ಈ ಲೋಕವು ನೀರಿನ ಗುಳ್ಳೆ
ಯಾವರೀತಿ ಒಬ್ಬನು
ನೀರಿನ ಗುಳ್ಳೆಯನ್ನು ನೋಡುವರೋ, ಯಾವರೀತಿ ಒಬ್ಬನು
ಮರೀಚಿಕೆಯನ್ನು ಕಾಣುವನೋ ಅದೇರೀತಿಯಲ್ಲಿಯೇ ಲೋಕವನ್ನು ವೀಕ್ಷಿಸಿದಾಗ ಅಂತಹವನನ್ನು ಮೃತ್ಯರಾಜನು
ಕಾಣಲಾರ. (170)
ಭಿಕ್ಷುಗಳ ಲೋಕೋತ್ತರ ಸಾಧನೆ
ಒಮ್ಮೆ ಭಿಕ್ಷುಗಳ ಗುಂಪೊಂದು ಭಗವಾನರಿಂದ ಧ್ಯಾನ
ವಿಷಯವನ್ನು ಸ್ವೀಕರಿಸಿ, ಕಾಡಿನಲ್ಲಿ
ಧ್ಯಾನಾಭ್ಯಾಸ ಆರಂಭಿಸಿದರು. ಆದರೆ ಅವರಿಗೆ ಅಂತಹ ಲಾಭವಾಗಲಿಲ್ಲ. ಆದ್ದರಿಂದ ಅವರೆಲ್ಲಾ
ಭಗವಾನರಿಂದ ತಮಗೆ ಸಮಂಜಸವಾದ ಧ್ಯಾನವಸ್ತು ಸ್ವೀಕರಿಸಲು ಹಿಂತಿರುಗುತ್ತಿದ್ದರು. ಆದರೆ
ದಾರಿಯಲ್ಲಿ ಮರಿಚಿಕೆ ಗೋಚರಿಸಿದಾಗ ಅದನ್ನು ಅವರು ಧ್ಯಾನಿಸಿದರು. ನಂತರ ಅವರು ಹಿಂತಿರುಗಿ ವಿಹಾರ
ಪ್ರವೇಶಿಸುವಾಗ ಭಾರಿ ಮಳೆಯಾಯಿತು. ಆಗ ನೀರಿನಲ್ಲಿ ಗುಳ್ಳೆಗಳು ನಿಮರ್ಿತವಾಗಿ ಹಾಗೆಯೇ ಒಡೆದು
ಹೋಗುತ್ತಿತ್ತು. ಅವನ್ನು ಅವರು ಧ್ಯಾನಿಸಿದರು. ನಂತರ ಅವರಲ್ಲಿ ಈ ವಿಚಾರ ಬಂದಿತು: ಈ ದೇಹವೂ ಸಹಾ
ನೀರಿನ ಗುಳ್ಳೆಯಂತೆ ಒಡೆದುಹೋಗುವುದು, ಈ ವೇದನೆಗಳು
ಕ್ಷಿಪ್ರವಾಗಿ ಬದಲಾಯಿಸುವುವು, ಅದೇರೀತಿ
ಪಂಚಖಂಧಗಳು ಕ್ಷಣಿಕ ಎಂದು ಧ್ಯಾನಿಸಿದರು.
ಆಗ ಅಲ್ಲಿ ಭಗವಾನರು ಪ್ರತ್ಯಕ್ಷರಾಗಿ ಈ ಮೇಲಿನ ಗಾಥೆ
ನುಡಿದರು. ನಂತರ ಆ ಭಿಕ್ಷುಗಳೆಲ್ಲಾ ಅರಹಂತತ್ವದ ಫಲ ಪಡೆದಿದ್ದರು.
No comments:
Post a Comment