Wednesday, 26 August 2015

dhammapada/nirayavagga/22.5/negligentbhikkhu

ಸಡಿಲಿಕೆಯ ಜೀವನ ಸಾರ್ಥಕವಲ್ಲ
 
"ಹೇಗೆ ಕುಶ ಹುಲ್ಲನ್ನು ತಪ್ಪಾಗಿ ಹಿಡಿದಾಗ
ಹಸ್ತವನ್ನೇ ಕತ್ತರಿಸುತ್ತದೆಯೋ ಹಾಗೆಯೇ
ಸಮಣ ಜೀವನವನ್ನು ವ್ಯತಿರಿಕ್ತವಾಗಿ ನಡೆಸಿದಾಗ
ಆತನು ನಿರಯಕ್ಕೆ ಎಳೆಯಲ್ಪಡುತ್ತಾನೆ."        (311)

"ಸಡಿಲವಾದ ಕಾರ್ಯಗಳು
ಭ್ರಷ್ಟತೆಯುತ ವ್ರತಗಳು (ಆಚರಣೆಗಳು)
ಸಂದೇಹಾಸ್ಪದ ಬ್ರಹ್ಮಚರಿಯ ಜೀವನ,
ಇವೆಲ್ಲಾ ಮಹತ್ಫಲವನ್ನು ನೀಡುವುದಿಲ್ಲ."        (312)

"ಕಾರ್ಯವೇನಾದರೂ ಮಾಡುವುದಿದ್ದರೆ,
ದೃಢವಾಗಿ, ಪರಾಕ್ರಮಯುತವಾಗಿ, ಚೆನ್ನಾಗಿ ಮಾಡು,
ಶಿಥಿಲವಾದ ಪರಿವ್ರಾಜಕ ಜೀವನವು
(ಕಲುಶಿತ) ಧೂಳನ್ನು ಮತ್ತಷ್ಟು ಚದುರಿಸಿಬಿಡುತ್ತದೆ."       (313)

ಗಾಥ ಪ್ರಸಂಗ 22:5
ನಿರ್ಲಕ್ಷ ಭಿಕ್ಷುವಿನ ಮನೋಭಾವ


            ಒಮ್ಮೆ ಒಬ್ಬ ಪ್ರಮಾಣಿಕ ಭಿಕ್ಷುವು ಆಕಸ್ಮಿಕವಾಗಿ ಹುಲ್ಲನ್ನು ಕತ್ತರಿಸಿದುದಕ್ಕಾಗಿ ಅತೀವ ಪಶ್ಚಾತ್ತಾಪಪಟ್ಟನು. (ಸಸ್ಯಗಳನ್ನು ಕತ್ತರಿಸುವುದು ಭಿಕ್ಷುಗಳಿಗೆ ನಿಷಿದ್ಧ). ಈ ವಿಷಯವನ್ನು ಆತನು ಇನ್ನೊಬ್ಬ ಭಿಕ್ಷುವಿಗೆ ತಿಳಿಸಿದನು. ಆ ಇನ್ನೊಬ್ಬ ಭಿಕ್ಷು ಅಷ್ಟಾಗಿ ದೃಢತೆಯುತ ಜೀವನ ನಡೆಸುತ್ತಿರಲಿಲ್ಲ. ಆತನು ಮೊದಲೇ ಅಜಾಗರೂಕನಾಗಿದ್ದನು. ಆತನು ಸಣ್ಣ ಪುಟ್ಟ ನಿಯಮಗಳನ್ನು ಪಾಲಿಸುತ್ತಲೇ ಇರಲಿಲ್ಲ. ಹೀಗಾಗಿ ಆತನು ಆ ಭಿಕ್ಷುವಿಗೆ ಸಮಾಧಾನಪಡಿಸಲು ಹೀಗೆ ಹೇಳಿದನು: "ಓಹ್, ಹುಲ್ಲು ಕತ್ತರಿಸುವುದೇ! ಅದು ಕ್ಷುಲ್ಲುಕ ತಪ್ಪು ಆಗಿದೆ. ಈ ವಿಷಯವನ್ನು ನೀವು ಮತ್ತೊಬ್ಬ ಭಿಕ್ಷುವಿನೊಂದಿಗೆ ಗುಟ್ಟಾಗಿ ಹೇಳಿದ್ದರು ಸಹಾ ದೋಷಮುಕ್ತರಾಗುತ್ತಿದ್ದೀರಿ. ಇದರಲ್ಲಿ ಚಿಂತೆ ಪಡುವಂತಹುದೇ ಇಲ್ಲ. ನೀವು ವ್ಯರ್ಥವಾಗಿ ಕೊರಗುತ್ತಿರುವಿರಿ" ಎಂದನು.

            ನಂತರ ತಾನು ಎರಡು ಕೈಗಳಿಂದಲೂ ಹುಲ್ಲನ್ನು ಕಿತ್ತು ಇದರಲ್ಲೇನೂ ತಪ್ಪಿಲ್ಲ ಎಂದು ತಿಳಿದು ತಿಳಿದು ತಪ್ಪು ಮಾಡಿದನು. ಈ ವಿಷಯ ಬುದ್ಧರಿಗೂ ತಲುಪಿತು. ಆಗ ಭಗವಾನರು ಆ ನಿರ್ಲಕ್ಷ ಭಿಕ್ಷುವಿಗೆ, ಈ ಮೇಲಿನ ಗಾಥೆಗಳನ್ನು ತಿಳಿಸಿ, ಸರಿದಾರಿಗೆ ತಂದರು.

No comments:

Post a Comment