ಸರ್ವಲೋಕಾಧಿಪತಿಗಿಂತ ಸೋತಪತ್ತಿ ಫಲ ಶ್ರೇಷ್ಠವಾದುದು
ಇಡೀ ಪೃಥ್ವಿಗೆ
ಚಕ್ರವತರ್ಿಯಾಗುವುದಕ್ಕಿಂತ ಸ್ವರ್ಗಕ್ಕೆ ಹೋಗುವುದಕ್ಕಿಂತಲೂ ಸರ್ವಲೋಕಾಧಿಪತಿಯಾಗುವುದಕ್ಕಿಂತಲೂ
ಸೋತಪತ್ತಿಫಲ ಶ್ರೇಷ್ಠವಾದದ್ದು. (178)
ಗಾಥ ಪ್ರಸಂಗ 13:11
ಅನಾಥಪಿಂಡಿಕನ ಮಗ ಕಾಲನ ಕಥೆ
ಅನಾಥಪಿಂಡಿಕನ ಮಗನಾದ ಕಾಲನು ಬುದ್ಧ ಭಗವಾನರಿಂದ ಮತ್ತು
ಭಿಕ್ಷುಗಳಿಂದ ದೂರವೇ ಇದ್ದನು. ಹೀಗೆ ಆದರೆ ಭವಿಷ್ಯದಲ್ಲಿ ಮಗನಿಗೆ ಹಿತವಿರಲಾರದೆಂದು
ಅನಾಥಪಿಂಡಿಕನು ಮಗನನ್ನು ಸರಿದಾರಿಗೆ ತರಲೆಂದು ಉಪಾಯವೊಂದನ್ನು ಮಾಡಿದನು. ಅದೇನೆಂದರೆ ಒಂದುದಿನ
ಶೀಲ ಪಾಲಿಸಿದರೆ ನೂರು ಚಿನ್ನದ ನಾಣ್ಯಗಳನ್ನು ನೀಡುವುದಾಗಿ ಹೇಳಿದನು. ಅದನ್ನು ಆತನು ಪಾಲಿಸಿದ
ನಂತರ, ಒಂದು ಗಾಥೆಯನ್ನು
ನೆನಪಿನಲ್ಲಿಟ್ಟುಕೊಂಡು ಬಂದು ಹೇಳಿದರೆ ಸಾವಿರ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ಹೇಳಿದನು.
ಹೀಗಾಗಿ ಆ ಯುವಕನು ಧಮ್ಮವನ್ನು ಆಲಿಸಲು ಬುದ್ಧ ಭಗವಾನರ
ಬಳಿಗೆ ಬಂದನು. ಆದರೆ ಧಮ್ಮವನ್ನು ಅರಿಯುವ ಬದಲು ಕೇವಲ ಒಂದು ಗಾಥೆಯನ್ನು ನೆನಪಿನಲ್ಲಿಡಲು
ಪ್ರಯತ್ನಿಸುತ್ತಿದ್ದನು. ಹೀಗಾಗಿ ಆ ಯುವಕನು ಒಂದೇ ಗಾಥೆಯನ್ನು ಹಲವುಬಾರಿ ಪುನರುಚ್ಛಾರ
ಮಾಡುತ್ತಲೇ ಧಮ್ಮದ ಅರ್ಥವನ್ನು ಪೂರ್ಣವಾಗಿ ಗ್ರಹಿಸಿ ಸೋತಾಪತ್ತಿ ಫಲವನ್ನು ಪಡೆದನು. ನಂತರ
ಮಾರನೆಯದಿನ ಭಗವಾನರಿಗೆ ಮತ್ತು ಭಿಕ್ಖುಗಳಿಗೆ ದಾನಕ್ಕೂ ಮನೆಗೆ ಆಹ್ವಾನಿಸಿದನು. ಆ ಸಂದರ್ಭದಲ್ಲಿ
ಅನಾಥಪಿಂಡಿಕನು ಸಾವಿರ ಚಿನ್ನದ ನಾಣ್ಯಗಳನ್ನು ಕಾಲನಿಗೆ ನೀಡಲು ಹೋದಾಗ ಆತನು ಸ್ವೀಕರಿಸಲು
ನಿರಾಕರಿಸಿದನು. ಆಗ ಅನಾಥಪಿಂಡಿಕನು ಭಗವಾನರಲ್ಲಿ ಹೀಗೆ ಹೇಳಿದನು: ಭಗವಾನ್ ನನ್ನ ಮಗ ಈಗ ಬದಲಾಗಿದ್ದಾನೆ, ಆತನು ಆರ್ಯರಂತೆ ವತರ್ಿಸುತ್ತಿದ್ದಾನೆ. ಆಗ ಭಗವಾನರು
ಕಾಲನು ಸೋತಪನ್ನನಾಗಿರುವುದನ್ನು ಹೇಳಿ ಈ ಮೇಲಿನ ಗಾಥೆ ನುಡಿದರು.
No comments:
Post a Comment