Wednesday, 26 August 2015

dhammapada/nirayavagga/22.9/wisechildren

ಮಿಥ್ಯಾದೃಷ್ಟಿ ಹೊಂದಿದವರು ದುರ್ಗತಿಗೆ ಹೋಗುವರು

"ದೋಷವಿಲ್ಲದೆಡೆ ದೋಷವ ಕಾಣುವರು,
ದೋಷವಿರುವಲ್ಲಿ ದೋಷವ ಕಾಣದೆ,
ಮಿಥ್ಯಾದೃಷ್ಟಿಗಳನ್ನು ಅಪ್ಪುವಂತಹ
ಜೀವಿಗಳು ದುರ್ಗತಿಗೆ ಹೋಗುವರು."           (318)

"ದೋಷವನ್ನು (ಕೆಟ್ಟದ್ದನ್ನು) ದೋಷವೆಂದೇ ಕಾಣುವ,
ದೋಷವಲ್ಲದ್ದನ್ನು ದೋಷರಹಿತವೆಂದೇ ಕಾಣುವಂತಹ
ಸಮ್ಮಾದೃಷ್ಟಿ ಹೊಂದಿದಂತಹ (ಅಪ್ಪಿದಂತಹ)
ಜೀವಿಗಳೂ ಸುಗತಿಗೆ ಹೋಗುವರು."            (319)

ಗಾಥ ಪ್ರಸಂಗ 22:9
ಬಾಲಕರಿಂದಾಗಿ ತಂದೆ-ತಾಯಿಗಳೂ ಸಮ್ಮಾದೃಷ್ಟಿ ಹೊಂದಿದರು


            ಆಗ ಶ್ರಾವಸ್ತಿಯಲ್ಲಿ (ತಿಥರ್ಿ)ಗಳ ಅನುಯಾಯಿಗಳು ತಮ್ಮ ಮಕ್ಕಳನ್ನು ಬೌದ್ಧ ಅನುಯಾಯಿಗಳೊಂದಿಗೆ ಬೆರೆಯಲು ಬಿಡುತ್ತಿರಲಿಲ್ಲ. ಅವರು ತಮ್ಮ ಮಕ್ಕಳಿಗೆ ಬೇದಭಾವದ ವಿಷವನ್ನು ಈ ರೀತಿ ಬಿತ್ತುತ್ತಿದ್ದರು: "ಮಕ್ಕಳೇ, ನೀವು ಜೇತವನದ ವಿಹಾರಕ್ಕೆ ಹೋಗದಿರಿ. ಹಾಗೆಯೇ ಬೇರ್ಯಾವ ವಿಹಾರಕ್ಕೂ ಹೋಗದಿರಿ. ಶಾಕ್ಯ ಕುಲದ (ಬುದ್ಧರ) ಶಿಷ್ಯರಿಗಾಗಲಿ ಅಥವಾ ಬುದ್ಧರಿಗೆ ಆಗಲಿ ಗೌರವಿಸಬೇಡಿ" ಎಂದು.
            ಆದರೆ ಒಂದುದಿನ ತೀಥರ್ಿಗಳ ಬಾಲಕರು, ಬೌದ್ಧ ಬಾಲಕರೊಂದಿಗೆ ಆಟವಾಡುತ್ತಿದ್ದರು. ಅವರು ಜೇತವನ ವಿಹಾರದ ಬಳಿ ಆಟ ಆಡುವಾಗ ಅವರಿಗೆ ಬಾಯಾರಿಕೆ ಆಯಿತು. ಆಗ ಅವರು ಬೌದ್ಧ ಬಾಲಕನಿಗೆ ಹೀಗೆ ನುಡಿದರು: "ಮಿತ್ರ ನಮ್ಮ ತಂದೆ-ತಾಯಿಗಳಿಂದಾಗಿ ನಾವು ಈ ವಿಹಾರ ಪ್ರವೇಶಿಸಲಾರೆವು, ನೀನೇ ನಮಗಾಗಿ ನೀರು ತಾ". ಆಗ ಬೌದ್ಧ ಬಾಲಕನು ಜೇತವನ ಪ್ರವೇಶಿಸಿದನು. ಅಲ್ಲಿ ಅವನು ನೀರು ಕುಡಿದು ನಂತರ ಭಗವಾನರನ್ನು ಕಂಡು ಅವರಿಗೆ ವಂದಿಸಿದನು. ನಂತರ ತನ್ನ ಮಿತ್ರರ ಮನೋಭಾವ ತಿಳಿಸಿದನು. ಆಗ ಭಗವಾನರು "ಓ ಬಾಲಕ, ಆ ಬಾಲಕರನ್ನು ಇಲ್ಲೇ ನೀರು ಕುಡಿಯುವಂತೆ ಹೇಳು. ಅವರಿಗೆ ಯಾವ ಹಾನಿಯೂ ಆಗದು, ಬದಲಾಗಿ ಒಳ್ಳೆಯದೇ ಆಗುವುದು." ಆಗ ಆ ಬಾಲಕರೆಲ್ಲಾ ನೀರು ಕುಡಿದರು. ನಂತರ ಭಗವಾನರು ಅವರಿಗೆ ಯೋಗ್ಯವೆನಿಸುವ ಹಿತವಚನ ತಿಳಿಸಿದರು. ಇದರ ಪರಿಣಾಮವಾಗಿ ಆ ಬಾಲಕರಿಗೆ ಸರಿ ಎಂದರೆ ಏನು? ತಪ್ಪು ಎಂದರೆ ಯಾವುದು? ಎಂಬುದರ ಯಥಾರ್ಥ ಜ್ಞಾನ ಲಭಿಸಿ ಅವರು ಬುದ್ಧರ ಶ್ರೇಷ್ಠತೆ ಧಮ್ಮದ ಮೌಲ್ಯ ಹಾಗು ಭಿಕ್ಷುಗಳ ಪಾವಿತ್ರ್ಯತೆ ಅರಿತರು. ಹೀಗಾಗಿ ಅವರು ತ್ರಿರತ್ನಗಳಿಗೆ ಶರಣು ಹೋದರು.
            ನಂತರ ಮಕ್ಕಳು ಮನೆಗೆ ಹಿಂತಿರುಗಿ ತಮಗಾದ ಅಪೂರ್ವ ಅನುಭವವನ್ನು ತಂದೆ-ತಾಯಿಯರಲ್ಲಿ ಹೇಳಿಕೊಂಡರು. ಆದರೆ ಪೋಷಕರಿಗೆ ತ್ರಿರತ್ನದ ಮೌಲ್ಯ ಅರಿವಾಗದೆ ಅವರು ಹೀಗೆ ಗೋಳಾಡಿದರು: "ನಮ್ಮ ಮಕ್ಕಳು ನಮ್ಮ ಧರ್ಮಕ್ಕೆ ಭ್ರಷ್ಟರಾದರು. ಈಗ ಅವರು ನಮ್ಮ ಧರ್ಮಕ್ಕೆ ನಿಷ್ಠೆಯಿಂದಿಲ್ಲ, ಅವರು ಹಾಳಾಗಿದ್ದಾರೆ."
            ಅವರ ಪ್ರಲಾಪ ಕೇಳಿದಂತಹ ಪಕ್ಕದ ಮನೆಯ ಪ್ರಾಜ್ಞರು ಅವರಿಗೆ ಹೀಗೆ ತಿಳಿ ಹೇಳಿದರು: "ಇಲ್ಲಿ ಧರ್ಮ ಭ್ರಷ್ಟತೆ ಎಂಬುದಿಲ್ಲ. ಪಾಪರಹಿತನಾಗುವುದೇ ನಿಜವಾದ ಧಮ್ಮಪಾಲನೆ ಆಗಿದೆ. ಭಗವಾನರು ಯಾವುದೇ ರೀತಿಯಲ್ಲೂ ಧರ್ಮ ಭ್ರಷ್ಟನನ್ನಾಗಿಸುವುದಿಲ್ಲ, ಬದಲಾಗಿ ನಿಜವಾದ ಅರ್ಥದಲ್ಲಿ ಧಾಮಿಕರನ್ನಾಗಿಸುತ್ತಾರೆ. ಅವರ ಬೋಧನೆಯ ಸಾರವೆಂದರೆ ಪಾಪರಹಿತನಾಗುವಿಕೆ, ಪುಣ್ಯಪಾಲನೆ, ಚಿತ್ತಶುದ್ಧಿಯಾಗಿದೆ, ಮೂಢನಂಬಿಕೆಗಳಿಂದ ಮುಕ್ತನಾಗುವುದಾಗಿದೆ" ಎಂದು ಅವರಲ್ಲೂ ಸ್ಪೂತರ್ಿ ತುಂಬಿ, ಭಗವಾನರ ಬಳಿಗೆ ಕರೆತಂದರು.

            ಆಗ ಭಗವಾನರು ಈ ಮೇಲಿನ ಗಾಥೆಗಳನ್ನು ನುಡಿದರು. ಆಗ ಧಮ್ಮಜಾಗೃತವಾಗಿ ಆ ಪೋಷಕರು ಸಹಾ ತ್ರಿರತ್ನಗಳಿಗೆ ಶರಣು ಹೊಂದಿದರು. ನಂತರದ ಬೋಧನೆಗಳಲ್ಲಿ ಅವರು ಸೋತಪನ್ನ ಸ್ಥಿತಿಯನ್ನು ಪ್ರಾಪ್ತಿ ಮಾಡಿದರು.

dhammapada/nirayavagga/22.8/thenighanthas

ಪಾಪಲಜ್ಜೆ ಪಾಪಭೀತಿ ಇಲ್ಲದವರು ದುರ್ಗತಿಗೆ ಹೋಗುವರು

"ಲಜ್ಜೆ ಮಾಡಲಾಗದೆಡೆ, ಲಜ್ಜೆ ತಾಳುವರು;
ಪಾಪಲಜ್ಜೆ ತಾಳುವಲ್ಲಿ, ಲಜ್ಜೆತಾಳರು;
ಈ ರೀತಿಯ ಮಿಥ್ಯಾದೃಷ್ಟಿಯನ್ನು ಅಪ್ಪಿದ
ಜೀವಿಗಳು ದುರ್ಗತಿಗೆ ಹೋಗುವರು."           (316)

"ಭಯ ದಶರ್ಿಸುವಂತಹ ಕಡೆ ಅಭಯದಿಂದಿರುವವರು;
ಅಭಯವಿರುವ ಕಡೆ ಭಯದಿಂದಿರುವರು;
ಈ ರೀತಿಯ ಮಿಥ್ಯಾದೃಷ್ಟಿಯನ್ನು ಅಪ್ಪಿದ
ಜೀವಿಗಳೂ ದುರ್ಗತಿಗೆ ಹೋಗುವರು."          (317)

ಗಾಥ ಪ್ರಸಂಗ 22:8
ನಗ್ನ ನಿಗಂಠರ ಲಜ್ಜಾಹೀನತೆ


            ಒಮ್ಮೆ ನಿಗಂಠರು ಶ್ರಾವಸ್ತಿಯಲ್ಲಿ ಭಿಕ್ಷಾಟನೆಗೆ ಹೊರಟಿದ್ದರು. ಅವರ ಪಾತ್ರೆಗಳಿಗೆ ಬಟ್ಟೆ ಹೊದಿಸಲಾಗಿತ್ತು. ಅವರನ್ನು ಕಂಡ ಭಿಕ್ಷುಗಳು ಸಹಾ ಭಿಕ್ಷುಗಳಿಗೆ ಹೀಗೆ ಹೇಳಿದರು: "ನೋಡಿ, ಈ ನಿಗಂಠರನ್ನು ಇವರು ತಮ್ಮ ಶರೀರದ ಮುಂದಿನ ಭಾಗವನ್ನಾದರೂ ಮುಚ್ಚಿಕೊಂಡಿದ್ದಾರೆ, ಇವರು ಅಚೇಲಕ ಸನ್ಯಾಸಿಗಳಿಗಿಂತ ಉತ್ತಮವಾಗಿದ್ದಾರೆ. ಏಕೆಂದರೆ ಅಚೇಲಕರು ಏನನ್ನು ಧರಿಸದೆಯೇ, ಮುಚ್ಚದೆಯೇ ಚಲಿಸುತ್ತಾರೆ" ಎಂದರು.
            ಆಗ ಇದನ್ನು ಆಲಿಸಿದ ನಿಗಂಠರು ಹೀಗೆ ಪ್ರತಿ ಉತ್ತರಿಸಿದರು: "ಹೌದು, ನಮ್ಮ ಪಾತ್ರೆಯನ್ನು ಬಟ್ಟೆಯಿಂದ ಮುಚ್ಚಿದ್ದೇವೆ ಹೊರತು ನಮ್ಮನಲ್ಲ. ನಾವು ನಗ್ನರಾಗಿ ಚಲಿಸಲು ನಾಚುವುದಿಲ್ಲ, ನಾವು ಬಟ್ಟೆಯಿಂದ ಪಾತ್ರೆ ಮುಚ್ಚಿರುವುದು ಏಕೆಂದರೆ ಆಹಾರದಲ್ಲಿ ಧೂಳು ಇರಬಾರದು ಎನ್ನುವ ಉದ್ದೇಶ ದಿಂದ ಮಾತ್ರ. ಏಕೆಂದರೆ ದೂಳಿನಲ್ಲಿ ಜೀವಿಯಿದೆ ಅಲ್ಲವೇ?" ಎಂದರು.
            ಆಗ ಭಿಕ್ಷುಗಳು 'ಇವರು ಬದಲಾಗುವುದಿಲ್ಲ' ಎಂದುಕೊಳ್ಳುತ್ತಾ ಭಗವಾನರಲ್ಲಿ ಬಂದು ಇಡೀ ವಿಷಯವನ್ನು ತಿಳಿಸಿದರು. ಆಗ ಭಗವಾನರು ಹೀಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

            "ಭಿಕ್ಷುಗಳೇ, ಈ ರೀತಿಯ ನಗ್ನ ಸಂನ್ಯಾಸಿಗಳು ಯಾವುದರಲ್ಲಿ ನಾಚಿಕೆ ತಾಳ ಲಾರದೋ ಅದರಲ್ಲಿ ನಾಚುತ್ತಿದ್ದಾರೆ. ಯಾವುದರಲ್ಲಿ ಪಾಪಲಜ್ಜೆ ಇರಬೇಕೋ ಅಂಥಹದರಲ್ಲಿ ಲಜ್ಜೆ ತೋರಿಸುತ್ತಿಲ್ಲ. ಇಂತಹ ಮಿಥ್ಯಾದೃಷ್ಟಿಯನ್ನು ಹೊಂದಿರುವವರು ಮುಂದೆ ದುರ್ಗತಿಗೆ ಬೀಳುವರು" ಎಂದು ನುಡಿದು ಭಗವಾನರು ಈ ಮೇಲಿನ ಗಾಥೆಗಳನ್ನು ನುಡಿದರು.

dhammapada/nirayavagga/22.7/bhikkhuofborder

ಗಡಿ ನಗರದಂತೆ ನಿಮ್ಮನ್ನು ರಕ್ಷಿಸಿಕೊಳ್ಳಿ

"ಹೇಗೆ ಗಡಿಯಲ್ಲಿರುವ ನಗರವನ್ನು
ಒಳಕ್ಕೂ ಹಾಗು ಹೊರಕ್ಕೂ ರಕ್ಷಿಸುವರೋ
ಹಾಗೆಯೇ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ,
ಈ ಕ್ಷಣ ಕಳೆದುಹೋಗದಿರಲಿ,
ಏಕೆಂದರೆ ಅಮೂಲ್ಯ ಕ್ಷಣಗಳ ಅವಕಾಶ
ಕಳೆದುಕೊಂಡಿರುವವರು ನಿರಯದಲ್ಲಿ ಜನಿಸಬೇಕಾಗುತ್ತದೆ."            (315)

ಗಾಥ ಪ್ರಸಂಗ 22:7
ಗಡಿನಗರದ ಭಿಕ್ಷುಗಳು


            ಭಿಕ್ಷುಗಳ ಗುಂಪೊಂದು ಗಡಿಯಲ್ಲಿರುವ ನಗರದಲ್ಲಿ ವರ್ಷವಾಸ ಕಳೆದರು. ವಷರ್ಾವಾಸದ ಮೊದಲ ತಿಂಗಳು ಅವರಿಗೆ ಚೆನ್ನಾಗಿ ಆದರದಿಂದ, ಉತ್ತಮೋತ್ತಮ ಪರಿಕರಗಳಿಂದ ಉಪಾಸಕರು ನೋಡಿಕೊಂಡರು. ಆದರೆ ಎರಡನೆಯ ತಿಂಗಳು ಆ ನಗರದಲ್ಲಿ ಡಕಾಯಿತರು ಲೂಟಿ ಹೊಡೆದರು ಮತ್ತು ಕೆಲವರನ್ನು ಒತ್ತೆಯಾಳಾಗಿ ಕರೆದೊಯ್ದರು. ಹೀಗಾಗಿ ಆ ನಗರದ ಜನರು ನಗರವನ್ನು ಪುನರ್ ಸ್ಥಾಪಿಸಲು ನಿಂತರು. ಅವರು ಕೋಟೆಗಳನ್ನು ಬಲಪಡಿಸುತ್ತಾ ಬಲಿಷ್ಠಗೊಳಿಸಿದರು. ಹೀಗಾಗಿ ಅವರು ಭಿಕ್ಷುಗಳನ್ನು ಸರಿಯಾಗಿ ನೋಡಿಕೊಳ್ಳದೆ ಹೋದರು. ಭಿಕ್ಷುಗಳಂತು ಅತಿ ಕಷ್ಟದಿಂದ ತಮ್ಮ ವರ್ಷವಾಸ ಕಳೆದರು. ವರ್ಷವಾಸ ಮುಗಿದ ನಂತರ ಭಿಕ್ಷುಗಳು ಭಗವಾನರನ್ನು ಭೇಟಿ ಮಾಡಲು ಜೇತವನ ವಿಹಾರಕ್ಕೆ ಹೊರಟರು. ಭಗವಾನರಲ್ಲಿ ತಮಗಾದ ಕಷ್ಟಗಳನ್ನು ಹೇಳಿಕೊಂಡರು. ಆಗ ಭಗವಾನರು ಅವರಿಗೆ ಹೀಗೆ ನುಡಿದರು: "ಭಿಕ್ಷುಗಳೇ, ಇದನ್ನೇ ಅಥವಾ ಬೇರೆಯ ಕಷ್ಟಗಳನ್ನೇ ಸದಾ ಚಿಂತಿಸುತ್ತಾ ಇರಬೇಡಿ. ಕಷ್ಟಗಳಿಲ್ಲದ, ನಿಶ್ಚಿಂತತೆಯ ಹಾಗು ಪ್ರಯತ್ನರಹಿತ ಜೀವನ ಸದಾ ಸಿಗುವುದಿಲ್ಲ. ಜೀವನದಲ್ಲಿ ಅಪ್ರಿಯಗಳ ಆಗಮನ ಸಹಜ. ಅದಕ್ಕೆ ನೀವು ಸಿದ್ಧರಾಗಬೇಕು, ಹೇಗೆ ಗಡಿ ನಗರದವರು ತಮ್ಮ ನಗರವನ್ನು ರಕ್ಷಿಸುತ್ತಿರುವರೋ ಹಾಗೆಯೇ ಓ ಭಿಕ್ಷುಗಳೇ, ನೀವು ಸಹಾ ನಿಮ್ಮ ಮನಸ್ಸನ್ನು ರಕ್ಷಿಸಿರಿ ಹಾಗೂ ದೇಹದ ಮೇಲೆ ಜಾಗರೂಕರಾಗಿರಿ" ಎಂದು ಹೇಳಿ ಈ ಮೇಲಿನ ಗಾಥೆಯನ್ನು ನುಡಿದರು.

dhammapada/nirayavagga/22.6/voilentwomen

ಕೆಟ್ಟ ಕಾರ್ಯದಿಂದ ಪಶ್ಚಾತ್ತಾಪ ಖಚಿತ

"ದುಷ್ಕೃತ್ಯವನ್ನು ಮಾಡದಿರುವುದೇ ಒಳ್ಳೆಯದು.
ಏಕೆಂದರೆ ದುಷ್ಕೃತ್ಯದಿಂದಾಗಿ ನಂತರ ಯಾತನೆ ಪಡಬೇಕಾಗುತ್ತದೆ,
ಸುಕೃತ್ಯವನ್ನು ಮಾಡುವುದು ಶ್ರೇಯಸ್ಕರ,
ಏಕೆಂದರೆ ಸುಕೃತ್ಯದಿಂದಾಗಿ ನಂತರ ಕೊರಗಬೇಕಿಲ್ಲ."    (314)

ಗಾಥ ಪ್ರಸಂಗ 22:6
ಈಷರ್ೆಯಿಂದ ಹಿಂಸೆ ಮಾಡಿದ ಸ್ತ್ರೀ

            ಶ್ರಾವಸ್ತಿಯಲ್ಲಿ ಅತಿ ಈಷರ್ೆಯಿಂದ ಕೂಡಿದ್ದ ಸ್ತ್ರೀಯೊಬ್ಬಳು ತನ್ನ ಪತಿಯೊಂದಿಗೆ ವಾಸವಾಗಿದ್ದಳು. ಒಂದುದಿನ ಆಕೆಯು ತನ್ನ ಪತಿ, ದಾಸಿಯೊಂದಿಗೆ ಸಂಬಂಧ ಇಟ್ಟಿರುವುದನ್ನು ಕಂಡುಕೊಂಡಳು. ಹೀಗಾಗಿ ಆಕೆಯಲ್ಲಿ ಸವತಿ ಮಾತ್ಸರ್ಯ ಹೆಚ್ಚಾಗಿ ಆ ದಾಸಿಯನ್ನು ಹಗ್ಗದಿಂದ ಕಟ್ಟಿಹಾಕಿದಳು. ಅಷ್ಟಕ್ಕೆ ಆಕೆಯ ಕೋಪ ನಿಲ್ಲದೆ, ಆ ದಾಸಿ (ಯುವತಿ)ಯ ಕಿವಿ ಹಾಗು ಮೂಗನ್ನು ಕತ್ತರಿಸಿದಳು. ನಂತರ ಆ ಕೊಠಡಿಗೆ ಬಾಗಿಲನ್ನು ಹಾಕಿದಳು. ಅದಾದ ನಂತರ ಗಂಡನ ಜೊತೆಗೆ ಜೇತವನ ವಿಹಾರಕ್ಕೆ ಬಂದಳು. ಆಕೆ ಮನೆಬಿಟ್ಟ ಸ್ವಲ್ಪಹೊತ್ತಿಗೆ ಆ ದಾಸಿಯ ಸಂಬಂಧಿಕರು ದಾಸಿಯನ್ನು ಹುಡುಕುತ್ತಾ, ಮನೆಯ ಬಾಗಿಲನ್ನು ಒಡೆದು, ಆಕೆಯ ಬಂಧನಗಳನ್ನು ತೆಗೆದುಹಾಕಿ ಆಕೆಯ ಯಜಮಾನಿಯ ದುಷ್ಕೃತ್ಯವನ್ನು ಎಲ್ಲರಿಗೂ ಸಾರಲು ಅವರೂ ಸಹಾ ಜೇತವನಕ್ಕೆ ಬಂದರು. ಆಗ ಭಗವಾನರು ಧಮ್ಮವನ್ನು ಬೋಧಿಸುತ್ತಿದ್ದರು. ಆಗ ಆ ದಾಸಿಯು ಭಗವಾನರಿಗೆ ನಡೆದ ಸಂಗತಿಯೆಲ್ಲಾ ತಿಳಿಸಿದಳು. ಹೇಗೆ ಆಕೆ ಪೆಟ್ಟುಗಳನ್ನೆಲ್ಲಾ ತಿಂದಳು, ಹೇಗೆ ಆಕೆಯ ಕಿವಿ ಮತ್ತು ಮೂಗುಗಳನ್ನು ಕತ್ತರಿಸಲಾಯಿತು ಎಂದೆಲ್ಲಾ ಆಕೆ ಇಡೀ ಸಭೆಯ ಮಧ್ಯೆ ತಿಳಿಸಿದಳು.

            ಆಗ ಭಗವಾನರು ಆಕೆಗೆ ಸಾಂತ್ವನ ಮಾಡಿದರು. ನಂತರ ಹೀಗೆ ನುಡಿದರು: "ಯಾರಿಗೂ ತಿಳಿಯುವುದಿಲ್ಲ ಬಿಡು ಎಂದು ರಹಸ್ಯವಾಗಿಯೂ ಪಾಪ ಮಾಡಬಾರದು. ಯಾವಾಗ ರಹಸ್ಯ ಬಯಲಾಗುವುದೋ ಆಗ ಅಪಾರ ನೋವು ಹಾಗು ಪಶ್ಚಾತ್ತಾಪ ಉಂಟಾಗುವುದು. ಆದರೆ ಅದೇ ಸುಕೃತ್ಯಗಳನ್ನು ರಹಸ್ಯವಾಗಿ ಮಾಡಿದಾಗಲೂ ಸಹಾ ಅದು ಆನಂದವನ್ನು ತರುವುದೇ ಹೊರತು ದುಃಖವನ್ನಲ್ಲ" ಎಂದು ಹೇಳಿ ಈ ಮೇಲಿನ ಗಾಥೆಯನ್ನು ನುಡಿದರು.

dhammapada/nirayavagga/22.5/negligentbhikkhu

ಸಡಿಲಿಕೆಯ ಜೀವನ ಸಾರ್ಥಕವಲ್ಲ
 
"ಹೇಗೆ ಕುಶ ಹುಲ್ಲನ್ನು ತಪ್ಪಾಗಿ ಹಿಡಿದಾಗ
ಹಸ್ತವನ್ನೇ ಕತ್ತರಿಸುತ್ತದೆಯೋ ಹಾಗೆಯೇ
ಸಮಣ ಜೀವನವನ್ನು ವ್ಯತಿರಿಕ್ತವಾಗಿ ನಡೆಸಿದಾಗ
ಆತನು ನಿರಯಕ್ಕೆ ಎಳೆಯಲ್ಪಡುತ್ತಾನೆ."        (311)

"ಸಡಿಲವಾದ ಕಾರ್ಯಗಳು
ಭ್ರಷ್ಟತೆಯುತ ವ್ರತಗಳು (ಆಚರಣೆಗಳು)
ಸಂದೇಹಾಸ್ಪದ ಬ್ರಹ್ಮಚರಿಯ ಜೀವನ,
ಇವೆಲ್ಲಾ ಮಹತ್ಫಲವನ್ನು ನೀಡುವುದಿಲ್ಲ."        (312)

"ಕಾರ್ಯವೇನಾದರೂ ಮಾಡುವುದಿದ್ದರೆ,
ದೃಢವಾಗಿ, ಪರಾಕ್ರಮಯುತವಾಗಿ, ಚೆನ್ನಾಗಿ ಮಾಡು,
ಶಿಥಿಲವಾದ ಪರಿವ್ರಾಜಕ ಜೀವನವು
(ಕಲುಶಿತ) ಧೂಳನ್ನು ಮತ್ತಷ್ಟು ಚದುರಿಸಿಬಿಡುತ್ತದೆ."       (313)

ಗಾಥ ಪ್ರಸಂಗ 22:5
ನಿರ್ಲಕ್ಷ ಭಿಕ್ಷುವಿನ ಮನೋಭಾವ


            ಒಮ್ಮೆ ಒಬ್ಬ ಪ್ರಮಾಣಿಕ ಭಿಕ್ಷುವು ಆಕಸ್ಮಿಕವಾಗಿ ಹುಲ್ಲನ್ನು ಕತ್ತರಿಸಿದುದಕ್ಕಾಗಿ ಅತೀವ ಪಶ್ಚಾತ್ತಾಪಪಟ್ಟನು. (ಸಸ್ಯಗಳನ್ನು ಕತ್ತರಿಸುವುದು ಭಿಕ್ಷುಗಳಿಗೆ ನಿಷಿದ್ಧ). ಈ ವಿಷಯವನ್ನು ಆತನು ಇನ್ನೊಬ್ಬ ಭಿಕ್ಷುವಿಗೆ ತಿಳಿಸಿದನು. ಆ ಇನ್ನೊಬ್ಬ ಭಿಕ್ಷು ಅಷ್ಟಾಗಿ ದೃಢತೆಯುತ ಜೀವನ ನಡೆಸುತ್ತಿರಲಿಲ್ಲ. ಆತನು ಮೊದಲೇ ಅಜಾಗರೂಕನಾಗಿದ್ದನು. ಆತನು ಸಣ್ಣ ಪುಟ್ಟ ನಿಯಮಗಳನ್ನು ಪಾಲಿಸುತ್ತಲೇ ಇರಲಿಲ್ಲ. ಹೀಗಾಗಿ ಆತನು ಆ ಭಿಕ್ಷುವಿಗೆ ಸಮಾಧಾನಪಡಿಸಲು ಹೀಗೆ ಹೇಳಿದನು: "ಓಹ್, ಹುಲ್ಲು ಕತ್ತರಿಸುವುದೇ! ಅದು ಕ್ಷುಲ್ಲುಕ ತಪ್ಪು ಆಗಿದೆ. ಈ ವಿಷಯವನ್ನು ನೀವು ಮತ್ತೊಬ್ಬ ಭಿಕ್ಷುವಿನೊಂದಿಗೆ ಗುಟ್ಟಾಗಿ ಹೇಳಿದ್ದರು ಸಹಾ ದೋಷಮುಕ್ತರಾಗುತ್ತಿದ್ದೀರಿ. ಇದರಲ್ಲಿ ಚಿಂತೆ ಪಡುವಂತಹುದೇ ಇಲ್ಲ. ನೀವು ವ್ಯರ್ಥವಾಗಿ ಕೊರಗುತ್ತಿರುವಿರಿ" ಎಂದನು.

            ನಂತರ ತಾನು ಎರಡು ಕೈಗಳಿಂದಲೂ ಹುಲ್ಲನ್ನು ಕಿತ್ತು ಇದರಲ್ಲೇನೂ ತಪ್ಪಿಲ್ಲ ಎಂದು ತಿಳಿದು ತಿಳಿದು ತಪ್ಪು ಮಾಡಿದನು. ಈ ವಿಷಯ ಬುದ್ಧರಿಗೂ ತಲುಪಿತು. ಆಗ ಭಗವಾನರು ಆ ನಿರ್ಲಕ್ಷ ಭಿಕ್ಷುವಿಗೆ, ಈ ಮೇಲಿನ ಗಾಥೆಗಳನ್ನು ತಿಳಿಸಿ, ಸರಿದಾರಿಗೆ ತಂದರು.

dhammapada/nirayavagga/22.4/immoralkhema

ಪರನಾರಿ ಗಮನ ಪಾಪ ಗಳಿಕೆಯ ಪಥವಾಗಿದೆ

"ಎಚ್ಚರಿಕೆ ತಪ್ಪಿ ಪರನಾರಿಗಮನ
ಮಾಡುವವನಿಗೆ ನಾಲ್ಕು ಸ್ಥಾನಗಳು ಸಿಗುವುದು,
ಅಪುಣ್ಯ ಲಾಭ (ಪಾಪಗಳಿಕೆ), ನಿದ್ರಾಹೀನತೆ,
ಮೂರನೆಯದಾಗಿ ನಿಂದೆ, ನಿರಯವೇ ನಾಲ್ಕನೆಯದು."   (309)

"ಅಂತಹವನಿಗೆ ಅಪುಣ್ಯ ಲಾಭ ಹಾಗು
ಪಾಪಿಯ ಗತಿ (ದುರ್ಗತಿ) ಸಿಗುವುದು
ಭೀತನಾದ ಪುರುಷ ಮತ್ತು ಭೀತಿಗೊಂಡು ಒಂದಾದ ಸ್ತ್ರೀಯ
ಆನಂದವೂ ಸಹಾ ಕ್ಷಣಿಕವಾಗಿರುತ್ತದೆ.
ರಾಜನಿಂದ ಕಠೋರ ಶಿಕ್ಷೆಯು ಆಗುವುದು
ಆದ್ದರಿಂದ ನರನು ಪರನಾರಿಯನ್ನು ಸೇವಿಸದಿರಲಿ."        (310)


ಗಾಥ ಪ್ರಸಂಗ 22:4
ಚರಿತ್ರಹೀನ ಖೇಮನ ಚರಿತ್ರೆ

            ಅನಾಥಪಿಂಡಿಕನಿಗೆ ಖೇಮನೆಂಬ ಸೋದರಳಿಯನಿದ್ದನು. ಆತನು ಸದಾ ಶ್ರೀಮಂತನಷ್ಟೇ ಅಲ್ಲದೆ, ಅತ್ಯಂತ ಸುಂದರ ರೂಪವನ್ನು ಪಡೆದಿದ್ದನು. ಆತನ ರೂಪಕ್ಕೆ ಸ್ತ್ರೀಯರು ನಿಯಂತ್ರಣ ತಪ್ಪುವಷ್ಟು ಆಕಷರ್ಿತರಾಗುತ್ತಿದ್ದರು. ಇದನ್ನೇ ಬಳಿಸಿಕೊಂಡು ಆತನು ಪರನಾರಿಯರೊಂದಿಗೆ ಅನೈತಿಕ ಸಂಬಂಧ ಮಾಡುತ್ತಿದ್ದನು. ಭಟರು ಆತನಿಗೆ  ಅನೈತಿಕ ಸಂಬಂಧದ ದೋಷದಿಂದಾಗಿ ಮೂರುಬಾರಿ ಹಿಡಿದಿದ್ದರು. ಹಾಗು ರಾಜ ಪಸೇನದಿಯ ಬಳಿ ನಿಲ್ಲಿಸಿದ್ದರು. ಆದರೆ ರಾಜನು ಅನಾಥಪಿಂಡಿಕರ ಮೇಲಿನ ಗೌರವದಿಂದಾಗಿ, ಆತನಿಗೆ ಶಿಕ್ಷೆಯನ್ನು ನೀಡದೆ, ಬುದ್ಧಿವಾದ ನೀಡಿ ಕಳುಹಿಸಿದ್ದನು. ಆಗ ಅನಾಥಪಿಂಡಿಕರಿಗೂ ಇದರಿಂದ ಕಸಿವಿಸಿಯಾಗಿ ಆತನನ್ನು ಸರಿದಾರಿಗೆ ತರಲೆಂದು ಭಗವಾನರ ಬಳಿ ಕರೆತಂದರು.

            ಆಗ ಭಗವಾನರು ಆತನಿಗೆ ಈ ಮೇಲಿನ ಗಾಥೆಗಳಿಂದ ಸರಿಹಾದಿಗೆ ತಂದರು.

dhammapada/nirayavagga/22.3/bhikkhuofvajjis

ದಾನ ಸ್ವೀಕಾರಕ್ಕೆ ಶೀಲವೇ ಅರ್ಹತೆ

"ದುಶ್ಶೀಲನಾಗಿ, ಅನಿಯಂತ್ರಿತನಾಗಿ
ರಾಷ್ಟ್ರದ (ಜನರು ಶ್ರದ್ಧೆಯಿಂದ ನೀಡುವ) ಪಿಂಡವನ್ನು (ಆಹಾರವನ್ನು)
ಸೇವಿಸುವ ಬದಲು ಜ್ವಾಲೆಗಳಿಂದ ಆವೃತವಾಗಿರುವ
ಕಬ್ಬಿಣದ ಬಿಸಿ ಚೆಂಡನ್ನು ತಿನ್ನುವುದು ಮೇಲು."                (308)


ಗಾಥ ಪ್ರಸಂಗ 22:3
ಬರಗಾಲದಲ್ಲಿ ದಷ್ಟಪುಷ್ಟವಾಗಿದ್ದ ವಗ್ಗುಮುದ ನದಿ ದಂಡೆಯ ಭಿಕ್ಷುಗಳು


            ವಜ್ಜಿಗಳ ನಾಡಿನಲ್ಲಿ ಆಗ ಬರಗಾಲ ಬಂದಿತ್ತು. ಎಲ್ಲೆಡೆ ಆಹಾರಕ್ಕೆ ತೊಂದರೆಯಾಗಿತ್ತು. ಆಗ ಸುಲಭವಾಗಿ ಸ್ವಾದಿಷ್ಟ ಆಹಾರ ಪಡೆಯಲು ವಗ್ಗುಮುದ ನದಿ ದಂಡೆಯಲ್ಲಿ ವಾಸಿಸುತ್ತಿದ್ದಂತಹ ಭಿಕ್ಷುಗಳು ಕುಟಿಲೋಪಾಯವನ್ನು ಮಾಡಿದರು. ಅದೆಂದರೆ: ಅವರು ಯಾವುದೇ ಧ್ಯಾನಸಿದ್ಧಿ ಗಳಿಸದಿದ್ದರೂ ತಾವು ಪಡೆದಿದ್ದೇವೆ ಎಂದೂ, ಲೋಕೋತ್ತರ ಮಾರ್ಗ ಮತ್ತು ಫಲ ಪಡೆಯದಿದ್ದರೂ ಸಹಾ ತಾವು ಸಾಕ್ಷಾತ್ಕರಿಸಿದ್ದೇವೆ ಎಂದು ತೋರಿಸಿಕೊಂಡರು. ಇದರಿಂದ ಮೋಸ ಹೋದಂತಹ ಜನರು ಅವರನ್ನು ನಂಬಿ ಅವರನ್ನು ಗೌರವಿಸಿದರು. ತಮಗಾಗಿ ಅತ್ಯಲ್ಪ ಆಹಾರ ಇಟ್ಟುಕೊಂಡು ಭಿಕ್ಷುಗಳಿಗೆ ಅಧಿಕ ಆಹಾರ ನೀಡಿದರು.
            ಆಗಿನ ಕಾಲದಲ್ಲಿ ವರ್ಷವಾಸದ ಅಂತ್ಯದಲ್ಲಿ ಎಲ್ಲಾ ಭಿಕ್ಷುಗಳು ಭಗವಾನರ ಬಳಿಗೆ ಬಂದು ಗೌರವ ಅಪರ್ಿಸುತ್ತಿದ್ದರು. ಆಗ ಉಳಿದ ಕಡೆಯಿಂದ ಬಂದಂತಹ ಭಿಕ್ಷುಗಳು ಸೊರಗಿ ಹೋಗಿದ್ದರು. ಆದರೆ ವಗ್ಗುಮುದ ನದಿ ದಂಡೆಯ ಭಿಕ್ಷುಗಳು ದಷ್ಟಪುಷ್ಟವಾಗಿದ್ದರು. ಭಗವಾನರು ಎಲ್ಲರಿಗೂ ಅವರ ವರ್ಷವಾಸ ಹೇಗೆ ಕಳೆಯಿತು ಎಂದು ಕೇಳಿದಾಗ ಅವರು ತಮ್ಮ ಅನುಭವಗಳನ್ನು ಹೇಳಿ ಆಹಾರಕ್ಕೆ ತುಸು ತೊಂದರೆ ಆಯಿತೆಂದು ಹೇಳಿದರು. ನಂತರ ಭಗವಾನರ ವಗ್ಗುಮುದ ನದಿದಂಡೆಯ ಭಿಕ್ಷುಗಳಿಗೆ ಹೀಗೆ ಕೇಳಿದರು.
            "ಭಿಕ್ಷುಗಳೇ, ನಿಮಗೆ ಬರಗಾಲದಲ್ಲಿ ಆಹಾರ ದೊರೆಯುವಲ್ಲಿ ಏನಾದರೂ ತೊಂದರೆಯು ಆಯಿತೇ?"
            "ಇಲ್ಲ ಭಂತೆ."
            "ನಿಮಗೆ ತೊಂದರೆ ಆಗದಂತೆ ಹೇಗೆ ಆಹಾರ ಸಂಪಾದಿಸಿದಿರಿ?" ಎಂದು ಭಗವಾನರು ವಿಷಯ ತಿಳಿದಿದ್ದರೂ ಸಹಾ ಕೇಳಿದರು. ಆಗ ಅವರು ನಡೆದ ವಿಷಯವೆಲ್ಲಾ ತಿಳಿಸಿದರು.
            "ನಿಮಗೆ ನಿಜವಾಗಿಯೂ ಝಾನವಾಗಲಿ, ಫಲವಾಗಲಿ ಸಿದ್ದಿಸಿದೆಯೇ?"
            "ಇಲ್ಲ ಭಂತೆ."

            ಆಗ ಭಗವಾನರು ಅವರನ್ನು ಖಂಡಿಸಿ ಈ ಮೇಲಿನ ಗಾಥೆಯನ್ನು ನುಡಿದರು.

dhammapada/nirayavagga/22.2/flamecoveredpetas

ಪಾಪಿಗಳು ನಿರಯಕ್ಕೆ ಹೋಗುವರು

"ಬಹಳಷ್ಟು ಜನರು ಕಾಷಾಯವಸ್ತ್ರ ಧರಿಸಿಯು ಸಹಾ
ಪಾಪಧಮ್ಮದಲ್ಲಿ ತೊಡಗುತ್ತಾ ಅನಿಯಂತ್ರಿತರಾಗಿದ್ದಾರೆ,
ಪಾಪಕರ್ಮದಿಂದಾಗಿ ಈ ಪಾಪಿಗಳು
ನಿರಯದಲ್ಲಿ ಹುಟ್ಟುವರು."            (307)

ಗಾಥ ಪ್ರಸಂಗ 22:2
ಬೆಂಕಿಯಿಂದ ಆವೃತವಾಗಿರುವ ಅಸ್ತಿಪಂಜರ ರೂಪದ ಪ್ರೇತಗಳು

            ಒಮ್ಮೆ ಪೂಜ್ಯ ಮೊಗ್ಗಲ್ಲಾನರವರು ಗೃದ್ಧಕೂಟ ಪರ್ವತದಿಂದ ಪೂಜ್ಯ ಲಕ್ಖಣರ ಸಹಿತ ಇಳಿದು ಬರುತ್ತಿದ್ದರು. ಆಗ ಮೊಗ್ಗಲ್ಲಾನರು ಕೆಲವು ಪ್ರೇತಗಳನ್ನು ಕಂಡರು. ಜೇತವನ ವಿಹಾರಕ್ಕೆ ಹಿಂತಿರುಗಿದ ನಂತರ ಭಗವಾನರೊಂದಿಗೆ ಹೀಗೆ ಹೇಳಿದರು: "ಭಗವಾನ್, ನಾನು ಇಂದು ಐದು ಪ್ರೇತಗಳನ್ನು ಕಂಡೆನು. ಆದರೆ ಅವುಗಳ ರೂಪವು ಅಸ್ತಿಪಂಜರದ್ದಾಗಿದ್ದು, ಕಾಷಾಯವಸ್ತ್ರ ಹೊಂದಿದ್ದ ಅವುಗಳ ಸುತ್ತಲೂ ಬೆಂಕಿಯ ಜ್ವಾಲೆಯು ಆವೃತವಾಗಿತ್ತು."

            ಆಗ ಭಗವಾನರು ಅವರಿಗೆಲ್ಲಾ ಅದರ ಬಗ್ಗೆ ವಿವರಣೆ ನೀಡಿದರು. "ಈ ಪ್ರೇತಗಳು ಕಸ್ಸಪ ಬುದ್ಧರ ಕಾಲದಲ್ಲಿ ಭಿಕ್ಷುಗಳಾಗಿದ್ದರು ಹಾಗು ಕಾಷಾಯವಸ್ತ್ರ ಧರಿಸಿಯೂ ಅಪಾರ ಪಾಪ ಮಾಡಿದ್ದರು. ಅದರ ಪರಿಣಾಮವಾಗಿ ಅವರು ನಿರಯದಲ್ಲಿ ಜನಿಸಿದರು. ನಂತರ ಹೀಗೆ ಈ ರೀತಿಯ ಪ್ರೇತಗಳಾಗಿಯೂ ಜ್ವಾಲೆಗಳ ದುಃಖ ಅನುಭವಿಸುತ್ತಿದ್ದಾರೆ" ಎಂದು ಹೇಳಿ ಈ ಮೇಲಿನ ಗಾಥೆಯನ್ನು ನುಡಿದರು.

dhammapada/nirayavagga/22.1/paribbajakisundari

22. ನಿರಯ ವಗ್ಗ

ಸುಳ್ಳುಗಾರರು ನಿರಯಕ್ಕೆ ಹೋಗುವರು

"ಸುಳ್ಳು ಹೇಳುವವನು ನಿರಯದಲ್ಲಿ ಉದಯಿಸುವನು,
ಹಾಗೆಯೇ ಮಾಡಿದ್ದನ್ನು 'ತಾನು ಮಾಡಿಲ್ಲ' ಎಂದು ಹೇಳುವವನು ಸಹಾ
ಹೀನ ಕರ್ಮ ಮಾಡಿದ ಈ ಎರಡು ಬಗೆಯವರು ಸಹಾ ಪರಲೋಕದಲ್ಲಿ
ಸಮಾನ ಗತಿಯನ್ನೇ ಪಡೆಯುತ್ತಾರೆ."           (306)


ಗಾಥ ಪ್ರಸಂಗ 22:1
ಪರಿವ್ರಾಜಕಿ ಸುಂದರಿಯ ಹತ್ಯಾ ಆರೋಪ


            ಭಗವಾನರನ್ನು ಆರಾಧಿಸುವ ಜನರ ಗುಂಪು ವೃದ್ಧಿಸತೊಡಗಿತು. ಅದೇವೇಳೆ ಬೌದ್ಧರಲ್ಲದ ಧಾಮರ್ಿಕ ನಾಯಕರ ಹಿಂಬಾಲಕರ ಸಂಖ್ಯೆಯು ಕ್ಷೀಣಿಸತೊಡಗಿತು. ಹೀಗಾಗಿ ಅವರೆಲ್ಲರಿಗೂ ಈಷರ್ೆ ಅತಿಯಾಗಿ ಕಾಡಿತ್ತು. ಆಗ ಅವರಿಗೆ ಭಗವಾನರ ಘನತೆಗೆ ಹಾನಿ ಮಾಡದಿದ್ದರೆ ಅವರ ಸ್ಥಿತಿಯು ಇನ್ನೂ ಹದಗೆಡುವುದೆಂದು ಭಾವಿಸತೊಡಗಿದರು. ಹೀಗಾಗಿ ಅವರೊಂದು ಉಪಾಯ ಮಾಡಿದರು. ತಮ್ಮಲ್ಲೇ ಸುಂದರವಾಗಿದ್ದ ಸುಂದರಿ ಎಂಬ ಪರಿವ್ರಾಜಿಕೆಯನ್ನು ಕರೆದು ಆಕೆಗೆ ಹೀಗೆ ಹೇಳಿದರು: "ಸುಂದರಿ, ನೀನು ಅತ್ಯಂತ ಚೆಲುವಾಗಿದ್ದೀಯೆ. ಜೊತೆಗೆ ಚಾಣಕ್ಷೆ ಸಹಾ. ನಾವು ಬಯಸುವುದು ಏನೆಂದರೆ ಸಮಣ ಗೋತಮರ ಅಪಮಾನ ಒಂದೇ. ಅದಕ್ಕಾಗಿ ನಿಮ್ಮಿಬ್ಬರ ನಡುವೆ ಅನೈತಿಕ ಸಂಬಂಧವಿದೆ ಎಂದು ಜನರಿಗೆ ಭ್ರಮೆ ಹುಟ್ಟುಸುವುದಕ್ಕಾಗಿ ನೀನು ನಮಗೆ ಸಹಾಯ ಮಾಡಲೇಬೇಕು ಹೀಗಾದಾಗ ಅವರ ಪ್ರತಿಷ್ಠೆ, ಘನತೆ, ಅನುಯಾಯಿ ಸಂಪತ್ತೆಲ್ಲಾ ನಾಶವಾಗಿ, ನಮ್ಮಲ್ಲಿ ಅನುಯಾಯಿಗಳ ಸಂಖ್ಯೆ ಹೆಚ್ಚುತ್ತದೆ. ಆದ್ದರಿಂದ ನಿನ್ನ ಚೆಲುವು ಮತ್ತು ಚಾಣಾಕ್ಷತನವನ್ನು ಚೆನ್ನಾಗಿ ಬಳಸು" ಎಂದರು.
            ಸುಂದರಿಗೆ ತನ್ನಿಂದ ಏನನ್ನು ನಿರೀಕ್ಷಿಸಲಾಗುತ್ತಿದ್ದೆ ಎಂಬುದನ್ನು ಅರ್ಥಮಾಡಿ ಕೊಂಡಳು. ಹೀಗಾಗಿ ಸಂಜೆಯಾಗುತ್ತಿದ್ದಂತೆ ಆಕೆಯು ಜೇತವನದತ್ತ ಸಾಗುತ್ತಿದ್ದಳು. ದಾರಿಯಲ್ಲಿ ಆಕೆಗೆ ಯಾರಾದರೂ ಎಲ್ಲಿಗೆ ಹೋಗುವೆ ಎಂದು ಕೇಳಿದಾಗ ಆಕೆ ಹೀಗೆ ಉತ್ತರಿಸುತ್ತಿದ್ದಳು: "ನಾನು ಸಮಣ ಗೋತಮರನ್ನು ಭೇಟಿ ಮಾಡಲು ಹೋಗುತ್ತಿರುವೆನು. ಅಲ್ಲಿನ ಗಂಧಕುಟಿಯಲ್ಲಿ ಅವರೊಂದಿಗೆ ಇರಲು ಹೋಗುತ್ತಿರುವೆನು" ಎಂದು. ನಂತರ ಆಕೆ ಜೇತವನದ ಸಮೀಪದಲ್ಲಿರುವ ಪರಿವ್ರಾಜಕರ ಸ್ಥಳದಲ್ಲಿ ಕಾಲಕಳೆದು, ಮರುದಿನ ಮುಂಜಾನೆಯೇ ಅಲ್ಲಿಂದ ಮನೆಗೆ ಹಿಂತಿರುಗಿ ಹೋಗುತ್ತಿದ್ದಳು. ಆಗ ಯಾರಾದರೂ ಕೇಳಿದರೆ ಆಕೆ ಹೀಗೆ "ನಾನು ರಾತ್ರಿ ಸಮಣ ಗೋತಮರೊಂದಿಗೆ ಗಂಧಕುಟಿಯಲ್ಲಿ ಕಳೆದು ಈಗ ಹಿಂತಿರುಗಿ ಹೋಗುತ್ತಿರುವೆನು" ಎನ್ನುತ್ತಿದ್ದಳು. ಹೀಗೆಯೇ ಆಕೆಯು ಎರಡು ಅಥವಾ ಮೂರು ದಿನಗಳ ಕಾಲ ಮಾಡಿದಳು. ಮೂರು ದಿನಗಳ ನಂತರ ಆ ಪರಿವ್ರಾಜಕರು ಕೊಲೆಯನ್ನು ಮಾಡುವಂತಹ ಕುಡುಕರಿಗೆ ಹಣ ನೀಡಿ ಆ ಸುಂದರಿಯನ್ನು ಹತ್ಯೆ ಮಾಡಿಸಿದರು. ನಂತರ ಆಕೆಯ ಶವವನ್ನು ಜೇತವನದ ವಿಹಾರದ ಕಸದ ರಾಶಿಯಲ್ಲಿ ಅಡಗಿಸಿಟ್ಟರು.
            ಮಾರನೆಯ ದಿನ ಆ ಪರಿವ್ರಾಜಕರು ಪರಿಬ್ಬಾಜಿಕಳ ಕಣ್ಮರೆಯ ಸುದ್ದಿಯನ್ನು ಹಬ್ಬಿಸಿದರು. ಹಾಗೆಯೇ ಅವರು ರಾಜನ ಬಳಿಗೆ ಹೋಗಿ ಈ ವಿಷಯದಲ್ಲಿ ಸಂಶಯ ಹಾಗು ದೂರನ್ನು ನೀಡಿದರು. ಆಗ ರಾಜನು ಅವರಿಗೆ ಇಷ್ಟ ಬಂದೆಡೆಯೆಲ್ಲಾ ಹುಡುಕುವಂತೆ ಆಜ್ಞೆ ನೀಡಿದನು. ಆಗ ಅವರು ಜೇತವನದಿಂದ ಶವವನ್ನು ತೆಗೆದುಕೊಂಡು ಅರಮನೆಗೆ ಕೊಂಡೊಯ್ದರು. ನಂತರ ಹೀಗೆ ಹೇಳಿದರು: "ಓ ರಾಜನೇ, ಗೋತಮರ ಶಿಷ್ಯರು ಪರಿಬ್ಬಾಜಕಳನ್ನು ಕೊಂದು, ಜೇತವನದ ಕಸದ ರಾಶಿಯಲ್ಲಿ ಆಕೆಯ ಶವವನ್ನು ಎಸೆದಿದ್ದಾರೆ. ಹೀಗೆ ಅವರು ತಮ್ಮ ಗುರುವಿನ ಕುಕೃತ್ಯವನ್ನು ಮುಚ್ಚಲು ಯತ್ನಿಸಿದ್ದಾರೆ." ಎಂದರು.
            ಆಗ ರಾಜನು ಅವರಿಗೆ ಹೀಗೆ ಹೇಳಿದನು: "ಹಾಗಾದರೆ, ನೀವು ನಗರದಲ್ಲೆಲ್ಲಾ ಸುತ್ತಾಡಿ, ಈ ವಾಸ್ತವವನ್ನು ತಿಳಿಸಿ" ಆಗ ಅವರು ಮನದಲ್ಲೇ ಆನಂದಿತರಾಗಿ, ಸುಂದರಿಯ ಶವವನ್ನು ನಗರದಲ್ಲೆಲ್ಲಾ ತೋರಿಸಿ ಹೀಗೆ ಕಿರುಚಾಡುತ್ತಿದ್ದರು: "ನೋಡಿ, ಗೋತಮರ ಹಿಂಬಾಲಕರು ಏನು ಮಾಡಿದ್ದಾರೆಂದು? ನೋಡಿ, ಹೇಗೆ ಅವರು ತಮ್ಮ ಗುರುವಿನ ಕುಕೃತ್ಯವನ್ನು ಮುಚ್ಚಿದ್ದಾರೆ" ಎಂದು ಎಲ್ಲೆಡೆ ಮೆರವಣಿಗೆ ಮೂಲಕ ಹೀಗೆ ಅಪಪ್ರಚಾರ ಮಾಡಿ ಪುನಃ ಅರಮನೆಗೆ ಹಿಂತಿರುಗಿದರು.
            ಭಿಕ್ಷುಗಳಿಗೆ ಈ ಅಪಪ್ರಚಾರ ಕೇಳಿ ತುಂಬಾ ನೋವಾಯಿತು. ಅವರು ಭಗವಾನರ ಬಳಿಗೆ ಈ ವಿಷಯ ತಿಳಿಸಿದರು. ಆಗ ಭಗವಾನರು ಅವರಿಗೆ ಈ ಮೇಲಿನ ಗಾಥೆ ನುಡಿದು, ಅದನ್ನು ಜನರು ಅಪಪ್ರಚಾರ ಮಾಡಲು ಅಥವಾ ವಿಚಾರಿಸಲು ಬಂದಾಗ ಉಚ್ಚರಿಸುವಂತೆ ಭಗವಾನರು ತಿಳಿಸದರು.

