರಂಭಿಸಿದರು.

                ಆಗ ಆತನು ಅವರಿಗೆ ಇನ್ನೊಂದು ಶಿಕ್ಷಣ ನೀಡಲು ನಿರ್ಧರಿಸಿದನು. ಆತನು ತನ್ನ ಹಿಂಬಾಲಕರಿಗೆ ಹೀಗೆ ಆಜ್ಞಾಪಿಸಿದನು: ನೀವುಗಳೆಲ್ಲಾ ಪರ್ವತಗಳಿಗೆ, ಬೆಟ್ಟಗಳಿಗೆ ಶರಣು ಹೋಗಿರಿ, ಕಾಡಿಗೆ ಶರಣು ಹೋಗಿ, ತೋಪಿಗೆ ಶರಣು ಹೋಗಿ, ವೃಕ್ಷಗಳಿಗೆ ಶರಣುಹೋಗಿ, ಆಗ ನೀವು ಎಲ್ಲಾ ದುಃಖಗಳಿಂದ ಮುಕ್ತರಾಗುವಿರಿ. ಆತನ ದಡ್ಡ ಶಿಷ್ಯರು ಅದರಂತೆಯೇ ಆಚರಿಸತೊಡಗಿದರು. ಒಂದುದಿನ ಮುಂಜಾನೆ ಭಗವಾನರು ಮಹಾಕರುಣಾ ಸಮಾಪತ್ತಿಯಲ್ಲಿ ಅರಹಂತರಾಗಲು ಅರ್ಹತೆಯಿರುವ ವ್ಯಕ್ತಿಗಳನ್ನು ಹುಡುಕುವಾಗ ಅವರಿಗೆ ಅಗ್ಗಿದತ್ತ ಮತ್ತು ಆತನ ಶಿಷ್ಯರು ಕಾಣಿಸಿಕೊಂಡರು. ಆಗ ಅವರು ಪೂಜ್ಯ ಮೊಗ್ಗಲ್ಲಾನರವರಿಗೆ ಕರೆಸಿ ಹೀಗೆ ಹೇಳಿದರು: ಮೊಗ್ಗಲ್ಲಾನ, ಈ ಅಗ್ಗಿದತ್ತ ಬೃಹತ್ ಸಮೂಹಕ್ಕೆ ದಾರಿ ತಪ್ಪಿಸುತ್ತಿದ್ದಾನೆ ಹೊರತು ಯೋಗ್ಯ ಪಥಕ್ಕೆ ಕರೆದೊಯ್ಯುತ್ತಿಲ್ಲ. ಆತನಿಗೆ ಜ್ಞಾನೋದಯವನ್ನುಂಟು ಮಾಡು. ಆಗ ಮೊಗ್ಗಲ್ಲಾನರು ಹೀಗೆ ಹೇಳಿದರು: ಭಗವಾನ್, ಆತನಿಗೆ ಇಲ್ಲಿ ಅಪಾರ ಅನುಯಾಯಿಗಳಿದ್ದಾರೆ, ನಾನು ಒಬ್ಬನೇ ಹೋದರೆ ಅವರು ಅವಿಧೇಯರಾಗಿ ಅನಾಹುತ ಮಾಡಬಹುದೆಂದು ಭಾವಿಸುತ್ತೇನೆ. ಆದರೆ ನೀವು ಹೋದರೆ ಅವರೆಲ್ಲಾ ವಿಧೇಯರಾಗಬಹುದು.

                ಮೊಗ್ಗಲ್ಲಾನ ನಾನೂ ಬರುವೆ, ಆದರೆ ಮೊದಲು ನೀನೇ ಹೋಗುವವನಾಗು.
