Monday, 7 September 2015

dhammapada/tanhavagga/24.1/kapila

24. ತನ್ಹಾ ವಗ್ಗ
ತೃಷ್ಣೆಯ ಬೇರುಗಳನ್ನು ನಿಮರ್ೂಲಗೊಳಿಸಿ
"ಯಾತ ಮನುಷ್ಯ ಎಚ್ಚರಿಕೆಹೀನತೆಯಿಂದಿರುವನೋ,
ಅಂತಹವನ ತೃಷ್ಣೆಯು ಮಾಲುವಾ ಬಳ್ಳಿಯಂತೆ ವಧರ್ಿಸುವುದು.
ಅಂತಹವನು ವನದಲ್ಲಿರುವ ವಾನರ ಫಲಕ್ಕಾಗಿ
ಮರಗಳನ್ನು ಹಾರುವಂತೆ, ಆತನು ಜನ್ಮದಿಂದ ಜನ್ಮಕ್ಕೆ ಜಿಗಿಯುತ್ತಿರುತ್ತಾನೆ."    (334)

"ಯಾರು ಈ ಲೋಕದಲ್ಲಿ ಪರಮ ನೀಚವಾದ
ಹಾಗು ವಿಷಯುತವಾದ ತೃಷ್ಣೆಯಿಂದ
ಆಕ್ರಮಿತರಾಗಿರುವರೋ, ಅಂತಹವನ ಶೋಕವು
ಮಳೆಯ ನಂತರ ಶೀಘ್ರವಾಗಿ ಬೆಳೆದುಬಿಡುವ
ಬೀರಣ ಹುಲ್ಲಿನಂತೆ ಪ್ರವಧರ್ಿಸುವುದು."    (335)

"ಆದರೆ ಈ ಲೋಕದಲ್ಲಿ ಯಾರು ಪರಮನಿಂದನಿಯವಾದ
ಹಾಗು ವಿಷಯುತವಾದ ಈ ತೃಷ್ಣೆಯನ್ನು ಜಯಿಸಿರುವರೋ
ಅಂತಹವನ ಶೋಕಗಳು ಕಮಲದ ಎಲೆಯ ಮೇಲಿನ
ಬಿಂದುಗಳಂತೆ ಜಾರಿಹೋಗುವವು."              (336)

"ಯಾರೆಲ್ಲಾ ಇಲ್ಲಿ ಸೇರಿರುವಿರೋ, ನಿಮಗೆಲ್ಲರಿಗೂ
ಭದ್ರವಾದ ಕ್ಷೇಮವಿರಲಿ, ಆದ್ದರಿಂದಾಗಿ ನಾನು ನಿಮಗೆ
ನೀಡುವ ಬುದ್ಧಿವಾದವೇನೆಂದರೆ, ಯಾರಿಗೆ
ಸುಗಂಧಮಯ ಉಸಿರಾ ಸುಗಂಧದ ಗಡ್ಡೆಗಳು
ಬೇಕಾಗಿವೆಯೋ ಅವರು ಮೊದಲು ಬೀರಣ
ಹುಲ್ಲಿನ ಬೇರುಗಳನ್ನು ಕಿತ್ತೆಸೆಯಬೇಕು, ಹಾಗೆಯೇ
ನೀವು ತೃಷ್ಣೆಯ ಬೇರುಗಳನ್ನು ನಿಮರ್ೂಲಗೊಳಿಸಿ,
ಹೇಗೆ ಪ್ರವಾಹವು ಜೊಂಡನ್ನು ಅಪ್ಪಳಿಸುವುದೋ
ಹಾಗೇ ನಿಮ್ಮನ್ನು ಮಾರನು ಪುನಃ ಪುನಃ ನಾಶಗೊಳಿಸದಿರಲಿ."        (337)

ಗಾಥ ಪ್ರಸಂಗ 24:1
ಜ್ಞಾನ ಮದದಿಂದ ದುರ್ಗತಿ ಸೇರಿದ ಕಪಿಲ

            ಹಿಂದಿನ ವಿವರ: ಈ ಘಟನೆಯು ಅತ್ಯಂತ ಪ್ರಾಚೀನಕಾಲದ್ದು. ಆಗತಾನೇ ಭಗವಾನ್ ಕಸ್ಸಪ ಬುದ್ಧರು ಪರಿನಿಬ್ಬಾಣ ಪ್ರಾಪ್ತಿಮಾಡಿದ್ದರು. ಆಗ ಅಲ್ಲಿ ಗೌರವಯುತ ಕುಟುಂಬದಿಂದ ಇಬ್ಬರು ಭಿಕ್ಷುಗಳಾದರು. ಹಿರಿಯನ ಹೆಸರು ಸೋಧನ ಮತ್ತು ಕಿರಿಯ ಸೋದರನ ಹೆಸರು ಲೋಹಿತ ಕಪಿಲ. ಅವರನ್ನು ಕಂಡು ಅವರ ತಾಯಿ ಸಾಧಿನಿ ಮತ್ತು ತಂಗಿ ತಾಪನ ಸಹಾ ಭಿಕ್ಷುಣಿಯರಾದರು. ಇಬ್ಬರೂ ಭಿಕ್ಷುಗಳಾದ ಬಳಿಕ ಅವರು ತಮ್ಮ ಕರ್ತವ್ಯಗಳನ್ನು ಬಹುಚೆನ್ನಾಗಿ ಪಾಲಿಸಿದರು. ಒಂದುದಿನ ಇಬ್ಬರೂ ಗಂಭೀರವಾಗಿ ಹೀಗೆ ಚಚರ್ಿಸಿದರು. "ಭಂತೆ, ಧಮ್ಮಪಾಲನೆಯಲ್ಲಿ ಇರುವಂತಹ ಹೊರೆಗಳಾವುವು?
            "ಇಲ್ಲಿ ಕೇವಲ ಎರಡು ಹೊರೆಗಳಿರುತ್ತವೆ, ಜ್ಞಾನ ಗಳಿಕೆಯ ಹೊರೆ ಮತ್ತು ಧ್ಯಾನದ ಹೊರೆ."
            ಆಗ ಹಿರಿಯ ಸೋದರ ಹೀಗೆ ನುಡಿಯುತ್ತಾನೆ: "ಸೋದರ, ನಾನು ಧ್ಯಾನದ ಹೊರೆಯನ್ನು ಪೂರೈಸುತ್ತೇನೆ" ನಂತರ ಆತನು ತನ್ನ ಗುರುವಿನಲ್ಲಿ ಧ್ಯಾನದ ವಿಷಯ ಸ್ವೀಕರಿಸಿ, ಅಡವಿಯಲ್ಲಿ ಪ್ರವೇಶಿಸಿ, ಅಪಾರ ಶ್ರಮವಹಿಸಿ ಧ್ಯಾನಪ್ರಾಪ್ತಿ ಮಾಡಿದನು. ನಂತರ ಹಾಗೆಯೇ ಆತನು ಅರಹಂತತ್ವವನ್ನು ಪ್ರಾಪ್ತಿಮಾಡಿದನು.
            ಕಿರಿಯನಾದ ಲೋಹಿತ ಕಪಿಲನು ಹೀಗೆ ನಿರ್ಧರಿಸುತ್ತಾನೆ, "ನಾನಿನ್ನು ಕಿರಿಯನಾದ ಕಾರಣ, ಧ್ಯಾನದ ಹೊರೆಯನ್ನು ವಯಸ್ಸಾದ ಬಳಿಕ ಪೂರೈಸುವನು. ಈಗ ಜ್ಞಾನದ ಗಳಿಕೆ ಮಾಡುವೆನು". ಹೀಗಾಗಿ ಆತನು ಕೇವಲ ತಿಪಿಟಕವನ್ನು ಅಧ್ಯಯನ ಮಾಡಿ ಅದರಲ್ಲಿ ಅಪಾರ ಪಾಂಡಿತ್ಯ ಗಳಿಸಿದನು. ತನ್ನ ಜ್ಞಾನ ಮತ್ತು ವಾಗ್ಝರಿಯಿಂದಾಗಿ ಆತನು ಅಪಾರ ಸಮೂಹವನ್ನು ಹಾಗೆಯೇ ಅಪಾರ ದಾನ ಸತ್ಕಾರವೆಲ್ಲಾ ಪಡೆದನು. ಇದರಿಂದಾಗಿ ಆತನಲ್ಲಿ "ತಾನೇ ಶ್ರೇಷ್ಠ, ತಾನು ಮಾಡಿದ್ದೆಲ್ಲಾ ಒಳ್ಳೆಯದೇ" ಎಂಬ ಮದವು ಆತನ ನೆತ್ತಿಗೇರಿತು. ಆತನಲ್ಲಿ ಜ್ಞಾನಮದವು ತೀರ ಹೆಚ್ಚಿತು. ಪರಿಣಾಮವಾಗಿ ಆತನು ಪರರ ಒಳ್ಳೆಯ ಸರಿಯಾದ ಹೇಳಿಕೆಯನ್ನು ಸಹಾ ಸುಳ್ಳು ಹೇಳಿಕೆಯನ್ನಾಗಿಸುತ್ತಿದ್ದನು. ಹಾಗೆಯೇ ತಪ್ಪಾಗಿರುವುದನ್ನು ಸಹಾ ಸರಿಯೆಂದೇ ವಾದಿಸುತ್ತಿದ್ದನು. ಮುಗ್ಧತೆಯನ್ನು ಪಾಪವಾಗಿಸಿ, ಪಾಪವನ್ನು ಮುಗ್ಧವನ್ನಾಗಿಸುತ್ತಿದ್ದನು.
         
   ಇದನ್ನು ಕಂಡಂತಹ ಒಳ್ಳೆಯ ಭಿಕ್ಷುಗಳು ಆತನಿಗೆ ಹೀಗೆ ತಿಳಿಹೇಳಿದರು: "ಸೋದರ ಕಪಿಲ, ದಯವಿಟ್ಟು ಹೀಗೆ ನುಡಿಯಬೇಡ". ಅದಕ್ಕೆ ಸಂಬಂಧಿಸಿದಂತೆ ಆತನಿಗೆ ಧಮ್ಮ ವಿನಯಗಳ ಉದಾಹರಣೆಯನ್ನು ನೀಡಿದರು. ಆದರೆ ಜ್ಞಾನ ಮದದಿಂದ ಬೀಗಿದ ಕಪಿಲನು ಅವರಿಗೆ ಹೇಳಿದನು: "ನಿಮಗೇನು ತಿಳಿದಿದೆ, ಖಾಲಿ ತಲೆಗಳೇ" ಎಂದು ಹೇಳಿ ಅವರನ್ನೇ ತರಾಟೆಗೆ ತೆಗೆದುಕೊಂಡನು.
            ಇದರಿಂದ ನೊಂದುಕೊಂಡ ಆ ಭಿಕ್ಷುಗಳು ಆತನ ಹಿರಿಯ ಸೋದರನ ಬಳಿಗೆ ಹೋಗಿ ನಡೆದ ವಿಷಯವೆಲ್ಲಾ ತಿಳಿಸಿದರು. ಆಗ ಆ ಹಿರಿಯ ಸೋದರ ಸೋಧನನು ಕಪಿಲನ ಬಳಿಗೆ ಬಂದು ಹೀಗೆ ಬುದ್ಧಿವಾದ ನುಡಿದನು: "ಸೋದರ ಕಪಿಲ, ನಿನ್ನಂತಹ ಜ್ಞಾನಿಗೆ ಸಮ್ಯಕ್ ಕಮ್ಮವೇ ಜೀವನದ ಆಧಾರವಾಗಿರಬೇಕು. ಧಮ್ಮದ ಬೋಧನವನ್ನೇ ನೀನು ಆಚರಿಸಬೇಕು, ಆದ್ದರಿಂದಾಗಿ ಶೀಲವನ್ನು ತೊರೆಯಬೇಡ, ಈಗ ಮಾಡುತ್ತಿರುವ ರೀತಿಯನ್ನು ಬದಲಿಸಿಕೋ."
            ಆದರೆ ಕಪಿಲನ ಮೇಲೆ ಅದರ ಯಾವ ಪರಿಣಾಮವೂ ಆಗಲಿಲ್ಲ. ಆದರೂ ಸಹಾ ಸೋಧನನು ಮೂರುಬಾರಿ ಸರಿಹಾದಿಗೆ ತರಲು ಪ್ರಯತ್ನಿಸಿ, ಸೋತು ಕೊನೆಗೆ ಹೀಗೆ ನುಡಿದನು: "ಸರಿ ಸೋದರ, ನಿನ್ನ ಕಮ್ಮಗಳಿಗೆ ತಕ್ಕ ಕುಖ್ಯಾತ ಫಲ ಪಡೆಯುವೆ" ಎಂದು ನುಡಿದು ಹೊರಟು ಹೋದರೂ ಅಂದಿನಿಂದ ಆತನ ಬಳಿ ಶೀಲವಂತರು ಪ್ರಾಜ್ಞ ಭಿಕ್ಷುಗಳು ಆತನ ಬಳಿಯಲ್ಲಿ ಸುಳಿಯಲಿಲ್ಲ.
            ಹೀಗಾಗಿ ಆತನಂತೆ, ಆತನ ಶಿಷ್ಯರು ಸಹಾ ದುಶ್ಶೀಲರಾದರು, ಆಷಾಢಭೂತಿ ಗಳಾದರು. ಒಂದುದಿನ ಆತನು ತನ್ನಲ್ಲೇ ಹೀಗೆ ಹೇಳಿಕೊಂಡನು: "ಇಂದು ನಾನು ವಿನಯ ಭವನದಲ್ಲಿ ಪಾತಿಮೋಕ್ಖವನ್ನು ಪಠಿಸುವೆನು". ನಂತರ ಆತನು ಕೈಯಲ್ಲಿ ಬೀಸಣಿಕೆಯನ್ನು ಹಿಡಿದು ಧಮ್ಮಪೀಠದಲ್ಲಿ ಕುಳಿತನು. ನಂತರ ಪಾತಿಮೋಕ್ಖವನ್ನು ಪಠಿಸಿದನು. ನಂತರ ಸಾಮಾನ್ಯವಾಗಿ ಕೇಳುವ ಈ ಪ್ರಶ್ನೆಯನ್ನು ಕೇಳಿದನು. "ಸೋದರರೇ, ಇಲ್ಲಿ ನೆರೆದಿರುವ ಭಿಕ್ಷುಗಳಲ್ಲಿ ತಾವು ಮಾಡಿರುವ ಪಾಪವನ್ನಾಗಲಿ ಅಥವಾ ತಪ್ಪನ್ನಾಗಲಿ ಒಪ್ಪುವವರು ಇಲ್ಲಿರುವಿರಾ?" ಆಗ ಭಿಕ್ಷುಗಳು ಹೀಗೆ ಯೋಚಿಸಿದರು: "ಈತನೇ ಸರಿಯಿಲ್ಲ, ಇನ್ನು ಈತನ ಪ್ರಶ್ನೆಗಳಿಗೆ ಉತ್ತರಿಸುವುದರಿಂದಾಗಲಿ ಅಥವಾ ತಪ್ಪನ್ನು ಒಪ್ಪುವುದರಿಂದಾಗಿ ಪ್ರಯೋಜನವಾದರೂ ಏನಿದೆ?" ಹೀಗಾಗಿ ಅವರೆಲ್ಲಾ ನಿಶ್ಶಬ್ದದಿಂದ ಕೂಡಿದರು. ಆಗ ಅವರ ನಿಶ್ಶಬ್ಧವನ್ನು ಕಂಡು ಕಪಿಲ ಹೀಗೆ ನುಡಿದನು: "ಸೋದರರೇ, ಧರ್ಮವೂ ಇಲ್ಲ, ಅಥವಾ ವಿನಯವೂ ಇಲ್ಲ, ನೀವು ಪಾತಿಮೋಕ್ಖ ಕೇಳಿದರೇನು ಅಥವಾ ಇಲ್ಲದಿದ್ದರೇನು? ಇದರಿಂದಾಗಿ ಅಂತಹ ಯಾವ ವ್ಯತ್ಯಾಸವಿದೆ?" ಎನ್ನುತ್ತಾ ಆತನು ಪೀಠದಿಂದ ಎದ್ದು ಹೊರಟುಹೋದನು. ಹೀಗಾಗಿ ಆತನು ಕಸ್ಸಪ ಬುದ್ಧ ಭಗವಾನರ ಧಮ್ಮವನ್ನು ಕಲುಷಿತಗೊಳಿಸಿದನು, ಅವನತಿಗೆ ಕಾರಣನಾದನು.

            ಪೂಜ್ಯ ಸೋಧನರು ಅದೇ ಜನ್ಮದಲ್ಲೇ ಪರಿನಿಬ್ಬಾಣ ಸಾಧಿಸಿದರು. ಆದರೆ ಕಪಿಲ ಮರಣದ ನಂತರ ಅವೀಚಿ ನರಕದಲ್ಲಿ ಹುಟ್ಟಿದನು. ಆತನನ್ನೇ ಅನುಸರಿಸಿದ ಆತನ ತಾಯಿ ಹಾಗೂ ತಂಗಿಯೂ ಸಹಾ ಅದೇ ಅವೀಚಿ ನರಕದಲ್ಲಿ ಹುಟ್ಟಿದ್ದರು.
            ಅದೇ ಸಮಯದಲ್ಲಿ 500 ಜನರು ಡಕಾಯಿತಿ ನಡೆಸಿ ತಮ್ಮ ಜೀವನೋಪಾಯ ಮಾಡುತ್ತಿದ್ದರು. ಒಂದುದಿನ ಗ್ರಾಮಾಂತರ ಕಡೆಯ ಜನರು ಅವರನ್ನು ಶಿಕ್ಷಿಸಲು ಬೆನ್ನಟ್ಟಿದರು. ಆಗ ಅವರೆಲ್ಲಾ ಅಲ್ಲಿಂದ ಪರಾರಿಯಾಗಿ ಕಾಡಿಗೆ ಪ್ರವೇಶಿಸಿದರು. ಆಗ ಅವರಿಗೆ ಯಾವ ರಕ್ಷಣೆಯೂ ಸಿಗದಂತಾಗಿ, ಕಾಡಿನಲ್ಲಿ ಋಷಿಯೊಬ್ಬನನ್ನು ನೋಡಿದರು. ಆತನಿಗೆ ವಂದಿಸಿ "ನಮಗೆಲ್ಲಾ ರಕ್ಷಕರಾಗಿ" ಎಂದು ಕೇಳಿಕೊಂಡರು. ಆಗ ಪೂಜ್ಯರು ಹೀಗೆ ಹೇಳಿದರು: "ನಿಮಗೆ ನಾನು ರಕ್ಷಕನಾಗಲಾರೆ, ಆದರೆ ನನಗಿಂತಲೂ ಬಲಿಷ್ಠವಾದ ರಕ್ಷಣೆಯನ್ನು ನಿಮಗೆ ತೋರಿಸುವೆ, ಅದೆಂದರೆ ಪಂಚಶೀಲ. ಈ ಶೀಲಕ್ಕೆ ನೀವು ಶರಣುಹೋಗಿರಿ, ಇದಕ್ಕಿಂತ ಶ್ರೇಷ್ಠ ರಕ್ಷಣೆ ನನಗೆ ಕಾಣಲಾಗುತ್ತಿಲ್ಲ, ಹೀಗಾಗಿ ನೀವೆಲ್ಲಾ ಪಂಚಶೀಲ ದೀಕ್ಷೆ ತೆಗೆದುಕೊಳ್ಳಿರಿ. ನಂತರ ಹಾಗೆಯೇ ಅವುಗಳ ಪಾಲನೆ ಮಾಡಿರಿ."
            "ಹಾಗೆಯೇ ಆಗಲಿ ಪೂಜ್ಯರೇ" ಎನ್ನುತ್ತಾ ಅವರು ಪಂಚಶೀಲ ಸ್ವೀಕಾರ ಮಾಡಿದರು. ಆಗ ಋಷಿಯು ಅವರಿಗೆ ಹೀಗೆ ನುಡಿದರು: "ನೋಡಿ, ನೀವೀಗ ಪಂಚಶೀಲಕ್ಕೆ ಶರಣು ಹೋಗಿರುವಿರಿ. ನೀವು ನಿಮ್ಮ ಜೀವದ ಉಳಿವಿಗಾಗಿಯೇ ಆಗಲಿ, ಶೀಲವನ್ನು ಮೀರಬೇಡಿ ಅಥವಾ ಅಂತಹ ಯೋಚನೆಯಲ್ಲಿ ಸಹಾ ಆನಂದಿಸದಿರಿ." "ಹಾಗೆಯೇ ಆಗಲಿ ಭಂತೆ" ಎಂದು ಅವರು ವಚನಬದ್ಧರಾದರು.
          
  ಅದೇ ಸಮಯದಲ್ಲಿ ಗ್ರಾಮಸ್ಥರು ಆ ಡಕಾಯಿತರನ್ನು ಹುಡುಕಿಕೊಂಡು ಅವರಿರುವ ಸ್ಥಳಕ್ಕೆ ಬಂದುಬಿಟ್ಟರು. ಅವರನ್ನೆಲ್ಲಾ ಹಿಡಿದು, ಕೊಲ್ಲುವ ನಿಧರ್ಾರ ಕೈಗೊಂಡರು. ಆಗ ಡಕಾಯಿತರು ಗ್ರಾಮಸ್ಥರಿಗೆ ಹಿಂಸಿಸಿ, ಕೊಂದು ಪರಾರಿಯಾಗಬಹುದಾಗಿತ್ತು. ಆದರೆ ಶೀಲವಂತಿಕೆಯಲ್ಲಿ ದೃಢವಾಗಿದ್ದ ಅವರು ಹಾಗೆ ಮಾಡದೆ, ಕೇವಲ ಶೀಲ ಚಿಂತನೆಯಲ್ಲಿ ಆನಂದಿಸಿದರು. ಆ ಗ್ರಾಮಸ್ಥರು ಅವರನ್ನೆಲ್ಲಾ ಕೊಂದುಹಾಕಿದರು. ತಮ್ಮ ಶೀಲಾಚರಣೆಯಿಂದಾಗಿ ಅವರೆಲ್ಲಾ ದೇವಲೋಕದಲ್ಲಿ ಹುಟ್ಟಿದರು. ಆ ಡಕಾಯಿತರ ನಾಯಕನು, ಈಗ ದೇವಲೋಕದಲ್ಲಿ ಇತರರಿಗಿಂತ ತೇಜಸ್ಸು ಹೊಂದಿದ್ದು, ಅವರಿಗೆ ಈಗಲೂ ನಾಯಕನಾದನು. ಆ ದೇವತೆಗಳಲ್ಲಿ ಕಸ್ಸಪ ಬುದ್ಧರ ಕಾಲದಿಂದ, ನಮ್ಮ ಗೋತಮಬುದ್ಧರ ಕಾಲದವರೆಗೂ ಕೇವಲ ದೇವಲೋಕದಲ್ಲೇ ಇದ್ದರು. ಅಲ್ಲೇ ಮರಣಿಸಿ ಅಲ್ಲೇ ಹುಟ್ಟುತ್ತಿದ್ದರು. ನಂತರ ಅವರೆಲ್ಲರೂ ಬುದ್ಧರ ಕಾಲದಲ್ಲಿ ಶ್ರಾವಸ್ತಿಯ ಮೀನುಗಾರರ ಹಳ್ಳಿಯಲ್ಲಿ ಮೀನುಗಾರರಲ್ಲಿ ಹುಟ್ಟಿದರು.
            ದೇವತೆಗಳ ನಾಯಕನಾಗಿದ್ದಂತಹ ಡಕಾಯಿತ ನಾಯಕ ಈಗಿನ ಜನ್ಮದಲ್ಲಿ ಮೀನುಗಾರರ ನಾಯಕನ ಮನೆಯಲ್ಲಿ ಜನಿಸಿದನು. ಇತರ ದೇವತೆಗಳು ಇತರ ಮೀನುಗಾರರಲ್ಲಿ ಹುಟ್ಟಿದ್ದರು. ಮೀನುಗಾರನ ನಾಯಕನು ಹೀಗೆ ಯೋಚಿಸಿದನು: "ಇಂದು ನನ್ನ ಮಗನು ಹುಟ್ಟಿದ ದಿನದಂದೇ ನನ್ನ ಹಳ್ಳಿಯಲ್ಲಿ ಬೇರ್ಯಾರು ಹುಟ್ಟಿರುವರು?" ಆಗ ಆತನಿಗೆ ಆಶ್ಚರ್ಯ ತರುವ ವಿಷಯ ತಿಳಿಯಿತು. ಆತನ ಹಿಂಬಾಲಕರೆಲ್ಲರಿಗೂ ಮಕ್ಕಳಾಗಿದ್ದವು. ಆಗ ನಾಯಕ ಹೀಗೆ ನಿರ್ಧರಿಸಿದನು "ಇವರೆಲ್ಲಾ ನನ್ನ ಮಗನಿಗೆ ಸಹಚರವಾಗಿರುವರು" ಎಂದು. ಆತನು ಅವರಿಗೆಲ್ಲಾ ಜೊತೆಯಲ್ಲೇ ಬೆಳೆಸಿದನು. ಕಾಲಕ್ರಮೇಣ ಅವರೆಲ್ಲಾ ಹಿರಿಯರಾದರು. ಮೀನುಗಾರನ ನಾಯಕನ ಮಗನು ಈಗಿನ ಜನ್ಮದಲ್ಲೂ ನಾಯಕನಾದನು. ಆತನು ಆಕರ್ಷಕನಾಗಿ, ಕೀತರ್ಿವಂತನಾಗಿದ್ದನು.
            ಕಪಿಲನು ಎರಡು ಬುದ್ಧರ ಕಾಲದ ಅಂತರದಲ್ಲಿ ಅವಿಚಿ ನರಕದಲ್ಲೇ ಇದ್ದನು. ನಂತರ ಅಲ್ಲಿ ಸತ್ತು, ಅಚಿರಾವತಿ ನದಿಯಲ್ಲಿ ಮೀನಾಗಿ ಹುಟ್ಟಿದ್ದನು. ತನ್ನ ಹಿಂದಿನ ಜನ್ಮದ ಪುಣ್ಯದಿಂದಾಗಿ ಅದರ ಚರ್ಮವು ಹೊಂಬಣ್ಣದಿಂದ ಕೂಡಿದ್ದು, ಅತಿ ತೇಜಸ್ಸಿನಿಂದ ಸುಂದರವಾಗಿ ಕಾಣುತ್ತಿತ್ತು. ಆದರೆ ತನ್ನ ಪಾಪಫಲದಿಂದಾಗಿ ತನ್ನ ಬಾಯಿಯಲ್ಲಿ ಅತ್ಯಂತ ಹೀನವಾದ ದುವರ್ಾಸನೆ ಹೊಂದಿತ್ತು.
ಈಗಿನ ಗಾಥಾ ಪ್ರಸಂಗದ ವಿವರ:
            ಒಂದುದಿನ ಎಂದಿನಂತೆ ಮೀನು ಹಿಡಿಯಲು ಈ ಎಲ್ಲಾ ಯುವಕರು ನದಿಗೆ ಹೊರಟರು, ಬಲೆಯನ್ನು ಬೀಸಿದರು. ಅವರಿಗೆಲ್ಲಾ ಆಶ್ಚರ್ಯವಾಯಿತು. ಏಕೆಂದರೆ ಬಲೆಯಲ್ಲಿ ಅದ್ಭುತವಾದ ಸುವರ್ಣ ವರ್ಣದ ಮೀನೊಂದು ದೊರೆತಿತ್ತು. ಆಗ ಮೀನುಗಾರರ ನಾಯಕ ಹೀಗೆ ನಿರ್ಧರಿಸಿದನು: "ಇಂದು ಮೊದಲಬಾರಿಗೆ ನಮ್ಮ ಮಕ್ಕಳು ಚಿನ್ನದ ಮೀನನ್ನು ಹಿಡಿದಿದ್ದಾರೆ, ಇದನ್ನು ರಾಜನಿಗೆ ನೀಡಿದರೆ ನಮಗೆ ಅಪಾರವಾಗಿ ಹಣ ಸಿಗುವುದು". ಹೀಗಾಗಿ ಅವರೆಲ್ಲಾ ರಾಜನ ಬಳಿಗೆ ದೋಣಿಯಲ್ಲಿ ಮೀನನ್ನು ಹೊತ್ತುಕೊಂಡು ಬಂದರು. "ಏನಿದು?" ಎಂದು ರಾಜನು ಪ್ರಶ್ನಿಸಿದನು.
            "ಮೀನು ಮಹಾರಾಜ".
            ಆಗ ಅದನ್ನು ನೋಡಿದ ಮಹಾರಾಜನು ತನ್ನಲ್ಲೇ ಹೀಗೆ ಯೋಚಿಸಿದನು: "ಬುದ್ಧ ಭಗವಾನರು ಮಾತ್ರವೇ ಈ ಮೀನು ಏತಕ್ಕಾಗಿ ಸುವರ್ಣ ಬಣ್ಣವನ್ನು ಹೊಂದಿದೆ ಎಂಬುದನ್ನು ತಿಳಿಸುವರು" ಎಂದು. ಹೀಗಾಗಿ ಆತನು ತನ್ನ ಭಟರಿಗೆ, ಅದನ್ನು ಹೊತ್ತಿಸಿಕೊಂಡು ಭಗವಾನರ ಬಳಿಗೆ ಬಂದನು. ಆಗ ಮೀನು ತನ್ನ ಬಾಯಿ ತೆರೆಯಿತು. ಆಗ ಇದರಿಂದಾಗಿ ಇಡೀ ಜೇತವನವೇ ದುರ್ಗಂಧಮಯವಾಯಿತು. ಆಗ ರಾಜನು ಭಗವಾನರಲ್ಲಿ ಹೀಗೆ ಪ್ರಶ್ನಿಸಿದನು. "ಪೂಜ್ಯರೇ, ಈ ಮೀನಿಗೇಕೆ ಸುವರ್ಣ ವರ್ಣ ಬಂದಿದೆ ಮತ್ತು ಏತಕ್ಕಾಗಿ ಇದು ದುರ್ಗಂಧಿತ ಉಸಿರಾಟವಾಡುವುದು?"
            "ಮಹಾರಾಜ, ಕಸ್ಸಪ ಬುದ್ಧರ ಕಾಲದಲ್ಲಿ ಈ ಮೀನು ಕಪಿಲವೆಂಬ ಹೆಸರಿನ ಭಿಕ್ಷುವಾಗಿದ್ದನು. ಹಾಗು ಈತನು ಆಗ ಅತಿ ಪಂಡಿತನಾಗಿದ್ದನು. ಅಪಾರ ಹಿಂಬಾಲಕರು ಈತನಿಗಿದ್ದರು. ಆದರೆ ಈತನು ಲೌಕಿಕ ಲಾಭಾಕಾಂಕ್ಷೆಗಾಗಿ ತನ್ನ ಮಾತನ್ನು ಒಪ್ಪದವನನ್ನು ನಿಂದಿಸಿದನು, ಹಿಯಾಳಿಸಿದನು. ಹೀಗೆಲ್ಲಾ ಕಸ್ಸಪಬುದ್ಧರ ಶಾಸವನ್ನು ಕಲುಷಿತ ಗೊಳಿಸಿದ್ದರಿಂದಾಗಿ ಆತನು ನಂತರ ಅವೀಚಿ ನರಕದಲ್ಲಿ ಹುಟ್ಟಿದ್ದನು. ಅಲ್ಲಿ ಸತ್ತು, ಇಲ್ಲಿ ಈಗ ಮೀನಾಗಿದ್ದಾನೆ, ಆಗಿನ ಭಿಕ್ಷು ಜೀವನದಲ್ಲಿ ಆತನು ಬುದ್ಧರನ್ನು ಪ್ರಶಂಸಿಸಿ, ಅವರ ಧಮ್ಮವನ್ನು ಬಹುಕಾಲ ಬೋಧಿಸಿದ್ದರಿಂದಾಗಿ ಆತನಿಗೆ ಈ ರೀತಿಯ ಚಿನ್ನದ ವರ್ಣವು ದೊರೆತಿದೆ. ಆದರೆ ತನ್ನ ವಾದದ ಗೆಲುವಿಗೆ ಸುಳ್ಳು ಸಮರ್ಥನೆ ಹಾಗು ಭಿಕ್ಷುಗಳಿಗೆ ನಿಂದನೆ, ಪರಿಹಾಸ್ಯ ಮಾಡಿದ್ದಕ್ಕಾಗಿ ಈ ರೀತಿಯ ದುರ್ಗಂಧಪೂರಿತ ಉಸಿರಾಟ ಇವನದ್ದಾಗಿದೆ. ಮಹಾರಾಜ, ಅದನ್ನೇ ಮಾತನಾಡಿಸಿ ನಿಮಗೆ ತಿಳಿಸುವೆ ಇರಿ."
            "ಭಗವಾನ್ ದಯವಿಟ್ಟು ಅದರಿಂದಲೇ ಮಾತನಾಡಿಸಿ."
            ಆಗ ಭಗವಾನರು ಆ ಸ್ವರ್ಣ ಮೀನಿಗೆ ಹೀಗೆ ಪ್ರಶ್ನಿಸಿದರು.
            "ನೀನು ಕಪಿಲನೇ?"
            "ಹೌದು ಭಗವಾನ್, ನಾನು ಕಪಿಲನೇ ಆಗಿರುವೆನು."
            "ಎಲ್ಲಿಂದ ಬಂದಿರುವೆ ?"
            "ಮಹಾ ಅವೀಚಿ ನರಕದಿಂದ ಭಗವಾನ್."
            "ನಿನ್ನ ಅಣ್ಣ ಸೋಧನ ಏನಾಗಿರುವನು?"
            "ಆತನು ಪರಿನಿಬ್ಬಾಣ ಪ್ರಾಪ್ತಿ ಮಾಡಿರುವನು ಭಗವಾನ್."
            "ನಿನ್ನ ತಂಗಿ ತಾಪನಾ ಏನಾಗಿರುವಳು?"
            "ಆಕೆಯು ಸಹಾ ಅದೇ ನರಕದಲ್ಲಿರುವಳು ಭಗವಾನ್."
            "ಇಲ್ಲಿಂದ ಎಲ್ಲಿಗೆ ಹೋಗುವೆ?"
            "ಮತ್ತೆ ಅವೀಚಿ ನರಕಕ್ಕೆ ಭಗವಾನ್" ಎಂದು ಹೇಳುತ್ತಾ ಪಶ್ಚಾತ್ತಾಪದಿಂದ ದೋಣಿಗೆ ತಲೆ ಅಪ್ಪಳಿಸಿ, ಸತ್ತು ಪುನಃ ಅವೀಚಿ ನರಕದಲ್ಲಿ ಜನ್ಮತಾಳಿತು. ಅವನ್ನೆಲ್ಲಾ ಗಮನಿಸಿದಂತಹ ಇಡೀ ಸಮೂಹಕ್ಕೆ ಅತ್ಯಂತ ಆಶ್ಚರ್ಯವಾಯಿತು. ಈ ಅದ್ಭುತವನ್ನು ಕಂಡು ಅವರ ಶರೀರದ ಪ್ರತಿ ರೋಮವು ಎದ್ದುನಿಂತಿತು. ಆಗ ಅವರ ಚಿತ್ತವನ್ನು ಗಮನಿಸಿದ ಭಗವಾನರು ಸುತ್ತ ನಿಪಾತದಲ್ಲಿ ಬರುವಂತಹ ಕಪಿಲ ಸುತ್ತವನ್ನು ಪ್ರವಚಿಸಿದರು.

            "ಧಮ್ಮದ ಜೀವನ, ಪವಿತ್ರತೆಯ ಜೀವನ. ಇದನ್ನೇ ಅವರು ಅತ್ಯುನ್ನತ ರತ್ನವೆಂದು ಕರೆಯುವರು..." ಆ ಸಂದರ್ಭದಲ್ಲಿ ಭಗವಾನರು ಈ ಮೇಲಿನ ಗಾಥೆಗಳನ್ನು ನುಡಿದಿದ್ದರು.

No comments:

Post a Comment