Monday, 7 September 2015

dhammapada/tanhavagga/24.7/passionatemonk

ಅಶುಭ ಧ್ಯಾನಿಯೇ ಮಾರಬಂಧನವ ಕತ್ತರಿಸುವನು
"ಯಾರ ಮನಸ್ಸು ಉದ್ವಿಗ್ನವಾಗಿ ಸಂಶಯಗಳ
ತರ್ಕದಲ್ಲಿ ಸಿಲುಕಿದೆಯೋ, ಯಾರು ರಾಗಾಸಕ್ತನೋ,
ಯಾರು (ಶರೀರವನ್ನು) ಶುಭವೆಂದು (ಸುಂದರವೆಂದು)
ಸ್ಮೃತಿಸುತ್ತಿರುವನೋ, ಅಂತಹವನಲ್ಲಿ ತೃಷ್ಣೆಯು ವಧರ್ಿಸುತ್ತಲೇ ಇರುವುದು
ಆತನು ತನ್ನ ಬಂಧನಗಳನ್ನು ಬಲಿಷ್ಠಗೊಳಿಸುತ್ತಿರುವನು."               (349)

"ಯಾರು ಸಂಶಯಗಳನ್ನು ಪರಿಹರಿಸುವತ್ತಲೇ ಆನಂದಿಸುವನೋ
ಅಶುಭ ಧ್ಯಾನ (ಶರೀರವು ಅಸಹ್ಯಕರ, ಕುರೂಪ)ದಲ್ಲೇ ಸದಾ ಸ್ಮೃತನೋ
ಅಂತಹವನೇ ತೃಷ್ಣೆಯನ್ನು ಅಂತ್ಯಗೊಳಿಸುತ್ತಾನೆ,
ಅಂತಹವನೇ ಮಾರಬಂಧನಗಳನ್ನು ಕತ್ತರಿಸಿಹಾಕುತ್ತಾನೆ."             (350)
ಗಾಥ ಪ್ರಸಂಗ 24:7
ಯುವತಿಗೆ ಆಕಷರ್ಿತನಾಗಿದ್ದ ಭಿಕ್ಷು

            ಒಮ್ಮೆ ಭಿಕ್ಷುವೊಬ್ಬನು ದಾರಿಯಲ್ಲಿ ಬಿದ್ದಿರುವ ಗಂಜಿಯ ಅನುಮತಿ ಪತ್ರವನ್ನು ತೆಗೆದುಕೊಂಡು ಸಭಾಂಗಣಕ್ಕೆ ಹೋದನು. ಆದರೆ ಅಲ್ಲಿ ನೀರು ಕಾಣದೆ, ನೀರಿಗಾಗಿ ಒಂದು ಮನೆಗೆ ಬಂದನು. ಆ ಮನೆಯಲ್ಲಿದ್ದ ಯುವತಿಯು ಆ ಭಿಕ್ಷುವನ್ನು ಕಂಡೊಡನೆಯೇ ಆಕೆಯಲ್ಲಿ ಪ್ರೇಮವು ಉಕ್ಕಿತು. ಆಕೆಯು ಭಿಕ್ಷುವಿಗೆ ಹೀಗೆ ಹೇಳಿದಳು: "ನಿಮಗೆ ನೀರು ಬೇಕಾದಾಗಲೆಲ್ಲಾ ದಯವಿಟ್ಟು ಇಲ್ಲೇ ಬನ್ನಿ, ಬೇರೆಡೆ ಹೋಗಬೇಡಿ."
            ಅನಂತರ ಆ ಭಿಕ್ಷುವಿಗೆ ನೀರು ದೊರಕದಿದ್ದಾಗ, ಅಲ್ಲಿಯೇ ಹೋಗುತ್ತಿದ್ದನು ಮತ್ತು ಆಕೆಯು ಆತನ ಪಿಂಡಪಾತ್ರೆ ತೆಗೆದುಕೊಂಡು, ಕುಡಿಯಲು ನೀರು ತುಂಬಿಸಿ ನೀಡುತ್ತಿದ್ದಳು. ಕೆಲಕಾಲದ ನಂತರ ಆಕೆಯು ಗಂಜಿಯು ನೀಡತೊಡಗಿದಳು. ಒಂದುದಿನ ಆಕೆಯು ಆ ಭಿಕ್ಷುವಿಗಾಗಿ ಪೀಠವನ್ನು ಹಾಕಿ ಆಹಾರವನ್ನು ಬಡಿಸಿದಳು ಮತ್ತು ಆತನ ಹತ್ತಿರದಲ್ಲಿ ಕುಳಿತು ಮಾತನಾಡಿಸಿದಳು: "ಈ ಮನೆಯು ನಿಜಕ್ಕೂ ಏಕಾಂತವಾಗಿದೆ, ನಿಮ್ಮನ್ನು ಪ್ರಯಾಣಿಕರಂತೆಯೇ ನಾನು ಕಾಣಬಯಸುವುದಿಲ್ಲ". ಆಕೆಯ ಮಾತಿನಿಂದಾಗಿ ಆ ಭಿಕ್ಷುವು ಉದ್ವಿಗ್ನನಾಗಿ ಭಿಕ್ಷು ಜೀವನದಲ್ಲಿ ಅಸಂತೃಪ್ತನಾದನು.
            ಭಿಕ್ಷುವು ಕೃಶನಾಗಿ, ಕಳಾಹೀನನಾಗಿ, ಬಿಳುಚಿಕೊಂಡಿರುವುದನ್ನು ಕಂಡು ಇತರೆ ಭಿಕ್ಷುಗಳು ಹೀಗೆ ಕೇಳಿದರು: "ಸೋದರ, ಏತಕ್ಕಾಗಿ ಹೀಗೆ ಪಾಂಡುರೋಗ ಪೀಡಿತನಂತೆ ಆಗಿರುವೆ?"
            "ನಾನು ಭಿಕ್ಷು ಜೀವನದಿಂದ ಅಸಂತೃಪ್ತನಾಗಿರುವೆನು."
            ಅದನ್ನು ಕೇಳಿದ ಭಿಕ್ಷುಗಳು ಆತನನ್ನು ಆತನ ಶಿಕ್ಷಕ ಹಾಗು ಗುರುವಿನ ಬಳಿಗೆ ಕರೆದೊಯ್ದರು. ಅವರು ಆತನನ್ನು ನೇರವಾಗಿ ಭಗವಾನರ ಬಳಿಗೆ ಕರೆದೊಯ್ದರು. ಆಗ ಭಗವಾನರು ಆತನಿಗೆ ಹೀಗೆ ಕೇಳಿದರು: "ಭಿಕ್ಷು, ಈ ಹೇಳಿಕೆ ನಿಜವೇ? ನೀನು ನಿಜಕ್ಕೂ ಅಸಂತೃಪ್ತನಾಗಿರುವೆಯಾ?"
            "ಹೌದು, ಇದು ನಿಜವೇ ಆಗಿದೆ."
            "ಭಿಕ್ಷುವೇ, ಲೋಕದಲ್ಲಿರುವ ದೋಷವ ಕಂಡು ಬುದ್ಧರಂತಹ ಶಾಸನದಲ್ಲಿದ್ದೂ ಸಹಾ ಏತಕ್ಕಾಗಿ ಹೀಗಾದೆ?" ಸೋತಪನ್ನನಾದೆನು ಅಥವಾ ಸಕದಾಗಾಮಿಯಾಗಿರುವೆನು ಎಂದು ಗುರಿ ತಲುಪಿದ ಸಾಧಕರಂತೆ ಆಗಿ ನುಡಿಯುವಂತಹ ಮಾತುಗಳಿಗೆ ಬದಲಾಗಿ ನಾನು ಅಸಂತೃಪ್ತನಾಗಿರುವೆನು ಎಂದು ಹೇಳುತ್ತಿರುವೆಯಲ್ಲಾ? ಏತಕ್ಕಾಗಿ ಅಸಂತೃಪ್ತನಾಗಿರುವೆ?"
