Friday, 8 May 2015

dhammapada/jaravagga/11.7/laludayi

ವಿದ್ಯಾಹೀನ - ಪಶು ಸಮಾನ
‘’ಅಲ್ಪಜ್ಞನಾದ ಪುರುಷನಿಗೆ ಎತ್ತಿನಂತೆ ವಯಸ್ಸಾಗಿರುತ್ತದೆ, ಆತನ ಮಾಂಸಯುತ ಶರೀರವು ವಧರ್ಿಸಿರುತ್ತದೆ ಹೊರತು ಪ್ರಜ್ಞಾವು ವಧರ್ಿಸಿರುವುದಿಲ್ಲ.’’        (152)
ಗಾಥ ಪ್ರಸಂಗ 11:7
ಲಾಲುದಾಯಿಯ ಮೂರ್ಖತ್ವತೆ

                ಭಿಕ್ಷು ಲಾಲುದಾಯಿಯು ಮಂದಬುದ್ಧಿಯವನಾಗಿದ್ದನು ಮತ್ತು ದಡ್ಡನಾಗಿದ್ದನು. ಆತನು ಎಂದಿಗೂ ಯೋಗ್ಯ ಕಾಲದಲ್ಲಿ, ಯೋಗ್ಯ ಬೋಧನೆಗಳಾಗಲಿ ಅಥವಾ ಮಾತುಗಳಾಗಲಿ ಹೇಳುತ್ತಿರಲಿಲ್ಲ. ಉದಾಹರಿಸುವುದಾದರೆ- ಸಂತೋಷದ ಸಮಯಗಳಲ್ಲಿ, ಮಂಗಳಕರ ಸಂದರ್ಭಗಳಲ್ಲಿ ಆತನು ತಿರಕುಡ್ಡ ಸುತ್ತದಂತಹ, ಪತ್ತಿದಾನ ಅಥವಾ ಪ್ರೇತಗಳಿಗೆ ಪುಣ್ಯಾನುಮೋದನೆ ಮಾಡುವಂತಹ ಸುತ್ತಗಳನ್ನು ನುಡಿಯುತ್ತಿದ್ದನು. ಹಾಗೆಯೇ ಶ್ರಾದ್ಧ ತಿಥಿಗಳಂತಹ ಕಾರ್ಯಕ್ರಮಗಳಲ್ಲಿ ಆತನು ರತನಸುತ್ತ, ಮಂಗಳಸುತ್ತದಂತಹ ಸುತ್ತಗಳನ್ನು ನುಡಿಯುತ್ತಿದ್ದನು. ಇದರಿಂದ ಜನರಲ್ಲಿ ಗಲಿಬಿಲಿಯುಂಟಾಗುತ್ತಿತ್ತು.
                ಆತನು ಎಲ್ಲೇ ಹೋಗಲಿ, ಆತನ ಮನಸ್ಸಿನಲ್ಲಿ ಹೇಳುವ ವಿಷಯವು ಒಂದಾಗಿದ್ದರೆ, ಆತನು ನುಡಿಯುವುದೇ ಬೇರೆಯಾಗಿರುತ್ತಿತ್ತು. ಸಾಕಷ್ಟು ಗಲಿಬಿಲಿ ಅನುಭವಿಸಿದ ಭಿಕ್ಷುಗಳು ಈ ವಿಷಯವನ್ನೆಲ್ಲಾ ಬುದ್ಧರಿಗೆ ಹೇಳಿದರು. ಆಗ ಭಗವಾನರು ಲಾಲುದಾಯಿಯು ಈ ರೀತಿ ನುಡಿಯುತ್ತಿರುವುದು ಇದೇ ಮೊದಲಬಾರಿಯೇನಲ್ಲ! ಆತನು ಹಿಂದಿನ ಜನ್ಮದಲ್ಲೂ ಸಹಾ ಒಳ್ಳೆಯ ವಿಷಯ ನುಡಿಯುವ ಸಂದರ್ಭದಲ್ಲಿ ಕೆಟ್ಟದ್ದನ್ನಾಡಿದ್ದಾನೆ ಎಂದು ನುಡಿದು ಭಗವಾನರು ಆ ಜನ್ಮದ ವಿವರಣೆಯನ್ನು ಹೀಗೆ ವಿವರಿಸಿದರು.
