ಮಿಥ್ಯಾದೃಷ್ಟಿ
ಹೊಂದಿದವರು ದುರ್ಗತಿಗೆ ಹೋಗುವರು
"ದೋಷವಿಲ್ಲದೆಡೆ
ದೋಷವ ಕಾಣುವರು,
ದೋಷವಿರುವಲ್ಲಿ ದೋಷವ
ಕಾಣದೆ,
ಮಿಥ್ಯಾದೃಷ್ಟಿಗಳನ್ನು
ಅಪ್ಪುವಂತಹ
ಜೀವಿಗಳು ದುರ್ಗತಿಗೆ
ಹೋಗುವರು." (318)
"ದೋಷವನ್ನು
(ಕೆಟ್ಟದ್ದನ್ನು) ದೋಷವೆಂದೇ ಕಾಣುವ,
ದೋಷವಲ್ಲದ್ದನ್ನು
ದೋಷರಹಿತವೆಂದೇ ಕಾಣುವಂತಹ
ಸಮ್ಮಾದೃಷ್ಟಿ
ಹೊಂದಿದಂತಹ (ಅಪ್ಪಿದಂತಹ)
ಜೀವಿಗಳೂ ಸುಗತಿಗೆ
ಹೋಗುವರು." (319)
ಗಾಥ ಪ್ರಸಂಗ 22:9
ಬಾಲಕರಿಂದಾಗಿ
ತಂದೆ-ತಾಯಿಗಳೂ ಸಮ್ಮಾದೃಷ್ಟಿ ಹೊಂದಿದರು
ಆಗ ಶ್ರಾವಸ್ತಿಯಲ್ಲಿ (ತಿಥರ್ಿ)ಗಳ
ಅನುಯಾಯಿಗಳು ತಮ್ಮ ಮಕ್ಕಳನ್ನು ಬೌದ್ಧ ಅನುಯಾಯಿಗಳೊಂದಿಗೆ ಬೆರೆಯಲು ಬಿಡುತ್ತಿರಲಿಲ್ಲ. ಅವರು
ತಮ್ಮ ಮಕ್ಕಳಿಗೆ ಬೇದಭಾವದ ವಿಷವನ್ನು ಈ ರೀತಿ ಬಿತ್ತುತ್ತಿದ್ದರು: "ಮಕ್ಕಳೇ, ನೀವು ಜೇತವನದ ವಿಹಾರಕ್ಕೆ ಹೋಗದಿರಿ. ಹಾಗೆಯೇ ಬೇರ್ಯಾವ
ವಿಹಾರಕ್ಕೂ ಹೋಗದಿರಿ. ಶಾಕ್ಯ ಕುಲದ (ಬುದ್ಧರ) ಶಿಷ್ಯರಿಗಾಗಲಿ ಅಥವಾ ಬುದ್ಧರಿಗೆ ಆಗಲಿ
ಗೌರವಿಸಬೇಡಿ" ಎಂದು.
ಆದರೆ ಒಂದುದಿನ ತೀಥರ್ಿಗಳ ಬಾಲಕರು,
ಬೌದ್ಧ ಬಾಲಕರೊಂದಿಗೆ ಆಟವಾಡುತ್ತಿದ್ದರು. ಅವರು ಜೇತವನ ವಿಹಾರದ
ಬಳಿ ಆಟ ಆಡುವಾಗ ಅವರಿಗೆ ಬಾಯಾರಿಕೆ ಆಯಿತು. ಆಗ ಅವರು ಬೌದ್ಧ ಬಾಲಕನಿಗೆ ಹೀಗೆ ನುಡಿದರು:
"ಮಿತ್ರ ನಮ್ಮ ತಂದೆ-ತಾಯಿಗಳಿಂದಾಗಿ ನಾವು ಈ ವಿಹಾರ ಪ್ರವೇಶಿಸಲಾರೆವು, ನೀನೇ ನಮಗಾಗಿ ನೀರು ತಾ". ಆಗ ಬೌದ್ಧ ಬಾಲಕನು ಜೇತವನ
ಪ್ರವೇಶಿಸಿದನು. ಅಲ್ಲಿ ಅವನು ನೀರು ಕುಡಿದು ನಂತರ ಭಗವಾನರನ್ನು ಕಂಡು ಅವರಿಗೆ ವಂದಿಸಿದನು.