                ದಾರಿಯಲ್ಲಿ ಮೊಗ್ಗಲ್ಲಾನರು ಹೀಗೆ ಚಿಂತನೆ ಮಾಡಿದರು: ಈತನಿಗೆ ಇಲ್ಲಿ ಆಪಾರ ಶಿಷ್ಯರಿದ್ದಾರೆ. ಅವರಿಗೆ ಅಪ್ರಿಯವಾಗಿ ಒಂದು ಪದವನ್ನು ಹೇಳಿದರೂ ಸಹಾ, ಅವರು ನನ್ನ ಮೇಲೆ ಸೈನ್ಯದಂತೆ ಬೀಳುತ್ತಾರೆ. ಆದ್ದರಿಂದ ನಾನು ಅತೀಂದ್ರಿಯ ಶಕ್ತಿಯಿಂದ ಭಾರಿ ಮಳೆಯನ್ನೇ ಸೃಷ್ಟಿಸುವೆ ಎಂದು ಮಹಾಮೊಗ್ಗಲ್ಲಾನರು ಹಿಂಸೆ, ವಾದವಿವಾದ ಇಷ್ಟವಿಲ್ಲದೆ ಭಾರಿ ಮಳೆಯನ್ನು ಸುರಿಸಿದರು. ಆಗ ಅಗ್ಗಿದತ್ತನ ಅನುಯಾಯಿಗಳೆಲ್ಲಾ ಒಬ್ಬೊಬ್ಬರಂತೆ ತಮ್ಮ ಕುಟೀರವನ್ನು ಸೇರಿದರು. ಆಗ ಪರಮಪೂಜ್ಯ ಮಹಾಮೊಗ್ಗಲ್ಲಾನರು ಅಗ್ಗಿದತ್ತನ ಬಾಗಿಲಿನ ಬಳಿ ನಿಂತುಕೊಂಡು ಅಗ್ಗಿದತ್ತ ಎಂದು ಕೂಗಿದರು. ಆಗ ಅಗ್ಗಿದತ್ತನಿಗೆ ಆಶ್ಚರ್ಯವಾಯಿತು. ಆತನಿಗೆ ಈವರೆಗೆ ಯಾರು ಸಹಾ ಹೀಗೆ ಹೆಸರಿಡಿದು ಕೂಗಿರಲಿಲ್ಲ. ಆತನ ಅಹಂಕಾರ ಕೆರಳಿದಂತಾಗಿ ಯಾರದು? ಎಂದನು.
                ನಾನು ಬ್ರಾಹ್ಮಣ.
                ಏತಕ್ಕಾಗಿ ಕರೆದಿದ್ದು.
                ನನಗೆ ರಾತ್ರಿ ಕಳೆಯುವುದಕ್ಕಾಗಿ ದಯವಿಟ್ಟು ಸ್ಥಳವನ್ನು ತೋರಿಸಿ.
                ಇಲ್ಲಿ ಉಳಿಯುವುದಕ್ಕಾಗಿ ಸ್ಥಳವಿಲ್ಲ, ಕೇವಲ ಸಮಣನಿಗಾಗಿ ಒಂದೇ ಕುಟೀರವಿದೆ.
                ಅಗ್ಗಿದತ್ತ, ಮಾನವ ಮಾನವರ ಮನೆಗೆ ಹೋಗುತ್ತಾನೆ, ದನಗಳು ದನಗಳ ಕೊಟ್ಟಿಗೆಗೆ ಹೋಗುತ್ತವೆ. ಸಮಣರು ಸಮಣರ ಕುಟೀರಕ್ಕೆ ಹೋಗುವರು. ಆದ್ದರಿಂದ ನಿರಾಕರಿಸದೆ ಇರಲು ಸ್ಥಳವನ್ನು ನೀಡುವಂತಾಗು.
                ನೀನು ಸಮಣನೇ?
                ಹೌದು.
                ಹಾಗಾದರೆ ನಿಮ್ಮ ಪಿಂಡಪಾತ್ರೆ ಎಲ್ಲಿ ?
                ನನ್ನಲ್ಲಿ ಪಿಂಡಪಾತ್ರೆ ಇದೆ, ಆದರೆ ಪ್ರಯಾಣದಲ್ಲಿ ತೊಂದರೆಯಾಗುವುದೆಂದು ಬಿಟ್ಟು ಬಂದಿದ್ದೇನೆ. ಅಗ್ಗಿದತ್ತ ಕೋಪಗೊಳ್ಳಬೇಡ, ನಾನು ರಾತ್ರಿ ಕಳೆಯುವುದಕ್ಕಾಗಿ ಸ್ಥಳವನ್ನು ತೋರಿಸು.
                ಇಲ್ಲಿ ಯಾವ ಸ್ಥಳವೂ ಮಲಗಲಿಕ್ಕಾಗಿ ಇಲ್ಲ.
                ಸರಿ, ಆ ಮರಳಿನ ರಾಶಿಯಲ್ಲಿ ಯಾರು ಜೀವಿಸುತ್ತಿದ್ದಾರೆ.
                ಅಲ್ಲಿ ನಾಗರಾಜನು (ದಿವ್ಯಸರ್ಪ) ವಾಸಿಸುತ್ತಿದ್ದಾನೆ.
