Wednesday, 5 August 2015

dhammapada/maggavagga/20.1/500bhikkhus

20. ಮಾಗ್ಗ ವಗ್ಗ
ದುಃಖಗಳ ಅಂತ್ಯಮಾಡುವ ಏಕೈಕ ಅಷ್ಠಾಂಗ ಮಾರ್ಗ
"ಮಾರ್ಗಗಳಲ್ಲಿ ಅಷ್ಠಾಂಗಿಕ ಮಾರ್ಗವೇ ಶ್ರೇಷ್ಠ.
ಸತ್ಯಗಳಲ್ಲಿ ಚತುರಾರ್ಯಸತ್ಯಗಳೇ ಶ್ರೇಷ್ಠ
ಧಮ್ಮಗಳಲ್ಲಿ ವಿರಾಗವೇ ಶ್ರೇಷ್ಠ
ದ್ವಿಪಾದಿಗಳಲ್ಲಿ ಚಕ್ಷುವಂತನೆ (ಬುದ್ಧರೇ) ಶ್ರೇಷ್ಠ."             (273)

"ಇದೊಂದೇ ಮಾರ್ಗವಿರುವುದು, ಅನ್ಯ ಯಾವುದೂ ಇಲ್ಲ,
ದರ್ಶನ ನೀಡುವಂತಹುದು, ವಿಶುದ್ಧಿ ತರುವಂತಹ
ಈ ಮಾರ್ಗದಲ್ಲಿ ನಡೆಯುವಿರಾದರೆ
ಮಾರನನ್ನೇ ಮಂಕುಮಡಬಹುದು."             (274)

"ಈ ಮಾರ್ಗದಲ್ಲಿ ಮುಂದುವರೆದೆಯಾದರೆ
ದುಃಖಗಳ ಅಂತ್ಯ ಮಾಡುವೆ,
ದುಃಖಗಳ ಮುಳ್ಳನ್ನು (ಬಾಣವನ್ನು) ಹೇಗೆ ತೆಗೆಯಬೇಕೆಂದು
ಸಾಕ್ಷಾತ್ಕಾರವಾದ ಮೇಲೆಯೇ ನನ್ನಿಂದ ಈ
ಮಾರ್ಗವು ತಿಳಿಸಲ್ಪಟ್ಟಿದೆ."          (275)

"ನೀವೇ ಸ್ವತಃ ಶ್ರಮಿಸಬೇಕಾಗಿದೆ,
ತಥಾಗತರು ಕೇವಲ ಮಾರ್ಗದಶರ್ಿಗಳಾಗಿರುತ್ತಾರೆ.
ಈ ಮಾರ್ಗದಲ್ಲಿ ಮುಂದುವರೆಯುವ ಧ್ಯಾನಿಗಳು           
ಮಾರಬಂಧನಗಳಿಂದ ಪೂರ್ಣ ಮುಕ್ತರಾಗುತ್ತಾರೆ."         (276)


ಗಾಥ ಪ್ರಸಂಗ 20:1
500 ಭಿಕ್ಷುಗಳು ಚಚರ್ಿಸಿದ ಮಾರ್ಗಗಳ ಗಮ್ಯಸ್ಥಾನ
            ಶ್ರಾವಸ್ತಿಯ ಜೇತವನ ವಿಹಾರದಲ್ಲಿ 500 ಭಿಕ್ಷುಗಳು ಧಮ್ಮದ ಸಭಾಂಗಣದಲ್ಲಿ ಸಂಜೆವೇಳೆ ಚಚರ್ಿಸುತ್ತಿದ್ದರು. ಅಲ್ಲಿ ಚಚರ್ೆಯ ವಿಷಯ ಯಾವುದೆಂದರೆ ಅದೇದಿನ ಅವರು ಮುಂಜಾನೆ ಹಳ್ಳಿಗೆ ಹೋಗಿದ್ದರು, ಅವರು ಪ್ರಯಾಣಿಸಿದ್ದಂತಹ ಮಾರ್ಗಗಳ ಬಗ್ಗೆಯೇ ಚಚರ್ಿಸುತ್ತಿದ್ದರು, "ಆ ಹಳ್ಳಿಯಲ್ಲಿ ಮೃದುವಾದ ರಸ್ತೆಯಿದೆ, ಇಂತಹ ಹಳ್ಳಿಯಲ್ಲಿ ಒರಟಾದ ರಸ್ತೆಯಿದೆ, ಇಂತಹ ಹಳ್ಳಿಯಲ್ಲಿ ಹರಳುಗಳಿರುವ ರಸ್ತೆಯಿದೆ, ಇಂತಹ ಹಳ್ಳಿಯಲ್ಲಿ ಕಲ್ಲುಗಳೇ ಇಲ್ಲ." ಈ ರೀತಿಯಾಗಿ ಅವರು ಪ್ರಯಾಣಿಸಿದಂತಹ ರಸ್ತೆ ಬಗ್ಗೆ ಚಚರ್ಿಸುತ್ತಿದ್ದರು.

            ಭಗವಾನರಿಗೆ ಅವರು ಅರಹತ್ವಕ್ಕೆ ಪಕ್ವವಾಗಿದ್ದಾರೆ ಎಂದು ತಿಳಿಯಿತು. ಹೀಗಾಗಿ ಭಗವಾನರು ಅಲ್ಲಿ ತಮಗಾಗಿ ಸಿದ್ಧಪಡಿಸಿದ್ದಂತಹ ಪೀಠದಲ್ಲಿ ಕುಳಿತರು. ನಂತರ ಹೀಗೆ ಭಿಕ್ಷುಗಳಿಗೆ ಕೇಳಿದರು: "ಭಿಕ್ಷುಗಳೇ, ನೀವೆಲ್ಲಾ ಇಲ್ಲಿ ಸೇರಿಕೊಂಡು ಯಾವುದರ ಬಗ್ಗೆ ಚಚರ್ಿಸುತ್ತಿರುವಿರಿ?"
            ಆಗ ಭಿಕ್ಷುಗಳು ತಾವು ಚಚರ್ಿಸುತ್ತಿದ್ದಂತಹ ಚಚರ್ಾ ವಿಷಯ ತಿಳಿಸಿದರು. ಆಗ ಭಗವಾನರು ಅವರಿಗೆ ಹೀಗೆ ಹೇಳಿದರು: "ಭಿಕ್ಷುಗಳೇ, ಈ ಮಾರ್ಗಗಳು ನಿಮ್ಮ ಅಭಿರುಚಿಗೆ ಸರಿಯಾದುದಲ್ಲ, ಪರಕೀಯವಾಗಿವೆ. ಭಿಕ್ಷುಗಳು ಚಚರ್ಿಸುವಂತಹ ಮಾರ್ಗವೆಂದರೆ, ಉದಾತ್ತವಾದ ಮಧ್ಯಮ ಮಾರ್ಗ. ಕೇವಲ ಈ ಮಾರ್ಗದಲ್ಲಿ ಕ್ರಮಿಸುವುದರಿಂದ ಮಾತ್ರ ನೀವು ದುಃಖಗಳ ಅಂತ್ಯ ಮಾಡಬಹುದು" ಎಂದು ಹೇಳಿ ಮೇಲಿನ ಗಾಥೆಗಳನ್ನು ನುಡಿದರು.



No comments:

Post a Comment