ನಂತರ ತನ್ನ ಮಿತ್ರರ ಮನೋಭಾವ ತಿಳಿಸಿದನು. ಆಗ ಭಗವಾನರು "ಓ ಬಾಲಕ, ಆ ಬಾಲಕರನ್ನು ಇಲ್ಲೇ ನೀರು ಕುಡಿಯುವಂತೆ ಹೇಳು. ಅವರಿಗೆ
ಯಾವ ಹಾನಿಯೂ ಆಗದು, ಬದಲಾಗಿ ಒಳ್ಳೆಯದೇ
ಆಗುವುದು." ಆಗ ಆ ಬಾಲಕರೆಲ್ಲಾ ನೀರು ಕುಡಿದರು. ನಂತರ ಭಗವಾನರು ಅವರಿಗೆ ಯೋಗ್ಯವೆನಿಸುವ
ಹಿತವಚನ ತಿಳಿಸಿದರು. ಇದರ ಪರಿಣಾಮವಾಗಿ ಆ ಬಾಲಕರಿಗೆ ಸರಿ ಎಂದರೆ ಏನು? ತಪ್ಪು ಎಂದರೆ ಯಾವುದು? ಎಂಬುದರ ಯಥಾರ್ಥ ಜ್ಞಾನ ಲಭಿಸಿ ಅವರು ಬುದ್ಧರ ಶ್ರೇಷ್ಠತೆ ಧಮ್ಮದ
ಮೌಲ್ಯ ಹಾಗು ಭಿಕ್ಷುಗಳ ಪಾವಿತ್ರ್ಯತೆ ಅರಿತರು. ಹೀಗಾಗಿ ಅವರು ತ್ರಿರತ್ನಗಳಿಗೆ ಶರಣು ಹೋದರು.
ನಂತರ ಮಕ್ಕಳು ಮನೆಗೆ ಹಿಂತಿರುಗಿ ತಮಗಾದ
ಅಪೂರ್ವ ಅನುಭವವನ್ನು ತಂದೆ-ತಾಯಿಯರಲ್ಲಿ ಹೇಳಿಕೊಂಡರು. ಆದರೆ ಪೋಷಕರಿಗೆ ತ್ರಿರತ್ನದ ಮೌಲ್ಯ
ಅರಿವಾಗದೆ ಅವರು ಹೀಗೆ ಗೋಳಾಡಿದರು: "ನಮ್ಮ ಮಕ್ಕಳು ನಮ್ಮ ಧರ್ಮಕ್ಕೆ ಭ್ರಷ್ಟರಾದರು. ಈಗ
ಅವರು ನಮ್ಮ ಧರ್ಮಕ್ಕೆ ನಿಷ್ಠೆಯಿಂದಿಲ್ಲ, ಅವರು ಹಾಳಾಗಿದ್ದಾರೆ."
ಅವರ ಪ್ರಲಾಪ ಕೇಳಿದಂತಹ ಪಕ್ಕದ ಮನೆಯ
ಪ್ರಾಜ್ಞರು ಅವರಿಗೆ ಹೀಗೆ ತಿಳಿ ಹೇಳಿದರು: "ಇಲ್ಲಿ ಧರ್ಮ ಭ್ರಷ್ಟತೆ ಎಂಬುದಿಲ್ಲ. ಪಾಪರಹಿತನಾಗುವುದೇ
ನಿಜವಾದ ಧಮ್ಮಪಾಲನೆ ಆಗಿದೆ. ಭಗವಾನರು ಯಾವುದೇ ರೀತಿಯಲ್ಲೂ ಧರ್ಮ ಭ್ರಷ್ಟನನ್ನಾಗಿಸುವುದಿಲ್ಲ,
ಬದಲಾಗಿ ನಿಜವಾದ ಅರ್ಥದಲ್ಲಿ ಧಾಮಿಕರನ್ನಾಗಿಸುತ್ತಾರೆ. ಅವರ
ಬೋಧನೆಯ ಸಾರವೆಂದರೆ ಪಾಪರಹಿತನಾಗುವಿಕೆ, ಪುಣ್ಯಪಾಲನೆ, ಚಿತ್ತಶುದ್ಧಿಯಾಗಿದೆ,
ಮೂಢನಂಬಿಕೆಗಳಿಂದ ಮುಕ್ತನಾಗುವುದಾಗಿದೆ" ಎಂದು
ಅವರಲ್ಲೂ ಸ್ಪೂತರ್ಿ ತುಂಬಿ, ಭಗವಾನರ ಬಳಿಗೆ ಕರೆತಂದರು.
ಆಗ ಭಗವಾನರು ಈ ಮೇಲಿನ ಗಾಥೆಗಳನ್ನು
ನುಡಿದರು. ಆಗ ಧಮ್ಮಜಾಗೃತವಾಗಿ ಆ ಪೋಷಕರು ಸಹಾ ತ್ರಿರತ್ನಗಳಿಗೆ ಶರಣು ಹೊಂದಿದರು. ನಂತರದ
ಬೋಧನೆಗಳಲ್ಲಿ ಅವರು ಸೋತಪನ್ನ ಸ್ಥಿತಿಯನ್ನು ಪ್ರಾಪ್ತಿ ಮಾಡಿದರು.
No comments:
Post a Comment