ಐಶ್ವರ್ಯದಿಂದ
ಮೂರ್ಖನ ಹಾನಿ
"ಐಶ್ವರ್ಯವು
ದುಮರ್ೆಧನಿಗೆ (ಮೂರ್ಖನಿಗೆ) ಹಾನಿಮಾಡುತ್ತದೆ,
ಹೊರತು ಆಚೆಯ ದಡವನ್ನು
(ನಿಬ್ಬಾಣವನ್ನು) ಅನ್ವೇಷಿಸುವವನಿಗಲ್ಲ,
ಐಶ್ವರ್ಯ ತೃಷ್ಣೆಯಿಂದ
ಮೂರ್ಖನು ಪರರನ್ನು
ಹಾನಿಗೊಳಿಸುವಂತೆ
ತನ್ನನ್ನು ಹಾಳು ಮಾಡಿಕೊಳ್ಳುತ್ತಾನೆ." (355)
ಗಾಥ ಪ್ರಸಂಗ 24:11
ಐಶ್ವರ್ಯವು
ಮೂರ್ಖನನ್ನು ನಾಶಮಾಡುತ್ತದೆ
ಒಮ್ಮೆ ಕೋಶಾಧೀಶನು ಬುದ್ಧರಿಗೆ ವಂದಿಸಲು
ಬಂದನು. ಆತ ವಂದಿಸಿ "ಭಗವಾನ್ ನಾನು ಬರಲು ತಡವಾಯಿತು. ಏಕೆಂದರೆ ಒಬ್ಬ ಶ್ರೀಮಂತನು
ಸತ್ತುಹೋದನು ಮತ್ತು ಆತನಿಗೆ ಯಾರೂ ಮಕ್ಕಳಿಲ್ಲದ ಕಾರಣ ಆತನ ಸ್ವತ್ತೆಲ್ಲವೂ ರಾಜ್ಯಕ್ಕೆ ಸೇರಿತು.
ಆತನು ಬದುಕಿರುವತನಕ ಯಾರಿಗೂ ದಾನ ಮಾಡಲಿಲ್ಲ. ಹಾಗು ಸ್ವತಃ ಅನುಭವಿಸಲೂ ಇಲ್ಲ. ಇದಕ್ಕೆ ತಾವೇ
ಕಾರಣ ತಿಳಿಸಬೇಕು" ಎಂದು ಕೇಳಿಕೊಂಡನು.
ಆಗ ಭಗವಾನರು ಆತನ ಪೂರ್ವ ಜನ್ಮದ ವೃತ್ತಾಂತ
ತಿಳಿಸಿದರು. ಆ ಹಿಂದಿನ ಜನ್ಮವೊಂದರಲ್ಲಿಯೂ ಶ್ರೀಮಂತನಾಗಿದ್ದನು. ಒಮ್ಮೆ ಆ ಶ್ರೀಮಂತನ ಮನೆಗೆ
ಪಚ್ಚೇಕಬುದ್ಧರು ಬಂದಿದ್ದರು. ಆಗ ಆತನು ತನ್ನ ಪತ್ನಿಗೆ ಆಹಾರ ನೀಡಲು ಹೇಳಿದನು. ಆಕೆಗೂ
ಆಶ್ಚರ್ಯವಾಯಿತು. ಏಕೆಂದರೆ ಅವಳ ಪತಿಯು ಈ ರೀತಿ ಹೇಳಿದ್ದೇ ಆಕೆ ಕಂಡಿರಲಿಲ್ಲ. ಆಕೆ ತಕ್ಷಣ
ಪಚ್ಚೇಕ ಬುದ್ಧರಿಗೆ ಆಹಾರ ನೀಡಿದಳು. ಅವರು ಆಹಾರ ತೆಗೆದುಕೊಂಡು ಹೋಗುತ್ತಿರುವಾಗ ಶ್ರೀಮಂತನು ಈ
ರೀತಿ ಯೋಚಿಸಿದನು: "ಓಹ್ ಈ ಭಿಕ್ಷುವು ಇದನ್ನು ತಿಂದು ಮಲಗಬಹುದು. ಇದರ ಬದಲು ಇದನ್ನು
ಸೇವಕರು ತಿಂದಿದ್ದರೆ ಸ್ವಲ್ಪ ಕೆಲಸ ನಡೆಸುತ್ತಿದ್ದರು" ಎಂದು ದಾನ ನೀಡಿ
ಪಶ್ಚಾತ್ತಾಪಟ್ಟನು.
"ಹೀಗೆ ಆತನು ಪಚ್ಚೇಕಬುದ್ಧರಿಗೆ ದಾನ
ನೀಡಿದ್ದರಿಂದಾಗಿ ಅತನು ಈ ಜನ್ಮದಲ್ಲಿ ಶ್ರೀಮಂತನಾದನು. ಆದರೆ ನೀಡಿ
ಪಶ್ಚಾತ್ತಾಪಪಟ್ಟಿದ್ದರಿಂದಾಗಿ ಆತನು ಯಾವ ಸುಖವನ್ನೂ ಈ ಜನ್ಮದಲ್ಲಿ ಹೊಂದಲು ಸಾಧ್ಯವಾಗಲಿಲ್ಲ.
ಆತ ಹಿಂದಿನ ಅದೇ ಜನ್ಮದಲ್ಲಿ ತನ್ನ ಸೋದರ ಆಸ್ತಿಯನ್ನು
ಕಬಳಿಸಲು ಸೋದರನ ಮಗನನ್ನು ಕೊಂದನು. ಅದರ ಪರಿಣಾಮವಾಗಿ ದೀರ್ಘ ಕಾಲದಲ್ಲಿ ದುಃಖ ಅನುಭವಿಸಿ ಈ
ಜನ್ಮದಲ್ಲಿ ಅದರ ಪರಿಣಾಮವಾಗಿ ಆತನಿಗೆ ಯಾವುದೇ ಮಕ್ಕಳಾಗಲಿಲ್ಲ" ಎಂದು ಭಗವಾನರು ಕೋಶಲದ ರಾಜನಿಗೆ ತಿಳಿಸಿದರು. ಆಗ ರಾಜರು
"ಭಗವಾನ್ ಆತ ಬುದ್ಧರು ಉದಯಿಸಿ ಇಂತಹ ಕಾಲದಲ್ಲೂ ಯಾವುದೇ ದಾನ ನೀಡದೆ ಸುವರ್ಣಮಯ ಅವಕಾಶ
ಕಳೆದುಕೊಂಡನು" ಎಂದರು. ಆಗ ಭಗವಾನರು ಈ ಮೇಲಿನ ಗಾಥೆ ಹೇಳಿದರು.
No comments:
Post a Comment