ಜೀವನವು ಮರಣದಲ್ಲಿ ಅಂತ್ಯವಾಗುವುದು
“ಈ ಶರೀರವು
ಸಂಪೂರ್ಣವಾಗಿ ನಿತ್ರಾಣಗೊಂಡು ಸೊರಗಿಹೋಗುತ್ತದೆ. ಇದು ರೋಗಗಳ ಗೂಡಾಗಿದೆ, ನಾಶವಾಗುವಂತಹುದು. ಈ ಕಶ್ಮಲಗಳ ರಾಶಿಯು ಒಡೆದು
ಹೋಗುತ್ತದೆ. ನಿಜಕ್ಕೂ ಮರಣದಲ್ಲೇ ಜೀವಿತದ ಅಂತ್ಯವಾಗುತ್ತದೆ.” (148)
ಗಾಥ ಪ್ರಸಂಗ 11:3
ಉತ್ತರಾಳಿಗೆ ಸಂತ್ವಾನ
ಭಿಕ್ಷುಣಿ ಉತ್ತರಾಳಿಗೆ 120 ವರ್ಷ ವಯಸ್ಸಾಗಿತ್ತು. ಆದರೂ ಸಾಧನೆಯಲ್ಲಿ ಲೋಕೋತ್ತರ ಫಲ
ಗಳಿಸಿರಲಿಲ್ಲ. ಆಕೆಯ ಪುಣ್ಯದಿಂದಾಗಿ ದೀಘರ್ಾಯುವನ್ನು ಪಡೆದಿದ್ದಳು. ಒಂದುದಿನ ಆಕೆಯ ಆಹಾರವನ್ನು
ಸಂಗ್ರಹಿಸಿಕೊಂಡು ಹಿಂತಿರುಗುವಾಗ, ಎದುರಿಗೆ ಬರುತ್ತಿದ್ದ
ಭಿಕ್ಷುವನ್ನು ನಿಲ್ಲಿಸಿ, ತನ್ನ ಆಹಾರವನ್ನು
ಸ್ವೀಕರಿಸುವಂತೆ ಕೇಳಿಕೊಂಡಳು, ಆತನು
ಸ್ವೀಕರಿಸಿದನು. ಆಕೆ ನಿರಾಹಾರಿಯಾಗಿ ಉಳಿದಳು. ಇದೇರೀತಿಯ ಘಟನೆಯು ಉಳಿದ ಎರಡು ದಿನಗಳಲ್ಲಿಯೂ
ನಡೆಯಿತು. ಆಗ ಆಕೆಗೆ ಅತಿ ನಿಶ್ಶಕ್ತಿವುಂಟಾಯಿತು. ಆದರೂ ಆಕೆ ಆಹಾರಕ್ಕಾಗಿ ಅಗಲವಿಲ್ಲದ
ಇಕ್ಕಟ್ಟಾದ ದಾರಿಯಲ್ಲಿ ಹೋಗುತ್ತಿರುವಾಗ, ಆ ಬದಿಯಿಂದ ಭಗವಾನರು ಬರುತ್ತಿದ್ದರು. ಆಕೆಯು ಭಗವಾನರಿಗೆ ಗೌರವಯುತವಾಗಿ ವಂದಿಸಿದಳು. ನಂತರ
ಹಿಂದಕ್ಕೆ ಹೆಜ್ಜೆ ಹಾಕಲು ಹೋಗಿ ತನ್ನ ಚೀವರವನ್ನು ತುಳಿದುಕೊಂಡು ನೆಲಕ್ಕೆ ಬಿದ್ದುಬಿಟ್ಟಳು.
ಆಕೆಯ ತಲೆಗೆ ಗಾಯವಾಯಿತು. ಆಗ ಭಗವಾನರೇ ಆಕೆಗೆ ಮೇಲಕ್ಕೆ ಎಬ್ಬಿಸಿದರು. ಆಗ ಭಗವಾನರು ಆಕೆಗೆ
ಹೀಗೆ ನುಡಿದರು: ನಿನ್ನ ಶರೀರವು ಜೀರ್ಣವಾಗುತ್ತ ಹೋಗಿದೆ, ನಾಶವಾಗಲು ಸಿದ್ಧವಾಗಿದೆ, ಅತಿ ಶೀಘ್ರದಲ್ಲಿ ಅಂತ್ಯವಾಗಲಿದೆ. ಬೇಗನೆ ಸಾಧನೆಯಲ್ಲಿ ಸಿದ್ಧಿ
ಹೊಂದಲಾರೆಯಾ? ಎಂದು ಹೇಳಿ ಮೇಲಿನ
ಗಾಥೆಯನ್ನು ನುಡಿದರು. ಈ ಪ್ರವಚನದ ಅಂತ್ಯದಲ್ಲಿ ಭಿಕ್ಷುಣಿ ಉತ್ತರಾಳು ಸೋತಪತ್ತಿಫಲ ಪಡೆದಳು.
No comments:
Post a Comment