ಕ್ಲೇಷಗಳ
ಕೊಂದವನೇ ಬ್ರಾಹ್ಮಣ
"ಮಾತೆಯನ್ನು
(ತೃಷ್ಣೆ), ತಂದೆಯನ್ನು (ಅಹಂಕಾರ)
ಕೊಂದು, ಬಳಿಕ ದ್ವಿ-ಕ್ಷತ್ರಿಯ ರಾಜರನ್ನು (ಶಾಶ್ವತವಾದ, ಭೌತಿಕವಾದ)
ಹಾಗು ಅವರ
ರಾಷ್ಟ್ರವನ್ನು (ಇಂದ್ರಿಯ ಮತ್ತು ಇಂದ್ರಿಯ ವಿಷಯಗಳನ್ನು) ಅವರ
ಅಧೀನರಾಗಿರುವವರನ್ನು
(ರಾಗಾದಿಗಳು) ಕೊಂದವನೇ ನಿಜ ಬ್ರಾಹ್ಮಣನು
ಹಾಗು ಆತನು
ಅಭಾದಿತನಾಗುತ್ತಾನೆ." (294)
"ಮಾತೆಯನ್ನು
(ತೃಷ್ಣೆ), ತಂದೆಯನ್ನು (ಅಹಂಕಾರ)
ಕೊಂದು, ಬಳಿಕ ದ್ವಿ-ಕ್ಷತ್ರಿಯ ರಾಜರನ್ನು (ಶಾಶ್ವತವಾದ, ಭೌತಿಕವಾದ)
ಹಾಗೆಯೇ ಪಂಚಮ
ವ್ಯಾಘ್ರವನ್ನು (ಪಂಚನಿವರಣ) ಕೊಂದವನೇ
ನಿಜ ಬ್ರಾಹ್ಮಣನು ಹಾಗು
ಆತನು ಅಭಾದಿತನಾಗುತ್ತಾನೆ." (295)
ಗಾಥ ಪ್ರಸಂಗ 21:4
ಲಕುಂಟಕ ಭದ್ದಿಯನ
ಅಭಾದಿತತೆ
ಒಮ್ಮೆ ಭಗವಾನರು ಜೇತವನ ವಿಹಾರದಲ್ಲಿದ್ದರು.
ಅಲ್ಲಿ ಕೆಲ ಭಿಕ್ಷುಗಳು ಭಗವಾನರಿಗೆ ವಂದಿಸಲು ಬಂದಿದ್ದರು. ಅವರೆಲ್ಲಾ ಅಲ್ಲಿದ್ದಾಗ ಲಕುಂಟಕ
ಭದ್ದಿಯನು ಅಲ್ಲಿಂದ ಹಾದುಹೋದನು. ಆಗ ಭಗವಾನರು ಆ ಭಿಕ್ಷುಗಳಿಗೆ ಲಕುಂಟಕ ಭದ್ದಿಯನೆಂಬ
ಕುಬ್ಜನಿಗೆ ತೋರಿಸಿ "ನೋಡಿ ಭಿಕ್ಷುಗಳೇ, ಈ ಭಿಕ್ಷುವನ್ನು, ಇವನು ಮಾತಾಪಿತರ
ಹತ್ಯೆಗೈದು, ದುಃಖವಿಲ್ಲದವನಾಗಿದ್ದಾನೆ".
ಆಗ ಆ ಭಿಕ್ಷುಗಳು ಆ ಮಾತಿನ ಮರ್ಮ ಅರ್ಥವಾಗದೆ ಗಲಿಬಿಲಿಗೊಂಡರು. ಆಗ ಭಗವಾನರು ಅವರಿಗೆ ಅರ್ಥ
ವಿವರಿಸಿದಾಗ, ಆ ಕುಬ್ಜನ ಬಗ್ಗೆ ಗೌರವ
ತಾಳಿದರು. ಇವು ಆಗ ನುಡಿದ ಗಾಥೆಗಳಾಗಿವೆ.
ಇಲ್ಲಿ ಬ್ರಾಹ್ಮಣನೆಂದರೆ ಅರಹಂತನಾಗಿರುವಿಕೆ,
ಇಲ್ಲಿ ತಂದೆ-ತಾಯಿಗಳೆಂದರೆ ನಾನು (ಅಹಂಕಾರ) ಮತ್ತು ನನ್ನದು
(ತೃಷ್ಣೆ) ಇವುಗಳಿಂದಲೇ ಸರ್ವ ಕ್ಲೇಷಗಳು ಉದಯಿಸುವುದರಿಂದ ಇವನ್ನು ಜನ್ಮದಾತರು ಅಂದರೆ
ತಾಯಿ-ತಂದೆಯರು ಎನ್ನುತ್ತಾರೆ. ಇಲ್ಲಿ ರಾಜರೆಂದರೆ ಪ್ರಧಾನವಾಗಿರುವ ಎರಡು
ಮಿಥ್ಯಾದೃಷ್ಟಿಕೋನಗಳು. (ಶಾಶ್ವತವಾದ ಮತ್ತು ಉಚ್ಚೇದವಾದ). ರಾಜನಿಗೆ ಅಧೀನರಾಗಿರುವವರೆಂದರೆ
ರಾಗಾಧಿಗಳು. ಇಲ್ಲಿ ರಾಷ್ಟ್ರವೆಂದರೆ ಆರು ಇಂದ್ರಿಯಗಳಾದ (ಕಣ್ಣು, ಕಿವಿ ಇತ್ಯಾದಿ) ಮತ್ತು ಆರು ಇಂದ್ರಿಯಗಳ ವಿಷಯಗಳೆಂದರೆ (ರೂಪ,
ಶಬ್ದ, ಇತ್ಯಾದಿ). ಹಾಗು ವ್ಯಾಘ್ರವೆಂದರೆ ಐದು ನಿವರಣ (ಭೋಗಾಭಿಲಾಷೆ, ದ್ವೇಷ, ಸೋಮಾರಿತನ, ಚಿಂತೆ ಮತ್ತು
ಸಂದೇಹವಾಗಿದೆ) ಗಳಾಗಿವೆ.
No comments:
Post a Comment