Wednesday, 12 August 2015

dhammapada/pakinnakavagga/21.3/bhaddiyabhikkhus

ಅಜಾಗರೂಕನ ಆಸವಗಳು ವಧರ್ಿಸುವುದು

"ಯಾವುದನ್ನು ಮಾಡಬೇಕಾಗಿದೆಯೋ
ಅವೆಲ್ಲಾ ಮಾಡದೆ ಹಾಗೇ ಉಳಿದಿದೆ,
ಯಾವುದನ್ನು ಮಾಡಬಾರದೋ ಅವೆಲ್ಲಾ ಮಾಡಲಾಗುತ್ತಿದೆ,
ಅಂತಹ ಅಹಂಕಾರಿಯ, ಅಜಾಗರೂಕನ
ಆಸವಗಳು ವಧರ್ಿಸುತ್ತವೆ."     (292)

"ಯಾರು ಕಾಯಾಗತಾಸತಿ (ದೇಹದ ಮೇಲಿನ ಧ್ಯಾನ) ಯನ್ನು
ನಿಷ್ಠೆಯಿಂದ ಅಭ್ಯಾಸಿಸುತ್ತಿರುವರೋ,
ಯಾರು ಮಾಡಬಾರದ್ದನ್ನು ಮಾಡುವುದಿಲ್ಲವೋ ಮತ್ತು
ಮಾಡಬೇಕಾಗಿರುವುದನ್ನು ನಿರಂತರ ಮಾಡುತ್ತಿರುವರೋ,
ಅಂತಹ ಸ್ಮೃತಿವಂತರ, ಜಾಗರೂಕ ಪ್ರಾಜ್ಞರ ಆಸವಗಳು ಅಂತ್ಯವಾಗುತ್ತವೆ."     (293)

ಗಾಥ ಪ್ರಸಂಗ 21:3
ಭದ್ದಿಯಾ ಭಿಕ್ಷುಗಳ ಚಿತ್ತ ಚಾಂಚಲ್ಯತೆ


            ಭದ್ದಿಯಾ ನಗರದಲ್ಲಿ ಕೆಲ ಭಿಕ್ಷುಗಳಿದ್ದರು. ಅವರು ಕೆಲವು ಬಗೆಯ ಬಳ್ಳಿಗಳಿಂದ ಹುಲ್ಲಿನಿಂದ ಚಪ್ಪಲಿ ತಯಾರಿಸಿಕೊಂಡು, ಅದನ್ನು ಅಲಂಕೃತವನ್ನಾಗಿಸುವಲ್ಲಿ ಆಸಕ್ತರಾಗಿದ್ದರು. ಅವರು ಸಹಾ ಈ ಕುರಿತೇ ಚಿಂತಿಸುತ್ತಾ ಆ ಕಾರ್ಯದಲ್ಲೇ ತಲ್ಲೀನರಾಗಿದ್ದರು. ಹೀಗಾಗಿ ಅವರು ಪರಮಾರ್ಥ ಜೀವನ ಕುಂಠಿತವಾಯಿತು. ಈ ವಿಷಯವು ಬುದ್ಧರ ಬಳಿಗೂ ತಲುಪಿತು. ಆಗ ಭಗವಾನರು ಅವರನ್ನು ಕರೆಯಿಸಿ ಹೀಗೆ ತಿದ್ದಿದರು: "ನನ್ನ ಮಕ್ಕಳೇ, ನೀವು ಸಂಘ ಸೇರಿರುವುದು ಪರಿಶುದ್ಧತೆಯ ಪ್ರಾಪ್ತಿಗಾಗಿ. ಅಂದರೆ ಅರಹಂತ ಫಲ ಪ್ರಾಪ್ತಿಗಾಗಿ, ಆದರೆ ನೀವು ಈಗ ಅಪಾರ ಪರಿಶ್ರಮಿಗಳಾಗಿರುವುದು ಚಪ್ಪಲಿ ನಿಮರ್ಾಣದಲ್ಲಿ ಹಾಗು ಅದರ ಅಲಂಕೃತತೆಯಲ್ಲಿ. ಹೀಗಿದ್ದಲ್ಲಿ ನಿಮ್ಮ ಆಸವಗಳು ಇನ್ನೂ ಹೆಚ್ಚುವುವು" ಎಂದು ಹೇಳಿ ಈ ಮೇಲಿನ ಗಾಥೆಗಳನ್ನು ನುಡಿದರು.

No comments:

Post a Comment