Monday, 18 May 2015

dhammapada/attavagga/12.5/mahakala

ಪಾಪವು ಸ್ವಯಂನಿಂದಲೇ ಸಂಭವಿಸುತ್ತದೆ.
ತನ್ನಿಂದಲೇ ಪಾಪ ಕ್ರಿಯೆ ಆಗುತ್ತದೆ, ಪಾಪ ತನ್ನಿಂದಲೇ ಹುಟ್ಟುವುದು, ತನ್ನಿಂದಲೇ ಸಂಭವಿಸುವಂತಹುದು. ಹೇಗೆ ವಜ್ರವು ಕಠಿಣವಾದ ಮಣಿಯನ್ನು ಅರೆದುಬಿಡುವುದೋ ಹಾಗೇ ಪಾಪವು ದುಮರ್ೆಧನಿಗೆ (ಮೂರ್ಖನಿಗೆ) ಅರೆದುಬಿಡುತ್ತದೆ.  (161)
ಗಾಥ ಪ್ರಸಂಗ 12:5
ಮಹಾಕಾಲನ ಅಕಾಲ ಮರಣ
                ಶ್ರಾವಸ್ತಿಯಲ್ಲಿ ಮಹಾಕಾಲನೆಂಬ ಗೃಹಸ್ಥನಿದ್ದನು. ಒಮ್ಮೆ ಉಪಾಸೋಥ ದಿನದಂದು ಆತನು ಜೇತವನದ ವಿಹಾರಕ್ಕೆ ಬಂದನು. ಆ ದಿನದಂದು ಆತನು ಉಪೋಸಥ ಶೀಲವಾದ ಅಷ್ಠಾಂಗ ಶೀಲಗಳ ಆಚರಣೆಯನ್ನು ಸಹಾ ಪಾಲಿಸಿದನು. ಅಷ್ಟೇ ಅಲ್ಲ ಧಮ್ಮಶ್ರವಣವನ್ನು ಇಡೀ ರಾತ್ರಿ ಆಲಿಸಿದನು.
                ಅದೇರಾತ್ರಿ ಕೆಲವು ಕಳ್ಳನರು ಮನೆಯನ್ನು ಒಡೆದು ಕಳ್ಳತನ ಮಾಡುವಾಗ, ಮನೆಯವರು ಜಾಗ್ರತರಾಗಿ ಕಳ್ಳರನ್ನು ಹಿಂಬಾಲಿಸಿದರು. ಆಗ ಕಳ್ಳರು ಸಿಕ್ಕ ದಿಕ್ಕುಗಳಿಗೆ ಚೆಲ್ಲಾಪಿಲ್ಲಿಯಾಗಿ ಓಡಿ ಪರಾರಿಯಾದರು. ಕೆಲವರು ವಿಹಾರದ ದಿಕ್ಕಿಗೂ ಓಡಿಬಂದರು. ಅದೇ ಸಮಯದಲ್ಲಿ ಮಹಾಕಾಲನು ವಿಹಾರದಲ್ಲಿದ್ದ ಕೊಳದಲ್ಲಿ ಮುಖವನ್ನು ತೊಳೆಯುತ್ತಿದ್ದನು. ಆಗ ಕಳ್ಳರು ಕದ್ದ ವಸ್ತುಗಳನ್ನು ಮಹಾಕಾಲನ ಮುಂದೆ ಹಾಕಿ ಓಡಿತಪ್ಪಿಸಿಕೊಂಡರು. ಮನೆಯವರು ಹುಡುಕುತ್ತ ವಿಹಾರಕ್ಕೆ ಬಂದಾಗ ಮಹಾಕಾಲನ ಮುಂದೆ ಕದ್ದ ವಸ್ತುಗಳು ಕಂಡುಬಂದಿತು. ಅವರೆಲ್ಲ ಮಹಾಕಾಲನನ್ನೇ ಕಳ್ಳನೆಂದು ಭಾವಿಸಿ ಹೊಡೆದು ಸಾಯಿಸಿಯೇ ಬಿಟ್ಟರು. ಮಾರನೆಯ ದಿನ ಭಿಕ್ಷುಗಳು ಬೆಳಿಗ್ಗೆ ಕೊಳದ ಬಳಿ ಮಹಾಕಾಲನ ಶವವನ್ನು ಕಂಡರು.
                ಮಾರನೆಯ ದಿನದಂದು ಭಿಕ್ಷುಗಳು ಭಗವಾನರಲ್ಲಿಗೆ ಬಂದು ಹೀಗೆ ಹೇಳಿದರು. ಭಗವಾನ್ ಈ ಗೃಹಸ್ಥನು ಇಡೀ ರಾತ್ರಿ ಧಮ್ಮಶ್ರವಣ ಮಾಡಿದನು. ಅಷ್ಟೇ ಅಲ್ಲ, ಆತನು ಅಷ್ಟಾಂಗ ಶೀಲವನ್ನು ಪಾಲಿಸಿದನು. ಖಂಡಿತವಾಗಿ ಇಂತಹ ಸಾವಿಗೆ ಈತನು ಅರ್ಹನಲ್ಲ ಎಂದರು.

                ಆಗ ಭಗವಾನರು ಭಿಕ್ಷುಗಳಿಗೆ ಹೀಗೆ ಹೇಳಿದರು: ಭಿಕ್ಷುಗಳೇ, ನೀವು ಆತನ ಈ ಜನ್ಮದ ಆಧಾರದಿಂದ ತೀಮರ್ಾನಿಸುವುದಾದರೆ ಆತನು ಇಂತಹ ಮರಣಕ್ಕೆ ಖಂಡಿತ ಅರ್ಹನಲ್ಲ. ಆದರೆ ಆತನು ತನ್ನ ಹಿಂದಿನ ಜನ್ಮದ ಪಾಪಫಲ ಪಡೆದಿದ್ದಾನೆ ಅಷ್ಟೇ. ಆತನು ತನ್ನ ಹಿಂದಿನ ಜನ್ಮವೊಂದರಲ್ಲಿ ರಾಜನ ಪರಿವಾರದವನಾಗಿದ್ದನು. ಆ ಜನ್ಮದಲ್ಲಿ ಆತನು ಬೇರೊಬ್ಬ ವ್ಯಕ್ತಿಯ ಪತ್ನಿಯ ಮೇಲಿನ ಲೋಭದಿಂದಾಗಿ ಆಕೆಯ ಪತಿಗೆ ಮರಣಾಂತಿಕವಾಗಿ ಹಲ್ಲೆ ನಡೆಸಿದ್ದನು. ಆ ಕರ್ಮಫಲವು ನಾಲ್ಕು ಅಪಾಯಗಳಿಗೆ ಕರೆದೊಯ್ಯುತ್ತದೆ. ಹೀಗಾಗಿಯೇ ಈ ಘಟನೆ ನಡೆದಿದೆ ಎಂದು ಹೇಳಿ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment