ಧ್ಯಾನ
ಮತ್ತು ಪ್ರಜ್ಞೆಯಿಂದಲೇ ನಿಬ್ಬಾಣ
"ಯಾವ ಭಿಕ್ಷುವು
ಮೆತ್ತಾ ಧ್ಯಾನದಲ್ಲಿ ವಿಹರಿಸುವನೋ,
ಬುದ್ಧ ಶಾಸನದಲ್ಲಿ
ಪ್ರಸನ್ನನಾಗಿರುವನೋ, ಅಂತಹವನು
ಸಂಖಾರಗಳ ಉಪಶಮನದ
(ಸಂಖಾರಗಳ ಉದಯವನ್ನು ತಡೆದು)
ಸುಖ ಮತ್ತು ಶಾಂತಿ
ಸ್ಥಿತಿಯನ್ನು (ನಿಬ್ಬಾಣ) ಪ್ರಾಪ್ತಿಮಾಡುವನು." (368)
"ಓ ಭಿಕ್ಷುವೇ,
ನಿನ್ನ ದೋಣಿಯನ್ನು (ಚಿತ್ತವನ್ನ)
ಬರಿದಾಗಿಸು,
ಬರಿದಾಗಿರುವುದೇ
ವೇಗವಾಗಿ ಚಲಿಸುವುದು,
ಕತ್ತರಿಸು ರಾಗವ ಮತ್ತು
ದ್ವೇಷವ ಹಾಗಾದಾಗಲೇ
ನಿಬ್ಬಾಣಕ್ಕೆ
ಹೋಗಬಹುದು." (369)
"ಐದನ್ನು
ಕತ್ತರಿಸು (ಸಂಯೋಜನಗಳು),
ಐದನ್ನು (ಉಳಿದ
ಸಂಯೋಜನ) ತ್ಯಾಗ ಮಾಡು,
ಇದಲ್ಲದೆ ಐದನ್ನು
ಪಂಚಬಲಗಳನ್ನು ವೃದ್ಧಿಗೊಳಿಸು,
ಯಾವ ಭಿಕ್ಷುವು ಐದು
ಸಂಕೋಲೆಗಳಿಂದ
ಬಿಡುಗಡೆ ಹೊಂದಿರುವನೋ
ಆತನನ್ನು
ಪ್ರವಾಹ ದಾಟಿದವನು
ಎನ್ನುತ್ತಾರೆ." (370)
"ಧ್ಯಾನಿಯಾಗು
ಭಿಕ್ಷು, ಅಜಾಗರೂಕನಾಗಬೇಡ,
ನಿನ್ನ ಚಿತ್ತವು
ಕಾಮಸುಖಗಳ ಹಿಂದೆ ಸುಳಿದಾಡದಿರಲಿ,
ಅಜಾಗರೂಕನಾಗಿ,
ಕಾದು ಕೆಂಪಗಿರುವ ಕಬ್ಬಿಣದ
ಗುಂಡು
ನುಂಗಬೇಡ, ಅದು ಸುಡುತ್ತಿರುವಾಗ 'ಇದು ದುಃಖ'
ಎಂದು ಪ್ರಲಾಪಿಸಬೇಡ." (371)
"ಪ್ರಜ್ಞೆಯಿಲ್ಲದವನಿಗೆ
ಧ್ಯಾನವಿಲ್ಲ,
ಧ್ಯಾನಿಯಲ್ಲದವನಿಗೆ
ಪ್ರಜ್ಞಾವಿಲ್ಲ,
ಆದರೆ ಯಾರಲ್ಲಿ ಧ್ಯಾನ
ಮತ್ತು ಪ್ರಜ್ಞೆಗಳೆರಡು ಇವೆಯೋ
ಆತನು ನಿಬ್ಬಾಣಕ್ಕೆ
ಸನಿಹವಾಗಿದ್ದಾನೆ." (372)
"ಯಾವ ಭಿಕ್ಷುವು
(ಜನಶಬ್ದಗಳಿಲ್ಲದ) ಶೂನ್ಯಗಾರ (ಏಕಾಂತ)
ಸ್ಥಳದಲ್ಲಿ ನೆಲಸಿಹನೋ,
ಯಾರು ಚಿತ್ತವನ್ನು
ಶಾಂತಗೊಳಿಸಿಹನೋ,
ಸಮ್ಮಾ (ಯೋಗ್ಯ)
ಧಮ್ಮವನ್ನು
ಸ್ಪಷ್ಟವಾಗಿ ಕಾಣುತ್ತಿರುವನೋ
ಅಂತಹವನು ಮನುಷ್ಯಾತೀತ
ಆನಂದ ಅನುಭವಿಸುತ್ತಾನೆ." (373)
"ಎಲ್ಲೆಲ್ಲಿ
ಒಬ್ಬನು ಸಮ್ಯಕ್ ಸ್ಮೃತಿಯಿಂದ
ಖಂಧಗಳ (ದೇಹ ಮತ್ತು
ಮನಸ್ಸುಗಳ) ಉದಯ ಮತ್ತು
ಅಳಿಯುವಿಕೆಯನ್ನು
ಪ್ರತಿಬಿಂಬಿಸುತ್ತಿರುವನೋ
ಆಗ ಆತನು ಆನಂದ ಮತ್ತು
ಸುಖವನ್ನು
ಅನುಭವಿಸುತ್ತಾನೆ,
ಜ್ಞಾನಿಗಳಿಗೆ
ಪ್ರತಿಬಿಂಬಿಸುವಿಕೆಯು
ಅಮರತ್ವವಾಗಿದೆ." (374)
"ಪ್ರಾಜ್ಞನಾದ
ಭಿಕ್ಷುವಿಗೆ ಇಲ್ಲಿ
ಉತ್ತಮವಾದ ಆರಂಭವಾಗಿದೆ,
ಹೇಗೆಂದರೆ
ಇಂದ್ರಿಯ ಸಂಯಮ,
ಸಂತೃಪ್ತಿ, ಪಾತಿಮೋಕ್ಖದಂತೆ
ಸಂಯಮಶೀಲತೆ, ಪರಿಶುದ್ಧ ಜೀವನ ಹೊಂದಿರುವ
ಕಲ್ಯಾಣ ಮಿತ್ರರೊಂದಿಗೆ
ಸ್ನೇಹ ಇವೆಲ್ಲವೂ ಸಿಗುವುದು." (375)
"ಪರಿಶುದ್ಧ ಜೀವನ
ಹಾಗು ಯತ್ನಶೀಲತೆ ಹೊಂದಿದಂತಹ
ಆತನು ಕಲ್ಯಾಣಕಾರಕವಾದ
ಮಿತ್ರರೊಂದಿಗೆ ಬೆರೆಯಲಿ
ಆತನು ಸೌಜನ್ಯದಿಂದಿರಲಿ,
ತನ್ನನ್ನು ಸದಾ ತಿದ್ದುವವನಾಗಲಿ,
ಆಗ ಲಭಿಸುವ ಮಹತ್
ಆನಂದದಿಂದ ಈ
ದುಃಖ ಅಂತ್ಯ
ಮಾಡಲಿ." (376)
ಗಾಥ ಪ್ರಸಂಗ 25:7
ಉಪಾಸಿಕೆಯಿಂದ
ಪರಿವರ್ತನೆಯಾದ ಕಳ್ಳರು
ಒಂದಾನೊಂದು ಕಾಲದಲ್ಲಿ ಪೂಜ್ಯ ಮಹಾಕಚ್ಚಾನರು
ಅವಂತಿ ರಾಜ್ಯದಲ್ಲಿ ಕುರಾರಘಾರ ನಗರ ಸಮೀಪ ಬೆಟ್ಟದ ಮೇಲೆ ವಾಸಿಸುತ್ತಿದ್ದರು. ಒಮ್ಮೆ ಉಪಾಸಕ ಸೋಣ
ಕೂಟಿಕಣ್ಣನು ಪೂಜ್ಯರ ಬೋಧನೆ ಆಲಿಸಿ, ಭಿಕ್ಷುವಾಗುವ ಬಯಕೆಯನ್ನು ವ್ಯಕ್ತಪಡಿಸಿದರು. ಆದರೆ ಪೂಜ್ಯರು ಈ ರೀತಿ ಎಚ್ಚರಿಕೆ ನೀಡಿದರು.
"ಸೋನ, ಒಪ್ಪತ್ತು ಊಟ,
ಏಕಾಂಗಿಯಾಗಿ ವಾಸ, ಪರಿಶುದ್ಧ ಸಂಯಮಯುತ ಜೀವನ ನಿನಗೆ ಅತ್ಯಂತ ಕಷ್ಟಕರವಾಗಿರುತ್ತದೆ."
ಆದರೆ ಸೋಣನು ಭಿಕ್ಷುವಾಗುವ ನಿಧರ್ಾರದಲ್ಲಿ
ದೃಢವಾಗಿದ್ದನು. ಅವನು ಉಪಸಂಪದ ಪಡೆದು ಮೂರು ವರ್ಷ ಅದೇ ರಾಜ್ಯದಲ್ಲಿ ನೆಲೆಸಿ ನಂತರ
ಭಿಕ್ಷುವಾದನು. ನಂತರ ಭಗವಾನರನ್ನು ಕಾಣುವ ಬಯಕೆಯಿಂದಾಗಿ ಗುರುವಿನ ಅಪ್ಪಣೆ ಪಡೆದು ಶ್ರಾವಸ್ತಿಯ
ಜೇತವನಕ್ಕೆ ಬಂದನು. ಅಲ್ಲಿ ಭಗವಾನರೊಂದಿಗೆ ಕುಶಲ ಮಾತುಕತೆಯ ನಂತರ ಗಂಧಕುಟಿಯಲ್ಲಿ
ಭಗವಾನರೊಂದಿಗೆ ಇರಲು ಅಪ್ಪಣೆ ಪಡೆದನು.
ಸೋಣ ತೆರೆದ ಆಕಾಶದಲ್ಲಿ ಹೆಚ್ಚು ರಾತ್ರಿ
ಕಳೆದನು. ನಂತರ ಗಂಧಕುಟಿಯಲ್ಲಿ ನಿದ್ರಿಸಿದನು. ನಂತರ ಮುಂಜಾನೆ ಭಗವಾನರಿಗೆ ಅಟ್ಠಕವಗ್ಗವನ್ನು
ಪೂರ್ಣವಾಗಿ ಒಪ್ಪಿಸಿದನು. ಭಗವಾನರು ಸಹಾ ಆತನ
ಪಠಣಕ್ಕೆ ಸಾಧು ಭಿಕ್ಷು, ಸಾಧು! ಎಂದು
ಹೊಗಳಿದರು. ಭಗವಾನರು ಸ್ತುತಿಸುವುದನ್ನು ಕಂಡು ದೇವತೆಗಳು, ಭೂಮ್ಮಿಕ ದೇವತೆಗಳು, ನಾಗರು, ಸುಪರ್ಣರು ಹಾಗೆಯೇ ಬ್ರಹ್ಮರು
ಸಹಾ ಆತನನ್ನು ಸ್ತುತಿಸುತ್ತಿದ್ದರು.
ಅದೇ ಸಮಯದಲ್ಲಿ ಸೋಣನ ತಾಯಿಯಾದ ಉಪಾಸಿಕೆಯ
ಮನೆಯಲ್ಲೂ ಅಲ್ಲೇ ವಾಸವಾಗಿದ್ದಂತಹ ದೇವತೆಯೊಬ್ಬಳು ಸಹಾ ಸ್ತುತಿಸಿದಳು. ಆಗ ಉಪಾಸಿಕೆಯು
"ಯಾರದು ಸ್ತುತಿಸುತ್ತಿರುವುದು?" ಎಂದು ಕೇಳಿದಳು. ಆಗ ದೇವತೆಯು "ನಾನು ನಿನ್ನ ಸೋದರಿ" ಎಂದಿತು. "ಯಾರು
ನೀನು?" "ನಾನು ದೇವತೆ."
"ಎಂದಿಗೂ ಸ್ತುತಿಸದ ನೀನು ಇಂದೇಕೆ ಸ್ತುತಿಸುತ್ತಿರುವೆ?" "ನಿನ್ನ ಮಗ ಸೋಣನಿಗೆ ಸ್ತುತಿಸುತ್ತಿರುವೆ."
"ನನ್ನ ಮಗ ಅಂತಹ ಯಾವ ಕಾರ್ಯ ಸಾಧಿಸಿದ್ದಾನೆ?"
"ಇಂದು ನಿನ್ನ ಮಗ ಭಗವಾನರ
ಗಂಧಕುಟಿಯಲ್ಲಿ ಅಟ್ಟಕವರ್ಗವೆಂಬ ಧಮ್ಮವನ್ನು ಪಠಿಸಿದಾಗ ಭಗವಾನರು ಆತನನ್ನು ಸ್ತುತಿಸಿದರು. ಆಗ
ದೇವತೆಗಳು, ಬ್ರಹ್ಮರೆಲ್ಲರೂ ಆತನಿಗೆ
ಸ್ತುತಿಸಿದರು" ಎಂದಾಗ ಉಪಾಸಿಕೆ ಹೀಗೆ ಕೇಳಿದಳು: "ಏನು ನನ್ನ ಮಗ ಭಗವಾನರಿಗೆ
ಧಮ್ಮೋಪದೇಶ ನೀಡಿದನೇ? ಅಥವಾ ಬುದ್ಧರು ನನ್ನ
ಮಗನಿಗೆ ಧಮ್ಮೋಪದೇಶ ನೀಡಿದರೆ?" "ಇಲ್ಲ ನಿನ್ನ ಮಗನೇ ಭಗವಾನರಿಗೆ ಉಪದೇಶ ನೀಡಿದನು."
ಈ ನುಡಿಗಳನ್ನು ಕೇಳುತ್ತಿದ್ದಂತೆಯೇ
ಉಪಾಸಿಕೆಯಲ್ಲಿ ಐದು ಬಗೆಯ ಆನಂದಗಳು ಉಂಟಾಗಿ, ಆ ಆನಂದವು ಆಕೆಯ ಇಡೀ ಭೌತಿಕ ಹಾಗು ಮಾನಸಿಕ ಶರೀರದಾದ್ಯಂತ ಹರಡಿತು. ಆಗ ಆಕೆಯಲ್ಲಿ ಇಂತಹ
ಯೋಚನೆಯುಂಟಾಯಿತು. "ನನ್ನ ಮಗ ಅಂತಹ ಸಮರ್ಥಶಾಲಿಯಾದನೆ? ಭಗವಾನರೊಂದಿಗೆ ಗಂಧಕುಟಿಯಲ್ಲಿ ಇರುವಂತಹ ಸೌಭಾಗ್ಯ ಪಡೆದನೇ? ಆತನು ಭಗವಾನರಿಗೆ ಧಮ್ಮ ಉಪದೇಶ ಮಾಡಬಲ್ಲವನಾದರೆ, ನನಗೂ ಸಹಾ ಬೋಧಿಸಬಲ್ಲ, ಆತನು ಊರಿಗೆ ಬಂದಾಗ, ಧಮ್ಮ ಬೋಧಿಸಲು ಸಕಲ ವ್ಯವಸ್ಥೆಯನ್ನು ಮಾಡಿಸುತ್ತೇನೆ, ಹಾಗು ಧಮ್ಮವನ್ನು ಆಲಿಸುವೆನು."
* * *
ಇತ್ತ ಸೋಣನು ಭಗವಾನರಿಂದ ಸ್ತುತಿಸಿಕೊಂಡ
ನಂತರ ಹೀಗೆ ಯೋಚಿಸಿದನು: 'ಈಗ ನನ್ನ ಗುರುವಿಗೆ
ಸಂದೇಶ ನೀಡಲು ಸಕಾಲವಾಗಿದೆ' ಎಂದುಕೊಂಡು ಭಗವಾನರಿಂದ ಐದು ವರಗಳನ್ನು
ಪಡೆದನು; ವರಗಳು ಹೀಗಿದ್ದವು:
ಗಡಿನಾಡಿನಲ್ಲಿರುವ ಐದು ಭಿಕ್ಷುಗಳಿಗೆ
ಸಂಘಕ್ಕೆ ಸೇರಲು ಅನುಮತಿ. ಅವರಲ್ಲಿ ಒಬ್ಬನು ವಿನಯಪಠಣದಲ್ಲಿ ನಿಷ್ಣಾತನಾಗಿದ್ದನು. ನಂತರ ಸೋಣನು
ಭಗವಾನರಿಂದ ಅಪ್ಪಣೆ ಪಡೆದು ತನ್ನ ಗುರುವಿನ ಬಳಿಗೆ ಹಿಂತಿರುಗಿದನು
.
ಮರುದಿನ ತನ್ನ ಗುರುಗಳೊಂದಿಗೆ ಸೋಣನು
ಆಹಾರಕ್ಕೆ ಹೊರಟನು. ಗುರು ಪೂಜ್ಯ ಕಚ್ಚಾನರು ಆತನನ್ನು ಆತನ ತಾಯಿಯ ಮನೆಗೆ ಕರೆದೊಯ್ದರು. ತಾಯಿಗೆ
ತನ್ನ ಮಗನನ್ನು ಕಂಡು ಅತೀವ ಆನಂದವಾಯಿತು. ಆಕೆಯ ಆತನೊಂದಿಗೆ "ಭಗವಾನರಿಗೆ ಉಪದೇಶ ನೀಡಿದ
ಧಮ್ಮದ ಸುದ್ದಿಯು ನಿಜವೇ" ಎಂದು ಪ್ರಶ್ನಿಸಿದಳು.
