Wednesday, 5 August 2015

dhammapada/maggavagga/20.8/5bhikkhus

ಕ್ಲೇಷಗಳ ಕಾಡನ್ನೇ ಕತ್ತರಿಸಿಹಾಕಿ
"ಕ್ಲೇಷಗಳೆಂಬ ವನವನ್ನು ಕತ್ತರಿಸು,
ಆದರೆ (ನಿಜವಾದ) ವೃಕ್ಷವನ್ನಲ್ಲ,
ವನದಿಂದಲೇ ಭಯವು ಉದಯಿಸುವುದು,
ವನದೊಂದಿಗೆ ಪೊದರು-ಚಿಗುರುಗಳೆಲ್ಲಾ ಕತ್ತರಿಸಿಹಾಕು,
ಹೀಗೆ ಮಾಡಿ ನಿರ್ವನ (ವನರಹಿತ/ನಿಬ್ಬಾಣ ಪ್ರಾಪ್ತಿ)ವಾಗಿ ಓ ಭಿಕ್ಷುಗಳೇ."            (283)

"ಎಲ್ಲಿಯವರೆಗೆ ನರನು, ನಾರಿಯಲ್ಲಿನ
ಆಕರ್ಷಣೆ, ಸಣ್ಣ ಪೊದರು ಚಿಗುರುಗಳನ್ನು ಕತ್ತರಿಸಿ ಸವರಿಹಾಕುವಂತೆ
ಮಾಡುವುದಿಲ್ಲವೋ, ಅಲ್ಲಿಯವರೆಗೆ ಆತನ ಮನವು
ಹಾಲು ಕುಡಿಯುವ ಕರುವು ಹಸುವಿಗೆ
ಅಂಟಿಕೊಂಡಿರುವ ಹಾಗೆ ಬಂಧನದಲ್ಲೇ ಇರುತ್ತದೆ."        (284)

ಗಾಥ ಪ್ರಸಂಗ 20:8
ಐದು ಭಿಕ್ಷುಗಳ ಲೌಕಿಕ ಬಂಧನ

            ಶ್ರಾವಸ್ತಿಯಲ್ಲಿ ಐವರು ಶ್ರೀಮಂತ ಹಿರಿಯ ಗೃಹಸ್ಥರಿದ್ದರು. ಅವರು ಒಟ್ಟಾಗಿಯೇ ಕುಶಲಕರ್ಮಗಳೆಲ್ಲಾ ಮಾಡುತ್ತಿದ್ದರು. ಒಮ್ಮೆ ಅವರು ಬುದ್ಧವಚನವನ್ನು ಆಲಿಸಿ ಹೀಗೆ ನಿರ್ಧರಿಸಿದರು: "ನಾವು ವೃದ್ಧರಾಗಿದ್ದೇವೆ, ಇನ್ನು ಏತಕ್ಕಾಗಿ ಈ ಗೃಹಸ್ಥ ಜೀವನ? ನಂತರ ಅವರೆಲ್ಲಾ ಭಗವಾನರ ಸಮ್ಮುಖದಲ್ಲೇ ಭಿಕ್ಷುಗಳಾದರು. ಆದರೆ ಅವರು ವೃದ್ಧರಾಗಿದ್ದರಿಂದಾಗಿ ಅವರಲ್ಲಿ ಅಂತಹ ಪ್ರಯತ್ನಶೀಲತೆ ಪಡದೆ, ಧಮ್ಮವನ್ನು ನೆನಪಿಡುವಲ್ಲಿ ಅಸಮರ್ಥರಾದರು. ಆದ್ದರಿಂದ ಅವರು ವಿಹಾರದಲ್ಲೊಂದು ಕುಟೀರ ನಿಮರ್ಿಸಿ, ಅದರಲ್ಲೇ ಐವರು ವಾಸಿಸತೊಡಗಿದರು. ಅವರು ಅಹಾರಕ್ಕಾಗಿಯು ಸಹಾ ತಮ್ಮ (ಹಿಂದಿನ ಲೌಕಿಕ ಜೀವನದ) ಮನೆಗಳಿಗೇ ಹೋಗುತ್ತಿದ್ದರು.
            ಈ ಐವರು ಭಿಕ್ಷುಗಳು ಹಿಂದೆ ಪ್ರಾಪಂಚಿಕರಾಗಿದ್ದಾಗ ಅವರಲ್ಲಿ ಒಬ್ಬನ ಪತ್ನಿಯೇ ಮಧುಪಚಿಕಾ. ಆಕೆಯು ಮಧುರವಾಗಿ ಅಡುಗೆ ಮಾಡುತ್ತಿದ್ದಳು. ಹಾಗು ಆಕೆಯು ಸಹೃದಯದವಳಾಗಿದ್ದಳು. ಹೀಗಾಗಿ ಅವರೆಲ್ಲಾ ಆಕೆಯ ಮನೆಗೆ ಹೋಗಿಯೇ ಆಹಾರ ಸ್ವೀಕರಿಸುತ್ತಿದ್ದರು. ಆಕೆಯು ಯಾವುದೇ ಬೇಸರವಿಲ್ಲದೆ, ಆನಂದದಿಂದ ಎಲ್ಲರಿಗೂ ಪ್ರತಿದಿನ ಆಹಾರ ನೀಡುತ್ತಿದ್ದಳು. ಆದರೆ ಒಂದುದಿನ ಆಕೆಯು ಕಾಯಿಲೆಗೆ ಗುರಿಯಾಗಿ ಸತ್ತೇಹೋದಳು. ಇದರಿಂದಾಗಿ ಆ ಐವರು ಭಿಕ್ಷುಗಳಿಗೆ ಅಪಾರ ದುಃಖವಾಯಿತು. ಅವರು ಶೋಕ ತಡೆಯಲಾರದೆ, ಕುಟಿರದಲ್ಲಿ ತಮ್ಮ ತಮ್ಮಲ್ಲೇ ಬೀಳುತ್ತಾ ಹೀಗೆ ಪ್ರಲಾಪ ಮಾಡುತ್ತಿದ್ದರು: "ಓಹ್, ನಮ್ಮ ಮಧುಪಚಿಕಾಳು ಇನ್ನಿಲ್ಲವಾಗಿದ್ದಾಳೆ, ಆಕೆ ನಮಗೆಲ್ಲಾ ಅಪಾರ ಆಶ್ರಯ ನೀಡಿದ್ದಳು. ಆಕೆಯಂಥವಳನ್ನು ನಾವು ಎಲ್ಲಿ ಹುಡುಕೋಣ? ಆದ್ದರಿಂದಲೇ ನಾವೆಲ್ಲಾ ಅಳುತ್ತಿದ್ದೇವೆ."
            "ಭಿಕ್ಷುಗಳು ಧಮ್ಮ ಸಭಾಂಗಣದಲ್ಲಿ ಇದೇ ವಿಷಯವನ್ನು ಚಚಿಸುತ್ತಿದ್ದರು. ಆಗ ಅಲ್ಲಿಗೆ ಬಂದಂತಹ ಭಗವಾನರು ಅವರಿಗೆ ಹೀಗೆ ಪ್ರಶ್ನಿಸಿದರು: "ಭಿಕ್ಷುಗಳೇ, ನೀವ್ಯಾವ ವಿಷಯವನ್ನು ಚಚರ್ಿಸುತ್ತಿರುವಿರಿ?" ಅವರೆಲ್ಲಾ ನಡೆದ ವಿಷಯ ತಿಳಿಸಿದರು. ಆಗ ಭಗವಾನರು ಅವರಿಗೆ ಹೀಗೆ ಹೇಳಿದರು: "ಭಿಕ್ಷುಗಳೇ, ಅವರು ಈ ರೀತಿಯಾಗಿ ವತರ್ಿಸುತ್ತಿರುವುದು ಇದೇ ಮೊದಲಲ್ಲ, ಈ ಹಿಂದಿನ ಜನ್ಮದಲ್ಲೂ ಅವರು ಹಾಗೆಯೇ ಮಾಡಿದ್ದಾರೆ. ಆಗ ಅವರೆಲ್ಲಾ ಕಾಗೆಗಳಾಗಿದ್ದರು. ಆಗ ಈಕೆ ಸಮುದ್ರದ ಬದಿಯಲ್ಲಿಯೇ ನಡೆಯುತ್ತಿರುವಾಗ ಆಕೆಯನ್ನು ಅಲೆಯೊಂದು ಸಮುದ್ರದೊಳಕ್ಕೆ ಎಳೆದೊಯ್ದಿತ್ತು. ಆಗ ಗೋಳಾಡಿದ ಇವರು ಆಕೆಯನ್ನು ಹೊರತರಲಿಕ್ಕಾಗಿ, ತಮ್ಮ ಚುಂಚಿನಿಂದ ಸಮುದ್ರ ಖಾಲಿ ಮಾಡಲು ಹೊರಟು ಸುಸ್ತಾಗಿ ಬಿದ್ದರು" ಎಂದು ಕಾಕಜಾತಕವನ್ನು ನುಡಿದರು. ನಂತರ ಹೀಗೆ ಹೇಳಿದರು:

            "ಭಿಕ್ಷುಗಳೇ, ನೀವೆಲ್ಲಾ ದುಃಖಕ್ಕೆ ಒಳಗಾಗುತ್ತಿರುವುದು ಏತಕ್ಕೆಂದರೆ ನೀವಿನ್ನೂ ರಾಗ, ದ್ವೇಷ ಮತ್ತು ಮೋಹಗಳ ವನದಿಂದ (ಕ್ಲೇಷಗಳಿಂದ) ಮುಕ್ತರಾಗಿಲ್ಲ. ಅದರಿಂದ ಈ ಕಶ್ಮಲಗಳ ವನವನ್ನು ಕತ್ತರಿಸಿಹಾಕಿ, ನಿರ್ವನವನ್ನಾಗಿ ಮಾಡಿ (ನಿಬ್ಬಾಣ ಪ್ರಾಪ್ತಿಮಾಡಿ). ಆಗ ನೀವು ದುಃಖಗಳೆಲ್ಲದರಿಂದ ಮುಕ್ತರಾಗುವಿರಿ" ಎಂದು ನುಡಿದು ಈ ಮೇಲಿನ ಗಾಥೆಗಳನ್ನು ನುಡಿದರು.

No comments:

Post a Comment