ಶಾಂತ
ಸಮಾಹಿತನೇ ಭಿಕ್ಷು
"ಯಾರು ಕಾಯದ
ಚಟುವಟಿಕೆಗಳಲ್ಲಿ ಶಾಂತನು
ಯಾರು ವಾಚದ
ಚಟುವಟಿಕೆಗಳಲ್ಲಿ ಶಾಂತನು
ಯಾರು ಮನದ
ಚಟುವಟಿಕೆಗಳಲ್ಲಿ ಶಾಂತನಾಗಿ
ಸುಸಮಾಹಿತನಾಗಿರುವನೋ,
ಲೋಕದ ಆಮಿಷಗಳನ್ನು
ವಾಂತಿ ಮಾಡಿರುವನೋ
(ತ್ಯಜಿಸಿರುವನೋ) ಅಂತಹ
ಭಿಕ್ಷುವಿಗೆ ಮಾತ್ರ
ಉಪಶಾಂತನೆಂದು ಕರೆಯುವರು." (378)
ಗಾಥ ಪ್ರಸಂಗ 25:9
ಸರ್ವದರಲ್ಲೂ ಶಾಂತತೆ
ಸಾಧಿಸಿದ ಭಿಕ್ಷು ಶಾಂತಕಾಯ
ಶಾಂತಕಾಯ ಎಂಬ ಹೆಸರಿನ ಭಿಕ್ಷುವು ಇದ್ದನು.
ಆತನ ಹಿಂದಿನ ಜನ್ಮವು ಸಿಂಹದ್ದಾಗಿತ್ತು. ಹೀಗಾಗಿ ಆ ಜನ್ಮದ ಬಹಳಷ್ಟು ಗುಣಗಳು ಈ ಜನ್ಮದಲ್ಲೂ
ಆತನಿಗೆ ಬಂದಿದ್ದವು. ಅವು ಯಾವುವೆಂದರೆ: ಆತನು ಅತಿಅಲ್ಪ ಚಲಿಸುತ್ತಿದ್ದನು. ಆತನ ಚಲನೆಗಳು
ಸಿಂಹದಂತೆಯೇ ಶಾಂತವಾಗಿ ನಿಧಾನವಾಗಿರುತ್ತಿದ್ದವು. ಸ್ಥಿರವಾಗಿರುತ್ತಿದ್ದವು. ಆತನು
ಸರ್ವತ್ರವಾಗಿ ಸದಾ ಶಾಂತನಾಗಿ ಸ್ಮೃತಿವಂತನಾಗಿರುತ್ತಿದ್ದನು. ಎಂದಿಗೂ ತನ್ನ ಬಾಹುಗಳಾಗಲಿ ಅಥವಾ
ಕಾಲುಗಳಾಗಲಿ ಎಂದಿಗೂ ಚಾಚುತ್ತಿರಲಿಲ್ಲ, ಎಂದಿಗೂ ಆಕಳಿಸು ತ್ತಿರಲಿಲ್ಲ. ಸದಾ ಗಂಭೀರವಾಗಿರುತ್ತಿದ್ದನು. ಈ ಜನ್ಮದಲ್ಲೂ ಆತನು
ಸಿಂಹಣಿಯ ಗರ್ಭದಿಂದ ಹುಟ್ಟಿರಬಹುದೇ ಎಂಬ ಭ್ರಮೆಯನ್ನು ಆತನನ್ನು ವೀಕ್ಷಿಸುವವರಿಗೆ
ಉಂಟಾಗುತ್ತಿತ್ತು.
* * *
ಸಿಂಹಿಣಿಯಲ್ಲಿ ಒಂದು ವಿಶೇಷವಿರುತ್ತದೆ.
