ಮಲ್ಲಿಗೆಯಂತೆ
ರಾಗ ದ್ವೇಷವ ಉದುರಿಸು
"ಹೇಗೆ ಮಲ್ಲಿಗೆಯ
ಬಳ್ಳಿಯು ತನ್ನ ಬಾಡಿದ
ಪುಷ್ಪಗಳನ್ನು
ಉದುರಿಸಿಬಿಡುವುದೋ
ಹಾಗೆಯೇ ರಾಗ ಮತ್ತು
ದ್ವೇಷಗಳನ್ನು
ತೊರೆದುಬಿಡು ಓ
ಭಿಕ್ಷು." (377)
ಗಾಥ ಪ್ರಸಂಗ 25:8
ಮಲ್ಲಿಗೆ ಹೂಗಳ
ಧ್ಯಾನದಿಂದ ಅರಹತ್ವತೆ
ಶ್ರಾವಸ್ತಿಯ ಭಿಕ್ಷುಗಳ ಗುಂಪೊಂದು
ಭಗವಾನರಿಂದ ಧ್ಯಾನದ ವಿಷಯ ಸ್ವೀಕರಿಸಿ ಅಡವಿಗೆ ಹೋಗಿ ಧ್ಯಾನಿಸಲು ಹೋದರು. ಅವರು ಹೀಗೆ
ಧ್ಯಾನಿಸುತ್ತಿರುವಾಗ ಧ್ಯಾನದ ಮಧ್ಯದಲ್ಲಿ ಅವರು ಒಂದು ಬಾಹ್ಯ ವಿಷಯವನ್ನು ಗಮನಿಸಿದ್ದರು.
ಅದೇನೆಂದರೆ ಮಲ್ಲಿಗೆ ಹೂಗಳು ಮುಂಜಾನೆ ವಿಕಸಿತವಾದರೆ, ಸಂಜೆಯಾಗುತ್ತಿದ್ದಂತೆ ಬಳ್ಳಿಯಿಂದ ಉದುರಿ ಬೀಳುತ್ತಿದ್ದವು. ಈ
ವಿಷಯವು ಅವರಲ್ಲಿ ಗಂಭೀರ ಚಿಂತನೆಗೆ ಎಡೆಮಾಡಿಕೊಟ್ಟಿತ್ತು. ಅವರಲ್ಲಿ ಈ ಬಗೆಯ ಸ್ಫೂತರ್ಿದಾಯಕ
ದೃಢ ನಿಧರ್ಾರವು ಹೊರಹೊಮ್ಮಿತು: "ಓ ಮಲ್ಲಿಗೆ ಹೂಗಳೆ, ನೀವು ನಿಮ್ಮ ಬಳ್ಳಿಯಿಂದ ನೆಲಕ್ಕೆ ಬೀಳುವ ಮುನ್ನವೇ ನಾವು ರಾಗ-ದ್ವೇಷ
ಮತ್ತು ಮೋಹಗಳಿಂದ ಮುಕ್ತರಾಗುವೆವು. ಓ ಬಳ್ಳಿಗಳೇ, ಹೇಗೆ ನೀವು ಮಲ್ಲಿಗೆಗಳನ್ನು ಉದುರಿಸುವಿರೋ, ಹಾಗೂ ನಾವು ಸಹಾ ರಾಗ ಮತ್ತು ದ್ವೇಷಗಳನ್ನು
ಬಿಟ್ಟುಬಿಡುವೆವು. ಅವನ್ನು ಉದುರಿಸಿಬಿಡುವೆವು." ಹೀಗೆ ಅವರು ಶಕ್ತಿವರ್ಧಕ ಪಾನಿಯ
ಸೇವಿಸಿದವರಂತೆ ಅಗಾಧವಾಗಿ ಶ್ರಮಿಸಿ ಉತ್ಸಾಹದಾಯಕರಾಗಿ ಧ್ಯಾನಿಸುತ್ತಿದ್ದರು.
ಅವರು ಪಕ್ವಸ್ಥಿತಿಯಲ್ಲಿರುವುದನ್ನು ಕಂಡು
ಭಗವಾನರು ಗಂಧಕುಟಿಯಿಂದಲೇ ತಮ್ಮ ಪ್ರತಿಬಿಂಬವನ್ನು ಸೃಷ್ಟಿಸಿ, ಅವರ ಮುಂದೆ ಪ್ರತ್ಯಕ್ಷರಾಗಿ ಹೀಗೆ ನುಡಿದರು: "ಓ ಭಿಕ್ಷುಗಳೇ,
ಹೇಗೆ ಹೂಗಳು ಬಳ್ಳಿಯಿಂದ ಮುಕ್ತವಾಗುವವೋ ಹಾಗೇ ನೀವು ಸಹಾ
ಯಾವುದಕ್ಕೂ ಅಂಟದೆ ಸ್ವತಂತ್ರವಾಗಿ, ಜನನ ಮರಣಗಳ ಈ ಲೋಕದಿಂದ ಮುಕ್ತರಾಗಿರಿ" ಎಂದು ಮೇಲಿನ ಗಾಥೆಯನ್ನು ನುಡಿದರು. ಆ
ಗಾಥೆಯಲ್ಲಿನ ಆಳ ಅರ್ಥ ಅರಿತ ಆ ಎಲ್ಲಾ ಭಿಕ್ಷುಗಳು ಅರಹಂತರಾದರು.
No comments:
Post a Comment