ತಿಂಡಿಬಾಕನು
ಪುನಃ ಜನ್ಮವೆತ್ತುವನು
"ಯಾವಾಗಲೂ
ಸೋಮಾರಿಯಾಗಿ, ತಿಂಡಿಪೋತನಾಗಿ
ಬಲಿತ ದೊಡ್ಡ ಹಂದಿಯ
ಹಾಗೆ, ನಿದ್ದೆಯಲ್ಲಿ
ಹೊರಳಾಡುತ್ತ, ಇರುವಂತಹ ಮಂದಮತಿಯು,
ಪುನಃ ಪುನಃ ಗರ್ಭವನ್ನು
ಪ್ರವೇಶಿಸುತ್ತಿರುತ್ತಾನೆ." (325)
ಗಾಥ ಪ್ರಸಂಗ 23:4
ಮಹಾರಾಜ ಪಸೇನದಿಗೆ
ಮಿತಹಾರದ ಉಪದೇಶ
ಒಂದುದಿನ ಪಸೇನದಿ ಮಹಾರಾಜನು ಮುಂಜಾನೆ
ಅತಿಯಾಗಿ ಆಹಾರ ಸೇವಿಸಿ, ಭಗವಾನರಿಗೆ ಭೇಟಿ
ಮಾಡಲು ಹೋದನು. ರಾಜನಿಗೆ ಕಾಲುಬುಟ್ಟಿಯಷ್ಟು ಅನ್ನ ಹಾಗು ಮಾಂಸ ಇತ್ಯಾದಿ ಸೇವಿಸುವ ಅಭ್ಯಾಸ
ಆಗಿಬಿಟ್ಟಿತ್ತು. ಭಗವಾನರ ಸಮ್ಮುಖದಲ್ಲಿ ಆತನು ಜಾಗೃತನಾಗದಷ್ಟು ಆಲಸ್ಯನಾಗಿ, ನಿದ್ದೆಗೆ ಜಾರಿದನು. ನಂತರ ಆತನು ಭಗವಾನರಿಗೆ ಹೀಗೆ
ಹೇಳಿದನು. "ಭಗವಾನ್, ನಾನು ಆಹಾರ ಸೇವನೆಯ
ನಂತರ ಸದಾ ಅಸುಖಿಯಾಗುವೆನು."
"ಓ ರಾಜ, ಈ ರೀತಿ ನರಳುವವರು ತಿಂಡಿಬಾಕರಾಗಿದ್ದಾರೆ" ಎಂದು ನುಡಿದು
ಪ್ರವಚನ ನೀಡಿದರು. (ಅದೆಲ್ಲಾ ವಿಸ್ತಾರವಾಗಿ 15ನೆ ಅಧ್ಯಾಯದ ಆರನೆಯ ಪ್ರಸಂಗದಲ್ಲಿ ಗಾಥೆ
204ರಲ್ಲಿ ಬಂದಿದೆ) ಆಗ ಪಸೇನದಿ ರಾಜನು ಕ್ರಮವಾಗಿ ತಾನು ಸೇವಿಸುತ್ತಿದ್ದಂತಹ ಆಹಾರ ಇಳಿಮುಖ
ಮಾಡುತ್ತಾ ಬಂದನು. ಪರಿಣಾಮವಾಗಿ ಆತನು ಇನ್ನಷ್ಟು ಚುರುಕಾಗಿ, ಜಾಗೃತನಾಗಿ, ಸುಖಿಯಾಗಿ, ಆರೋಗ್ಯಭರಿತನಾದನು.
ಭಗವಾನರು
ಈ ಗಾಥೆಯನ್ನು ಆ ಸಂದರ್ಭದಲ್ಲಿ ನುಡಿದಿದ್ದರು
No comments:
Post a Comment