ಯುವ
ನಿಷ್ಠಾವಂತ ಬೌದ್ಧ ಭಿಕ್ಷು ಲೋಕಕ್ಕೆ ಪ್ರಕಾಶಿಸುವನು
"ಯಾವ
ಭಿಕ್ಷುವು ಯುವಕನಾಗಿರುವಾಗಲೇ
ಬುದ್ಧ ಶಾಸನದಲ್ಲಿ
ಶ್ರದ್ಧಾವಂತನಾಗಿ ಶ್ರಮಿಸುವನೋ
ಆತನು ಮೋಡ ಮುಕ್ತ
ಚಂದಿರನಂತೆ
ಈ ಲೋಕವನ್ನು
ಪ್ರಕಾಶಿಸುವನು." (382)
ಗಾಥ ಪ್ರಸಂಗ 25:12
ಸುಮನ ಸಾಮಣೇರನ
ಅತೀಂದ್ರಿಯ ಸಾಧನೆ
ಸಾಮಣೇರ ಸುಮನನು ಪೂಜ್ಯ ಅನಿರುದ್ಧರವರ
ಶಿಷ್ಯನಾಗಿದ್ದನು. ಆತನು ತನ್ನ ಹಿಂದಿನ ಜನ್ಮದ ಪುಣ್ಯದಿಂದಾಗಿ ಹಾಗು ಈಗಿನ ಜನ್ಮದ ದೃಢ ಪರಾಕ್ರಮದಿಂದಾಗಿ
ಅತಿ ಕಿರಿಯ ವಯಸ್ಸಿನಲ್ಲೇ ಅತೀಂದ್ರಿಯ ಬಲಗಳ ಸಹಿತ ಅರಹಂತನಾದನು.
ಒಮ್ಮೆ ಆತನ ಗುರು ಅನಿರುದ್ದರು ಕಾಯಿಲೆ
ಬಿದ್ದಾಗ ಅವರಿಗೆ ನೀರಿನ ಅವಶ್ಯಕತೆ ಬಿದ್ದಿತು. ಆಗ ಸುತ್ತಲೆಲ್ಲವೂ ನೀರು ಸಿಗದ ಕಾರಣ ಆ
ವಿಹಾರದಿಂದ ಎಷ್ಟೋ ದೂರವಿರುವ ಅನೋತ್ತತ್ತ ಸರೋವರದಿಂದಲೇ ತನ್ನ ಅತೀಂದ್ರಿಯ ಶಕ್ತಿಯಿಂದಾಗಿ
ಗಾಳಿಯಲ್ಲಿಯೇ ಅಲ್ಲಿ ಹೋಗಿ ನೀರನ್ನು ತೆಗೆದುಕೊಂಡು ಬಂದರು. ನಂತರ ಗುರು ಮತ್ತು ಶಿಷ್ಯರು
ಭಗವಾನರನ್ನು ದಶರ್ಿಸಲು ಪುಬ್ಬಾರಾಮ ವಿಹಾರಕ್ಕೆ ಬಂದರು.
ಆ ವಿಹಾರದಲ್ಲಿ ಅತಿ ಕಿರಿಯ ವಯಸ್ಸಿನವನಾದ
ಸುಮನ ಸಾಮಣೇರನನ್ನು ಕಂಡು ಅಲ್ಲಿಂದ್ದ ಕೆಲವು ಸಾಮಣೇರರು ಹಾಸ್ಯ, ಕುಚೋದ್ಯ ಮಾಡಲಾರಂಭಿಸಿದರು. ಆಗ ಭಗವಾನರಿಗೆ ಸುಮನನಲ್ಲಿರುವ ಅನುರೂಪವಾದ
ಸದ್ಗುಣಗಳನ್ನು ಪ್ರತಿಭೆಯನ್ನು ಇವರಿಗೆ ಪರಿಚಯಿಸಬೇಕೆಂದು ಭಗವಾನರು ಸಾಮಣೇರರನ್ನು ಕರೆದು
ಅನೋತತ್ವ ಸರೋವರದ ನೀರು ಬೇಕೆಂದು ಹೂಜಿಯನ್ನು ನೀಡಿದರು. ಆದರೆ ಆ ಕಾರ್ಯವು ಯಾರಿಗೂ
ಸಾಧ್ಯವಾಗಲಿಲ್ಲ. ಕೊನೆಗೆ ಪೂಜ್ಯ ಆನಂದರವರ ಕೋರಿಕೆಯಂತೆ ಸುಮನರು ಕ್ಷಣಾರ್ಧದಲ್ಲೇ ತನ್ನ
ಅತೀಂದ್ರಿಯ ಶಕ್ತಿ ಬಳಸಿ, ಅನೋತತ್ತ ಸರೋವರಕ್ಕೆ
ಹೋಗಿ ಹಾಗೆಯೇ ನೀರಿನ ಸಮೇತ ಗಾಳಿಯಿಂದಲೇ ಕೆಳಗೆ ಇಳಿದರು. ಎಲ್ಲಾ ಭಿಕ್ಷುಗಳಿಗೂ
ಆಶ್ಚರ್ಯವಾಯಿತು.
ಅಂದು ಸಂಜೆ ಭಿಕ್ಷುಗಳು ಈ ವಿಷಯವನ್ನು
ಚಚರ್ಿಸುತ್ತಿರುವಾಗ ಅಲ್ಲಿಗೆ ಬಂದಂತಹ ಭಗವಾನರು ಈ ಮೇಲಿನ ಗಾಥೆ ನುಡಿದು ಹೀಗೆಂದರು.
"ಭಿಕ್ಷುಗಳೇ, ಯಾರು ಧಮ್ಮವನ್ನು
ಅತಿನಿಷ್ಠೆಯಿಂದ ಅಭ್ಯಸಿಸುತ್ತಿರುತ್ತಾರೋ ಅವರು ವಯಸ್ಸಿನಲ್ಲಿ ಅತಿ ಕಿರಿಯರಾದರೂ ಅತೀಂದ್ರಿಯ
ಬಲಗಳನ್ನು ಸಾಧಿಸಬಲ್ಲರು.
No comments:
Post a Comment