ನಿಮ್ಮನ್ನು ನಿರ್ಲಕ್ಷಿಸಬೇಡಿ
ಯಾರು ಸಹಾ
ಸ್ವ-ಹಿತವನ್ನು, ಶ್ರೇಷ್ಠ ಪರರ
ಹಿತಕ್ಕಾಗಿಯೇ ಆಗಲಿ ಅಲಕ್ಷಿಸಬಾರದು, ತನ್ನ ಹಿತವನ್ನು ಪೂರ್ಣವಾಗಿ ಅರಿತು, ಅದರಂತೆಯೇ ಒಳ್ಳೆಯತನದಿಂದ ನಡೆದುಕೊಳ್ಳಲಿ. (166)
ಗಾಥ ಪ್ರಸಂಗ 12:10
ಬುದ್ಧರಿಗಾಗಿ ಅಪರ್ಿಸುವ ಶ್ರೇಷ್ಠ ಪೂಜೆ ಇದೇ ಆಗಿದೆ
ಭಗವಾನರು ನಾಲ್ಕು ತಿಂಗಳು ಮುಂದಾಗಿಯೇ ತಮ್ಮ
ಪರಿನಿಬ್ಬಾಣದ ಬಗ್ಗೆ ಘೋಷಿಸಿಬಿಟ್ಟಿದ್ದರು. ಇದರಿಂದಾಗಿ ಅನಾಗಾಮಿ, ಅರಹಂತರಲ್ಲದ ಭಿಕ್ಷುಗಳು ಅತೀವ ದುಃಖಕ್ಕೆ ಈಡಾದರು ಮತ್ತು ಅವರಿಗೆ
ಏನು ಮಾಡಬೇಕೆಂಬುದೇ ತಿಳಿಯದಾಯಿತು. ಹೀಗಾಗಿ ಅವರೆಲ್ಲ ಬುದ್ಧರಿಗೆ ಹತ್ತಿರವಾಗಿ ಸೇವೆಗಳನ್ನು
ಮಾಡಲಾರಂಭಿಸಿದರು. ಆದರೆ ಅತ್ತದತ್ತನೆಂಬ ಭಿಕ್ಷುವೊಬ್ಬನು ಮಾತ್ರ ಬುದ್ಧರನ್ನು ಕಾಣಲು
ಹೋಗಲಿಲ್ಲ. ಆತನು ಸದಾ ಧ್ಯಾನದಲ್ಲೇ ತೊಡಗಿದ್ದನು. ಬೇರೆ ಭಿಕ್ಷುಗಳಿಗೆ ಆತನ ಬಗ್ಗೆ ಅರಿವಾಗದೆ,
ಬಲವಂತದಿಂದ ಆತನನ್ನು ಭಗವಾನರ ಬಳಿಗೆ ಕರೆತಂದರು ಮತ್ತು
ಹೀಗೆ ಹೇಳಿದರು: ಭಗವಾನ್, ಈ ಭಿಕ್ಷುವು
ತಮ್ಮನ್ನು ಅಷ್ಟಾಗಿ ಭಕ್ತಿಭಾವದಿಂದ ನೋಡುತ್ತಿಲ್ಲ. ಆದ್ದರಿಂದಲೇ ಏನೋ ಸ್ವಾಥರ್ಿಯಾಗಿ
ಧ್ಯಾನದಲ್ಲಿಯೇ ಸದಾ ತೊಡಗಿಸಿಕೊಂಡಿದ್ದಾನೆ. ನಿಮ್ಮ ಸೇವೆಗೆ ಇರಲಿ, ಕನಿಷ್ಠ ನಿಮ್ಮನ್ನು ನೋಡಲು ಬಂದಿಲ್ಲ.
