Wednesday 5 August 2015

dhammapada/maggavagga/20.2/aniccameditation

ಎಲ್ಲಾ ಸಂಖಾರಗಳು ಅನಿತ್ಯ
"ಸರ್ವ ಸಂಖಾರಗಳು ಅನಿತ್ಯವಾಗಿವೆ,
ಹೀಗೆ ಪ್ರಜ್ಞೆಯಿಂದ ಒಬ್ಬನು ನೋಡಿದಾಗ
ಆತನು ದುಃಖವೆಲ್ಲದರಿಂದ ವಿಕರ್ಷಣೆಗೆ ಒಳಗಾಗುತ್ತಾನೆ,               
ಇದೇ ವಿಶುದ್ದಿಯ ಮಾರ್ಗವಾಗಿದೆ."               (277)

ಗಾಥ ಪ್ರಸಂಗ 20:2
ಅನಿತ್ಯದ ಧ್ಯಾನ

            ಭಗವಾನರು ಜೇತವನದ ವಿಹಾರದಲ್ಲಿರುವಾಗ 500 ಭಿಕ್ಷುಗಳ ಗುಂಪೊಂದು ಭಗವಾನರ ಬಳಿಗೆ ಧ್ಯಾನದ ವಿಷಯವನ್ನು ಸ್ವೀಕರಿಸಿ, ಅಡವಿಗೆ ಹೋಗಿ ಧ್ಯಾನದಲ್ಲಿ ಅಪಾರ ಶ್ರಮಿಸಿದರು. ಆದರೂ ಸಹಾ ಅವರು ಅರಹಂತರಾಗಲಿಲ್ಲ. ಹೀಗಾಗಿ ಅವರು ತಮಗೆ ಉಚಿತವಾದ ಬೇರೊಂದು ಧ್ಯಾನ ವಿಷಯವನ್ನು ಸ್ವೀಕರಿಸಲು ಭಗವಾನರ ಬಳಿಗೆ ಹಿಂತಿರುಗಿದರು.
            ಆಗ ಭಗವಾನರು ಸಹಾ ಅವರಿಗೆ ಅತ್ಯಲ್ಪ ಸಮಯದಲ್ಲಿಯೇ ಪರಿಣಾಮಾತ್ಮಕವಾದ ಧ್ಯಾನ ವಿಷಯ ನೀಡಬೇಕೆಂದುಕೊಂಡು ಅವರ ಹಿಂದಿನ ಜನ್ಮಗಳನ್ನು ಅವಲೋಕಿಸಿದರು. ಆಗ ಈ 500 ಭಿಕ್ಷುಗಳು ಕಸ್ಸಪ ಬುದ್ಧರ ಕಾಲದಲ್ಲಿ ತಮ್ಮ ಜೀವಿತದ 5ನೇ ಒಂದು ಭಾಗ ಕಾಲದಷ್ಟು ಅನಿತ್ಯದ ಧ್ಯಾನದಲ್ಲೇ ಕಳೆದಿದ್ದರು. ಹೀಗಾಗಿ ಇವರಿಗೆ ಇದೇ ಧ್ಯಾನ ಅತ್ಯಂತ ಸಹಕಾರಿ ಎಂದು ಭಗವಾನರು ತೀಮರ್ಾಣಿಸಿ, ಅವರಿಗೆ ಹೀಗೆ ನುಡಿದರು:

            "ಓ ಭಿಕ್ಷುಗಳೇ, ಕಾಮವಚರ ಜೀವಿಗಳ ಕ್ಷೇತ್ರವಾಗಲಿ, ರೂಪವಚರ ಜೀವಿಗಳ ಕ್ಷೇತ್ರವಾಗಲಿ ಅಥವಾ ಅರೂಪವಚರ ಜೀವಿಗಳ ಕ್ಷೇತ್ರವಾಗಲಿ ಎಲ್ಲಾ ಜೀವಿಗಳ ಖಂಧಗಳು, ಅಸ್ತಿತ್ವವು, ಅನಿತ್ಯಕರವಾಗಿದೆ, ಬದಲಾವಣೆ ಹೊಂದುತ್ತಿರುತ್ತದೆ, ಪರಿವರ್ತನೆ ಆಗುತ್ತಿರುತ್ತವೆ. ಇಲ್ಲಿ ಇರುವ ಯಾವುದೊಂದು ನಿತ್ಯವಲ್ಲ" ಎಂದು ಹೇಳಿ ಈ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment