Wednesday, 26 August 2015

dhammapada/nirayavagga/22.8/thenighanthas

ಪಾಪಲಜ್ಜೆ ಪಾಪಭೀತಿ ಇಲ್ಲದವರು ದುರ್ಗತಿಗೆ ಹೋಗುವರು

"ಲಜ್ಜೆ ಮಾಡಲಾಗದೆಡೆ, ಲಜ್ಜೆ ತಾಳುವರು;
ಪಾಪಲಜ್ಜೆ ತಾಳುವಲ್ಲಿ, ಲಜ್ಜೆತಾಳರು;
ಈ ರೀತಿಯ ಮಿಥ್ಯಾದೃಷ್ಟಿಯನ್ನು ಅಪ್ಪಿದ
ಜೀವಿಗಳು ದುರ್ಗತಿಗೆ ಹೋಗುವರು."           (316)

"ಭಯ ದಶರ್ಿಸುವಂತಹ ಕಡೆ ಅಭಯದಿಂದಿರುವವರು;
ಅಭಯವಿರುವ ಕಡೆ ಭಯದಿಂದಿರುವರು;
ಈ ರೀತಿಯ ಮಿಥ್ಯಾದೃಷ್ಟಿಯನ್ನು ಅಪ್ಪಿದ
ಜೀವಿಗಳೂ ದುರ್ಗತಿಗೆ ಹೋಗುವರು."          (317)

ಗಾಥ ಪ್ರಸಂಗ 22:8
ನಗ್ನ ನಿಗಂಠರ ಲಜ್ಜಾಹೀನತೆ


            ಒಮ್ಮೆ ನಿಗಂಠರು ಶ್ರಾವಸ್ತಿಯಲ್ಲಿ ಭಿಕ್ಷಾಟನೆಗೆ ಹೊರಟಿದ್ದರು. ಅವರ ಪಾತ್ರೆಗಳಿಗೆ ಬಟ್ಟೆ ಹೊದಿಸಲಾಗಿತ್ತು. ಅವರನ್ನು ಕಂಡ ಭಿಕ್ಷುಗಳು ಸಹಾ ಭಿಕ್ಷುಗಳಿಗೆ ಹೀಗೆ ಹೇಳಿದರು: "ನೋಡಿ, ಈ ನಿಗಂಠರನ್ನು ಇವರು ತಮ್ಮ ಶರೀರದ ಮುಂದಿನ ಭಾಗವನ್ನಾದರೂ ಮುಚ್ಚಿಕೊಂಡಿದ್ದಾರೆ, ಇವರು ಅಚೇಲಕ ಸನ್ಯಾಸಿಗಳಿಗಿಂತ ಉತ್ತಮವಾಗಿದ್ದಾರೆ. ಏಕೆಂದರೆ ಅಚೇಲಕರು ಏನನ್ನು ಧರಿಸದೆಯೇ, ಮುಚ್ಚದೆಯೇ ಚಲಿಸುತ್ತಾರೆ" ಎಂದರು.
            ಆಗ ಇದನ್ನು ಆಲಿಸಿದ ನಿಗಂಠರು ಹೀಗೆ ಪ್ರತಿ ಉತ್ತರಿಸಿದರು: "ಹೌದು, ನಮ್ಮ ಪಾತ್ರೆಯನ್ನು ಬಟ್ಟೆಯಿಂದ ಮುಚ್ಚಿದ್ದೇವೆ ಹೊರತು ನಮ್ಮನಲ್ಲ. ನಾವು ನಗ್ನರಾಗಿ ಚಲಿಸಲು ನಾಚುವುದಿಲ್ಲ, ನಾವು ಬಟ್ಟೆಯಿಂದ ಪಾತ್ರೆ ಮುಚ್ಚಿರುವುದು ಏಕೆಂದರೆ ಆಹಾರದಲ್ಲಿ ಧೂಳು ಇರಬಾರದು ಎನ್ನುವ ಉದ್ದೇಶ ದಿಂದ ಮಾತ್ರ. ಏಕೆಂದರೆ ದೂಳಿನಲ್ಲಿ ಜೀವಿಯಿದೆ ಅಲ್ಲವೇ?" ಎಂದರು.
            ಆಗ ಭಿಕ್ಷುಗಳು 'ಇವರು ಬದಲಾಗುವುದಿಲ್ಲ' ಎಂದುಕೊಳ್ಳುತ್ತಾ ಭಗವಾನರಲ್ಲಿ ಬಂದು ಇಡೀ ವಿಷಯವನ್ನು ತಿಳಿಸಿದರು. ಆಗ ಭಗವಾನರು ಹೀಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

            "ಭಿಕ್ಷುಗಳೇ, ಈ ರೀತಿಯ ನಗ್ನ ಸಂನ್ಯಾಸಿಗಳು ಯಾವುದರಲ್ಲಿ ನಾಚಿಕೆ ತಾಳ ಲಾರದೋ ಅದರಲ್ಲಿ ನಾಚುತ್ತಿದ್ದಾರೆ. ಯಾವುದರಲ್ಲಿ ಪಾಪಲಜ್ಜೆ ಇರಬೇಕೋ ಅಂಥಹದರಲ್ಲಿ ಲಜ್ಜೆ ತೋರಿಸುತ್ತಿಲ್ಲ. ಇಂತಹ ಮಿಥ್ಯಾದೃಷ್ಟಿಯನ್ನು ಹೊಂದಿರುವವರು ಮುಂದೆ ದುರ್ಗತಿಗೆ ಬೀಳುವರು" ಎಂದು ನುಡಿದು ಭಗವಾನರು ಈ ಮೇಲಿನ ಗಾಥೆಗಳನ್ನು ನುಡಿದರು.

No comments:

Post a Comment