ಜಾತಿಯಿಂದ
ಬ್ರಾಹ್ಮಣನಲ್ಲ, ಪರಿಶುದ್ಧತೆಯಿಂದಾಗುತ್ತಾನೆ
ಜಾತಿಯಿಂದಾಗಲಿ, ಗೋತ್ರದಿಂದಾಗಲಿ
ಅಥವಾ ಜಟೆಯಿಂದಾಗಲಿ ಬ್ರಾಹ್ಮಣನಾಗಲಾರ,
ಯಾರಲ್ಲಿ ಸತ್ಯ, ಧಮ್ಮ, ಶುಚಿ ಇರುವುದೋ
ಆತನೇ ಬ್ರಾಹ್ಮಣ. (393)
ಗಾಥ ಪ್ರಸಂಗ 26.10
ಜಟಾಧಾರಿ ಬ್ರಾಹ್ಮಣ
ಒಮ್ಮೆ ಜಟಿಲಾ (ಜಟೆಯುಳ್ಳ) ಬ್ರಾಹ್ಮಣನೊಬ್ಬನು ತನಗೆ ತಾನೇ ಹೀಗೆ
ಹೇಳಿಕೊಂಡನು: ನಾನು ತಂದೆಯ ಕಡೆಯಿಂದ, ಹಾಗೆಯೇ ತಾಯಿಯ
ಕಡೆಯಿಂದಲೂ ಬ್ರಾಹ್ಮಣನ ಪುತ್ರನೇ ಆಗಿರುವೆನು. ಅಂದರೆ ಜನ್ಮದಿಂದಲೇ ಬ್ರಾಹ್ಮಣನಾಗಿರುವೆನು. ಈಗ
ಸಮಣ ಗೋತಮರು ತಮ್ಮ ಶಿಷ್ಯರನ್ನು ಬ್ರಾಹ್ಮಣರೆನ್ನುತ್ತಿದ್ದಾರೆ, ನನಗೂ ಸಹಾ ಅವರು ಬ್ರಾಹ್ಮಣನೆಂದೇ ಒಪ್ಪಬೇಕು ಎನ್ನುತ್ತಾ ಆತನು ಭಗವಾನರ ಬಳಿಗೆ ಬಂದು ಈ
ಬಗ್ಗೆ ವಿಚಾರಿಸಿದನು.
ಆದರೆ ಭಗವಾನರು ಆತನ ದೃಷ್ಟಿಕೋನ ಒಪ್ಪದೆ ಈ ಮೇಲಿನ ಗಾಥೆಯನ್ನು
ನುಡಿದರು.
No comments:
Post a Comment