ಅದೇನೆಂದರೆ ಅದು ಒಮ್ಮೆ ಬೇಟೆಯಾಡಿ ಒಳ್ಳೆಯ ಚಿನ್ನದ ಅಥವಾ ರತ್ನದ ಗುಹೆಯಲ್ಲಿ ಹೋಗಿ ವಿಶ್ರಾಂತಿ
ತೆಗೆದುಕೊಳ್ಳುತ್ತಿತ್ತು. ಏಳು ದಿನವೂ ಸಹಾ ಅದು ಒಂದೇ ಭಂಗಿಯಲ್ಲಿರುತ್ತಿತ್ತು. ಅದು ಮಲಗಿದ
ಸ್ಥಳದ ವಿನಹ ಎಲ್ಲಿಗೂ ಯಾವರೀತಿಯು ಧೂಳು ಸಹಾ ಚದುರುವುದಿಲ್ಲ. ಅದರ ಕಿವಿಯ ಬಳಿಯಾಗಲಿ, ಬಾಲದ ಬಳಿಯಾಗಲಿ, ಕಾಣಿಸಲಾರದು. ಹಾಗೊಂದುವೇಳೆ ಕಂಡಿದ್ದೇ ಆದರೆ ಅದನ್ನು ಆಲಸ್ಯವೆಂದು
ಪರಿಗಣಿಸಿ ಪುನಃ ಏಳು ದಿನಗಳಕಾಲ ನಿಶ್ಚಲವಾಗಿ ಮಲಗುತ್ತಿತ್ತು. ನಂತರ ಎದ್ದು ದೇಹವನ್ನು ಚಾಚಿ
ಮೂರುಬಾರಿ ಗಜರ್ಿಸಿ, ಬೇಟೆಗೆ
ಹೋಗುತ್ತಿತ್ತು.
* * *
ಅದರಂತೆಯೇ ಈ ಭಿಕ್ಷುವು ಸಹಾ ಅತ್ಯಲ್ಪ ಆಹಾರ
ಸೇವಿಸಿ ಸದಾ ಧ್ಯಾನಾವಸ್ಥೆಯಲ್ಲಿರುತ್ತಿದ್ದನು. ಆತನ ಸರ್ವ ಭಂಗಿಗಳು ಸಮಾಹಿತವಾಗಿಯೇ
ಸ್ಮೃತಿಯಿಂದಲೇ ಕೂಡಿರುತ್ತಿತ್ತು.
ಈತನ ಈ ಬಗೆಯ ಗಾಂಭೀರ್ಯ ಕಂಡು ಭಿಕ್ಷುಗಳು
ಸಹಾ ಆಕಷರ್ಿತರಾಗಿ ಭಗವಾನರಿಗೆ ಹೀಗೆ ವಿಷಯ ತಿಳಿಸಿದರು.
"ಭಗವಾನ್, ನಾವು ಶಾಂತಕಾಯನಂತಹ ಭಿಕ್ಷುವನ್ನೇ ಕಂಡಿಲ್ಲ. ಆತನು ಪದ್ಮಾಸನದಲ್ಲಿ
ಕುಳಿತಿರುವಾಗ ಆತನ ಇಡೀ ದೇಹ ನಿಶ್ಚಲವಾಗಿರುತ್ತದೆ. ಆತನು ಕೈಯನ್ನಾಗಲೀ ಅಥವಾ ಪಾದವನ್ನೇ ಆಗಲಿ
ಚಲಿಸುವುದಿಲ್ಲ. ಆತನು ಆಕಳಿಸಿದ್ದೇ ನಾವು ನೋಡಿಲ್ಲ, ಅಥವಾ ಕೈಕಾಲುಗಳನ್ನು ಮುರಿಯುವುದಿಲ್ಲ (ಚಾಚುವುದಿಲ್ಲ)."
ಆಗ ಭಗವಾನರು ಈ ಮೇಲಿನ ಗಾಥೆ ನುಡಿದು ಹೀಗೆ
ಹೇಳಿದರು: "ಭಿಕ್ಷುಗಳೇ, ಶಾಂತಕಾಯನಂತೆ ನೀವೂ ಸಹಾ ಕಾಯದಲ್ಲಿ, ವಾಚಾದಲ್ಲಿ ಮತ್ತು ಮನಸ್ಸಿನಲ್ಲಿ ಸದಾ ಸ್ಮೃತಿವಂತರಾಗಿ ಸಮಾಹಿತರಾಗಿ
ಶಾಂತರಾಗಿರಬೇಕು."
No comments:
Post a Comment