Wednesday, 27 May 2015

dhammapada/lokavagga/13.9/cincamaanavikaa

ಸುಳ್ಳಾಡುವವನು ಮಾಡದ ಪಾಪವಿಲ್ಲ
ಸುಳ್ಳಾಡುವವನು ಸತ್ಯ ಹೇಳದಿರುವ ಒಂದು ಧಮ್ಮವನ್ನು ಅತಿಕ್ರಮಿಸಿದ್ದಾನೆ, ಹಾಗೆಯೇ ಪರಲೋಕವನ್ನು ಧಿಕ್ಕರಿಸುವ ಆತನು ಮಾಡದ ಪಾಪವೇ ಇಲ್ಲ.            (176)
ಗಾಥ ಪ್ರಸಂಗ 13:9
ಚಿಂಚಮಾಣವಿಕಾಳ ಘೋರ ಸುಳ್ಳು ಆರೋಪ




                ಆಗ ಭಗವಾನರು ಶ್ರಾವಸ್ತಿಯಲ್ಲಿದ್ದರು. ಭಗವಾನರ ಧಮ್ಮವನ್ನು ಆಲಿಸಲು ಜನರು ದೂರ ದೂರದಿಂದಲೂ ಬರುತ್ತಿದ್ದರು. ಜನರು ಕಿಕ್ಕಿರಿದು ಸೇರುತ್ತಿದ್ದರು. ಬಹಳಷ್ಟು ಜನರು ಪೂರ್ಣವಾಗಿ ದುಃಖ ವಿಮುಕ್ತರಾಗಲು ಭಿಕ್ಷು ಭಿಕ್ಷುಣಿಯರಾಗುತ್ತಿದ್ದರು. ಉಳಿದವರು ಬೌದ್ಧೋಪಾಸಕರಾಗಿ ಪಂಚಶೀಲ, ದಾನ, ಪಾಲಿಸಿ, ಉಪೋಸಥ ಆಚರಿಸುತ್ತ ಜೀವಿಸುತ್ತಿದ್ದರು. ಹೀಗಾಗಿ ಎಲ್ಲೆಡೆ ಬುದ್ಧರ ಬೋಧಿಯ ಪ್ರಕಾಶ ಹೆಚ್ಚಾದಂತೆಲ್ಲಾ ಬೇರೆ ನಂಬಿಕೆಯಂತೆ ಜೀವಿಸುತ್ತಿದ್ದ ಇತರ ಪಂಗಡಗಳ ಅನುಯಾಯಿಗಳ ಸಂಖ್ಯೆ ಕ್ಷೀಣಿಸಿತು. ಅವರಿಗೆ ಗೌರವ ಆದರ, ಆತಿಥ್ಯ ಕಡಿಮೆಯಾಗತೊಡಗಿತು. ಹೀಗಾಗಿ ಸ್ವಾರ್ಥ ಅಸೂಯೆಗೆ ಅವರು ಗುರಿಯಾಗಿ, ಕುಟಿಲ ನೀತಿಯೊಂದನ್ನು ಪ್ರಯೋಗಿಸಲು ಸಿದ್ಧರಾದರು. ಅದೇನೆಂದರೆ ಬುದ್ಧ ಭಗವಾನರ ಶೀಲಕ್ಕೆ ಧಕ್ಕೆ ಉಂಟುಮಾಡಿದರೆ ಸರ್ವವೂ ಸರಿಹೋಗುತ್ತದೆ ಎಂದು ಭಾವಿಸಿ ಮತಿಯಾನುಯಾಯಿಗಳು ತಮ್ಮ ಪಂಥದ ಸುಂದರ ಶಿಷ್ಯೆಯಾದ ಚಿಂಚಮಾಳವಿಕಾಳಿಗೆ ಕರೆಸಿ ಆಕೆಗೆ ಹೀಗೆ ಹೇಳಿದರು: ನಿನ್ನ ಹೃದಯದಲ್ಲಿ ನಮ್ಮ ಬಗ್ಗೆ ಸ್ವಲ್ಪವಾದರೂ ಸಹಾನುಭೂತಿ ಇದ್ದುದೇ ಆದರೆ ನಮಗೆ ಸಹಾಯಮಾಡು ಮತ್ತು ಸಮಣ ಗೋತಮನಿಗೆ ಅವಮಾನವನ್ನುಂಟುಮಾಡು ಎಂದು ಆಕೆಗೆ ಉಪಾಯ ತಿಳಿಸಿದರು.