"ಅಮ್ಮಾ ನಿಮಗೆ ಯಾರು ತಿಳಿಸಿದ್ದು?"
"ನಮ್ಮ ಮನೆಯಲ್ಲಿರುವ
ಸ್ತ್ರೀದೇವತೆ." ಆಗ ಆ ದೇವತೆಯು ಸಹಾ ತಾನೇ ತಿಳಿಸಿದ್ದು ಎಂದು ಒಪ್ಪಿದಳು.
ನಂತರ ಉಪಾಸಿಕೆಯು ತನ್ನ ಮಗನೊಂದಿಗೆ ತಾನು
ಸಹಾ ಆತನ ಉಪದೇಶ ಆಲಿಸಬೇಕೆಂಬ ಅಪೇಕ್ಷೆ ವ್ಯಕ್ತಪಡಿಸಿದಳು. ನಂತರ ಅದಕ್ಕೆ ಸಿದ್ಧತೆ ನಡೆಸಿದಳು.
ನಂತರ ದಾಸಿಯೊಬ್ಬಳಿಗೆ ಮನೆ ಕಾವಲಿಗೆ ಬಿಟ್ಟು ತಾನು ಧಮ್ಮವನ್ನು ಆಲಿಸಲು ಹೊರಟಳು.
ನಗರದ ಮಧ್ಯೆ ದೊಡ್ಡ ಗುಡಾರ ನಿಮರ್ಿಸಿ,
ಅಲಂಕೃತ ಆಸನ ಸಿದ್ಧಪಡಿಸಿದ್ದಳು. ಅದರ ಮೇಲೆ ಕುಳಿತು ಸೊಣನು
ಧಮ್ಮಪ್ರವಚನ ಆರಂಭಿಸಿದನು.
* * *
ಆ ಉಪಾಸಿಕೆಯ ಮನೆಯಲ್ಲಿ ಕೊಳ್ಳೆ ಹೊಡೆಯಲು
900 ಕಳ್ಳರು ಹಲವಾರು ವಾರಗಳಿಂದ ಹೊಂಚುಹಾಕುತ್ತಿದ್ದರು. ಆದರೆ ಆ ಮನೆಯು ಅತ್ಯಂತ
ಸುಸಜ್ಜಿತವಾಗಿತ್ತು. ಕಳ್ಳಕಾರರು ಬಾರದಂತೆ ಹಲವಾರು ವಿಧಾನಗಳನ್ನು ಅಳವಡಿಸಲಾಗಿತ್ತು. ಆ ಮನೆಯು
ಏಳು ಗೋಡೆಗಳಿಂದ ಆವೃತವಾಗಿತ್ತು. ಅದಕ್ಕೆ ಪ್ರಬಲವಾದ ಏಳು ಬಾಗಿಲುಗಳಿದ್ದವು. ಒಳಗೆ ಹಲವಾರು
ಕ್ರೂರ ನಾಯಿಗಳು ಇದ್ದವು. ಅದರ ಛಾವಣಿಯು ಸಹಾ ನೀರು ತೊಟ್ಟಿಕ್ಕುವಂತೆ ಮಾಡಲಾಗಿತ್ತು. ಅಲ್ಲಲ್ಲಿ
ಕಂದಕಗಳಿದ್ದು, ಅವುಗಳಲ್ಲಿ ಸೀಸವು
ತುಂಬಿಸಲಾಗಿತ್ತು. ಹಗಲು ಹೊತ್ತಿನಲ್ಲಿ ಸೂರ್ಯನ ಬೆಳಕಿನಿಂದಾಗಿ ಅಂಟಾಗಿರುತ್ತಿತ್ತು ಹಾಗು
ರಾತ್ರಿಯ ವೇಳೆ ಗಡುಸಾಗಿರುತ್ತಿತ್ತು. ಕಂದಕಕ್ಕೆ ಸಮೀಪವಾಗಿ ಕಾವಲುಗಾರರು ಇರುತ್ತಿದ್ದರು. ಹೀಗೆ
ಹಲವಾರು ರೀತಿಯ ರಕ್ಷಣಾ ವ್ಯೂಹವನ್ನು ಆ ಉಪಾಸಿಕೆ ಮಾಡಿಸಿದ್ದಳು.
ಈ ರೀತಿಯ ಮನೆಯ ರಕ್ಷಣೆ ಮತ್ತು ಉಪಾಸಿಕೆಯ
ಇರುವಿಕೆಯಿಂದಾಗಿ ಕಳ್ಳರಿಗೆ ಒಳ ಪ್ರವೇಶಿಸಲಾಗಲಿಲ್ಲ. ಆದರೆ ಆ ನಿದರ್ಿಷ್ಟ ದಿನದಂದು ಆಕೆಯು
ಮನೆಯಲ್ಲಿ ಇಲ್ಲದಿರುವಾಗ, ಅವರು ಕಂದಕವನ್ನು
ಅಗೆದು ಕಬ್ಬಿಣದ ಗೂಟವನ್ನು ಮುರಿದು ಅವರು ಒಳಬರಲು ಯಶಸ್ವಿಯಾದರು. ಒಳಹೋದ ನಂತರ ನಾಯಕನನ್ನು
ಉಪಾಸಿಕೆಯನ್ನು ಗಮನಿಸಲು ಕಳುಹಿಸಿದರು. ಆಗ ಹೀಗೂ ಹೇಳಿದರು: "ಆಕೆ ನಾವು ಮನೆ
ಪ್ರವೇಶಿಸಿದ್ದು ಅರಿತಿದ್ದೇ ಆದರೆ ಆಗ ಹಿಂತಿರುಗೋಣ, ನಂತರ ಆಕೆಯನ್ನು ಕೊಂದುಬಿಡೋಣ" ಎಂದು ನಿಶ್ಚಯಿಸಿದರು
.
ಆಗ ಕಳ್ಳರ ನಾಯಕನು ಉಪಾಸಿಕೆಯ ಹಿಂದೆಯೇ
ಇದ್ದನು. ಇತ್ತ ಕಳ್ಳರು ಮನೆ ಪ್ರವೇಶಿಸಿದ ನಂತರ ಬೆಳಕನ್ನು ಹಚ್ಚಿದರು. ನಂತರ ತಾಮ್ರದ
ನಾಣ್ಯಗಳಿದ್ದ ಕೋಣೆಯ ಬಾಗಿಲನ್ನು ತೆರೆದರು. ಆಗ ದಾಸಿಯು ಕಳ್ಳರನ್ನು ನೋಡಿಬಿಟ್ಟಳು. ತಕ್ಷಣ
ಆಕೆಯು ಉಪಾಸಿಕೆಯು ಇರುವಲ್ಲಿಗೆ ಓಡಿಬಂದು ಹೀಗೆ ಹೇಳಿದಳು: "ಅಮ್ಮಾವರೇ, ಬಹಳಷ್ಟು ಕಳ್ಳರು ನಿಮ್ಮ ಮನೆಗೆ ನುಗ್ಗಿದ್ದಾರೆ, ಅಷ್ಟೇ ಅಲ್ಲ, ತಾಮ್ರದ ನಾಣ್ಯಗಳ ಕೋಣೆಗೂ ನುಗ್ಗಿದ್ದಾರೆ."
ಇತ್ತ ಕಳ್ಳರು ತಾಮ್ರದ ನಾಣ್ಯಗಳನ್ನು ದೋಚಿ
ನಂತರ ಬೆಳ್ಳಿಯ ನಾಣ್ಯಗಳನ್ನು ಇಟ್ಟಿದ್ದ ಕೋಣೆಯನ್ನು ಒಡೆದರು. ಆಗ ಆ ದಾಸಿಯು ಪುನಃ ಉಪಾಸಿಕೆಯ
ಬಳಿ ಬಂದು ಈ ವಿಷಯವೆಲ್ಲಾ ತಿಳಿಸಿದಳು. ಆದರೆ ಉಪಾಸಿಕೆಯು ಹೀಗೆಯೇ ಹೇಳಿದಳು: "ಕಳ್ಳರು
ತಮಗೆ ಬೇಕಾಗುವುದನ್ನು ತೆಗೆದುಕೊಂಡು ಹೋಗಲಿ, ನನಗೆ ತೊಂದರೆ ನೀಡಬೇಡ, ನನಗೆ ಧಮ್ಮವನ್ನು ಆಲಿಸಲು ಬಿಡು" ಎಂದುಬಿಟ್ಟಳು.
ನಂತರ ಕಳ್ಳರು ಚಿನ್ನದ ನಾಣ್ಯಗಳಿದ್ದ ಕೋಣೆಯ
ಬಾಗಿಲನ್ನು ಒಡೆದರು. ಆಗಲೂ ದಾಸಿಯು ಉಪಾಸಿಕೆಗೆ ಸುದ್ದಿ ತಿಳಿಸಿಯೂ ಸಹಾ ಹಿಂದಿನ ಉತ್ತರವನ್ನೇ
ಪಡೆದಳು ಹಾಗು "ಮತ್ತೆ ಇಲ್ಲಿ ಬರಲೇಬೇಡ" ಎಂಬ ಕಠಿಣವಾದ ಆಜ್ಞೆಯನ್ನು ಪಡೆದಳು.
ಇವರ ಸಂಭಾಷಣೆ ಕೇಳುತ್ತಿದ್ದಂತಹ ಕಳ್ಳರ
ನಾಯಕನಿಗೆ ಪರಮ ಆಶ್ಚರ್ಯವಾಯಿತು. ಆಗ ಆತನಿಗೆ "ಐಶ್ವರ್ಯಕ್ಕಿಂತ ಅದೆಷ್ಟು ಪಟ್ಟು
ಉತ್ತಮವಾದುದೇ ಧಮ್ಮವೆಂದು" ಅರ್ಥವಾಗಿ ಹೋಯಿತು. ಆಗ ಆತನು ಹೀಗೆ ಚಿಂತಿಸಿದನು:
"ನಾವೇನಾದರೂ ಈ ಸ್ತ್ರೀಯ ಐಶ್ವರ್ಯವನ್ನು ಕದ್ದರೆ ಖಂಡಿತವಾಗಿ ಇಂದ್ರನ ವಜ್ರಾಯುಧದ ಸಿಡಿಲು
ನಮ್ಮ ತಲೆಗೆ ಬಿದ್ದು ನಾವು ನಾಶವಾಗುವೆವು". ತಕ್ಷಣ ಆತನು ತನ್ನ ಕಳ್ಳರ ಬಳಿಗೆ
ಅವರಿರುವೆಡೆಗೆ ಹೋದನು. ನಂತರ ಅವರಿಗೆ ಹೀಗೆ ಹೇಳಿದನು: "ತ್ವರಿತವಾಗಿ ಆ ಉಪಾಸಿಕೆಯ
ಐಶ್ವರ್ಯವೆಲ್ಲ ಪುನಃ ಅಲ್ಲೇ ಇಟ್ಟುಬಿಡಿರಿ. ಅದಕ್ಕಿಂತ ಪರಮ ಐಶ್ವರ್ಯ ಧಮ್ಮವು ನನಗೆ
ಸಿಕ್ಕಿದೆ." ಆತನ ಮಾತನ್ನು ಆಲಿಸಿದ ಕಳ್ಳರು ತಾವು ಕದ್ದ ಸ್ಥಳಗಳಲ್ಲೇ ಆ ಎಲ್ಲಾ
ಐಶ್ವರ್ಯಗಳನ್ನು ಪುನಃ ಇಟ್ಟುಬಿಟ್ಟರು. ಅದಕ್ಕಾಗಿಯೇ ಬುದ್ಧರು ಹೀಗೆ ಹೇಳುವುದು. ಧಮ್ಮದ
ಹಾದಿಯಲ್ಲಿ ನಡೆಯುವವರಿಗೆ ಧಮ್ಮವೇ ರಕ್ಷಿಸುವುದು.
"ಧಮ್ಮದ ಹಾದಿಯಲ್ಲಿರುವವರು
ಸುಖಿಗಳಾಗಿರುತ್ತಾರೆ,
ಇದೇ ಸಮ್ಯಕ್ ಜೀವನದ ಪರಮ ಲಾಭವಾಗಿದೆ.
ಯಾರು ಸತ್ಯನಾನುಸಾರವಾಗಿ ಜೀವಿಸುವರೋ
ಅವರೆಂದಿಗೂ ದುಃಖದಲ್ಲಿ ಬೀಳಲಾರರು."
ಇತ್ತ ಕಳ್ಳರು ಪುನಃ ಗುಡಾರದಲ್ಲಿ ಹೋಗಿ
ಧಮ್ಮವನ್ನು ಆಲಿಸಿದರು. ಆಗ ಅವರಿಗೆ ತಮ್ಮ ಕಳ್ಳತನಕ್ಕೆ ಕಾರಣವು ತಮ್ಮ ದುರಾಸೆ, ಲೋಭವೇ ಕಾರಣ ಎಂದು ತಿಳಿದುಹೋಯಿತು. ಹಾಗೆಯೇ ಇದರ
ಪರಿಣಾಮದಿಂದಾಗಿ ತಾವು ಪುನಃ ಬಡತನ, ದೌಭರ್ಾಗ್ಯ, ದುಃಖದ ಗತಿಗಳನ್ನು
ಪಡೆಯಬೇಕಾಗುತ್ತದೆ ಎಂದೆಲ್ಲಾ ಅವರಿಗೆ ಅರಿವಾಯಿತು. ಪೂಜ್ಯ ಸೊಣರು ಧಮ್ಮೋಪದೇಶವನ್ನು ಮುಗಿಸಿದಾಗ
ಅರುಣೋದಯವು ಆರಂಭವಾಯಿತು. ಅವರು ತಮ್ಮ ಧಮ್ಮ ಪೀಠದಿಂದ ಕೆಳಗೆ ಇಳಿದರು. ಆಗ ಕಳ್ಳರ ನಾಯಕ
ಉಪಾಸಿಕೆಯ ಕಾಲಿಗೆ ಬಿದ್ದು ಹೀಗೆ ಹೇಳಿದನು: "ಆಮ್ಮಾವರೇ, ದಯವಿಟ್ಟು ಕ್ಷಮಿಸಿ."
"ಸೋದರ ನನಗೇನೂ
ಅರ್ಥವಾಗಲಿಲ್ಲ."
"ನಾನು ನಿಮ್ಮ ಹಿಂದೆಯೇ ಇದ್ದು ತಾವು
ಮನೆಗೆ ಹೋಗಲು ಸಿದ್ಧವಾಗಿದ್ದರೆ ತಮ್ಮನ್ನು ದಾರಿಯಲ್ಲಿ ಕೊಲ್ಲಲು ಸಿದ್ಧನಾಗಿದ್ದೆನು."
"ಓಹ್, ಹಾಗಾ, ಹಾಗಾದರೆ ಕ್ಷಮಿಸುವೆನು."
ಉಳಿದ ಕಳ್ಳರೂ ಸಹಾ ತಮ್ಮ ಕುಕೃತ್ಯ ತಿಳಿಸಿ
ಅವರು ಕ್ಷಮೆಯಾಚಿಸಿದರು. ಆಕೆ ಕ್ಷಮಿಸಿದಳು, ನಂತರ ಉಪಾಸಿಕೆಯ ಬಳಿ ಹೀಗೆ ಯಾಚಿಸಿದರು: "ನಮ್ಮನ್ನು ಭಿಕ್ಷುಗಳಾಗುವಂತೆ ಅನುಮತಿ
ನೀಡಿಸಿ." ಆಗ ಆಕೆಯು ತನ್ನ ಪುತ್ರನಿಗೆ ಎಲ್ಲಾ ವಿಷಯ ತಿಳಿಸಿ ಅವರನ್ನು ಸಂಘಕ್ಕೆ
ಸೇರಿಸಿಕೋ ಎಂದು ಕೇಳಿಕೊಂಡಳು. ಆಗ ಪೂಜ್ಯ ಸೊಣರು ಸಹಾ ಇದಕ್ಕೆ ಒಪ್ಪಿದರು. ನಂತರ ಅವರೆಲ್ಲಾ
ಕಾಷಾಯ ವಸ್ತ್ರಧಾರಿಗಳಾಗಿ ಶೀಲ ದೀಕ್ಷೆ ಸ್ವೀಕರಿಸಿ, ನಂತರ ಭಿಕ್ಷುಗಳಾದರು.
ನಂತರ ಪ್ರತಿಯೊಬ್ಬರೂ ಧ್ಯಾನದ ವಿಷಯ
ಸ್ವೀಕರಿಸಿ, ಸಮೀಪದಲ್ಲಿದ್ದ
ಪರ್ವತವನ್ನು ಹತ್ತಿ, ಅಲ್ಲಿದ್ದಂತಹ ಮರಗಳ
ಕೆಳಗೆ ಧ್ಯಾನಿಸಲು ಆರಂಭಿಸಿದರು.
ಆಗ ಭಗವಾನರು ಅಲ್ಲಿಂದ 120 ಯೋಜನ ದೂರದಲ್ಲಿ
ಇದ್ದ ಜೇತವನದಲ್ಲಿದ್ದರು. ಅಲ್ಲಿಂದ ಭಗವಾನರು ತಮ್ಮ ಬಿಂಬವನ್ನು ಅವರ ಮುಂದೆ ಪ್ರತ್ಯಕ್ಷಗೊಳಿಸಿ,
ಈ ಗಾಥೆಗಳನ್ನು ಅವರಿಗೆ ತಿಳಿಸಿ ಪರಿಣಾಮಾತ್ಮಕ ಪರಿಣಾಮ
ಉಂಟುಮಾಡಿದರು.
No comments:
Post a Comment