Monday, 5 October 2015

dhammapada/brahmanavagga/26.14/uggasena

ಬಂಧನ ಮುಕ್ತನಿಗೆ ಭಯವಿಲ್ಲ
ಸರ್ವ ಸಂಯೋಜನಗಳನ್ನು ಕತ್ತರಿಸಿ
ಯಾರು ಯಾವುದಕ್ಕೂ ಕಂಪಿಸುವುದಿಲ್ಲವೋ
ಯಾರು ಎಲ್ಲಾ ಬಂಧನಗಳಿಗೆ ಅತೀತನಾಗಿರುವನೋ
ಬಂಧನಮುಕ್ತನೋ ಅಂತಹವನಿಗೆ ನಾನು
ಬ್ರಾಹ್ಮಣ ಎನ್ನುತ್ತೇನೆ. (397)

ಗಾಥ ಪ್ರಸಂಗ 26.14
ಭಯವಿಲ್ಲದ ಭಿಕ್ಷು

                ಈ ಘಟನೆಯ ವಿವರಣೆಯು ಈಗಾಗಲೇ 24ನೇಯ ಅಧ್ಯಾಯದ ಆರನೆಯ ಪ್ರಸಂಗದಲ್ಲಿ ಬಂದಿದೆ (ಗಾಥೆ 348).
                ಉಗ್ಗಸೇನ (ಉಗ್ರಸೇನ)ನು ನನಗೆ ಯಾವುದೇ ಭಯವಿಲ್ಲ ಎಂದಾಗ ಭಿಕ್ಷುಗಳಿಗೆ ಅಚ್ಚರಿಯಾಗಿ, ಭಗವಾನರಲ್ಲಿ ಹೀಗೆ ಹೇಳಿದರು: ಭಗವಾನ್, ಉಗ್ರಸೇನನು ನನ್ನಲ್ಲಿ ಭಯವಿಲ್ಲ ಎನ್ನುತ್ತಿದ್ದಾನೆ. ಬಹುಶಃ ನಿಸ್ಸಂದೇಹವಾಗಿ ಆತನು ಸುಳ್ಳು ಹೇಳುತ್ತಿರುವನು ಎಂದರು.

                ಆಗ ಭಗವಾನರು ಭಿಕ್ಷುಗಳೇ, ಆತನು ಬಂಧನಮುಕ್ತ ಅರಹಂತನಾಗಿದ್ದಾನೆ, ಆತನಲ್ಲಿ ನಿಜಕ್ಕೂ ಭಯವಿಲ್ಲ, ಆತ ಸತ್ಯವನ್ನೇ ನುಡಿಯುತ್ತಿದ್ದಾನೆ ಎಂದು ಹೇಳಿ ಈ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment