Monday, 7 September 2015

dhammapada/tanhavagga/24.9/upaka

ಸರ್ವಜ್ಞರಿಗೆ ಗುರುವಿಲ್ಲ
"ಎಲ್ಲವನ್ನು ಜಯಿಸಿದ್ದೇನೆ, ಎಲ್ಲವನ್ನು ಅರಿತಿದ್ದೇನೆ,
ಆದರೂ ಎಲ್ಲದರಿಂದಲೂ ವಿಮುಖನಾಗಿದ್ದೇನೆ, (ಅಲಿಪ್ತನಾಗಿದ್ದೇನೆ)
ಯಾವುದೇ ಧಮ್ಮಕ್ಕೂ ಅಂಟದೆ, ಎಲ್ಲನ್ನು ತ್ಯಜಿಸಿ,
ತೃಷ್ಣೆಯೆಲ್ಲಾ ಕ್ಷಯಿಸಿ ವಿಮುಕ್ತನಾಗಿದ್ದೇನೆ,
ಸ್ವಯಂನಿಂದಲೇ ಸತ್ಯಗಳನ್ನು ಅರಿತವನಾಗಿ (ಅಭಿಜ್ಞಾ ಪ್ರಾಪ್ತಿಮಾಡಿ)
ಯಾರಿಗೆ ಗುರುವೆನ್ನಲಿ."              (353)
ಗಾಥ ಪ್ರಸಂಗ 24:9
ಉಪಕನಿಗೆ ಅರ್ಥವಾಗದ ಪರಮಶ್ರೇಷ್ಠತೆ

            ಸಮ್ಮಾಸಂಬೋಧಿ ಪ್ರಾಪ್ತವಾದ ಬಳಿಕ ಭಗವಾನರು ಗಯಾದಿಂದ ಮಿಗದಾಯಕ್ಕೆ ಪಂಚವಗರ್ಿಯ ಭಿಕ್ಷುಗಳಿಗೆ ಪ್ರಥಮ ಬೋಧನೆ ಮಾಡಲು ಹೋಗುತ್ತಿದ್ದರು. ಆಗ ದಾರಿಯಲ್ಲಿ ಜೈನ ಸಂನ್ಯಾಸಿಯಾದ ಉಪಕನು ಭಗವಾನರಿಗೆ ಕಂಡನು. ಆತನಿಗೆ ಆಶ್ಚರ್ಯವಾಯಿತು, ಏಕೆಂದರೆ ಭಗವಾನರ ಅದ್ಭುತ ರೂಪ ಹಾಗೂ ಪ್ರಶಾಂತತೆ ಮತ್ತು ಪರಮ ದಿವ್ಯ ತೇಜಸ್ಸು ಆತನಿಗೆ ಭಗವಾನರತ್ತ ಸೆಳೆಯಿತು. ಆತನು ಹೀಗೆ ಪ್ರಶ್ನಿಸಿದನು: "ಮಿತ್ರ, ನಿಮ್ಮ ಶರೀರ ಅದೆಷ್ಟು ಪ್ರಸನ್ನವಾಗಿ, ಪರಿಶುಭ್ರವಾಗಿ, ಕಾಂತಿಯುತವಾಗಿದೆ, ನಿಮ್ಮ ಗುರುವು ಯಾರೆಂದು ಕೇಳಬಹುದೇ?"

            "ಆಗ ಭಗವಾನರು ಈ ಮೇಲಿನ ಗಾಥೆಯನ್ನು ನುಡಿದರು. ಆದರೆ ಉಪಕನಿಗೆ ಭಗವಾನರ ಶ್ರೇಷ್ಠತೆ ಅರಿವಾಗದೆ, ಅದನ್ನು ಒಪ್ಪದೆ, ಹಾಗೆಯೇ ತಿರಸ್ಕರಿಸಿದೆ, ಗೊಂದಲದ ಪರಿಹಾರಕ್ಕೂ ಸಿದ್ಧನಾಗದೆ ಕೇವಲ ತಲೆಯಾಡಿಸಿ ಹೊರಟುಹೋದನು. 

No comments:

Post a Comment