                ನನಗೆ ಆ ಮರಳಲ್ಲಿ ನೆಲೆ ನೀಡಬಲ್ಲಿರಾ?
                ನಾನು ಆ ಮರಳನ್ನು ನೀಡಲಾರೆ, ಅದು ಆ ನಾಗರಾಜನಿಗೆ ಭಾರಿ ಅಪಮಾನ ಮಡಿದಂತೆ ಆಗುವುದು.
                ಪರವಾಗಿಲ್ಲ, ನನಗೆ ನೀಡಿ.
                ಸರಿ ನಿಮಗೆ ಗೊತ್ತಾಗುವುದು ಎಂದನು ಅಗ್ಗಿದತ್ತ.
                ಆಗ ಪರಮಪೂಜ್ಯ ಮೊಗ್ಗಲ್ಲಾನರು ಆ ಮರಳಿನ ರಾಶಿಯೆಡೆಗೆ ನಡೆಯಲು ಆರಂಭಿಸಿದರು. ಆಗ ನಾಗರಾಜನಿಗೆ ಮೊಗ್ಗಲ್ಲಾನರು ತನ್ನಡೆಗೆ ಬರುತ್ತಿರುವುದು ಕಾಣಿಸಿತು. ಆಗ ನಾಗರಾಜನು ಹೀಗೆ ಯೊಚಿಸಿದನು: ಈ ಭಿಕ್ಷುವು ಇಲ್ಲಿಗೆ ಸಮೀಪಿಸುತ್ತಿದ್ದಾನೆ, ಆತನಿಗೆ ನಾನಿರುವುದು ತಿಳಿದಿಲ್ಲ, ನಾನು ಆತನಿಗೆ ಬೆಂಕಿ ಉಗುಳಿ ಕೊಲ್ಲುತ್ತೇನೆ. ಆಗ ಮೊಗ್ಗಲ್ಲಾನರು ಆ ನಾಗರಾಜನ ಚಿತ್ತವನ್ನು ಓದಿ, ಅರಿತುಕೊಂಡು ಆತನಂತೆಯೇ ಅವರು ಬೆಂಕಿ ಉಗುಳಿದರು. ಇಬ್ಬರೂ ಪರಸ್ಪರ ಬೆಂಕಿ ಮತ್ತು ಹೊಗೆ ಉಗುಳಿದರು. ಆ ಬೆಂಕಿ ಮತ್ತು ಹೊಗೆಯಿಂದ ಮೊಗ್ಗಲ್ಲಾನರವರಿಗೆ ಏನೂ ಆಗಲಿಲ್ಲ. ಆದರೆ ಮೊಗ್ಗಲ್ಲಾನರ ಬೆಂಕಿ ಮತ್ತು ಹೊಗೆಯನ್ನು ನಾಗರಾಜನು ತಡೆದುಕೊಳ್ಳಲಾಗಲಿಲ್ಲ. ಏಕೆಂದರೆ ಮಹಾಮೊಗ್ಗಲ್ಲಾನರು ತೇಜೋ ಕಸಿಣಾ ಧ್ಯಾನವನ್ನು ಸಿದ್ಧಿಪಡೆದಿದ್ದರು. ಹೀಗಾಗಿ ಅವರು ಬೆಂಕಿ ಉಗುಳಿದರೆ ಅದು ಬ್ರಹ್ಮಲೋಕದವರೆಗೂ ವ್ಯಾಪಿಸುತ್ತಿತ್ತು. ಅವರು ತೇಜೋಕಸಿನಾ ಧ್ಯಾನದಲ್ಲಿ ಕ್ಷಣದಲ್ಲಿ ಚತುರ್ಥಧ್ಯಾನ ತಲುಪಿ ನಂತರ ತೀಕ್ಷ್ಣವಾಗಿ ಅಗ್ನಿಯನ್ನು ಉಗುಳುತ್ತಿದ್ದರು. ಆಗ ಅವರ ಶರೀರವಿಡೀ ಬೆಂಕಿಯಿಂದ ಆವೃತವಾಗಿರುವಂತೆ ಕಾಣಿಸುತ್ತಿತ್ತು. ಆಗ ಅಗ್ಗಿದತ್ತ ಮತ್ತು ಆತನ ಅನುಯಾಯಿಗಳು ಮೊಗ್ಗಲ್ಲಾನರವನ್ನು ಆ ನಾಗರಾಜನು ಸುಡುತ್ತಿದ್ದಾನೆ ಎಂದು ಭಾವಿಸಿದರು. ನಮ್ಮ ಮಾತು ಕೇಳದೆ ಆತನು ನಾಶವಾದನಲ್ಲ ಎಂದು ವ್ಯಥೆಪಟ್ಟರು. ಆದರೆ ಅವರು ಭಯದಿಂದ ಹೊರಬರಲಿಲ್ಲ. ಆದರೆ ಮೊಗ್ಗಲ್ಲಾನರವರು ನಾಗರಾಜನನ್ನು ದಮಿಸಿಬಿಟ್ಟರು. ಆತನು ಶರಣಾಗತನಾದನು. ತಾನು ಮಾಡುತ್ತಿದ್ದ ಕುಕಾರ್ಯ ನಿಲ್ಲಿಸಿ ಶರಣು ಹೊಂದಿದನು. ಈಗ ಮೊಗ್ಗಲ್ಲಾನರವರು ಮರಳುರಾಶಿಯ ಮೇಲೆ ಕುಳಿತರು. ನಂತರ ನಾಗರಾಜನು ಅವರಿಗೆ ತಿಂಡಿ ತಿನಿಸು ಮುಂದಿಟ್ಟು, ನಂತರ ಅವರಿಗೆ ಛತ್ರಿ ಹಿಡಿಯುವಂತೆ ತನ್ನ ವಿಶಾಲವಾದ ಹೆಡೆಯನ್ನು ವಿಕಸಿಸಿ, ಪೂಜ್ಯ ಮೊಗ್ಗಲ್ಲಾನರವರ ತಲೆಯ ಮೇಲೆ ನೆರಳು ನೀಡುವಂತೆ ಚಾಚಿದನು.
                ಮುಂಜಾನೆ ಅಗ್ಗಿದತ್ತ ಮತ್ತು ಇನ್ನಿತರ ಋಷಿಗಳು ಮೊಗ್ಗಲ್ಲಾನರವರು ಬದುಕಿರುವರೋ ಅಥವಾ ಇಲ್ಲವೋ ಎಂದು ಪರೀಕ್ಷಿಸಲು ಬಂದರು. ಆದರೆ ಅವರಿಗೆ ಆಶ್ಚರ್ಯವಾಯಿತು. ಮೊಗ್ಗಲ್ಲಾನರು ಕುಳಿತೇ ಇದ್ದರು ಮತ್ತು ನಾಗರಾಜನು ಅವರ ತಲೆಯ ಮೇಲೆ ಹಡೆಯಾಡಿಸುತ್ತ ಅವರಿಗೆ ನೆರಳು ನೀಡುತ್ತಾ ಇದ್ದನು. ಓಹ್! ಈ ಭಿಕ್ಷುವು ಪ್ರಬಲವಾದ ನಾಗರಾಜನನ್ನೇ ಜಯಿಸಿದ್ದಾನೆ ಎಂದು ಆತನನ್ನು ಅಭಿನಂದಿಸುತ್ತಾ ಆತನು ಸುತ್ತಲೂ ನಿಂತರು.
                ಅದೇ ಸಮಯದಲ್ಲಿ ಭಗವಾನರು ಅತ್ತಲಿಂದ ಬರುತ್ತಿದ್ದರು. ತಕ್ಷಣ ಮೊಗ್ಗಲ್ಲಾನರು ಅವರಿಗೆ ವಂದಿಸಿದರು. ಇವರು ನಿಮಗಿಂತ ಶ್ರೇಷ್ಠರೇ? ಎಂದು ಅಗ್ಗಿದತ್ತ ಕೇಳಿದಾಗ, ಇವರೇ ಮಹಾಮಹೀಮರಾದ ಬುದ್ಧರು, ಸಮ್ಮಾಸಂಬೋಧಿ ಪಡೆದವರು, ನಿಬ್ಬಾಣಕ್ಕೆ ಮಾರ್ಗದಶರ್ಿಯೂ. ನಾನು ಕೇವಲ ಅವರ ಶಿಷ್ಯನಷ್ಟೇ ಆಗಿದ್ದೇನೆ. ನಂತರ ಭಗವಾನರು ಆಸನದಲ್ಲಿ ಕುಳಿತರು. ಆಗ ಅಗ್ಗಿದತ್ತ ಮತ್ತು ಇತರ ಋಷಿಗಳು ಹೀಗೆ ಮಾತನಾಡಿಕೊಂಡರು. ಕೇವಲ ಶಿಷ್ಯನ ಅತೀಂದ್ರಿಯ ಸಾಮಥ್ರ್ಯ ಹೀಗಿರಬೇಕಾದರೆ ಅವರ ಗುರುಗಳಾದ ಬುದ್ಧರ ಸಾಮಥ್ರ್ಯ ಹೇಗಿರಬೇಕು! ಎಂದು ಯೋಚಿಸಿ ಶ್ರದ್ಧೆಯುಳ್ಳವರಾದರು. ಭಗವಾನರಿಗೆ ವಂದಿಸಿದರು. ಆಗ ಭಗವಾನರು ಅಗ್ಗಿದತ್ತನಿಗೆ ತನ್ನ ಶಿಷ್ಯರಿಗೆ ಏನೆಂದು ಉಪದೇಶ ನೀಡುವೆ ಎಂದು ವಿಚಾರಿಸಿದಾಗ, ಆತನು ಬೆಟ್ಟ, ಮರ, ಮಂದಿರಗಳಿಗೆ ಶರಣು ಹೋದರೆ ಒಬ್ಬನು ದುಃಖದಿಂದ ಮುಕ್ತರಾಗುವರು ಎಂದು ಹೇಳಿದ್ದೇನೆ ಎಂದನು.
                ಆಗ ಭಗವಾನರು ಆತನಿಗೆ ಈ ಮೇಲಿನ ಗಾಥೆಗಳನ್ನು ನುಡಿದು ತಿದ್ದಿದರು. ನಂತರದ ಸುತ್ತದ ಅಂತ್ಯದಲ್ಲಿ ಅವರೆಲ್ಲಾ ಅರಹಂತರಾದರು. ಜೊತೆಗೆ ಅತೀಂದ್ರಿಯ ಶಕ್ತಿಗಳನ್ನು ಹೊಂದಿದರು. ನಂತರ ಭಿಕ್ಷುಗಳಾಗಿ, ಭಗವಾನರನ್ನು ಹಿಂಬಾಲಿಸಿ ಬರುತ್ತಿದ್ದರು. ಆಗ ಇವರನ್ನು ಕಂಡ ಜನರಲ್ಲಿ ಗೊಂದಲ ಉಂಟಾಯಿತು. ಏನೆಂದರೆ: ಅಗ್ಗಿದತ್ತ ಋಷಿಯು ಶ್ರೇಷ್ಠನೋ ಅಥವಾ ಬುದ್ಧ ಭಗವಾನರು ಶ್ರೇಷ್ಠರೋ? ಎಂದು.

                ಆಗ ಭಗವಾನರಿಗೆ ಅವರ ಗೊಂದಲು ಅರ್ಥವಾಯಿತು. ಅವರು ಅಗ್ಗಿದತ್ತನಿಗೆ ಅಗ್ಗಿದತ್ತ, ನಿನ್ನ ಶಿಷ್ಯರ ಸಂದೇಹ ನಿವಾರಿಸು ಎಂದರು. ಆಗ ಅವರಿಗೂ ಪರಿಸ್ಥಿತಿ ಅರ್ಥವಾಗಿ ಆತನೂ ತನ್ನ ಅತೀಂದ್ರಿಯ ಶಕ್ತಿಯಿಂದಾಗಿ ಏಳುಬಾರಿ ಆಕಾಶಕ್ಕೆ ಹಾರಿ ನಂತರ ಭಗವಾನರ ಪಾದದಡಿ ಶಿರಬಾಗಿ ವಂದಿಸಿ ಇವರೇ ನನ್ನ ಗುರುಗಳು, ನಾನು ಇವರ ಶಿಷ್ಯ ಮಾತ್ರನಾಗಿದ್ದೇನೆ, ಇವರಿಂದಲೇ ನಾನು ಸಮ್ಮಾದೃಷ್ಟಿ ಪಡೆದಿದ್ದೇನೆ, ಮಿಥ್ಯ ಶರಣುಗಳನ್ನು ತೊರೆದಿದ್ದೇನೆ, ಅವರ ಅನುಗ್ರಹದಿಂದಲೇ ಅರಹಂತನು, ಅತೀಂದ್ರಿಯ ಶಕ್ತಿವಂತನು ಆಗಿದ್ದೇನೆ ಎಂದು.

No comments:

Post a Comment