ಏಕಾಂಗಿಯಾಗಿ
ವಿಹರಿಸು
"ಏಕಾಂಗಿಯಾಗಿ
ಆಸನಬದ್ಧನಾಗಿ, ಏಕಾಂಗಿಯಾಗಿ
ಶಯನ (ಮಲಗಿ) ಮಾಡಿ,
ಏಕಾಂಗಿಯಾಗಿಯೇ ಚಲಿಸುತ್ತಾ
ಏಕಾಂತದಲ್ಲಿಯೇ
ತನ್ನನ್ನು ದಮಿಸುತ್ತಾ,
ವನದಲ್ಲಿನ ಏಕಾಂತದಲ್ಲೇ
ಸಾಧಕನು ರಮಿಸುವನು." (305)
ಗಾಥ ಪ್ರಸಂಗ 21:9
ಏಕಾಂತದಲ್ಲಿಯೇ ರಮಿಸುವ
ಏಕ ವಿಹಾರಿ
ಜೇತವನದ ವಿಹಾರದಲ್ಲಿ
ಭಿಕ್ಷುವೊಬ್ಬನಿದ್ದನು. ಆತನು ಸದಾ ಏಕಾಂತದಲ್ಲಿ ಇರುತ್ತಿದ್ದನು. ಆತನು ಯಾರೊಂದಿಗೂ
ಬೆರೆಯುತ್ತಿರಲಿಲ್ಲ. ಸದಾ ತಾನೊಬ್ಬನೇ ಇರುತ್ತಿದ್ದನು. ಹೀಗಾಗಿ ಎಲ್ಲರೂ ಆತನನ್ನು 'ಏಕವಿಹಾರಿ' ಎಂದೇ ಕರೆಯುತ್ತಿದ್ದರು.
ಆತನು ಯಾರೊಂದಿಗೂ ಬೆರೆಯುತ್ತಿರಲಿಲ್ಲ.
ಏಕಾಂಗಿಯಾಗಿ ಕುಳಿತು ಧ್ಯಾನಿಸುತ್ತಿದ್ದನು. ಏಕಾಂಗಿಯಾಗಿಯೇ ನಡಿಗೆಯ ಧ್ಯಾನ ಮಾಡುತ್ತಿದ್ದನು.
ಏಕಾಂಗಿಯಾಗಿ ಮಲಗಿಯು ಸ್ಮೃತಿಸಂಪನ್ನನಾಗಿರುತ್ತಿದ್ದನು. ಆದರೆ ಬೇರೆ ಭಿಕ್ಷುಗಳು ಈತನ ಬಗ್ಗೆ
ತಪ್ಪಾಗಿ ಭಾವಿಸಿ ಭಗವಾನರಲ್ಲಿ ಆತನ ಬಗ್ಗೆ ದೂರು ನೀಡಿದರು.
ಆದರೆ ಸತ್ಯ ತಿಳಿಸಿದ್ದಂತಹ ಭಗವಾನರು
ಆತನಿಗೆ ಖಂಡಿಸಲಿಲ್ಲ, ಬದಲಾಗಿ ಹೀಗೆ
ನುಡಿದರು: "ನಿಜಕ್ಕೂ ನನ್ನ ಪುತ್ರ ಏಕೋವಿಹಾರಿ ಸರಿಯಾಗಿಯೇ ನಡೆದುಕೊಳ್ಳುತ್ತಿದ್ದಾನೆ.
ಭಿಕ್ಷುವು ಏಕಾಂತದಲ್ಲಿಯೇ (ಹಾಗು ಗದ್ದಲದಿಂದಲೂ ದೂರವಾಗಿ) ಧ್ಯಾನದಲ್ಲಿಯೇ ರತನಾಗಬೇಕು"
ಎಂದು ಹೇಳಿ ಈ ಮೇಲಿನ ಗಾಥೆಯನ್ನು ನುಡಿದರು.
No comments:
Post a Comment