ಶರೀರ - ಮೂಳೆ ಮಾಂಸದ ನಗರ
‘’ಅಸ್ಥಿಯಿಂದ ನಗರ
ನಿಮರ್ಿತಿಯಾಗಿದೆ, ಮಾಂಸ ಲೋಹಿತದಿಂದ
(ರಕ್ತ) ಲೇಪನಗೊಂಡಿದೆ. ಇದರಲ್ಲಿ ಜರಾ, ಮೃತ್ಯುವೂ ಹಾಗೆಯೇ ಅಹಂಕಾರ, ಮಾಯಾವಿತನವೂ ಸಂಗ್ರಹವಾಗಿದೆ’’. (150)
ಗಾಥ ಪ್ರಸಂಗ 11:5
ಜನಪದ ಕಲ್ಯಾಣಿಯಲ್ಲಿ ಸೌಂದರ್ಯ ಕ್ಷಣಿಕವೆಂಬ ಜ್ಞಾನೋದಯ
ರಾಜಕುಮಾರಿ ಜನಪದ ಕಲ್ಯಾಣಿಯು ಪ್ರಜಾಪತಿ ಗೋತಮಿಯ
ಸೊಸೆಯಾಗಿದ್ದಳು. ಆಕೆಯು ಪರಮ ರೂಪಸಿಯಾಗಿದ್ದರಿಂದಾಗಿ ಆಕೆಯನ್ನು ರೂಪಾನಂದ ಎಂದೂ
ಕರೆಯುತ್ತಿದ್ದರು. ಒಂದುದಿನ ಆಕೆ ಈ ರೀತಿ ಚಿಂತಿಸಿದಳು ಶಾಕ್ಯರ ಅನಘ್ರ್ಯ ರತ್ನರಾದ ಸಿದ್ಧಾರ್ಥ
ಗೋತಮರು ಚಕ್ರವತರ್ಿಯಾಗಬೇಕಿತ್ತು, ಆದರೆ ಅವರು
ಬುದ್ಧರಾದರು. ನನ್ನ ಪತಿಯನ್ನು ಸಹಾ ಭಿಕ್ಷುವನ್ನಾಗಿಸಿದರು. ಅತ್ತೆ ಗೊತಮಿಯು ಹಾಗೆಯೇ, ಯಶೋಧರೆ, ರಾಹುಲರು ಸಹಾ ಸಂಘಕ್ಕೆ ಸೇರಿದರು. ನಾನಿಲ್ಲಿ ಒಂಟಿಯಾಗಿರುವೆನು,
ಏತಕ್ಕೆ ನಾನು ಸಹ ಭಿಕ್ಷುಣಿಯಾಗಬಾರದು ಎಂದು ಚಿಂತಿಸಿ
ಆಕೆಯು ಒಂಟಿತನದಿಂದ ಪಾರಾಗಲು ಭಿಕ್ಷುಣಿಯಾದಳು. ಆದರೆ ಆಕೆಯಲ್ಲಿ ದೇಹಾಭಿಮಾನ ಹೆಚ್ಚಾಗಿಯೇ ಇತ್ತು.
ತಾನು ಸುಂದರಿ ಎಂಬ ಅಹಂಭಾವವಿತ್ತು. ದೇಹದ ಸೌಂದರ್ಯವನ್ನು ತುಚ್ಛೀಕರಿಸುವ ಬುದ್ಧರಿಂದ ಅಂತಹ
ಭಿಕ್ಷುಣಿಯರಿಂದ ಮತ್ತು ಅಂತಹ ಬೋಧನೆಯಿಂದಲೂ ಆಕೆ ದೂರವಿದ್ದಳು.
ಒಂದುದಿನ ಆಕೆಯು ಭಿಕ್ಷುಣಿಯರಿಂದ ಬುದ್ಧರ ಜ್ಞಾನದ
ಪ್ರಶಂಸೆ ಕೇಳಿ ಅವರನ್ನು ಕಾಣಲು ನಿರ್ಧರಿಸಿದಳು. ಆಗ ಭಗವಾನರು ಆಕೆಯ ಜ್ಞಾನೋದಯ ಹತ್ತಿರವಾಗಿದೆ
ಎಂದರಿತು ಹೀಗೆ ಯೋಚಿಸಿದರು: ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು, ಈ ರೂಪಾನಂದಳು ಸೌಂದರ್ಯಕ್ಕೆ ಅಂಟಿದ್ದಾಳೆ, ಈ ಅಹಂಕಾರ ಮತ್ತು ಅಂಟಿಕೊಳ್ಳುವಿಕೆಯನ್ನು ಇಂದೇ ತೆಗೆದುಹಾಕುವೆನು.
