Wednesday, 26 August 2015

dhammapada/nirayavagga/22.2/flamecoveredpetas

ಪಾಪಿಗಳು ನಿರಯಕ್ಕೆ ಹೋಗುವರು

"ಬಹಳಷ್ಟು ಜನರು ಕಾಷಾಯವಸ್ತ್ರ ಧರಿಸಿಯು ಸಹಾ
ಪಾಪಧಮ್ಮದಲ್ಲಿ ತೊಡಗುತ್ತಾ ಅನಿಯಂತ್ರಿತರಾಗಿದ್ದಾರೆ,
ಪಾಪಕರ್ಮದಿಂದಾಗಿ ಈ ಪಾಪಿಗಳು
ನಿರಯದಲ್ಲಿ ಹುಟ್ಟುವರು."            (307)

ಗಾಥ ಪ್ರಸಂಗ 22:2
ಬೆಂಕಿಯಿಂದ ಆವೃತವಾಗಿರುವ ಅಸ್ತಿಪಂಜರ ರೂಪದ ಪ್ರೇತಗಳು

            ಒಮ್ಮೆ ಪೂಜ್ಯ ಮೊಗ್ಗಲ್ಲಾನರವರು ಗೃದ್ಧಕೂಟ ಪರ್ವತದಿಂದ ಪೂಜ್ಯ ಲಕ್ಖಣರ ಸಹಿತ ಇಳಿದು ಬರುತ್ತಿದ್ದರು. ಆಗ ಮೊಗ್ಗಲ್ಲಾನರು ಕೆಲವು ಪ್ರೇತಗಳನ್ನು ಕಂಡರು. ಜೇತವನ ವಿಹಾರಕ್ಕೆ ಹಿಂತಿರುಗಿದ ನಂತರ ಭಗವಾನರೊಂದಿಗೆ ಹೀಗೆ ಹೇಳಿದರು: "ಭಗವಾನ್, ನಾನು ಇಂದು ಐದು ಪ್ರೇತಗಳನ್ನು ಕಂಡೆನು. ಆದರೆ ಅವುಗಳ ರೂಪವು ಅಸ್ತಿಪಂಜರದ್ದಾಗಿದ್ದು, ಕಾಷಾಯವಸ್ತ್ರ ಹೊಂದಿದ್ದ ಅವುಗಳ ಸುತ್ತಲೂ ಬೆಂಕಿಯ ಜ್ವಾಲೆಯು ಆವೃತವಾಗಿತ್ತು."

            ಆಗ ಭಗವಾನರು ಅವರಿಗೆಲ್ಲಾ ಅದರ ಬಗ್ಗೆ ವಿವರಣೆ ನೀಡಿದರು. "ಈ ಪ್ರೇತಗಳು ಕಸ್ಸಪ ಬುದ್ಧರ ಕಾಲದಲ್ಲಿ ಭಿಕ್ಷುಗಳಾಗಿದ್ದರು ಹಾಗು ಕಾಷಾಯವಸ್ತ್ರ ಧರಿಸಿಯೂ ಅಪಾರ ಪಾಪ ಮಾಡಿದ್ದರು. ಅದರ ಪರಿಣಾಮವಾಗಿ ಅವರು ನಿರಯದಲ್ಲಿ ಜನಿಸಿದರು. ನಂತರ ಹೀಗೆ ಈ ರೀತಿಯ ಪ್ರೇತಗಳಾಗಿಯೂ ಜ್ವಾಲೆಗಳ ದುಃಖ ಅನುಭವಿಸುತ್ತಿದ್ದಾರೆ" ಎಂದು ಹೇಳಿ ಈ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment