ದುಶ್ಶೀಲನಿಗೆ ತನ್ನ ಕರ್ಮಗಳಿಂದಲೇ ಕಂಟಕ
ಮಾಲುವ ಬಳ್ಳಯು ಶಾಲ
ವೃಕ್ಷವನ್ನು ಸುತ್ತಿಕೊಂಡು ನಾಶಗೊಳಿಸುವಂತೆ, ದುಶ್ಶೀಲನು ತನ್ನಿಂದಲೇ ನಾಶಗೊಳ್ಳುತ್ತಾನೆ. ಹೇಗೆಂದರೆ ಶತ್ರು ದುಃಖ
ಬಯಸಿದಂತಹ ರೀತಿಯಲ್ಲೇ ಆಗಿಬಿಡುತ್ತಾನೆ. (162)
ಗಾಥ ಪ್ರಸಂಗ 12:6
ದೇವದತ್ತನ ದ್ವೇಷ ಕಥೆ
ಶ್ರಾವಸ್ತಿಯಲ್ಲಿ ಒಮ್ಮೆ ಭಿಕ್ಷುಗಳು ಬುದ್ಧರ
ಮಹೋನ್ನತೆ ಮತ್ತು ದೇವದತ್ತನ ದ್ವೇಷವನ್ನು ಕುರಿತು ಹೀಗೆ ಮಾತನಾಡುತ್ತಿದ್ದರು.
ಓಹ್, ನಿಜಕ್ಕೂ ದೇವದತ್ತನು ಶೀಲನಿಲ್ಲದ ವ್ಯಕ್ತಿಯಾಗಿದ್ದಾನೆ, ತುಂಬ ಲೋಭಿಯಾಗಿದ್ದಾನೆ. ಕೀತರ್ಿ ಮತ್ತು ಲೌಕಿಕತೆಯ ಲಾಭಕ್ಕಾಗಿ,
ಅಜಾತಶತ್ರುಗೆ ಪವಾಡ ತೋರಿಸಿ ವಶಪಡಿಸಿಕೊಂಡು, ದೇವದತ್ತನ ದುಬರ್ೊಧನೆಯಿಂದಾಗಿ ಅಜಾತಶತ್ರುವು ತನ್ನ
ತಂದೆಯ ಸಾವಿಗೆ ಕಾರಣನಾದನು. ಅಷ್ಟೇ ಅಲ್ಲ, ದೇವದತ್ತನು ಭಗವಾನರನ್ನು ಕೊಲ್ಲಲು ಮೂರುಬಾರಿ ಪ್ರಯತ್ನಿಸಿದ್ದನು. ನಿಜಕ್ಕೂ ಆತನು ಅತ್ಯಂತ
ಕ್ರೂರಿ, ದುಶ್ಶೀಲನಾಗಿದ್ದಾನೆ. ಆದರೂ
ಭಗವಾನರು ಆತನ ಮೇಲೆ ಯಾವ ದ್ವೇಷವಿಲ್ಲದೆ, ದಯೆಯಿಂದಲೇ ಕೂಡಿದವರಾಗಿದ್ದಾರೆ ಎಂದು ಮಾತನಾಡುತ್ತಿರುವಾಗ ಅಲ್ಲಿಗೆ ಭಗವಾನರು ಬಂದರು.
ಓ ಭಿಕ್ಷುಗಳೇ, ಯಾವ ವಿಷಯದ ಬಗ್ಗೆ ಮಾತನಾಡುತ್ತಿರುವಿರಿ. ಆಗ ಭಿಕ್ಷುಗಳು ದೇವದತ್ತನ
ಬಗ್ಗೆ ಎಂದು ವಿವರಣೆ ನೀಡಿದರು. ಆಗ ಭಗವಾನರು ಇಂತೆಂದರು: ಭಿಕ್ಷುಗಳೇ, ದೇವದತ್ತನು ಈಗ ಮಾತ್ರವಲ್ಲ, ಹಿಂದಿನ ಅನೇಕ ಜನ್ಮಗಳಲ್ಲೂ ಹತ್ಯೆಗೆ ಪ್ರಯತ್ನಿಸಿದ್ದಾನೆ ಎಂದು ಹೇಳಿ ಆ ಹಿಂದಿನ
ಜನ್ಮಗಳಲ್ಲಿ ಒಂದನ್ನು ಉದಾಹರಿಸಿದರು.