            ಆಗ ಭಿಕ್ಷುವು "ಒಬ್ಬ ಸ್ತ್ರೀಯ ಮಾತು ಮತ್ತು ಚಯರ್ೆಯಿಂದ ಹೀಗಾಗಿರುವೆನು" ಎಂದನು.
            "ಭಿಕ್ಷುವೇ, ಆಕೆ ಅಂತಹ ಮಾತುಗಳನ್ನು ಆಡಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಆಕೆ ತನ್ನ ಹಿಂದಿನ ಜನ್ಮದಲ್ಲೂ ಧನುಗ್ರಹ ಪಂಡಿತನನ್ನು ಪರಿತ್ಯಜಿಸಿದ್ದಳು. ಆಗ ಆತನು ಧನುವರ್ಿದ್ಯೆಯಲ್ಲಿ ಇಡೀ ಭಾರತಕ್ಕೆ ಅಗ್ರನಾಗಿದ್ದನು. ಆದರೆ ಈ ಸ್ತ್ರೀಯು ಆಗ ಆತನ ಪತ್ನಿಯಾಗಿದ್ದರೂ ಸಹಾ ಡಕಾಯಿತನ ಸೌಂದರ್ಯಕ್ಕೆ ಮಾರುಹೋಗಿ ಪತಿಯನ್ನೇ ಕೊಲ್ಲಿಸಿದಳು" ಎಂದರು.
            ಆಗ ಭಿಕ್ಷುಗಳು "ಭಗವಾನ್, ಆ ಘಟನೆಯನ್ನು ಸ್ವಲ್ಪ ವಿವರವಾಗಿ ತಿಳಿಸುವಂತಾಗಲಿ" ಎಂದರು. ಆಗ ಭಗವಾನರು ಆ ಪ್ರಸಂಗವನ್ನು ಹೀಗೆ ವಿಸ್ತಾರವಾಗಿ ತಿಳಿಸಿದರು.
            ಬಹಳ ಕಾಲದ ಹಿಂದೆ ಚುಲ್ಲ ಧನುಗ್ರಹನೆಂಬ ಪಂಡಿತನಿದ್ದನು. ಆತನು ತಕ್ಷಶಿಲೆಯ ಖ್ಯಾತ ಗುರುವಿನ ಬಳಿಯಲ್ಲಿ ವಿದ್ಯೆಗಳನ್ನು ಕಲಿತಿದ್ದನು. ಆತನು ವಿದ್ಯೆಯಲ್ಲಿ ಸಾಗುತ್ತಿರುವ ಪ್ರಗತಿ ಕಂಡು, ಆತನ ಗುರುವು ಆತನಿಗೆ ತನ್ನ ಮಗಳಿಗೆ ನೀಡಿ ವಿವಾಹ ಮಾಡಿದನು. ನಂತರ ಧನುಗ್ಗಹ ಪಂಡಿತನು ಪತ್ನಿಯೊಂದಿಗೆ ಕಾಡಿಗೆ ಹೊರಟನು. ಕಾಡಿನಲ್ಲಿ ಪ್ರವೇಶಿಸುತ್ತಿರುವಾಗ ಡಕಾಯಿತರ ಆಕ್ರಮಣವಾದಾಗ ಆತನು ತನ್ನಲ್ಲಿದ್ದಂತಹ 50 ಬಾಣಗಳಿಂದ 50 ಡಕಾಯಿತರನ್ನು ಕೊಂದು ಹಾಕಿದನು. ಆದರೆ ಆತನು ಬಾಣಗಳು ಮುಗಿದು ಹೋದಾಗ, ಡಕಾಯಿತರ ನಾಯಕನೊಂದಿಗೆ ಮುಷ್ಠಿಯುದ್ಧ, ಮಲ್ಲಯುದ್ಧಗಳನ್ನು ಆರಂಭಿಸಿದನು. ನಂತರ ಆ ಡಕಾಯಿತ ನಾಯಕನನ್ನು ನೆಲಕ್ಕೆ ಅದುಕಿಕೊಂಡು, ಪತ್ನಿಗೆ ಅಲ್ಲಿಗೆ ಬಿದ್ದಿದ್ದಂತಹ ಖಡ್ಗವನ್ನು ನೀಡು ಎಂದು ಕೂಗಿದನು. ಆದರೆ ಆಗಲೇ ಆ ಸ್ತ್ರೀಯು ಆ ಡಕಾಯಿತನಲ್ಲಿ ಅನುರಕ್ತೆಯಾಗಿದ್ದಳು. ಹೀಗಾಗಿ ಆಕೆಯು ಖಡ್ಗದ ಹಿಡಿಯನ್ನು ಡಕಾಯಿತನಿಗೆ ನೀಡಿದಳು. ಇದೇ ಅವಕಾಶ ಬಳಸಿಕೊಂಡ ಡಕಾಯಿತನು ಧನುಗ್ಗಹ ಪಂಡಿತನನ್ನು ಸೀಳಿಹಾಕಿದನು. ನಂತರ ಆಕೆಯನ್ನು ತನ್ನೊಂದಿಗೆ ಕರೆದೊಯ್ದನು.

            ದಾರಿಯಲ್ಲಿ ಹೋಗುವಾಗ ಆತನು ತನ್ನಲ್ಲೇ ಹೀಗೆ ತರ್ಕ ಮಾಡಿದನು: "ಈ ಸ್ತ್ರೀಯು ಮತ್ತೊಬ್ಬ ಸುಂದರ ಪುರುಷನಿಗೆ ಕಂಡಾಗ, ಈಕೆಯು ಈಗ ತನ್ನ ಗಂಡನನ್ನು ನನ್ನಿಂದ ಕೊಲ್ಲಿಸಿದಂತೆ, ನನ್ನನ್ನು ಸಹಾ ಪರರಿಂದ ಕೊಲ್ಲಿಸುವಳು, ಆದ್ದರಿಂದ ಇಂತಹ ಸ್ತ್ರೀಯನ್ನು ಪಡೆಯುವದರಿಂದ ನನಗೆ ಲಾಭವಿಲ್ಲ, ಬದಲಾಗಿ ನಷ್ಟವೇ ಹೆಚ್ಚು." ನಂತರ ಹರಿಯುತ್ತಿದ್ದ ನದಿಯ ಹತ್ತಿರ ಬಂದು, ಆಕೆಯನ್ನು ಈ ಬದಿಯ ದಡದಲ್ಲಿ ನಿಲ್ಲಿಸಿ, ಆತನು ಆಕೆಯ ಆಭರಣಗಳನ್ನು ತೆಗೆದುಕೊಂಡು ಆತನು ಮಾತ್ರ ದಡವನ್ನು ದಾಟಿ, ಆಕೆಯನ್ನು ಅಲ್ಲಿಯೇ ಬಿಟ್ಟುಬಿಟ್ಟನು. ಆಗ ಆಕೆಯು ಕರೆದೊಯ್ಯುವಂತೆ ಕೂಡಿಕೊಂಡಾಗ, ಆ ಕಳ್ಳರ ನಾಯಕ ಹೀಗೆ ನುಡಿದನು: "ಓ ಸ್ತ್ರೀಯೆ, ನೀನು ಬಹುಕಾಲ ಸ್ನೇಹದಿಂದಿದ್ದ ಗಂಡನನ್ನೇ ಪರಿಚಯವೇ ಇಲ್ಲದ ನನಗಾಗಿ ಕೊಲ್ಲಿಸಿದೆ, ನನಗೂ ಸಹಾ ನೀನು ಇನ್ನೊಬ್ಬನಿಗಾಗಿ ಮುಂದೆ ಕೊಲ್ಲಿಸುವೆ, ಆದ್ದರಿಂದ ನಾನು ನಿನ್ನನ್ನು ತ್ಯಜಿಸುತ್ತಿದ್ದೇನೆ" ಎಂದು ಬಿಟ್ಟು ಹೊರಟನು. ಆಗ ನೀನೇ ಚುಲ್ಲ ಧನುಗ್ಗಹ ಪಂಡಿತನಾಗಿದ್ದೆ. ಆಗ ಈಕೆಯೇ ಆ ಸ್ತ್ರೀಯಾಗಿದ್ದಳು. ಆದ್ದರಿಂದ ಭಿಕ್ಷುವೇ ಸ್ತ್ರೀಯ ಬಗೆಗಿನ ಆಸೆಯನ್ನು ಬುಡಸಮೇತ ಕಿತ್ತು ಎಸೆದುಬಿಡು ಎಂದು ನುಡಿದು ಈ ಮೇಲಿನ ಗಾಥೆಗಳನ್ನು ನುಡಿದರು. ಆಗ ಆ ಭಿಕ್ಷು ಪುನಃ ಧಮ್ಮದಲ್ಲಿ ಪ್ರತಿಷ್ಠಾಪಿತನಾದನು. 

No comments:

Post a Comment