                ಅದೇ ಸಂಜೆಗೆ ಆಕೆಯು ಹಲವು ಹೂಗಳೊಂದಿಗೆ ಜೇತವನ ವಿಹಾರದೆಡೆಗೆ ನಡೆದಳು. ಆಗ ಜನರು ಆಕೆಗೆ ಎಲ್ಲಿ ಹೋಗುತ್ತಿರುವೆ ಎಂದು ಕೇಳಿದರೆ ಆಕೆಯು ಹೀಗೆ ಉತ್ತರಿಸುತ್ತಿದ್ದಳು: ನಾನು ಎಲ್ಲಿಯಾದರೂ ಹೋಗುವೆನು? ನಿಮಗದರಿಂದ ಲಾಭವೇನು? ಆಕೆಯು ಜೇತವನಕ್ಕೆ ಸಮೀಪವಾಗಿದ್ದ ಪರಪಂಗಡದ ಸ್ಥಳದಲ್ಲಿ ತಲುಪಿ, ಪುನಃ ಬೆಳಿಗ್ಗೆ ಹಿಂತಿರುಗಿ ಬರುತ್ತಿದ್ದಳು. ಆಗ ಜನರೇನಾದರೂ ಎಲ್ಲಿಂದ ಬರುತ್ತಿರುವೆ ಎಂದೇನಾದರೂ ಕೇಳಿದರೆ ಆಕೆಯು ಹೀಗೆ ಉತ್ತರಿಸುತ್ತಿದ್ದಳು: ನಾನು ಸಮಣ ಗೌತಮರೊಡನೆ ಗಂಧಕುಟಿಯಲ್ಲಿ ರಾತ್ರಿ ಕಳೆಯುತ್ತ ಈಗ ಹಿಂತಿರುಗುತ್ತಿದ್ದೇನೆ. ಇದೇರೀತಿಯಲ್ಲಿ ಆಕೆಯು ಮೂರು ಅಥವಾ ನಾಲ್ಕು ತಿಂಗಳು ಪುನರಾವರ್ತನೆ ಮಾಡಿದಳು. ನಂತರ ಆಕೆಯು ಹೊಟ್ಟೆಗೆ ಬಟ್ಟೆಗೆ ಕಟ್ಟಿಕೊಂಡು ಗಭರ್ಿಣಿಯಂತೆ ಕಾಣಿಸತೊಡಗಿದಳು. ನಂತರ ಎಂಟು ತಿಂಗಳ ಬಳಿಕ ಆಕೆಯು ತನ್ನ ಚರ್ಮದ ಬಣ್ಣವನ್ನು ಹೋಲುವ ಮರದ ಹಲಗೆಗೆ ಹೊಟ್ಟೆಯ ಆಕಾರ ನೀಡಿ, ಅದನ್ನು ಹೊಟ್ಟೆಗೆ ಕಟ್ಟಿಕೊಂಡು ವಸ್ತ್ರ ಧರಿಸಿದಾಗ ಖಂಡಿತವಾಗಿ ಆಕೆ ಗಭರ್ಿಣಿಯಂತೆ ಗೋಚರಿಸಿದಳು. ನಂತರ ಆಕೆಯು ಅಂಗೈ ಮತ್ತು ಪಾದಕ್ಕೆ ಹೊಡೆದುಕೊಂಡು ಊದಿಸಿಕೊಂಡು ಬಳಲಿದಂತೆ ನಟಿಸುತ್ತ ತುಂಬು ಗಭರ್ಿಣಿಯಂತೆ ಕಾಣಿಸಿದಳು. ಹೀಗೆ ವೇಷಧರಿಸಿದ ಆಕೆಯು ಆ ಸಂಜೆ ಜೇತವನಕ್ಕೆ ಬಂದಳು.
                ಆಗ ಬುದ್ಧ ಭಗವಾನರು ಧಮ್ಮಪ್ರವಚನ ಮಾಡುತ್ತಿದ್ದರು. ಸುತ್ತಲೂ ಭಿಕ್ಷುಗಳು ಮತ್ತು ಉಪಾಸಕರು ಇದ್ದರು. ಆಗ ಆಕೆಗೆ ಎಲ್ಲರಿಗೂ ಕಾಣಿಸುವಂತಹ ಸ್ಥಳದಲ್ಲಿ ನಿಂತು ಬುದ್ಧರಿಗೆ ಅಭಿಮುಖವಾಗಿ ನಿಂತು ಹೀಗೆ ಸುಳ್ಳು ಆರೋಪ ಮಾಡಿದಳು ಓಹ್, ದೊಡ್ಡ ಸಮಣನೇ, ನೀನು ಕೇವಲ ಪರರಿಗೆ ಬೋಧಿಸುತ್ತೀಯೆ. ನಾನು ನಿನ್ನಿಂದ ಗಭರ್ಿಣಿಯಾಗಿರುವೆನು, ಆದರೂ ನನ್ನ ಪ್ರಸೂತಿಗಾಗಿ ನೀನು ಯಾವ ವ್ಯವಸ್ಥೆಯೂ ಮಾಡಲಿಲ್ಲ. ಕೇವಲ ಆನಂದ ಅನುಭವಿಸುವುದು ಮಾತ್ರ ನಿನಗೆ ಗೊತ್ತಿದೆ.
                ಆಗ ಭಗವಾನರು ತಮ್ಮ ಧಮ್ಮಬೋಧನೆ ಅಷ್ಟಕ್ಕೇ ನಿಲ್ಲಿಸಿ ಆಕೆಗೆ ಹೀಗೆ ಹೇಳಿದರು: ಸೋದರಿ, ಕೇವಲ ನಿನಗೆ ಮತ್ತು ನನಗೆ ಮಾತ್ರ ನೀನು ಹೇಳುತ್ತಿರುವುದು ಸತ್ಯವೋ ಅಥವಾ ಅಲ್ಲವೋ ಎಂಬುದು ತಿಳಿದಿದೆ ಎಂದು ಭಗವಾನರು ಆಕೆಗೆ ಹೇಳಿದಾಗಲೂ ಆಕೆಯು ಹದ್ದುಮೀರಿ ಹೀಗೆ ಹೇಳಿದಳು: ಹೌದು, ಸರಿಯಾಗಿಯೇ ಹೇಳಿದ್ದಿ, ನನ್ನ ಮತ್ತು ನಿನ್ನ ವಿನಃ ಬೇರೆಯವರಿಗೆ ನಾವು ಮಾಡಿದ್ದು ಹೇಗೆ ಗೊತ್ತಾಗುವುದು?
                ತಕ್ಷಣ ಇಂದ್ರನಿಗೆ (ದೇವತೆಗಳ ಒಡೆಯ ಸಕ್ಕ) ಜೇತವನದಲ್ಲಿ ನಡೆಯುತ್ತಿರುವ ಘೋರ ಆರೋಪ ಗಮನಕ್ಕೆ ಬಂದಿತು. ತಕ್ಷಣ ಇತರ ನಾಲ್ಕು ದೇವಗಣವು ಜೇತವನಕ್ಕೆ ತಕ್ಷಣದಲ್ಲಿ ಧಾವಿಸಿ ಸಣ್ಣ ಇಲಿಗಳ ರೂಪ ಧರಿಸಿ, ಚಿಂಚಮಾಣವಿಕಳ ವಸ್ತ್ರಗಳ ಮೇಲೆ ಹರಿದಾಡಿ ಮರದ ಹಲಗೆಗೆ ಆಕೆ ಕಟ್ಟಿಕೊಂಡಿರುವ ಹುರಿಗಳನ್ನು ಕತ್ತರಿಸಿ ಹಾಕಿದವು. ಇಲ್ಲಿಗಳ ಚಲನೆಗೆ ಆಕೆಯು ಮೈ ಒದರಿದಾಗ ಆ ಮರದ ಹಲಗೆಯು ಕೆಳಗೆ ಬಿದ್ದು ಆಕೆಯ ಆರೋಪ ನಿರಾಧಾರ ಎಂದು ಸಾಬೀತುಪಡಿಸಿದವು.
                ತಕ್ಷಣ ದಿಗ್ಭ್ರಾಂತರಾಗಿದ್ದ ಜನರಿಗೆ ಆಕ್ರೋಶ ಉಂಟಾಯಿತು. ಯಾರ ಮಾತು ಕೇಳದ ಸ್ಥಿತಿಯಲ್ಲಿದ್ದ ಅವರು ದುಷ್ಟೆ, ಸುಳ್ಳುಗಾತಿ, ಮೋಸಗಾತಿ, ಭಗವಾನರ ಕುರಿತು ಆರೋಪಿಸುವುದಕ್ಕೆ ನಿನಗೆಷ್ಟು ಧೈರ್ಯ ಎಂದು ಕೆಲವರು ಉಗಿದರು. ಕೆಲವರು ಹೊಡೆಯಲು ಬಂದರು. ಆಗ ಆಕೆಯು ಜೀವ ಭಯದಿಂದ ಓಡಿದಳು. ವಿಹಾರದಿಂದ ಹೊರಕ್ಕೆ ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಓಡಿದಳು. ಅಷ್ಟರಲ್ಲಿ ಭೂಕಂಪಿಸಿ, ಅವಳಿದ್ದ ಸ್ಥಳದಲ್ಲಿ ಬಿರುಕು ಮೂಡಿ, ಭೂಮಿಯೇ ಸೀಳಿದಾಗ ಆಕೆಯು ಅದರೊಳಗೆ ಬಿದ್ದಳು, ಸತ್ತು ಅವೀಚಿ ನರಕದಲ್ಲಿ ಹುಟ್ಟಿದಳು.


                ಮಾರನೆಯದಿನ ಭಿಕ್ಷುಗಳು ಈ ವಿಷಯವನ್ನು ಚಚರ್ಿಸುತ್ತಿದ್ದರು. ಅಲ್ಲಿಗೆ ಬಂದ ಭಗವಾನರು ಚಿಂಚಮಾಣವಿಕಾಳ ಬಗ್ಗೆ ಈ ಮೇಲಿನ ಗಾಥೆ ಹೇಳಿದರು. ನಂತರ ಭಗವಾನರು ಈ ಹಿಂದೆಯು ಆಕೆ ಹಿಂದಿನ ಜನ್ಮವೊಂದರಲ್ಲಿ ಹೀಗೆ ಆರೋಪಿಸಿ ಶಿಕ್ಷೆಗೆ ಒಳಗಾಗಿದ್ದಾಳೆ ಎಂದು ಆ ಜನ್ಮದ ಘಟನೆಯನ್ನು ಹೇಳಿದರು.

No comments:

Post a Comment