ಬಹುಕಾಲದ ಹಿಂದೆ ಬ್ರಹ್ಮದತ್ತನು ಕಾಶಿಯಲ್ಲಿ
ರಾಜ್ಯವಾಳುತ್ತಿದ್ದಾಗ, ಬೋಧಿಸತ್ತರು
ಜಿಂಕೆಯಾಗಿ ಹುಟ್ಟಿದ್ದರು ಮತ್ತು ಆಗ ದೇವದತ್ತನು ಜಿಂಕೆಯ ಬೇಟೆಗಾರನಾಗಿದ್ದನು. ಒಮ್ಮೆ ಆತನು
ಜಿಂಕೆಯ ಪಾದಚಿಹ್ನೆಗಳನ್ನು ಮರದ ಕೆಳಗೆ ಗುರುತಿಸಿ, ಮರದಲ್ಲಿ ಅಡಗಿ ಕುಳಿತುಕೊಳ್ಳಲು ಸ್ಥಾನ ಸಿದ್ಧಪಡಿಸಿಕೊಂಡನು. ಜಿಂಕೆಯ
ಆಗಮನಕ್ಕಾಗಿ ಕಾಯುತ್ತಿರುತ್ತಾನೆ, ಜಿಂಕೆಗಾಗಿ ಕೆಲವು
ಹಣ್ಣುಗಳನ್ನು ಅಲ್ಲಲ್ಲಿ ಎಸೆದಿರುತ್ತಾನೆ, ಆಗ ಜಿಂಕೆಯು ಅಲ್ಲಿಗೆ ಬಂದಿತು. ಸಾತ್ವಿಕ ಗುಣವುಳ್ಳದ್ದರಿಂದಾಗಿ ಅಪಾಯದ ಮುನ್ಸೂಚನೆ
ಅದಕ್ಕೆ ದೊರೆಯಿತು. ಅದು ಎಚ್ಚರಿಕೆಯಿಂದ ಸುತ್ತಲಿನ ಎಲ್ಲಾ ಸನ್ನಿವೇಶವನ್ನು ಎಚ್ಚರಿಕೆಯಿಂದ
ಗಮನಿಸಿತು. ಅದರ ಸೂಕ್ಷ್ಮ ಕಣ್ಣಿಗೆ ಬುದ್ಧಿವಂತಿಕೆಯಿಂದ ಅಡಗಿ ಕುಳಿತಿದ್ದಂತಹ ಬೇಟೆಗಾರನನ್ನು
ಕಾಣುತ್ತದೆ. ತಕ್ಷಣ ಅಪಾಯದ ಅರಿವಾಗಿ ಅಲ್ಲಿಂದ ಪಲಾಯನ ಮಾಡುವಾಗ ತಕ್ಷಣ ಬೇಟೆಗಾರನು ಭಲ್ಲೆಯನ್ನು
ಎಸೆದನು. ಆದರೆ ತಪ್ಪಿಸಿಕೊಳ್ಳುವುದರಲ್ಲಿ ನಿಷ್ಣಾತವಾಗಿದ್ದಂತಹ ಜಿಂಕೆಯು ತಪ್ಪಿಸಿಕೊಂಡು
ಬೇಟೆಗಾರನಿಗೆ ಹೀಗೆ ಹೇಳಿತು:
ಓ ಬೇಟೆಗಾರ, ಇಂದು ನೀನು ತಪ್ಪು ಲೆಕ್ಕಾಚಾರವನ್ನು ಹಾಕಿದೆ, ಆದರೆ ನಿನ್ನ ಪಾಪಕರ್ಮಗಳು ತಮ್ಮ ಫಲ ನೀಡುವಾಗ ತಪ್ಪು
ಲೆಕ್ಕಾಚಾರ ಹಾಕುವುದಿಲ್ಲ, ಅದು ಖಂಡಿತವಾಗಿ
ನಿನ್ನನ್ನು ಹಿಂಬಾಲಿಸುತ್ತದೆ.
ಹೀಗೆ ದೇವದತ್ತನು ಈಗ ಮಾತ್ರವಲ್ಲ, ಹಿಂದೆಯೂ ಹತ್ಯೆಗೆ ಪ್ರಯತ್ನಿಸಿ ವಿಫಲನಾಗಿದ್ದಾನೆ
ಎಂದು ಹೇಳಿ ಈ ಮೇಲಿನ ಗಾಥೆ ನುಡಿದರು.
No comments:
Post a Comment