ಆಗ ಆ ಭಿಕ್ಷುವು ಭಕ್ತಿಯಿಂದ, ಗೌರವದಿಂದ ಮತ್ತು ಶಾಂತತೆಯಿಂದ ತನ್ನ ಏಕಾಂತವಾಸದ
ಕಾರಣವನ್ನು ಹೀಗೆ ಹೇಳಿದನು: ಭಗವಾನ್, ನಾನು ತಮ್ಮನ್ನು
ಕಾಣದೆ ಹೋಗಿದ್ದು, ಸೇವೆ ಮಾಡದೆ
ಇದ್ದುದಕ್ಕೆ ಕಾರಣ ಏನೆಂದರೆ ತಮ್ಮ ಜೀವಿತ ಅವಧಿಯಲ್ಲಿಯೇ ಅರಹಂತನಾಗಿ, ಪರಿಶುದ್ಧನಾಗಿ ಈ ರೀತಿಯ ಧಮ್ಮದ ಕಾಣುವಿಕೆಯಿಂದ ತಮ್ಮನ್ನು ಕಾಣಲು
ಇಚ್ಛಿಸಿದೆನು. ಪರಿಶುದ್ಧನಾಗುವ ಮೂಲಕ ತಮ್ಮನ್ನು ಪೂಜಿಸಲು ಇಚ್ಛಿಸಿದೆನು. ತಮ್ಮ ಬೋಧನೆಯನ್ನು
ಪೂರ್ಣವಾಗಿ ಪಾಲಿಸುವ ಮೂಲಕ ತಮ್ಮನ್ನು ಪೂಜಿಸಲು ಇಚ್ಛಿಸಿದೆನು. ಅದರಿಂದಾಗಿಯೇ ನಾನು
ಧ್ಯಾನಾಸಕ್ತನಾದೆನೇ ಹೊರತು ಸ್ವಾರ್ಥದಿಂದಲ್ಲ, ಅಹಂಕಾರದಿಂದಲ್ಲ, ಭಕ್ತಿ-ಗೌರವರಹಿತತೆಯಿಂದಲ್ಲ
ಭಗವಾನ್!
ಆಗ ಭಗವಾನರು ಆತನ ಬಗ್ಗೆ ಅಪಾರ ಪ್ರಶಂಸೆ ವ್ಯಕ್ತಪಡಿಸಿದರು.
ಹಾಗು ಹೀಗೆ ಹೇಳಿದರು: ಭಿಕ್ಷುಗಳೇ, ನನ್ನನ್ನು
ಆರಾಧಿಸುವವರು, ಭಕ್ತಿಯುಳ್ಳವರು
ನಿಜಕ್ಕೂ ಅತ್ತದತ್ತನಂತೆಯೇ ಸಾಧಿಸಿ ಮಾಡಿ ಗೌರವಿಸಿರಿ. ನೀವು ನನಗೆ ಸುಗಂಧಗಳು, ಪುಷ್ಪಗಳಿಂದ ವಂದಿಸುವ ಬದಲು ಧಮ್ಮಪಾಲನೆಯಿಂದ
ಪೂಜಿಸಿರಿ. ಲೋಕೋತ್ತರ ಧಮ್ಮಪಾಲನೆ ಯಿಂದಲೇ ನನಗೆ ನಿಜಕ್ಕೂ ಪೂಜಿಸಿದಂತಾಗುತ್ತದೆ ಎಂದು ನುಡಿಯುತ್ತ,
ಈ ಮೇಲಿನ ಗಾಥೆ ನುಡಿದು, ನಂತರದ ಪ್ರವಚನದ ಅಂತ್ಯದಲ್ಲಿ ಪೂಜ್ಯ ಅತ್ತದತ್ತನು ಅರಹಂತ ಪ್ರಾಪ್ತಿ
ಮಾಡಿದನು, ತನ್ನಿಚ್ಛೆಯಂತೆಯೇ ಆದರ್ಶಯುತ
ಬುದ್ಧ ಪೂಜೆ ಮಾಡಿದನು.
No comments:
Post a Comment