Wednesday, 5 August 2015

dhammapada/maggavagga/20.4/anattameditation

ಎಲ್ಲಾ ಧರ್ಮಗಳು ಅನಾತ್ಮ

"ಸರ್ವ ಧಮ್ಮಗಳು (ಸ್ಥಿತಿಗಳು) ಅನಾತ್ಮವಾಗಿವೆ (ನಾನುವಿನ ರಾಹಿತ್ಯದಿಂದ ಕೂಡಿದೆ)
ಹೀಗೆ ಒಬ್ಬನು ಪ್ರಜ್ಞಾದಿಂದ ದಶರ್ಿಸಿದಾಗ
ಆತನು ದುಃಖವೆಲ್ಲದರಿಂದ ವಿಕರ್ಷಣೆಗೆ ಒಳಗಾಗುತ್ತಾನೆ.
ಇದೇ ವಿಶುದ್ದಿಯ ಮಾರ್ಗವಾಗಿದೆ."               (279)

ಗಾಥ ಪ್ರಸಂಗ 20:4
ಅನಾತ್ಮದ ಧ್ಯಾನ

            ಇಲ್ಲೂ ಸಹಾ ಈ ಹಿಂದಿನ ಎರಡು ಗಾಥೆಗಳಂತೆ ವಿವರಣೆಯಿದೆ. ಆದರೆ ಇಲ್ಲಿ ಭಗವಾನರು ಇವರಿಗೆ ಅನಾತ್ಮದ ಬಗ್ಗೆ (ಅನಾತ್ತ) ಧ್ಯಾನಿಸಲು ನುಡಿಯುತ್ತಾರೆ. "ಭಿಕ್ಷುಗಳೇ, ಎಲ್ಲಾ ಧಮ್ಮಗಳು (ಸ್ಥಿತಿಗಳು) ಅನಾತ್ಮವಾಗಿವೆ. 'ನಾನು' ಎಂಬುದರ ರಾಹಿತ್ಯದಿಂದ ಕೂಡಿದೆ. ಇಲ್ಲಿ ಎಲ್ಲವೂ ಒಬ್ಬನ ನಿಯಂತ್ರಣಕ್ಕೆ ಒಳಪಡದು" ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment