Wednesday, 12 August 2015

dhammapada/pakinnakavagga/21.6/bhikkhusfromvajjis

ಗೃಹಸ್ಥ ಜೀವನ ದುಃಖಕರ; ಸಮಣ ಜೀವನ ಕಷ್ಟಕರ

"ಪಬ್ಬಜ್ಜನಾಗುವಿಕೆ ಕಷ್ಟಕರ,
ಅದರಲ್ಲಿಯೇ ಆನಂದಿಸುವುದು ಕಷ್ಟಕರ,
ಗೃಹಸ್ಥರ ಜೀವನ ಕಷ್ಟಕರ ಹಾಗು ದುಃಖಕರ,
ಅಸಮಾನ ದೃಷ್ಟಿಕೋನ ಹೊಂದಿರುವವರೊಂದಿಗೆ ವಾಸಿಸುವಿಕೆ ದುಃಖಕರ,
ಸಂಸಾರದಲ್ಲಿ ಸುತ್ತಾಡುವಿಕೆ ದುಃಖಕರ,
ಆದ್ದರಿಂದ ಸಂಸಾರದ, ಸಂಚಾರಿಯಾಗದಿರು, ದುಃಖಕ್ಕೆ ಗುರಿಯಾಗದರು."        (302)

ಗಾಥ ಪ್ರಸಂಗ 21:6
ವಜ್ಜಿಗಳ ರಾಜ್ಯದ ಭಿಕ್ಷುವಿನ ಕೊರಗು

            ಕಾತರ್ಿಕ ಪೂರ್ಣಮಿಯ ರಾತ್ರಿಯಂದು ವೈಶಾಲಿಯ ನಾಗರಿಕರು ನಕ್ಷತ್ರ ಹಬ್ಬವನ್ನು ಬಹು ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಆಗ ಇಡೀ ನಗರವೇ ಬೆಳಕಿನಿಂದ ತುಂಬಿತ್ತು. ಆಗ ಇಡೀ ನಗರದ ವಾಸಿಗಳು ಪ್ರಾಪಂಚಿಕ ಆನಂದಗಳಾದ ಹಾಸ್ಯ, ಸಂಗೀತ, ನೃತ್ಯ, ಗಾಯನ ಇತ್ಯಾದಿಗಳಿಂದ ನಲಿದಾಡುತ್ತಿದ್ದರು. ಈ ದೃಶ್ಯವನ್ನು ವಿಹಾರದಿಂದ ಗಮನಿಸಿದ ಭಿಕ್ಷುವೊಬ್ಬನು ತನಗೆತಾನೇ ಒಂಟಿಯೆಂದು ಭಾವಿಸತೊಡಗಿದನು. ತನ್ನ ಬಗ್ಗೆಯೇ ಅತೃಪ್ತಿಯನ್ನು ಹೊಂದಿದನು. ಆಗ ಆತನು ಹೀಗೆ ಗೊಣಗಿಕೊಂಡನು "ನನಗಾಗಿರುವಷ್ಟು ದುದರ್ೆಶೆ ಬೇರೆ ಯಾರಿಗೂ ಆಗಿಲ್ಲವೇನೋ?" ಆತನ ಈ ಹತಾಶೇ ಕೇಳಿಸಿಕೊಂಡ ವನದೇವತೆ ಆತನಿಗೆ ಕಾಣಿಸಿಕೊಂಡು ಹೀಗೆ ಹೇಳಿತು: "ನಿರಯದಲ್ಲಿರುವವರು ಸಹಾ ದೇವತೆಗಳೊಂದಿಗೆ ಈಷರ್ೆಪಡುವರು, ಹಾಗೆಯೇ ಜನರೂ ಸಹಾ ಅರಣ್ಯವಾಸಿಯ ಏಕಾಂಗಿಯೊಂದಿಗೂ ಈಷರ್ೆಪಡುವರು."
            ಇದನ್ನು ಆಲಿಸಿದ ಆ ಭಿಕ್ಷುವಿಗೆ ತಕ್ಷಣ ಪುಟ್ಟ ಜ್ಞಾನೋದಯವಾಗಿ ಹಾಗೇ ಯೋಚಿಸಿದ್ದು ಹಾಗು ಈ ರೀತಿಯ ಅತೃಪ್ತಿಯ ಹೇಳಿಕೆಗೂ ಪಶ್ಚಾತ್ತಾಪಪಟ್ಟನು.

            ಮಾರನೆಯ ದಿನ ಮುಂಜಾನೆಯೇ ಆತನು ಭಗವಾನರನ್ನು ಭೇಟಿಮಾಡಿ ಈ ವಿಷಯವೆಲ್ಲಾ ತಿಳಿಸಿದನು. ಆಗ ಭಗವಾನರು ಈ ಮೇಲಿನ ಗಾಥೆಗಳನ್ನು ನುಡಿದರು.

No comments:

Post a Comment