Tuesday, 26 May 2015

dhammapada/lokavagga/13.5/sammujjhani

ಜಾಗರೂಕನು ಜಗತ್ತನ್ನೆಲ್ಲಾ ಬೆಳಗಿಸುವನು
ಯಾರು ಹಿಂದೆ ಅಜಾಗರೂಕನಾಗಿದ್ದು, ಆದರೆ ನಂತರ ಜಾಗರೂಕತೆ ಯಿಂದಿರುವನೋ, ಅಂತಹವ ಈ ಲೋಕವನ್ನೇ ಮೋಡ ಮುಕ್ತ ಚಂದಿರನಂತೆ ಪ್ರಭಾತಗೊಳಿಸುತ್ತಾನೆ.        (172)
ಗಾಥ ಪ್ರಸಂಗ 13:5
ಪೊರಕೆ ಬಿಟ್ಟು ತನ್ನ ಚಿತ್ತವನ್ನೇ ಶುಚಿಗೊಳಿಸಿದ ಭಿಕ್ಷು

                ಪೂಜ್ಯ ಸಮ್ಮುಜ್ಜನಿಯು ತನ್ನ ಬಹಳಷ್ಟು ಕಾಲವನ್ನು ಕೇವಲ ವಿಹಾರ ಗುಡಿಸುವುದರಲ್ಲೇ, ಸ್ವಚ್ಛಗೊಳಿಸುವುದರಲ್ಲೇ ಕಾಲಕಳೆಯುತ್ತಿದ್ದನು. ಒಮ್ಮೆ ಪೂಜ್ಯ ರೇವತರವರು ಅಲ್ಲಿ ತಂಗಿದ್ದರು. ಆದರೆ ರೇವತರವರು ಬಹಳಷ್ಟು ಸಮಯವನ್ನು ಧ್ಯಾನದಲ್ಲೇ ಕಳೆಯುತ್ತಿದ್ದರು. ರೇವತರನ್ನು ಗಮನಿಸಿದ ಸಮ್ಮುಜ್ಜನಿಯು ಈತ ಸಮಯ ವ್ಯರ್ಥಗೊಳಿಸುತ್ತಿದ್ದೇನಲ್ಲ ಎಂದೆನಿಸಿತು. ಪ್ರತಿದಿನ ಹೀಗೆ ನಡೆಯುವುದನ್ನು ಗಮನಿಸಿದ ಸಮ್ಮುಜ್ಜನಿಯು ಈತ ಸಮಯ ವ್ಯರ್ಥಗೊಳಿಸುತ್ತಿದ್ದಾನಲ್ಲ ಎಂದೆನಿಸಿತು. ಪ್ರತಿದಿನ ಹೀಗೆ ನಡೆಯುವುದನ್ನು ಗಮನಿಸಿದ ಸಮ್ಮುಜ್ಜನಿಯು ಒಂದುದಿನ ತಡೆಯಲಾರದೆ ರೇವತರನ್ನು ಹೀಗೆ ಪ್ರಶ್ನಿಸಿಯೇಬಿಟ್ಟನು. ನೀವು ತುಂಬಾ ಸೋಮಾರಿ ಆಗಿದ್ದೀರಿ ಅನಿಸುತ್ತದೆ, ಜನರು ಶ್ರದ್ಧೆಯಿಂದ ಮತ್ತು ದಾನದಿಂದ ನೀಡುವ ಆಹಾರದಿಂದಿರುವ ನೀವು ಕೆಲವೊಮ್ಮೆಯಾದರೂ ನೆಲ ಗುಡಿಸಬಾರದೆ ಅಥವಾ ವಿಹಾರ ಗುಡಿಸಬಾರದೆ?
                ಆತನಿಗೆ ಪೂಜ್ಯ ರೇವತರು ಹೀಗೆ ಉತ್ತರಿಸಿದರು: ಓ ಮಿತ್ರನೇ, ಭಿಕ್ಷುವೊಬ್ಬನು ಸದಾಕಾಲ ಗುಡಿಸುವುದರಲ್ಲೇ ಇರಬಾರದು, ಆತನು ಬೆಳಿಗ್ಗೆ ಗುಡಿಸಬೇಕಷ್ಟೇ, ಮಧ್ಯಾಹ್ನ ಆಹಾರ ಸೇವಿಸಿ, ನಂತರ ಧ್ಯಾನ ಮಾಡಬೇಕು. ಸ್ಕಂಧಗಳ ಸ್ವರೂಪ ಅರಿಯಬೇಕು. ನಂತರ ರಾತ್ರಿಯಲ್ಲಿ ಧಮ್ಮದ ಸ್ಮರಣೆ ಮಾಡಿ ಪರರಿಗೆ ಹೇಳುವಂತೆ ನೆನಪಿನಲ್ಲಿ ಪ್ರತಿಷ್ಠಾಪಿಸಬೇಕು. ಆಗ ಅರಿವು ಪಡೆದ ಸಮ್ಮುಜ್ಜನಿಯು ಗಂಭೀರವಾಗಿ ಅದರಂತೆಯೇ ನಡೆದುಕೊಂಡನು. ಹಾಗೆಯೇ ಅರಹಂತನು ಆದನು.
                ಒಮ್ಮೆ ವಿಹಾರದಲ್ಲಿ ಮಧ್ಯಾಹ್ನ ಅಲ್ಲಲ್ಲಿ ಕಸ ಬಿದ್ದಿರುವುದು ಕಂಡ ಭಿಕ್ಷುಗಳು ಸಮ್ಮುಜ್ಜನಿಗೆ ಹೀಗೆ ಕೇಳಿದರು: ಓಹ್, ಸಮ್ಮುಜ್ಜನಿಯವರೇ, ನೀವು ಹಿಂದಿನಂತೆ ಏತಕ್ಕೆ ಗುಡಿಸುತ್ತಿಲ್ಲ?
                ಆಗ ಅದಕ್ಕೆ ಪೂಜ್ಯ ಸಮ್ಮುಜ್ಜನಿ ಹೀಗೆ ಉತ್ತರಿಸಿದರು: ಹಿಂದೆ ನಾನು ಜಾಗರೂಕನಾಗಿರಲಿಲ್ಲ, ಅದಕ್ಕಾಗಿ ಕಸ ಗುಡಿಸುತ್ತಿದ್ದೆನು, ಆಗ ನನ್ನಲ್ಲಿ ಕಸ ಗುಡಿಸಲೆಂದೇ ಬಹಳ ಸಮಯವಿರುತ್ತಿತ್ತು. ಆದರೆ ಈಗ ಜಾಗರೂಕನಾಗಿದ್ದೇನೆ, ನಾನೀಗ ಚಿತ್ತದ ಕಶ್ಮಲಗಳೆಲ್ಲಾ ಗುಡಿಸಿಹಾಕಿದ್ದೇನೆ. ಈಗ ನೀನು ಎಂದಿಗೂ ಜಾಗರೂಕತೆಯಿಂದಲೇ ಇರುತ್ತೇನೆ, ಅಜಾಗರೂಕನಾಗಲು ಸಾಧ್ಯವೇ ಇಲ್ಲ.

                ಇದನ್ನು ಆಲಿಸಿದ ಭಿಕ್ಷುಗಳು ದಿಗ್ಭ್ರಮೆಗೊಂಡರು. ಅವರು ಸಂಶಯಗ್ರಸ್ತರಾಗಿ ಭಗವಾನರಲ್ಲಿ ಹೋಗಿ ಸಮ್ಮುಜ್ಜನಿಯು ಹೇಳುತ್ತಿರುವುದು ನಿಜವೇ ಅಥವಾ ಸುಳ್ಳೇ ಎಂದು ಕೇಳಿದರು. ಆಗ ಭಗವಾನರು ಹೀಗೆ ಉತ್ತರಿಸಿದರು: ಸಮ್ಮುಜ್ಜನಿಯು ನಿಜಕ್ಕೂ ಅರಹಂತನಾಗಿದ್ದಾನೆ, ಆತನು ನಿಜವನ್ನೇ ಹೇಳುತ್ತಿದ್ದಾನೆ ಎಂದು ಹೇಳಿ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment