Wednesday, 12 August 2015

dhammapada/pakinnakavagga/21.7/maccikasandaupasaka

ಶ್ರದ್ಧಾಶೀಲಸಂಪನ್ನನು ಸರ್ವತ್ರ ಆದರಣೀಯ
"ಯಾರು ಶ್ರದ್ಧಾ (ಪ್ರಜ್ಞಾಯುತ ಭಕ್ತಿ) ಹಾಗು ಶೀಲಸಂಪನ್ನನೋ
ಯಶಸ್ಸು ಮತ್ತು ಐಶ್ವರ್ಯಗಳಿಂದ ಕೂಡಿರುತ್ತಾನೋ,
ಆತನು ಯಾವ ಯಾವ ಪ್ರದೇಶದಲ್ಲಿ ಹೋಗುತ್ತಾನೋ
ಅಲ್ಲೆಲ್ಲಾ ಪೂಜಿತನಾಗುತ್ತಾನೆ."     (303)
ಗಾಥ ಪ್ರಸಂಗ 21:7
ಮಚ್ಚಿಕಾಸಂದದ ಉಪಾಸಕ ಚಿತ್ತನ ಶ್ರದ್ಧಾಶೀಲತೆ

            ಒಮ್ಮೆ ಮಚ್ಚಿಕಾನಂದದ ಚಿತ್ತನೆಂಬ ಗೃಹಸ್ಥನು ಸಾರಿಪುತ್ರರಿಂದ ಧಮ್ಮವನ್ನು ಆಲಿಸಿದಾಗ, ಆತನು ಅನಾಗಾಮಿ ಮಾರ್ಗ ಮತ್ತು ಫಲವನ್ನು ಪಡೆದನು. ಹೀಗಾಗಿ ಒಂದುದಿನ 500 ಬಂಡಿಗಳಷ್ಟು ಆಹಾರ ಮತ್ತಿತರ ಕೊಡುಗೆಗಳನ್ನು ಭಗವಾನರಿಗೆ ನೀಡಲು ಶ್ರಾವಸ್ತಿಗೆ ಹೊರಟನು. ಆಗ ಆತನ ಜೊತೆಗೆ 3000 ಹಿಂಬಾಲಕರೂ ಇದ್ದರೂ ಅವರೆಲ್ಲರೂ ದಿನಕ್ಕೊಂದು ಯೋಜನದಂತೆ ಶ್ರಾವಸ್ತಿಗೆ ತಲುಪುವ ಹೊತ್ತಿಗೆ ತಿಂಗಳಾಯಿತು. ನಂತರ ಚಿತ್ತನ ನಾಯಕತ್ವದಲ್ಲಿ ಜೇತವನ ವಿಹಾರಕ್ಕೆ ಹೋಗುವಾಗ ಆತನೊಡನೆ ಕೇವಲ 500 ಜನರಿದ್ದರು. ಆತನು ಭಗವಾನರಿಗೆ ವಂದಿಸಿ, ಪೂಜಿಸುವಾಗ ಹೂವಿನ ರಾಶಿಯು ಮಳೆಯಂತೆ ಅದ್ಭುತವಾಗಿ ಸುರಿಯಲ್ಪಟ್ಟಿತ್ತು. ಚಿತ್ತನು ವಿಹಾರದಲ್ಲಿ ಇಡೀ ತಿಂಗಳಿದ್ದನು. ಅಲ್ಲಿ ಆತನು ಭಗವಾನರಿಗೆ, ಭಿಕ್ಷು ಸಂಘಕ್ಕೆ ಹಾಗು ಆತನ ಜೊತೆಗಾರರಿಗೆ ಸೇರಿ 3000 ಜನರಿಗೆ ಆಹಾರ ಬಡಿಸುತ್ತಿದ್ದನು. ಪ್ರತಿಸಾರಿಯು ಆತನು ಆಹಾರ ಹಾಗು ಕೊಡುಗೆಗಳನ್ನು ನೀಡುವಾಗ ದೇವತೆಗಳು ಪುನಃ ಅವೆಲ್ಲಾ ಅಷ್ಟೇ ಇರುವಂತೆ ಭತರ್ಿ ಮಾಡಿಬಿಡುತ್ತಿದ್ದರು.
            ಆತನು ಹಿಂತಿರುಗಿ ಹೋಗುವ ದಿನದಂದು ಆತನು ತನ್ನೆಲ್ಲಾ ಆಹಾರವನ್ನು ಚೀವರ ಇತ್ಯಾದಿಗಳನ್ನು ಎಲ್ಲವನ್ನೂ ದಾನವಾಗಿ ಭಗವಾನರಿಗೆ ಮತ್ತು ಭಿಕ್ಷು ಸಂಘಕ್ಕೆ ಸಮಪರ್ಿಸಿದನು. ಆಗಲು ಸಹಾ ದೇವತೆಗಳು ಆತನ ಬರಿದಾದ ಬಂಡಿಗಳನ್ನು ಪುನಃ ಅತ್ಯಮೂಲ್ಯವಾದ ವಸ್ತುಗಳಿಂದ ತುಂಬಿಸಿದರು. ಇದನ್ನು ಪೂಜ್ಯರಾದ ಆನಂದರು ಕಂಡು, ಅವರು ಭಗವಾನರಿಗೆ ಈ ವಿಷಯವನ್ನು ತಿಳಿಸಿ ಹೀಗೆ ಪ್ರಶ್ನಿಸಿದರು. "ಭಗವಾನ್, ಚಿತ್ತನು ತಮ್ಮ ಸಾನಿಧ್ಯದಲ್ಲಿ ಹೀಗೆ ಬಂದಿರುವುದಕ್ಕೆ ಎಷ್ಟೆಲ್ಲಾ ಧನ್ಯತೆ ಪಡೆದಿದ್ದಾನೆ. ಭಗವಾನ್ ಆತನು ಬೇರೆಡೆ ಹೀಗೆ ಹೋಗಿದ್ದರೆ, ಆತನು ಇದೇರೀತಿ ಧನ್ಯತೆ ಪಡೆಯುತ್ತಿದ್ದನೆ?"

            ಆಗ ಭಗವಾನರು ಹೀಗೆ ಉತ್ತರಿಸಿದರು: "ಆನಂದ, ಯಾವ ಶಿಷ್ಯನು ಪೂರ್ಣವಾಗಿ ಶ್ರದ್ಧೆ ಮತ್ತು ಶೀಲಗಳಿಂದ ಕೂಡಿರುತ್ತಾನೆಯೋ, ದಾನಿಯಾಗಿರುತ್ತಾನೋ ಮತ್ತು ಆತನ ಖ್ಯಾತಿಯು ಎಲ್ಲೆಡೆ ಹಬ್ಬುವುದು, ಹೀಗಾಗಿ ಅಂತಹವನನ್ನು ಎಲ್ಲೆಲ್ಲಿಯೂ ಹೋಗಲಿ, ಅಲ್ಲೆಲ್ಲಾ ಆದರಕ್ಕೆ, ಗೌರವಕ್ಕೆ ಪಾತ್ರನಾಗುತ್ತಾನೆ" ಎಂದು ಹೇಳಿ ಈ ಗಾಥೆಯನ್ನು ನುಡಿದರು.

No comments:

Post a Comment