Monday, 5 October 2015

dhammapada/brahmanavagga/26.23/foursamaneras

ಉದ್ರೇಕಿತರ ನಡುವೆ ಶಾಂತನಾಗಿರುವವ ಬ್ರಾಹ್ಮಣ
ಯಾರು ದ್ವೇಷವುಳ್ಳವರ ನಡುವೆ ದ್ವೇಷರಹಿತರಾಗಿರುವರೋ
ಹಿಂಸೆಭಾವನೆಯುಳ್ಳವರ ನಡುವೆ ಶಾಂತರಾಗಿರುವರೋ,
ಸ್ವಾಥರ್ಿಗಳ ನಡುವೆ ನಿಲರ್ಿಪ್ತರಾಗಿರುವರೋ ಅಂತಹವರಿಗೆ
ನಾನು ಬ್ರಾಹ್ಮಣ ಎನ್ನುತ್ತೇನೆ.      (406)


ಗಾಥ ಪ್ರಸಂಗ 26.23
ನಾಲ್ಕು ಸಾಮಣೇರ ಅರಹಂತರು

                ಒಮ್ಮೆ ಒಬ್ಬ ಬ್ರಾಹ್ಮಿಣಿಯು ನಾಲ್ಕು ಭಿಕ್ಷುಗಳಿಗಾಗಿ ಆಹಾರ ಸಿದ್ಧಪಡಿಸುತ್ತಾ ತನ್ನ ಪತಿ ಬ್ರಾಹ್ಮಣನಿಗೆ ಹೀಗೆ ಹೇಳಿದಳು: ವಿಹಾರಕ್ಕೆ ಹೋಗಿ ಹಿರಿಯರಾದ ನಾಲ್ವರು ಭಿಕ್ಷುಗಳನ್ನು ಕರೆತನ್ನಿ. ಆಗ ಆ ಬ್ರಾಹ್ಮಣನು ಅರಹಂತರಾಗಿರುವ ನಾಲ್ವರು ಸಾಮಣೇರರನ್ನು ಕರೆತಂದರು. ಅವರೆಲ್ಲರೂ ಏಳನೆಯ ವಯಸ್ಸಿನಲ್ಲಿಯೇ ಅರಹಂತರಾಗಿದ್ದರು. ಅವರೆಂದರೇ ಸಂಕಿಚ್ಚ, ಪಂಡಿತ, ಸೋಪಕ ಮತ್ತು ರೇವತ.
                ಇತ್ತ ಬ್ರಾಹ್ಮಣಿಯು ಆಹಾರ ಸಿದ್ಧಗೊಳಿಸಿ ಕಾಯುತ್ತಿದ್ದಳು. ಆದರೆ ಆಕೆಯ ಕಣ್ಣಿಗೆ ಸಾಮಣೇರರು ಕಾಣಿಸಿಕೊಂಡಾಗ ಆಕೆಗೆ ಗಂಡನ ಮೇಲೆ ವಿಪರೀತ ಕೋಪವುಂಟಾಯಿತು. ಆ ಸಾಮಣೇರರಿಗೆ ಕೇವಲ ಚಾಪೆಯನ್ನು ಹಾಸಿ ಕುಳಿತುಕೊಳ್ಳಿ ಎಂದು ಹೇಳಿ, ಬ್ರಾಹ್ಮಣನಿಗೆ ಮೂದಲಿಸಿ ಬ್ರಾಹ್ಮಣ ಹೋಗು, ವಯಸ್ಸಾದವರನ್ನು ಕರೆದುತಾರದೆ, ನಿನ್ನ ಮೊಮ್ಮಕ್ಕಳಂತೆ ಇರುವವರನ್ನು ಕರೆತರಬೇಡ. ಈ ಬಾರಿ ಬ್ರಾಹ್ಮಣನು ಪೂಜ್ಯ ಸಾರಿಪುತ್ರರನ್ನು ಕರೆತಂದರು. ಆದರೆ ಅಲ್ಲಿ ಸಾರಿಪುತ್ರರು ಸಾಮಣೇರರನ್ನು ವೀಕ್ಷಿಸಿ, ಈ ಸಾಮಣೇರರು ಆಹಾರವನ್ನು ಸ್ವೀಕರಿಸಿದರೇ? ಎಂದು ಕೇಳಿದರು. ಇನ್ನೂ ಇಲ್ಲ. ತಕ್ಷಣ ಆ ನಾಲ್ವರಿಗೆ ಮಾತ್ರ ಆಹಾರವೆಂದು ಅರಿತು ಅಲ್ಲಿಂದ ನಿರ್ಗಮಿಸಿದರು. ಆಗ ಆ ಬ್ರಾಹ್ಮಣಿಯು ತನ್ನ ಪತಿಗೆ ಹೀಗೆ ಹೇಳಿದಳು: ಆತನಿಗೆ ತಿನ್ನುವ ಬಯಕೆ ಇಲ್ಲವೆನಿಸುತ್ತದೆ ಹೋಗಿ ಬೇರೊಬ್ಬರನ್ನು ಕರೆದುತಾ ಎಂದಳು.
                ಆಗ ಬ್ರಾಹ್ಮಣನು ಈ ಬಾರಿ ಮಹಾಮೊಗ್ಗಲ್ಲಾನರನ್ನು ಕರೆತಂದನು. ಅವರು ಸಹಾ ಸಾರಿಪುತ್ರರಂತೆಯೇ ಪ್ರಶ್ನಿಸಿ, ನಿರ್ಗಮಿಸಿದರು. ಆಗ ಬ್ರಾಹ್ಮಿಣಿಯು ತನ್ನ ಪತಿಗೆ ಹೀಗೆ ಹೇಳಿದಳು: ಈ ಭಿಕ್ಷುಗಳು ತಿನ್ನಲು ಬಯಸಲಾರರು, ಹೋಗಿ ಬ್ರಾಹ್ಮಣರ ವಠಾರದಲ್ಲಿನ ಒಬ್ಬ ವಯಸ್ಸಾದ ಬ್ರಾಹ್ಮಣನನ್ನು ಕರೆದುಕೊಂಡು ಬನ್ನಿ ಎಂದಳು.
                ಅದೇವೇಳೆ ಸಾಮಣೇರರು ಹಸಿವಿನಿಂದ ಒದ್ದಾಡುವಂತಾದರು. ಆಗ ಸಕ್ಕ ಇಂದ್ರನಿಗೆ ಇದು ಗೊತ್ತಾಗಿ ತಕ್ಷಣ ಆತನು ವೃದ್ಧ ಬ್ರಾಹ್ಮಣನ ವೇಷಧಾರಿಯಾಗಿ ಬ್ರಾಹ್ಮಣ ವಠಾರದಲ್ಲಿ ಎದ್ದುಕಾಣುವಂತಹ ಪೀಠದಲ್ಲಿ ಕುಳಿತನು. ಆತನನ್ನು ಕಂಡ ಬ್ರಾಹ್ಮಣನು ಹಷರ್ಿತನಾಗಿ, ಅವರನ್ನು ಮನೆಗೆ ಆಹಾರ ದಾನ ನೀಡಲು ಕರೆತಂದನು. ಆ ವೃದ್ಧ ಬ್ರಾಹ್ಮಣನನ್ನು ನೋಡಿ, ಆ ಬ್ರಾಹ್ಮಿಣಿಗೂ ಹರ್ಷವಾಯಿತು. ಆಕೆಯು ಉನ್ನತವಾದ ಪೀಠವನ್ನು ಹಾಕಿ ಪೂಜ್ಯರೇ ಕುಳಿತುಕೊಳ್ಳಿ ಎಂದಳು. ಆದರೆ ಸಕ್ಕನು ಅರಹಂತರಾಗಿರುವ ನಾಲ್ವರು ಸಾಮಣೇರರಿಗೆ ವಂದಿಸಿ ನೆಲದ ಮೇಲೆ ಕುಳಿತನು. ಇದನ್ನು ಕಂಡ ಆ ಬ್ರಾಹ್ಮಣಗಿತ್ತಿಗೆ ಪಿತ್ತ ನೆತ್ತಿಗೇರಿತು. ಆಕೆ ತನ್ನ ಗಂಡನಿಗೆ ಹೀಗೆ ಹಿಯಾಳಿಸಿ ಹೇಳಿದಳು: ನೀನು ಬ್ರಾಹ್ಮಣನನ್ನೇ ಕರೆತಂದಿರುವೆಯಾ? ನಿನ್ನ ತಂದೆಯ ವಯಸ್ಸಿನಂತಿರುವವನಿಗೆ ಕರೆತಂದಿರುವೆ. ಆದರೆ ಈತನು ತನ್ನ ಮೊಮ್ಮಕ್ಕಳಂತೆ ಇರುವ ಈ ಬಾಲಕರಿಗೆ ವಂದಿಸುತ್ತಿದ್ದಾನೆ, ಈತನಿಗೆ ಎಳೆದು ಹೊರಹಾಕು.
                ಆಕೆಯ ಗುಲಾಮನಾಗಿದ್ದ ಆ ಬ್ರಾಹ್ಮಣ ಆ ವೃದ್ಧ ಸಕ್ಕನನ್ನು ಎಳೆಯಲು ಪ್ರಯತ್ನಿಸಿದನು. ಆದರೆ ಆ ವೃದ್ಧನು ಅಲ್ಪವೂ ಅಲುಗಾಡಲಿಲ್ಲ. ಆಗ ಆತನು ತನ್ನ ಪತ್ನಿಗೆ ಬಾ ಬ್ರಾಹ್ಮಿಣಿ, ನೀನು ಒಂದು ಕೈ ಹಿಡಿದುಕೋ, ನಾನೊಂದು ಕೈ ಹಿಡಿಯುವೆ, ಹೀಗೆ ಈತನಿಗೆ ಹೊರಹಾಕೋಣ. ಆಗ ಅವರಿಬ್ಬರೂ ಅತಿ ಪ್ರಯಾಸಪಟ್ಟು ಆ ವೃದ್ಧ ಬ್ರಾಹ್ಮಣನನ್ನು ಎಳೆದುಕೊಂಡು ಮನೆಯಿಂದ ಹೊರಹಾಕಿದರು. ನಂತರ ಪುನಃ ಒಳಬಂದು ನೋಡಿದರೆ ಆ ವೃದ್ಧನು ಈ ಹಿಂದೆ ಕುಳಿತಿದ್ದ ಸ್ಥಾನದಲ್ಲೇ ಕುಳಿತಿದ್ದನು. ಇದನ್ನು ಗಮನಿಸಿದ ಆ ಬ್ರಾಹ್ಮಣ ದಂಪತಿಗಳು ಭಯದಿಂದ ಕಿರುಚಿದರು: ನಮ್ಮನ್ನು ಬಿಟ್ಟುಬಿಡಿ ಎಂದು ಯಾಚಿಸಿದರು. ಅದೇ ಕ್ಷಣದಲ್ಲಿ ಸಕ್ಕ ತನ್ನ ನಿಜರೂಪದಲ್ಲಿ ಪ್ರತ್ಯಕ್ಷನಾದನು. ಆಗ ಭಯ ಭಕ್ತಿಯಿಂದ ಐವರಿಗೂ ಆಹಾರವನ್ನು ಬಡಿಸಲಾಯಿತು. ಆಹಾರ ತಿಂದನಂತರ ಆ ಐವರು ಐದು ಹಾದಿಗಳಲ್ಲಿ ಹೊರಹೋದರು. ಒಬ್ಬನು ವೃತ್ತಾಕಾರದ ಛಾವಣಿಯಿಂದ ಹಾರಿಹೋದನು. ಎರಡನೆಯವನು ಮುಂಭಾಗದ ಛಾವಣಿಯಿಂದ, ಮೂರನೆಯವನು ಹಿಂಭಾಗದ ಛಾವಣಿಯಿಂದ ಹಾರಿಹೋದರೆ, ನಾಲ್ಕನೆಯವನು ಭೂಮಿಯು ಹೂತು ಮಾಯವಾದನು. ಸಕ್ಕನು ಇನ್ನೊಂದು ಮಾರ್ಗದಲ್ಲಿ ಹಾದುಹೋದನು. ಅಂದಿನಿಂದ ಆ ಮನೆಗೆ ಪಂಚರಂಧ್ರಗಳ ಮನೆ ಎಂದು ಕರೆಯಲಾರಂಭಿಸಿದರು.

                ಇತ್ತ ಸಾಮಣೇರರು ವಿಹಾರಕ್ಕೆ ಬಂದಾಗ ಭಿಕ್ಷುಗಳು ಅವರನ್ನು ಬ್ರಾಹ್ಮಣನ ಕುರಿತು ಕೇಳಿದರು. ನಂತರ ವಿಷಯವೆಲ್ಲಾ ಆಲಿಸಿದ ಮೇಲೆ ಅವರು ಆಹಾರ ನೀಡದಿದ್ದಾಗ ನೀವು ಕೋಪಗೊಂಡಿರಾ? ಎಂದು ಪ್ರಶ್ನಿಸಿದರು. ಇಲ್ಲ ನಾನು ಕೋಪಗೊಂಡಿರಲಿಲ್ಲ ಎಂದರು ಆ ಸಾಮಣೇರರು. ಅದನ್ನು ಒಪ್ಪದ ಅಲ್ಲಿನ ಭಿಕ್ಷುಗಳಾದ ಭಗವಾನರಲ್ಲಿ ಈ ಸಾಮಣೇರರು ಸುಳ್ಳು ನುಡಿಯುತ್ತಿದ್ದಾರೆಂದು ದೂರು ನೀಡಿದಾಗ, ಭಗವಾನರು ಆ ಭಿಕ್ಷುಗಳಿಗೆ ಈ ಸಾಮಣೇರರು ಅರಹಂತರೆಂದು ತಿಳಿಸಿ ಈ ಮೇಲಿನ ಗಾಥೆ ನುಡಿದರು.

No comments:

Post a Comment