Wednesday, 26 August 2015

dhammapada/nirayavagga/22.6/voilentwomen

ಕೆಟ್ಟ ಕಾರ್ಯದಿಂದ ಪಶ್ಚಾತ್ತಾಪ ಖಚಿತ

"ದುಷ್ಕೃತ್ಯವನ್ನು ಮಾಡದಿರುವುದೇ ಒಳ್ಳೆಯದು.
ಏಕೆಂದರೆ ದುಷ್ಕೃತ್ಯದಿಂದಾಗಿ ನಂತರ ಯಾತನೆ ಪಡಬೇಕಾಗುತ್ತದೆ,
ಸುಕೃತ್ಯವನ್ನು ಮಾಡುವುದು ಶ್ರೇಯಸ್ಕರ,
ಏಕೆಂದರೆ ಸುಕೃತ್ಯದಿಂದಾಗಿ ನಂತರ ಕೊರಗಬೇಕಿಲ್ಲ."    (314)

ಗಾಥ ಪ್ರಸಂಗ 22:6
ಈಷರ್ೆಯಿಂದ ಹಿಂಸೆ ಮಾಡಿದ ಸ್ತ್ರೀ

            ಶ್ರಾವಸ್ತಿಯಲ್ಲಿ ಅತಿ ಈಷರ್ೆಯಿಂದ ಕೂಡಿದ್ದ ಸ್ತ್ರೀಯೊಬ್ಬಳು ತನ್ನ ಪತಿಯೊಂದಿಗೆ ವಾಸವಾಗಿದ್ದಳು. ಒಂದುದಿನ ಆಕೆಯು ತನ್ನ ಪತಿ, ದಾಸಿಯೊಂದಿಗೆ ಸಂಬಂಧ ಇಟ್ಟಿರುವುದನ್ನು ಕಂಡುಕೊಂಡಳು. ಹೀಗಾಗಿ ಆಕೆಯಲ್ಲಿ ಸವತಿ ಮಾತ್ಸರ್ಯ ಹೆಚ್ಚಾಗಿ ಆ ದಾಸಿಯನ್ನು ಹಗ್ಗದಿಂದ ಕಟ್ಟಿಹಾಕಿದಳು. ಅಷ್ಟಕ್ಕೆ ಆಕೆಯ ಕೋಪ ನಿಲ್ಲದೆ, ಆ ದಾಸಿ (ಯುವತಿ)ಯ ಕಿವಿ ಹಾಗು ಮೂಗನ್ನು ಕತ್ತರಿಸಿದಳು. ನಂತರ ಆ ಕೊಠಡಿಗೆ ಬಾಗಿಲನ್ನು ಹಾಕಿದಳು. ಅದಾದ ನಂತರ ಗಂಡನ ಜೊತೆಗೆ ಜೇತವನ ವಿಹಾರಕ್ಕೆ ಬಂದಳು. ಆಕೆ ಮನೆಬಿಟ್ಟ ಸ್ವಲ್ಪಹೊತ್ತಿಗೆ ಆ ದಾಸಿಯ ಸಂಬಂಧಿಕರು ದಾಸಿಯನ್ನು ಹುಡುಕುತ್ತಾ, ಮನೆಯ ಬಾಗಿಲನ್ನು ಒಡೆದು, ಆಕೆಯ ಬಂಧನಗಳನ್ನು ತೆಗೆದುಹಾಕಿ ಆಕೆಯ ಯಜಮಾನಿಯ ದುಷ್ಕೃತ್ಯವನ್ನು ಎಲ್ಲರಿಗೂ ಸಾರಲು ಅವರೂ ಸಹಾ ಜೇತವನಕ್ಕೆ ಬಂದರು. ಆಗ ಭಗವಾನರು ಧಮ್ಮವನ್ನು ಬೋಧಿಸುತ್ತಿದ್ದರು. ಆಗ ಆ ದಾಸಿಯು ಭಗವಾನರಿಗೆ ನಡೆದ ಸಂಗತಿಯೆಲ್ಲಾ ತಿಳಿಸಿದಳು. ಹೇಗೆ ಆಕೆ ಪೆಟ್ಟುಗಳನ್ನೆಲ್ಲಾ ತಿಂದಳು, ಹೇಗೆ ಆಕೆಯ ಕಿವಿ ಮತ್ತು ಮೂಗುಗಳನ್ನು ಕತ್ತರಿಸಲಾಯಿತು ಎಂದೆಲ್ಲಾ ಆಕೆ ಇಡೀ ಸಭೆಯ ಮಧ್ಯೆ ತಿಳಿಸಿದಳು.

            ಆಗ ಭಗವಾನರು ಆಕೆಗೆ ಸಾಂತ್ವನ ಮಾಡಿದರು. ನಂತರ ಹೀಗೆ ನುಡಿದರು: "ಯಾರಿಗೂ ತಿಳಿಯುವುದಿಲ್ಲ ಬಿಡು ಎಂದು ರಹಸ್ಯವಾಗಿಯೂ ಪಾಪ ಮಾಡಬಾರದು. ಯಾವಾಗ ರಹಸ್ಯ ಬಯಲಾಗುವುದೋ ಆಗ ಅಪಾರ ನೋವು ಹಾಗು ಪಶ್ಚಾತ್ತಾಪ ಉಂಟಾಗುವುದು. ಆದರೆ ಅದೇ ಸುಕೃತ್ಯಗಳನ್ನು ರಹಸ್ಯವಾಗಿ ಮಾಡಿದಾಗಲೂ ಸಹಾ ಅದು ಆನಂದವನ್ನು ತರುವುದೇ ಹೊರತು ದುಃಖವನ್ನಲ್ಲ" ಎಂದು ಹೇಳಿ ಈ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment