Monday, 7 September 2015

dhammapada/tanhavagga/24.4/strogestbonds

ಅತ್ಯಂತ ಬಲಿಷ್ಠ ಬಂಧನಗಳೆಂದರೆ ಲೌಕಿಕ ಬಂಧನಗಳೇ ಆಗಿವೆ
"ಧೀಮಂತರು ಕಬ್ಬಿಣದ ಅಥವಾ ಮರದ
ಅಥವಾ ಹಗ್ಗಗಳ ಬಂಧನಗಳನ್ನು ಅತ್ಯಂತ ಬಲಯುತವಾದವು
ಎಂದು ಒಪ್ಪುವುದಿಲ್ಲ. ಬದಲಾಗಿ ಅವರು
ರತ್ನ ಆಭರಣಗಳ, ಪುತ್ರರ, ಪತ್ನಿಯ
ಬಯಕೆಗಳನ್ನು ಅತ್ಯಂತ ಬಲಯುತವೆನ್ನುತ್ತಾನೆ."           (345)

"ಈ ಬಂಧನಗಳನ್ನು ಅತ್ಯಂತ ಬಲಯುತವಾದುದು
ಎಂದು ಧೀಮಂತರು ನುಡಿಯುತ್ತಾರೆ, ಏಕೆಂದರೆ ಇವು
ಕೆಳಕ್ಕೆ ಎಸೆಯುವಂತಹುದು, ಸುಲಭವಾಗಿ
ಮಣಿಯುವಂತಿದ್ದರೂ, ಬಿಡಿಸಿಕೊಳ್ಳಲು ಅತ್ಯಂತ
ಕಷ್ಟಕರವಾದುದ್ದಾಗಿದೆ. ಆದರೆ ಇದನ್ನು ಸಹಾ
ಧೀಮಂತರು ಕತ್ತರಿಸಿಹಾಕುತ್ತಾರೆ, ಯಾವುದೇ
ಲಾಲಸೆಯಿಲ್ಲದೆ, ಇಂದ್ರೀಯಸುಖಗಳ ಈ
ಲೋಕವನ್ನು ವಜರ್ಿಸುತ್ತಾರೆ." (346)

ಗಾಥ ಪ್ರಸಂಗ 24:4
ಅತ್ಯಂತ ಬಲಿಷ್ಠವಾದ ಬಂಧನಗಳಾವುವು ?

            ಆ ಸಮಯದಲ್ಲಿ ಅಪರಾಧಿಗಳಾದ ಕನ್ನಕೋರರು, ದರೋಡೆಕೋರರು, ಕೊಲೆಗಾರರನ್ನು ರಾಜನ ಮುಂದೆ ನಿಲ್ಲಿಸಿದರು. ಆಗ ರಾಜನು ಅವರಿಗೆ, "ಸರಪಳಿಗಳಿಂದ, ಹಗ್ಗಗಳಿಂದ ಮತ್ತು ಮರದ ಅಚ್ಚುಗಳ ಬಂಧನದಿಂದ ಬಂಧಿಸಿರಿ" ಎಂದು ಆಜ್ಞಾಪಿಸಿದನು.
            ಅದೇ ಸಮಯದಲ್ಲಿ 30 ಗ್ರಾಮಾಂತರ ವಾಸಿ ಭಿಕ್ಷುಗಳು, ಭಗವಾನರನ್ನು ಕಾಣಲು ಬಂದಿದ್ದರು. ಭಗವಾನರನ್ನು ದಶರ್ಿಸಿ, ವಂದಿಸಿ ಅಲ್ಲಿಂದ ಹೊರಟರು. ಮರುದಿನ ಅವರು ಶ್ರಾವಸ್ತಿಗೆ ಆಹಾರಕ್ಕಾಗಿ ಹೊರಟಿರುವಾಗ, ಅವರು ಕಾರಾಗೃಹದ ಸಮೀಪ ಬಂದರು, ಹಾಗು ಆ ಅಪರಾಧಿಗಳನ್ನೆಲ್ಲಾ ಕಂಡರು. ನಂತರ ಅವರು ಊಟವಾದ ಮೇಲೆ ಪುನಃ ಭಗವಾನರನ್ನು ಭೇಟಿ ಮಾಡಿ ಹೀಗೆ ಹೇಳಿದರು: "ಭಗವಾನ್, ಇಂದು ನಾವು ಆಹಾರಕ್ಕಾಗಿ ಹೊರಟಿದ್ದಾಗ ನಾವು ಬಹಳಷ್ಟು ಅಪರಾಧಿಗಳನ್ನು ಕಾರಾಗೃಹದಲ್ಲಿ ಕಂಡೆವು. ಅವರಿಗೆಲ್ಲಾ ಸಂಯೋಜನೆಗಳಿಂದ ಸರಪಳಿಗಳಿಂದ ಮತ್ತು ಹಗ್ಗಗಳಿಂದ ಬಂಧಿಸಲಾಗಿತ್ತು. ಅವರೆಲ್ಲಾ ತುಂಬಾ ನೋವು ಅನುಭವಿಸುತ್ತಿದ್ದರು. ಖಂಡಿತವಾಗಿಯೂ ಅವರು ಇವನ್ನು ಮುರಿದು ಅಥವಾ ಕತ್ತರಿಸಿ ಪರಾರಿಯಾಗಲಾರರು, ಭಗವಾನ್, ಇದಕ್ಕಿಂತ ಬಲಿಷ್ಠವಾದ ಬಂಧನಗಳು ಉಂಟೆ?" ಎಂದು ಕೇಳಿದರು.
            ಆಗ ಭಗವಾನರು ಹೀಗೆ ಉತ್ತರಿಸಿದರು: "ಭಿಕ್ಷುಗಳೇ, ಇಂದ್ರಿಯ ಭಾವಾವೇಷಗಳಿಗೆ ಹೋಲಿಸಿದರೆ, ಇದ್ಯಾವ ಬಂಧನಗಳು? ಭಿಕ್ಷುಗಳೇ, ತೃಷ್ಣೆಗಳೇ ಬಲಯುತ ಬಂಧನಗಳಾಗಿವೆ. ಐಶ್ವರ್ಯಕ್ಕಾಗಿ, ಭೂಮಿಗಾಗಿ, ಬೆಳೆಗಾಗಿ, ಪುತ್ರ ಪುತ್ರಿಯರಿಗಾಗಿ ಮತ್ತು ಪತ್ನಿಯರಿಗಾಗಿ ಇರುವ ಬಯಕೆಗಳ ಬಂಧನಗಳು ನೀವು ನೋಡಿದ ಬಂಧನಕ್ಕಿಂತ ನೂರುಪಟ್ಟು, ಸಾವಿರಪಟ್ಟು ಬಲಿಷ್ಠವಾಗಿವೆ. ಆದರೆ ಇವೆಷ್ಟೇ ಬಲಿಷ್ಠವಾಗಿದ್ದರೂ ಪ್ರಜ್ಞಾಶಾಲಿಗಳು ಇದನ್ನು ಮುರಿದು ಲೋಕಪರಿತ್ಯಾಗ ಮಾಡಿದಂತಹ ಉದಾಹರಣೆಗಳು ಇವೆ" ಎಂದು ನುಡಿದು ತಮ್ಮ ಹಿಂದಿನ ಜನ್ಮವೊಂದರಲ್ಲಿ ನಡೆದ ವಿಷಯ ತಿಳಿಸಲು ಆರಂಭಿಸಿದರು.

*  *  *
            ಬಹಳ ಕಾಲದ ಹಿಂದೆ ಬ್ರಹ್ಮದತ್ತನು ಕಾಶಿಯನ್ನು ಆಳುತ್ತಿರುವಾಗ, ಬೋಧಿಸತ್ವರು ಬಡ ಗೃಹಸ್ಥರಾಗಿದ್ದರು. ಅವರು ವಯಸ್ಸಿಗೆ ಬಂದಿರುವಾಗ ಅವರ ತಂದೆಯವರು ತೀರಿಹೋದರು. ಹೀಗಾಗಿ ಅವರು ತಮ್ಮ ತಾಯಿಯನ್ನು ಸಲಹಲು ಹಾಗು ಮನೆ ಬಾಡಿಗೆ ನೀಡಲು ಶ್ರಮಿಸಲಾರಂಭಿಸಿದರು. ಅವರ ನಿರಂತರ ವಿರೋಧದ ನಡುವೆಯು ಅವರ ತಾಯಿಯು ಗೌರವಾನ್ವಿತ ಕುಟುಂಬದ ಯುವತಿಯೊಂದಿಗೆ ವಿವಾಹವನ್ನು ಮಾಡಿದರು. ಕೆಲತಿಂಗಳ ನಂತರ ಅವರ ತಾಯಿಯು ಸಹಾ ತೀರಿಹೋದರು. ಆಗ ಬೋಧಿಸತ್ವರ ಪತ್ನಿಯು ಗಭರ್ಿಣಿಯಾಗಿದ್ದಳು, ಆದರೆ ಅದನ್ನು ಅರಿಯದೆ ಬೋಧಿಸತ್ವರು ಪತ್ನಿಗೆ ಹೀಗೆ ಹೇಳಿದರು: "ಪ್ರೀತಿಯ ಪತ್ನಿಯೇ ನಿನ್ನ ಜೀವನವನ್ನು ಹೇಗಾದರೂ ನಡೆಸಿಕೊಂಡು ಹೋಗು, ನಾನು ಸಮಣನಾಗುವುದಕ್ಕೆ ತೀಮರ್ಾನಿಸಿದ್ದೇನೆ".
            ಅದನ್ನು ಕೇಳಿದ ಪತ್ನಿಯು ಹೀಗೆ ನುಡಿದಳು: "ಓಹ್ ನಾನು ಗಭರ್ಿಣಿಯಾಗಿದ್ದೇನೆ, ನಾನು ಮಗುವಿಗೆ ಜನ್ಮ ನೀಡುವವರೆವಿಗಾದರೂ ನನ್ನ ಜೊತೆ ಇರುವಂತಾಗಿ."
            "ಸರಿ" ಎಂದು ಬೋಧಿಸತ್ವರು ವಾಗ್ದಾನವಿತ್ತರು.
            ಯಾವಾಗ ಆಕೆಯು ಮಗುವಿಗೆ ಜನ್ಮ ನೀಡಿದಳೊ, ಆಗ ಅವರು ಪತ್ನಿಗೆ ಹೀಗೆ ನುಡಿದರು: "ಪ್ರೀತಿಯ ಪತ್ನಿಯೇ, ನಾನು ಈಗಲೇ ಭಿಕ್ಷುವಾಗಿ ಜೀವಿಸುವೆನು." ಆಗ ಅವರ ಪತ್ನಿಯು ಹೀಗೆ ನುಡಿದಳು: "ಓಹ್, ನಿಮ್ಮ ಮಗ ನನ್ನ ಹಾಲು ಬಿಡುವವರೆಗಾದರೂ ಇರಿ." "ಸರಿ" ಎಂದು ಒಪ್ಪಿದರು. ಆದರೆ ಆಗಾಗಲೇ ಅವರ ಪತ್ನಿಯು ಪುನಃ ಗರ್ಭಧರಿಸಿಬಿಟ್ಟಿದ್ದಳು.
            ಆಗ ಬೋಧಿಸತ್ವರು ಹೀಗೆ ಚಿಂತಿಸಿದರು: "ನಾನು ಆಕೆಯ ಬಯಕೆಯಂತೆ ಮಾಡುವುದಾದರೆ, ನಾನು ಎಂದಿಗೂ ಗೃಹತ್ಯಾಗ ಮಾಡಲಾರೆನು, ಆದ್ದರಿಂದ ಏನನ್ನೂ ಹೇಳದೆಯೇ ನಾನು ಅಭಿನಿಷ್ಕ್ರಮಣ ಮಾಡಬೇಕು" ಎಂದು ತೀಮರ್ಾನಿಸಿ ರಾತ್ರೋರಾತ್ರಿಯೇ ಯಾರಿಗೂ ಹೇಳದೆಯೇ ಗೃಹಸ್ಥ ಜೀವನವನ್ನೇ ತ್ಯಾಗಮಾಡಿದರು.
            ನಗರಭಟರು ಅವರನ್ನು ಹಿಡಿದಾಗ "ಸ್ವಾಮಿ, ನನಗೆ ತಾಯಿಯಿದ್ದಾಳೆ, ಆಕೆಗೆ ಸಲಹಬೇಕಾಗಿದೆ, ನನ್ನನ್ನು ಬಿಟ್ಟುಬಿಡಿ" ಎಂದು ಹೇಳಿ ತಪ್ಪಿಸಿಕೊಂಡು ಹಿಮಾಲಯ ಪ್ರಾಂತ್ಯಕ್ಕೆ ಹೋದರು. ಅಲ್ಲಿ ದೃಢವಾದ ಧ್ಯಾನಸಾಧನೆ ಮಾಡಿ ಅಷ್ಟಸಮಾಪತ್ತಿ ಮತ್ತು ಪಂಚ ಅಭಿಜ್ಞ ಗಳಿಸಿದರು. ಏಕಾಂತದಲ್ಲಿದ್ದಾಗ ಈ ರೀತಿಯ ಸ್ವಾಗತ ಮಾಡಿಕೊಳ್ಳುತ್ತಿದ್ದರು. "ನಾನು ಕತ್ತರಿಸಲು ಅಸಾಧ್ಯವಾದ ಬಂಧನವನ್ನು ಕತ್ತರಿಸಿರುವೆನು. ಅದೇ ಕ್ಲೇಷಗಳ ಬಂಧನ, ಪತ್ನಿಪುತ್ರರ ಬಂಧನ" ಹೀಗೆ ಅವರು ಉದಾನ ಹಾಡುತ್ತಿದ್ದರು

No comments:

Post a Comment