ಏನನ್ನು ಹೊಂದದೆ
ಯಾವುದಕ್ಕೂ ಅಂಟದವನೇ ಬ್ರಾಹ್ಮಣ
ಕೇವಲ ಮಾತೃ ಗರ್ಭದಲ್ಲಿ
ಹುಟ್ಟಿದ ಮಾತ್ರಕ್ಕೆ
ನಾನು ಆತನನ್ನು
ಬ್ರಾಹ್ಮಣನೆಂದು ಕರೆಯಲಾರೆ.
ಆತನು ಎಲ್ಲವನ್ನು ಬಯಸುತ್ತಾ
ಸಾಮಿತ್ವ ಭಾವನೆ
ಹೊಂದಿರುವನಾದರೆ ನಾನು
ಆತನಿಗೆ ದರ್ಪದವನೆನ್ನುತ್ತೇನೆ.
ಆದರೆ ಯಾರು ಯಾವುದಕ್ಕೂ
ಅಂಟದೆ ಏನನ್ನೂ ಹೊಂದಿಲ್ಲವೋ
ಅಂತಹವನಿಗೆ ನಾನು ಬ್ರಾಹ್ಮಣ
ಎನ್ನುತ್ತೇನೆ. (396)
ಗಾಥ ಪ್ರಸಂಗ 26.13
ನಾನು ಬ್ರಾಹ್ಮಣನೇ ?
ಬ್ರಾಹ್ಮಣನೊಬ್ಬ ಹೀಗೆ ಯೋಚಿಸಿದನು: ಭಗವಾನರು ತಮ್ಮ ಶಿಷ್ಯರನ್ನು
ಬ್ರಾಹ್ಮಣರೆಂದು ಕರೆಯುವರು. ನಾನಂತು ತಾಯಿಯ ಹೊಟ್ಟೆಯಲ್ಲಿರುವಾಗಲೇ ಬ್ರಾಹ್ಮಣನಾಗಿರುವೆನು.
ಆದರೂ ಒಮ್ಮೆ ಭಗವಾನರಲ್ಲಿ ವಿಚಾರಿಸೋಣ ಎಂದು ಭಗವಾನರಲ್ಲಿ ಬಂದು ಭಗವಾನ್, ನಾನು ಬ್ರಾಹ್ಮಣನೇ? ಎಂದು ಕೇಳಿದನು. ಆಗ
ಭಗವಾನರು ಈ ಗಾಥೆಯನ್ನು ಹೇಳಿದರು.
No comments:
Post a Comment