Wednesday 26 August 2015

dhammapada/nirayavagga/22.4/immoralkhema

ಪರನಾರಿ ಗಮನ ಪಾಪ ಗಳಿಕೆಯ ಪಥವಾಗಿದೆ

"ಎಚ್ಚರಿಕೆ ತಪ್ಪಿ ಪರನಾರಿಗಮನ
ಮಾಡುವವನಿಗೆ ನಾಲ್ಕು ಸ್ಥಾನಗಳು ಸಿಗುವುದು,
ಅಪುಣ್ಯ ಲಾಭ (ಪಾಪಗಳಿಕೆ), ನಿದ್ರಾಹೀನತೆ,
ಮೂರನೆಯದಾಗಿ ನಿಂದೆ, ನಿರಯವೇ ನಾಲ್ಕನೆಯದು."   (309)

"ಅಂತಹವನಿಗೆ ಅಪುಣ್ಯ ಲಾಭ ಹಾಗು
ಪಾಪಿಯ ಗತಿ (ದುರ್ಗತಿ) ಸಿಗುವುದು
ಭೀತನಾದ ಪುರುಷ ಮತ್ತು ಭೀತಿಗೊಂಡು ಒಂದಾದ ಸ್ತ್ರೀಯ
ಆನಂದವೂ ಸಹಾ ಕ್ಷಣಿಕವಾಗಿರುತ್ತದೆ.
ರಾಜನಿಂದ ಕಠೋರ ಶಿಕ್ಷೆಯು ಆಗುವುದು
ಆದ್ದರಿಂದ ನರನು ಪರನಾರಿಯನ್ನು ಸೇವಿಸದಿರಲಿ."        (310)


ಗಾಥ ಪ್ರಸಂಗ 22:4
ಚರಿತ್ರಹೀನ ಖೇಮನ ಚರಿತ್ರೆ

            ಅನಾಥಪಿಂಡಿಕನಿಗೆ ಖೇಮನೆಂಬ ಸೋದರಳಿಯನಿದ್ದನು. ಆತನು ಸದಾ ಶ್ರೀಮಂತನಷ್ಟೇ ಅಲ್ಲದೆ, ಅತ್ಯಂತ ಸುಂದರ ರೂಪವನ್ನು ಪಡೆದಿದ್ದನು. ಆತನ ರೂಪಕ್ಕೆ ಸ್ತ್ರೀಯರು ನಿಯಂತ್ರಣ ತಪ್ಪುವಷ್ಟು ಆಕಷರ್ಿತರಾಗುತ್ತಿದ್ದರು. ಇದನ್ನೇ ಬಳಿಸಿಕೊಂಡು ಆತನು ಪರನಾರಿಯರೊಂದಿಗೆ ಅನೈತಿಕ ಸಂಬಂಧ ಮಾಡುತ್ತಿದ್ದನು. ಭಟರು ಆತನಿಗೆ  ಅನೈತಿಕ ಸಂಬಂಧದ ದೋಷದಿಂದಾಗಿ ಮೂರುಬಾರಿ ಹಿಡಿದಿದ್ದರು. ಹಾಗು ರಾಜ ಪಸೇನದಿಯ ಬಳಿ ನಿಲ್ಲಿಸಿದ್ದರು. ಆದರೆ ರಾಜನು ಅನಾಥಪಿಂಡಿಕರ ಮೇಲಿನ ಗೌರವದಿಂದಾಗಿ, ಆತನಿಗೆ ಶಿಕ್ಷೆಯನ್ನು ನೀಡದೆ, ಬುದ್ಧಿವಾದ ನೀಡಿ ಕಳುಹಿಸಿದ್ದನು. ಆಗ ಅನಾಥಪಿಂಡಿಕರಿಗೂ ಇದರಿಂದ ಕಸಿವಿಸಿಯಾಗಿ ಆತನನ್ನು ಸರಿದಾರಿಗೆ ತರಲೆಂದು ಭಗವಾನರ ಬಳಿ ಕರೆತಂದರು.

            ಆಗ ಭಗವಾನರು ಆತನಿಗೆ ಈ ಮೇಲಿನ ಗಾಥೆಗಳಿಂದ ಸರಿಹಾದಿಗೆ ತಂದರು.

No comments:

Post a Comment