ಬೋಧಿಸುವ ಮುನ್ನ ಪಾಲಿಸು
ಪ್ರಪ್ರಥಮವಾಗಿ
ತನ್ನನ್ನು ಯೋಗ್ಯವಾದುದರಲ್ಲಿ ಸ್ಥಾಪಿಸಿಕೊಂಡು, ನಂತರ ಇತರರಿಗೆ ಬೋಧಿಸಬೇಕು. ಅಂತಹ ಪಂಡಿತನು ಕ್ಲೇಶಕ್ಕೆ ಗುರಿಯಾಗುವುದಿಲ್ಲ. (158)
ಗಾಥ ಪ್ರಸಂಗ 12:2
ಉಪನಂದನನ ತೀಮರ್ಾನ
ಶ್ರಾವಸ್ತಿಯಲ್ಲಿ ಉಪನಂದನೆಂಬ ವಾಗ್ಮಿ ಬೋಧಕನಿದ್ದನು.
ಆತನು ಪರರಿಗೆ ಬೋಧಿಸುವುದರಲ್ಲಿ ಅತ್ಯಂತ ಪ್ರವೀಣನಾಗಿದ್ದನು. ಆತನು ಸ್ವಾಥರ್ಿಯಾಗುವಿಕೆಯ
ತುಚ್ಛತೆ ವಿವರಿಸಿ ಲೋಭಕ್ಕೆ ಗುರಿಯಾಗಬಾರದೆಂದು ಒತ್ತುಹೇಳಿ, ಅತಿಕಡಿಮೆ ಬಯಕೆಗಳ್ಳುಳ್ಳವರಾಗಿ ಎಂದು ನುಡಿದು, ಸಂತೃಪ್ತಿಯ ಮಹಾಫಲಗಳನ್ನು ವಿವರಿಸಿ, ಅತ್ಯಂತ ಸರಳ ಜೀವನದ ಬಗ್ಗೆ ಬೋಧಿಸಿ ಧೂತಾಂಗಗಳ
(ತಪಶ್ಚರ್ಯೆಯ ಸರಳಜೀವನ) ಅವಶ್ಯಕತೆ ತಿಳಿಸುತ್ತಿದ್ದನು. ಹಾಗಿರುವಾಗಲು ತಾನು ಬೋಧಿಸುತ್ತಿದ್ದು
ಸ್ವತಃ ತಾನೇ ಪಾಲಿಸುತ್ತಿರಲಿಲ್ಲ ಮತ್ತು ಪರರು ನೀಡುವಂತಹ ಅವಶ್ಯಕ ವಸ್ತುಗಳಾದ ಚೀವರ
ಮುಂತಾದವುಗಳನ್ನು ಅಪಾರವಾಗಿ ಪಡೆಯುತ್ತಿದ್ದನು.
ಒಂದು ಸಂದರ್ಭದಲ್ಲಿ, ವರ್ಷಕಾಲಕ್ಕೆ ಸ್ವಲ್ಪ ಮುಂಚೆಯೇ ಒಂದು ಹಳ್ಳಿಯ ವಿಹಾರಕ್ಕೆ ಹೊರಟನು.
ಈತನ ವಿದ್ವತ್ತಿಗೆ ಮಾರುಹೋಗಿ ಅಲ್ಲಿನ ಕಿರಿಯ ಭಿಕ್ಷುಗಳು ಅಲ್ಲೇ ವಷರ್ಾವಾಸವನ್ನು ಕಳೆಯುವಂತೆ
ಕೇಳಿಕೊಂಡರು. ಉಪನಂದನು ಅಲ್ಲಿ ದಾನದಲ್ಲಿ ಏನೇನು ದೊರೆಯುವುದು ಎಂದು ವಿಚಾರಿಸಿದನು. ಅಲ್ಲಿ
ಕೇವಲ ಒಂದು ಚೀವರವೆಂದು ತಿಳಿದಾಗ, ಅಲ್ಲಿಂದ
ಹೊರಟೇಬಿಟ್ಟನು. ಆತನು ಚಪ್ಪಲಿಗಳು ಅಲ್ಲೇ ಉಳಿದವು. ಇನ್ನೊಂದು ವಿಹಾರದಲ್ಲಿಯೂ ದಾನದಲ್ಲಿ ಏನು
ಸಿಗಬಹುದು ಎಂದು ವಿಚಾರಿಸಿದಾಗ ಎರಡು ಚೀವರಗಳೆಂದು ತಿಳಿದಾಗ ಅಲ್ಲಿಯೂ ದಂಡವನ್ನು ಬಿಟ್ಟು
ಇನ್ನೊಂದು ವಿಹಾರದಲ್ಲಿ ಸೇರಿದನು. ಅಲ್ಲಿ ಮೂರು ಚೀವರಗಳು ಸಿಗುವುದು ಎಂದು ತಿಳಿದರೂ, ಅಲ್ಲಿಯೂ ತನ್ನ ನೀರಿನ ಪಾತ್ರೆಯನ್ನು ಬಿಟ್ಟು ಹೊರಟನು.
ನಂತರದ ವಿಹಾರದಲ್ಲಿ ನಾಲ್ಕು ಚೀವರಗಳು ಸಿಗುವುದೆಂದು ತಿಳಿದಾಗ ಅಲ್ಲಿಯೇ ನೆಲೆಸಿದನು ಹಾಗು
ವಷರ್ಾವಾಸವನ್ನು ಕಳೆದನು.
ವಷರ್ಾವಾಸವು ಮುಗಿದ ನಂತರ ಆತನು ತಾನು ಭೇಟಿಕೊಟ್ಟ
ವಿಹಾರಗಳಲ್ಲಿ ತನ್ನ ವಸ್ತುಗಳು ಉಳಿದಿದ್ದುದರಿಂದಾಗಿ, ಅಲ್ಲೆಲ್ಲಾ ಆತನಿಗೆ ಚೀವರಗಳು ಸಿಗಬೇಕಾಗಿದೆ ಎಂಬ ಸಮರ್ಥನಾವಾದವನ್ನು
ಮಂಡಿಸಿದನು. ಹೀಗೆ ಆತನು ಎಲ್ಲಾ ವಸ್ತುಗಳನ್ನು ಸಂಗ್ರಹಿಸಿಕೊಂಡು ಬಂಡಿಯಲ್ಲಿ ತುಂಬಿಕೊಂಡು ತನ್ನ
ಹಳೆಯ ವಿಹಾರಕ್ಕೆ ಮರಳಿದನು. ಆ ದಾರಿಯಲ್ಲಿ ಇಬ್ಬರು ಯುವ ಭಿಕ್ಷುಗಳ ಎರಡು ಚೀವರ ಮತ್ತು
ಮೌಲ್ಯಯುತ ಮಕಮಲ್ಲಿನ ಕಂಬಳಿಯ ಹಂಚುವಿಕೆಯ ಬಗ್ಗೆ ವಾದವಿವಾದ ಮಾಡುತ್ತಿದ್ದರು. ಅವರಿಂದ
ಇತ್ಯಾರ್ಥವಾಗದೆ, ಈ ಸಮಸ್ಯೆ ಬಿಡಿಸಲು
ಉಪನಂದನಲ್ಲಿ ಕೋರಿಕೊಂಡರು. ಆಗ ಉಪನಂದನನು ಇಬ್ಬರಿಗೂ ಒಂದೊಂದು ಚೀವರ ನೀಡಿ ನಂತರ ಉಳಿದ
ಮಕಮಲ್ಲಿನ ಕಂಬಳಿಯನ್ನು ತಾನೇ ಇಟ್ಟುಕೊಂಡು, ನ್ಯಾಯ ತೀಮರ್ಾನ ನೀಡಿದ್ದಕ್ಕೆ ಸರಿಹೋಯಿತು ಎಂದನು.
ಆ ಇಬ್ಬರು ಭಿಕ್ಷುಗಳಿಗೆ ತೃಪ್ತಿಯಾಗಲಿಲ್ಲ. ಆದರೆ ಆ
ನಿರ್ಣಯದ ಬಗ್ಗೆ ಏನೂ ಮಾಡುವ ಹಾಗಿರಲಿಲ್ಲ. ಅವರಿಗೆ ನಿರಾಸೆ, ಅತೃಪ್ತಿಯು ಹೆಚ್ಚಾಗಿ ಅವರು ಬುದ್ಧರಲ್ಲಿಗೆ ಹೋಗಿ ಈ ವಿಷಯವನ್ನು
ತಿಳಿಸಿಬಿಟ್ಟರು. ಆಗ ಭಗವಾನರು ಬೋಧಿಸುವುದು ಸುಲಭ, ಪಾಲಿಸುವುದು ಕಡುಕಷ್ಟಕರ. ಪರರಿಗೆ ಬೋಧಿಸುವ ಮುನ್ನ ತಾನೇ ಪಾಲಿಸುವವ
ನಿಂದೆಗೆ ಗುರಿಯಾಗಲಾರ ಎಂದು ಹೇಳಿ ಮೇಲಿನ ಗಾಥೆ ನುಡಿದರು.
No comments:
Post a Comment