                ಬಹುಕಾಲದ ಹಿಂದೆ ಕಾಶಿಯಲ್ಲಿ ಅಗ್ಗಿದತ್ತನೆಂಬ ಬ್ರಾಹ್ಮಣನಿದ್ದನು. ಆತನಿಗೆ ಸೋಮದತ್ತಕುಮಾರನೆಂಬ ಮಗನಿದ್ದನು. ಆತನು ರಾಜನ ಬಳಿಯಲ್ಲಿ ಕೆಲಸಕ್ಕೆ ಇದ್ದನು. ರಾಜನಿಗೆ ಪ್ರೀತಿಪಾತ್ರನೂ ಆಗಿದ್ದನು. ಒಂದುದಿನ ಬ್ರಾಹ್ಮಣನ ಎತ್ತೊಂದು ಸತ್ತಿತ್ತು. ಆಗ ಬ್ರಾಹ್ಮಣನು ಮಗ ಸೋಮದತ್ತನಿಗೆ ಹೀಗೆ ಹೇಳಿದನು: ಸೋಮದತ್ತ, ನೀನ್ಯಾಕೆ ರಾಜನ ಬಳಿ ಎತ್ತನ್ನು ದಾನವಾಗಿ ಪಡೆದು ನನಗೆ ನೀಡಬಾರದು.
                ಅಪ್ಪ ಅದು ಸ್ವಾರ್ಥವಾಗುತ್ತದೆ, ನನ್ನನ್ನು ರಾಜನ ಸ್ವಾಥರ್ಿಯೆಂದು ಪರಿಗಣಿಸಲು, ನಾನು ಅವಕಾಶ ನೀಡಲಾರೆ. ಬೇಕಿದ್ದರೆ ಕವನವೊಂದನ್ನು ಕಲಿಸುವೆನು. ಅದನ್ನಾಲಿಸಿ ರಾಜನು ನಿನಗೆ ಬಹುಮಾನ ನೀಡುವನು ಎಂದು ಹೇಳಿ ಈ ಕವನವನ್ನು ಕಂಠಪಾಠ ಮಾಡಿಸಿದನು. ನೇಗಿಲು ಹೂಳಲು ನನ್ನಲ್ಲಿ ಎರಡು ಎತ್ತುಗಳಿದ್ದವು. ಆದರೆ ಸತ್ತಿದೆ ಒಂದು, ದಯವಿಟ್ಟು ಎತ್ತೊಂದನ್ನು ನೀಡಲಾರೆಯಾ ರಾಜಕುಮಾರ.
                ಆದರೆ ಕಂಠಪಾಠ ಮಾಡಿಕೊಂಡು ಆ ಬ್ರಾಹ್ಮಣನು ಸಭೆಯಲ್ಲಿ ನುಡಿದಿದ್ದು ಹೀಗೆ:
                ನೇಗಿಲು ಹೂಳಲು ನನ್ನಲ್ಲಿ ಎರಡು ಎತ್ತುಗಳಿದ್ದವು, ಆದರೆ ಸತ್ತಿದೆ ಒಂದು, ದಯವಿಟ್ಟು ಇನ್ನೊಂದನ್ನು ಪಡೆಯಲಾರೆಯಾ ರಾಜಕುಮಾರ ಎಂದು. ಆ ಬ್ರಾಹ್ಮಣನೇ ಇಂದಿನ ಲಾಲುದಾಯಿ. ಆದರೆ ಮೇಧಾವಿಯಾದ ರಾಜನು ಆತನ ದಡ್ಡತನ ಅಥರ್ೈಸಿಕೊಂಡು, ಆತನಿಗೆ 16 ಎತ್ತುಗಳನ್ನು ದಾನ ಮಾಡಿದನು.

                ಭಗವಾನರು ಈ ಸಂದರ್ಭದಲ್ಲಿ ಈ ಗಾಥೆಯನ್ನು ನುಡಿದಿದ್ದರು.

No comments:

Post a Comment