            ರಾಜನು ಮೇಲೆ ಹೀಗೆ ಪರಿವ್ರಾಜಕರಿಗೆ ಆಜ್ಞಾಪಿಸಿದ್ದರೂ ಸಹಾ ಆತನಿಗೂ ಈ ವಿಷಯದಲ್ಲಿ ನಂಬಿಕೆ ಉಂಟಾಗಲಿಲ್ಲ. ಆದ್ದರಿಂದ ಆತನು ಸುಂದರಿಯ ಕೊಲೆೆಯ ರಹಸ್ಯ ಬಿಡಿಸಲು ಚಾಣಾಕ್ಷ ಪತ್ತೆದಾರರನ್ನು ನೇಮಿಸಿದನು. ಆಗ ಅವರು ಪೂರ್ಣ ರಹಸ್ಯವನ್ನೆಲ್ಲಾ ಪತ್ತೆಮಾಡಿ ಹತ್ಯೆ ಮಾಡಿದ ಕುಡುಕರನ್ನು ರಾಜನ ಮುಂದೆ ನಿಲ್ಲಿಸಿದರು. ರಾಜನು ಅವರಿಗೆ ವಿಚಾರಿಸಿದಾಗ ಅವರನ್ನು ಪರಿವ್ರಾಜಕರೇ ಹೀಗೆ ನೇಮಿಸಿ ಹತ್ಯೆ ಮಾಡಿಸಿ ಆ ಸ್ಥಳದಲ್ಲಿ ಎಸೆಯಲು ಹೇಳಿದ್ದರೆಂದು ಒಪ್ಪಿಕೊಂಡರು. ಆಗ ರಾಜನು ಆ ಪರಿವ್ರಾಜಕರಿಗೆ ಕರೆಸಿದನು. ಆಗ ಅವರು ತಾವು ಮಾಡಿದ ತಪ್ಪನ್ನು ಒಪ್ಪಿದರು. ಆಗ ರಾಜನು ಅವರಿಗೆ "ನೀವು ಎಲ್ಲೆಲ್ಲಿ ಅಪಪ್ರಚಾರ ಮಾಡಿದ್ದೀರೋ, ಅಲ್ಲೆಲ್ಲಾ ಹೋಗಿ ಈತ ಸತ್ಯವನ್ನು ಹೇಳಬೇಕು, ನಿಮ್ಮ ತಪ್ಪನ್ನು ಒಪ್ಪಬೇಕು" ಎಂದು ಆಜ್ಞಾಪಿಸಿದನು. ಆಗ ಅವರೆಲ್ಲಾ ನಗರದಲ್ಲೆಲ್ಲಾ ಹೀಗೆ ಹೇಳಿದರು: "ನಗರವಾಸಿಗಳೇ, ನಾವೇ ಸುಂದರಿಯನ್ನು ಕೊಲ್ಲಿಸಿದ್ದು ಹಾಗು ಪವಿತ್ರರಾದ ಭಗವಾನರ ಮೇಲೆ ಸುಳ್ಳು ಆರೋಪ ಮಾಡಿದ್ದು ನಾವೆಯೇ. ಭಿಕ್ಷುಗಳೆಲ್ಲಾ ಮುಗ್ಧರು, ನಿದರ್ೊಷಿಗಳು, ನಾವೇ ಪಾಪಿಗಳಾಗಿದ್ದೇವೆ". ಹೀಗೆ ಅವರು ತಪ್ಪನ್ನು ಒಪ್ಪಿದರು. ಹಾಗು ಅವರಿಗೆಲ್ಲಾ ಶಿಕ್ಷೆಯು ಆಯಿತು. ಈ ಘಟನೆಯ ನಂತರ ಭಗವಾನರ ಸುಖ್ಯಾತಿಯು ಇನ್ನಷ್ಟು ಹೆಚ್ಚಿ, ಇನ್ನಷ್ಟು ಜನರು ಅವರ ಹಿಂಬಾಲಕರಾದರು. 

Wednesday, 12 August 2015

dhammapada/pakinnakavagga/21.9/ekavihari

ಏಕಾಂಗಿಯಾಗಿ ವಿಹರಿಸು

"ಏಕಾಂಗಿಯಾಗಿ ಆಸನಬದ್ಧನಾಗಿ, ಏಕಾಂಗಿಯಾಗಿ
ಶಯನ (ಮಲಗಿ) ಮಾಡಿ, ಏಕಾಂಗಿಯಾಗಿಯೇ ಚಲಿಸುತ್ತಾ
ಏಕಾಂತದಲ್ಲಿಯೇ ತನ್ನನ್ನು ದಮಿಸುತ್ತಾ,
ವನದಲ್ಲಿನ ಏಕಾಂತದಲ್ಲೇ ಸಾಧಕನು ರಮಿಸುವನು."      (305)

ಗಾಥ ಪ್ರಸಂಗ 21:9
ಏಕಾಂತದಲ್ಲಿಯೇ ರಮಿಸುವ ಏಕ ವಿಹಾರಿ


            ಜೇತವನದ ವಿಹಾರದಲ್ಲಿ ಭಿಕ್ಷುವೊಬ್ಬನಿದ್ದನು. ಆತನು ಸದಾ ಏಕಾಂತದಲ್ಲಿ ಇರುತ್ತಿದ್ದನು. ಆತನು ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಸದಾ ತಾನೊಬ್ಬನೇ ಇರುತ್ತಿದ್ದನು. ಹೀಗಾಗಿ ಎಲ್ಲರೂ ಆತನನ್ನು 'ಏಕವಿಹಾರಿ' ಎಂದೇ ಕರೆಯುತ್ತಿದ್ದರು.
            ಆತನು ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಏಕಾಂಗಿಯಾಗಿ ಕುಳಿತು ಧ್ಯಾನಿಸುತ್ತಿದ್ದನು. ಏಕಾಂಗಿಯಾಗಿಯೇ ನಡಿಗೆಯ ಧ್ಯಾನ ಮಾಡುತ್ತಿದ್ದನು. ಏಕಾಂಗಿಯಾಗಿ ಮಲಗಿಯು ಸ್ಮೃತಿಸಂಪನ್ನನಾಗಿರುತ್ತಿದ್ದನು. ಆದರೆ ಬೇರೆ ಭಿಕ್ಷುಗಳು ಈತನ ಬಗ್ಗೆ ತಪ್ಪಾಗಿ ಭಾವಿಸಿ ಭಗವಾನರಲ್ಲಿ ಆತನ ಬಗ್ಗೆ ದೂರು ನೀಡಿದರು.

            ಆದರೆ ಸತ್ಯ ತಿಳಿಸಿದ್ದಂತಹ ಭಗವಾನರು ಆತನಿಗೆ ಖಂಡಿಸಲಿಲ್ಲ, ಬದಲಾಗಿ ಹೀಗೆ ನುಡಿದರು: "ನಿಜಕ್ಕೂ ನನ್ನ ಪುತ್ರ ಏಕೋವಿಹಾರಿ ಸರಿಯಾಗಿಯೇ ನಡೆದುಕೊಳ್ಳುತ್ತಿದ್ದಾನೆ. ಭಿಕ್ಷುವು ಏಕಾಂತದಲ್ಲಿಯೇ (ಹಾಗು ಗದ್ದಲದಿಂದಲೂ ದೂರವಾಗಿ) ಧ್ಯಾನದಲ್ಲಿಯೇ ರತನಾಗಬೇಕು" ಎಂದು ಹೇಳಿ ಈ ಮೇಲಿನ ಗಾಥೆಯನ್ನು ನುಡಿದರು. 

dhammapada/pakinnakavagga/21.8/culasubhadra

ಒಳ್ಳೆಯದು ದೂರದಲ್ಲಿದ್ದರೂ ಕಾಣಲ್ಪಡುತ್ತದೆ
"ದೂರದಲ್ಲಿದ್ದರೂ ಸಂತರು ಪ್ರಕಾಶಿಸುವರು (ಕಾಣಿಸಿಕೊಳ್ಳುವರು)
ಹಿಮವಂತ (ಹಿಮಾಲಯ) ಪರ್ವತದ ರೀತಿ,
ಆದರೆ ಅಸಂತರು (ಪಾಪಿಗಳು) ಹತ್ತಿರದಲ್ಲಿದ್ದರೂ
ರಾತ್ರಿಯ ವೇಳೆ ಬಿಟ್ಟ ಶರದಂತೆ ಕಾಣಿಸಲಾರರು."          (304)

ಗಾಥ ಪ್ರಸಂಗ 21:8
ಚೂಲಸುಭದ್ರಳ ಶ್ರದ್ಧಾ ಶಕ್ತಿಯು ಅದ್ಭುತವಾದುದು

            ಅನಾಥಪಿಂಡಿಕ ಮತ್ತು ಉಗ್ಗ (ಉಗ್ರ) ಇಬ್ಬರು ಯೌವ್ವನದಲ್ಲಿ ಒಂದೇ ಗುರುವಿನ ಬಳಿ ವಿದ್ಯಾಭ್ಯಾಸ ಮಾಡಿದ್ದವರಾಗಿದ್ದರು. ಉಗ್ಗನಿಗೆ ಒಬ್ಬ ಮಗನಿದ್ದನು. ಹಾಗೆಯೇ ಅನಾಥಪಿಂಡಿಕನಿಗೂ ಚೂಲ ಸುಭದ್ರೆ ಹೆಸರಿನ ಮಗಳಿದ್ದಳು. ಉಗ್ಗನ ಕೋರಿಕೆಯಂತೆ ಅವರಿಬ್ಬರ ವಿವಾಹವಾಯಿತು. ನಂತರ ಚೂಲಸುಭದ್ದೆಯು ಉಗ್ಗ ನಗರದಲ್ಲಿರುವ ಪತಿಯ ಮನೆಯಲ್ಲಿ ವಾಸಿಸಲು ಆರಂಭಿಸಿದಳು. ಆದರೆ ಉಗ್ಗನ ಮನೆಯವರು ಬೌದ್ಧರಾಗಿರಲಿಲ್ಲ. ಅವರು ಅಬೌದ್ಧರಾದ ನಗ್ನ ಸಂನ್ಯಾಸಿಗಳ ಅನುಯಾಯಿಗಳಾಗಿದ್ದರು. ಹೀಗಾಗಿ ಅವರು ಆ ನಗ್ನ ಸಂನ್ಯಾಸಿಗಳನ್ನು ಮನೆಗೆ ಆಹ್ವಾನಿಸುತ್ತಿದ್ದರು. ಅಂತಹ ಸಂದರ್ಭಗಳಲ್ಲಿ ಅವರು ಚೂಲಸುಭದ್ರೆಯನ್ನು ನಗ್ನ ಸಂನ್ಯಾಸಿಗಳಿಗೆ ಗೌರವಿಸಲು ಕರೆಯುತ್ತಿದ್ದರು. ಆದರೆ ಸುಭದ್ರೆಯು ಹಾಗೆ ಮಾಡಲು ತಿರಸ್ಕರಿಸಿದಳು. ಬದಲಾಗಿ ಆಕೆಯು ತನ್ನ ಅತ್ತೆಗೆ ಭಗವಾನರ ಅದ್ವಿತೀಯ ಸದ್ಗುಣಗಳನ್ನು ವಿವರಿಸಿದಳು. ಆಗ ಅಕೆಯ ಅತ್ತೆಗೂ ಭಗವಾನರನ್ನು ನೋಡುವ ಕುತೂಹಲ ಉಂಟಾಯಿತು. ಹಾಗು ಆಕೆಯು ತನ್ನ ಸೊಸೆ ಸುಭದ್ರೆಗೂ ಭಗವಾನರನ್ನು ಮನೆಗೆ ಆಹ್ವಾನಿಸಲು ಅನುಮತಿ ನೀಡಿದಳು.
            ಆಗ ಸುಭದ್ರೆಯು ಮನೆಯ ಮೇಲ್ಭಾಗಕ್ಕೆ ಹೋಗಿ ಅಲ್ಲಿಯ ಶ್ರಾವಸ್ತಿಯ ವಿಹಾರದತ್ತ ಇರುವ ದಿಕ್ಕಿನತ್ತ ದಿಟ್ಟಿಸಿದಳು. ನಂತರ ಆಕೆಯು ಸೌಗಂಧಗಳಿಂದ ಭಗವಾನರ ಮಾನಸಿಕ ಪೂಜೆ ಮಾಡಿದಳು. ಭಗವಾನರ ಅನುಸ್ಮರಣೆ ಮಾಡಿದಳು. ಅನಂತರ ಈ ರೀತಿಯ ಪ್ರಬಲ ಇಚ್ಛೆ ಮಾಡಿದಳು: "ಭಗವಾನ್, ನಮ್ಮ ಮನೆಗೆ ನಾಳೆ ತಾವು ಭಿಕ್ಷು ಸಂಘ ಸಮೇತ ಔತಣಕ್ಕಾಗಿ ಖಂಡಿತವಾಗಿ ಬನ್ನಿ ಎಂದು ನಾನು ತಮ್ಮ ಉಪಾಸಿಕೆ ಚೂಲಸುಭದ್ದ ಭಕ್ತಿಯುತವಾಗಿ ಆಹ್ವಾನಿಸುತ್ತಿರುವೆನು. ಇದೇ ಸತ್ಯದಿಂದಾಗಿ ನನ್ನ ಆಹ್ವಾನವು ತಮಗೆ ತಿಳಿಯಲ್ಪಡಲಿ. ಸಾಂಕೇತಿಕವಾಗಿ ಈ ಪುಷ್ಪಗಳನ್ನು ತಮಗೆ ಸಮಪರ್ಿಸುತ್ತಿದ್ದೇನೆ" ಎಂದು ಆಕೆಯ ಎಂಟು ಬೊಗಸೆಯಷ್ಟು ಮಲ್ಲಿಗೆ ಹೂಗಳನ್ನು ಆಕಾಶಕ್ಕೆ ಎಸೆದಳು. ಆಶ್ಚರ್ಯ! ಅವು ನೆಲಕ್ಕೆ ಬೀಳಲಿಲ್ಲ. ಬದಲಾಗಿ ಆಕಾಶದಲ್ಲೇ ಜೇತವನ ವಿಹಾರದತ್ತ ಆ ಹೂಗಳು ಸಾಗಿದವು. ನಂತರ ಭಗವಾನರು ಧಮ್ಮ ಬೋಧಿಸುತ್ತಿದ್ದ ಸಭಾಂಗ ಪ್ರವೇಶಿಸಿ, ಭಗವಾನರ ಪಾದವನ್ನು ನಿಧಾನವಾಗಿ ಸ್ಪಶರ್ಿಸಿದವು.
            ಜೇತವನದಲ್ಲಿ ಭಗವಾನರು ತಮ್ಮ ಧಮ್ಮ ಪ್ರವಚನ ಮುಗಿಸಿದಾಗ, ಚೂಲಸುಭದ್ರೆಯ ತಂದೆಯಾದ ಅನಾಥಪಿಂಡಿಕರು ಭಗವಾನರನ್ನು ಔತಣಕ್ಕಾಗಿ ತಮ್ಮ ಮನೆಗೆ ಆಹ್ವಾನಿಸಿದರು. ಆಗ ಭಗವಾನರು "ಓಹ್ ಅನಾಥಪಿಂಡಿಕ, ಈಗಾಗಲೇ ಚೂಲಸುಭದ್ರೆಯ ಔತಣ ಸ್ವೀಕರಿಸಿರುವೆ". ಅದನ್ನು ಆಲಿಸಿ ಅನಾಥಪಿಂಡಿಕನಿಗೆ ಆಶ್ಚರ್ಯವಾಯಿತು. ಆತನು ಭಗವಾನರಿಗೆ ಹೀಗೆ ಕೇಳಿದನು. "ಆದರೆ ಭಗವಾನ್, ಚೂಲಸುಭದ್ರೆಯಂತು ಶ್ರಾವಸ್ತಿಯಲ್ಲಿ  ಇಲ್ಲಿಂದ 120 ಯೋಜನದಷ್ಟು ದೂರದಲ್ಲಿರುವ ಉಗ್ಗ ನಗರಿಯಲ್ಲಿ ವಾಸಿಸುತ್ತಿದ್ದಾಳೆ."
            "ನಿಜ ಗೃಹಪತಿಯೇ, ಆದರೆ ಒಳ್ಳೆಯದು ಹಿಮಾಲಯದಂತೆ ದೂರದಲ್ಲಿದ್ದರೂ ಹತ್ತಿರದಲ್ಲಿರುವಂತೆ ಸಾಕ್ಷಾತ್ ಗೋಚರಿಸುತ್ತದೆ" ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು. ಅತ್ತ ಚೂಲಸುಭದ್ರೆಯು ಎಲ್ಲಾರೀತಿಯ ಆಹಾರದ ಸಿದ್ಧತೆ ನಡೆಸುತ್ತಿದ್ದಳು. ಮಾರನೆಯ ದಿನ ಭಗವಾನರು ಭಿಕ್ಷುಗಳೊಂದಿಗೆ ಚೂಲಸುಭದ್ರೆಯ ಮನೆಗೆ ಬಂದರು. ಆದರೆ ಆ ನಗರವು 120 ಯೋಜನ ದೂರವಿದ್ದುದರಿಂದಾಗಿ ದೇವತೆಗಳ ಒಡೆಯ ಸಕ್ಕ ತೇಲುತ್ತಿದ್ದಂಹ ಅಲಂಕೃತ ವಿಮಾನದಿಂದ ಆಕಾಶ ಮಾರ್ಗದಿಂದ ಭಗವಾನರನ್ನು ಮತ್ತು ಭಿಕ್ಷುಗಳನ್ನು ಕರೆತಂದನು. ಭಗವಾನರ ಈ ಭವ್ಯತೆಯನ್ನು, ಭಗವಾನರ ಅನುಪಮ ಸೌಂದರ್ಯ ಹಾಗು ತೇಜಸ್ಸನ್ನು ಕಂಡು ಉಗ್ಗ ದಂಪತಿಗಳು ಬೆರಗಾಗಿ, ಪ್ರಭಾವಕ್ಕೆ ಒಳಗಾಗಿ ಭಗವಾನರಿಗೆ ಗೌರವ, ಆದರ, ಸತ್ಕಾರ, ದಾನವೆಲ್ಲಾ ಮಾಡಿದರು.