ನಂತರ ಭಗವಾನರು ತಮ್ಮ ದಿವ್ಯಶಕ್ತಿಯಿಂದ ಅದ್ವಿತೀಯ ಸುಂದರಿಯೊಬ್ಬಳನ್ನು ಸೃಷ್ಟಿಸಿದರು. ಆಕೆಯು
ಬುದ್ಧರಿಗೆ ಚಾಮರ ಬೀಸತೊಡಗುವಂತೆ ಮಾಡಿದರು. ಆಕೆಯ ಸೌಂದರ್ಯಕ್ಕೆ ಜನಪದ ಕಲ್ಯಾಣಿಯೂ ಸಹಾ
ಮಾರುಹೋದಳು. ಆಕೆಯು ಹಂಸದಂತೆ ಕಂಡುಬಂದರೆ ತಾನು ಕಾಗೆಯೆಂದು ಕುಗ್ಗಿಹೋದಳು. ಆದರೆ ನೋಡು
ನೋಡುತ್ತಿರುವಂತೆಯೇ ನಿಮಿಷಕ್ಕೆ ಆ ಸುಂದರಿಯಲ್ಲಿ ವರ್ಷ ಕಳೆದು ಹೋಗುತ್ತಿತ್ತು. ನಿಮಿಷಗಳಲ್ಲೇ
ಆಕೆ ಮಧ್ಯ ವಯಸ್ಕಳಾದಳು, ನಂತರ ಹಾಗೆಯೇ
ವೃದ್ಧೆಯಾದಳು. ನಿರಂತರವಾಗಿ ದೇಹ ಪರಿವರ್ತನೆಯಾಗುತ್ತಿತ್ತು. ನಂತರ ಅತಿ ವೃದ್ಧೆಯಾಗಿ ಆ
ಆಕೃತಿಯು ತನ್ನ ಕಶ್ಮಲಗಳ ಮೇಲೆಯೇ ಹೊರಳಾಡಿದಳು, ಕೊನೆಗೆ ಸತ್ತಳು. ನಂತರವೂ ಆ ಶರೀರ ನೀಲಿಗಟ್ಟಿತು, ಗೀವುಗಟ್ಟಿತು, ವಿಕಾರವಾಯಿತು, ಹುಳುಗಳು
ಕ್ರಿಮಿಗಳು ಹೊರಬಂದವು. ಆ ಕ್ಷಣದಲ್ಲೇ ಕಾಗೆ, ಹದ್ದುಗಳು ಬಂದು ಆ ಶವವನ್ನು ಕಿತ್ತುತಿಂದವು, ಅಸ್ಥಿಪಂಜರವು ಉಳಿಯಿತು.
ಆದರೆ ಈ ದೃಶ್ಯ ಕೇವಲ ರೂಪನಂದಳಿಗೆ ಮಾತ್ರ
ಕಾಣಿಸುತ್ತಿತ್ತು. ಆಗ ಆಕೆ ಹೀಗೆ ಚಿಂತಿಸಿದಳು. ನನ್ನ ಕಣ್ಣಾರೆ ಶರೀರದ ಗತಿಯನ್ನು ಕಂಡೆನು.
ನನ್ನ ಶರೀರವೂ ಸಹಾ ಮುಂದೆ ಹೀಗೆ ಆಗುವುದು, ನಾನು ಸಹಾ ರೋಗಕ್ಕೆ, ವೃದ್ಧಾಪ್ಯಕ್ಕೆ
ಮತ್ತು ಮರಣಕ್ಕೆ ಒಳಗಾಗುವೆನು. ಈ ದೇಹ ಅನಿತ್ಯ, ಕುರೂಪವಾಗಿದೆ, ಅಂತ್ಯಗೊಳ್ಳುತ್ತದೆ,
ನಾನು ಇಂತಹ ತುಚ್ಛತೆಗೆ ಅಂಟುವುದಿಲ್ಲ... ಎಂದು
ಚಿಂತಿಸುತ್ತಲೇ ಆಕೆ ಸೋತಪತ್ತಿಫಲ ಪಡೆದಳು. ಆ ಸಮಯದಲ್ಲಿ ಭಗವಾನರು ಈ ಗಾಥೆ ಹೇಳಿದರು.
No comments:
Post a Comment