ಸತ್ಯ-ದಯ-ಜ್ಞಾನಭರಿತ
ನುಡಿಯುಳ್ಳವನೇ ಬ್ರಾಹ್ಮಣ
ಯಾರ ನುಡಿಗಳು
ತಿಳುವಳಿಕೆಯುತವೋ,
ಸತ್ಯಭರಿತವೋ, ಸಭ್ಯವೋ
ಯಾರಿಗೂ ಉದ್ರೇಕವಾಗಲಿ,
ನೋವಾಗಲಿ ತರದೋ
ಅಂತಹವನನ್ನು ನಾನು ಬ್ರಾಹ್ಮಣ
ಎನ್ನುತ್ತೇನೆ. (408)
ಗಾಥ ಪ್ರಸಂಗ 26.25
ಪಿಲಿಂದವಚ್ಚನ ಚರಿತ್ರೆ
ಪಿಲಿಂದವಚ್ಚನು ಶ್ರಾವಸ್ತಿಯ ಬ್ರಾಹ್ಮಣರ ಕುಟುಂಬದಲ್ಲಿ ಜನಿಸಿದನು.
ಒಮ್ಮೆ ಆತನು ಭಗವಾನರ ಪ್ರವಚನ ಆಲಿಸಿ ತಕ್ಷಣ ಸೋತಪನ್ನನಾದನು. ಹಾಗೆಯೇ ಸಂಘಕ್ಕೆ ಸೇರಿದನು. ಆದರೆ
ಆತನಿಗೆ ಎಲ್ಲರಿಗೂ ವಸಲ ಎಂದು ಕರೆಯುವ ಚಟವಿತ್ತು. (ವಸಲ ಎಂದರೆ ನೀಚ ಚಾತಿಯವ). ಆತನು ಹಾಗೆ
ಕರೆಯುವುದಕ್ಕೂ ಕಾರಣವಿತ್ತು, ಅದೇನೆಂದರೆ,
ಆತನ ತನ್ನ ಹಿಂದಿನ 500 ಜನ್ಮಗಳಿಂದಲೂ
ಬ್ರಾಹ್ಮಣನಾಗಿಯೇ ಹುಟ್ಟಿದ್ದನು. ಪಿಲಿಂದವಚ್ಚನು
ಸಹಾ ಇದರಿಂದ ಪಾರಾಗಲಾಗಲಿಲ್ಲ. ಏಕೆಂದರೆ ಅಭ್ಯಾಸಬಲ ಅಂತಹುದು. 50 ಜನ್ಮಗಳಿಂದ ಬಂದಂತಹ ಮೌಖಿಕ ಆಚರಣೆ, ಜ್ಞಾನ ಉಂಟಾದರೂ
ಅಷ್ಟು ಸುಲಭವಾಗಿ ಹೋಗದು. ಅಭ್ಯಾಸವನ್ನು ಎರಡನೆಯ ವ್ಯಕ್ತಿತ್ವವೆನ್ನುತ್ತಾರೆ. ಹೇಗೆಂದರೆ,
ಒಬ್ಬನು ಎಲ್ಲಾ ಕಲ್ಮಶಗಳಿಂದ ಮುಕ್ತನಾದರೂ ಸಹಾ ಅಭ್ಯಾಸದ ಆಚರಣೆಯು
ಇನ್ನೂ ಉಳಿದಿರುತ್ತದೆ. ಆದರೆ ಬುದ್ಧರು ಇದಕ್ಕೆ ಹೊರತಾಗಿರುತ್ತಾರೆ.
ಯಾವಾಗ ಪಿಲಿಂದವಚ್ಚನು ವಸಲ ಎಂದು ಭಿಕ್ಷುಗಳಿಗೂ ಕರೆದನೋ, ಅವರು ಭಗವಾನರಿಗೆ ಇದರ ಬಗ್ಗೆ ದೂರು ನೀಡಿದರು.
ಭಗವಾನರು ಪಿಲಿಂದವಚ್ಚನಿಗೆ ಕರೆದು ಹೀಗೆ ಕೇಳಿದರು: ಈ ಅಪಾದನೆಯು
ನಿಜವೇ ವಚ್ಚ?
ಹೌದು ಭಗವಾನ್, ಇದು ನಿಜವೇ ಆಗಿದೆ.
ಆಗ ಭಗವಾನರು ಆತನ ಬಗ್ಗೆ ಚಿತ್ತವನ್ನು ಹರಿಸಿದರು. ಆಗ ಅವರಿಗೆಲ್ಲಾ
ತಿಳಿದುಹೋಯಿತು. ಆಗ ಅವರು ಭಿಕ್ಷುಗಳಿಗೆ ಹೀಗೆ ಹೇಳಿದರು: ಭಿಕ್ಷುಗಳೇ, ವಚ್ಚನನ್ನು ತಪ್ಪಾಗಿ ಭಾವಿಸದಿರಿ, ವಚ್ಚನು ಹೀಗೆ ಹೇಳಲು ಲೋಭವಾಗಲಿ ಅಥವಾ ದ್ವೇಷವಾಗಲಿ ಅಥವಾ ಮೋಹವಾಗಲಿ ಕಾರಣವಲ್ಲ. ಇದು 500 ಜನ್ಮಗಳ ಅಭ್ಯಾಸ ಬಲದಿಂದಾಗಿದೆ. ಯಾರು ಕಲ್ಮಶಗಳಿಂದ ಮುಕ್ತನೋ
ಅಂತಹವನು ಕಟುವಾದ, ಅಪ್ರಿಯವಾದ ಬಯ್ಗುಳಗಳನ್ನು
ನುಡಿಯಲಾರನು, ಪರರಿಗೆ ಅಹಿತವನ್ನುಂಟುಮಾಡುವ
ನುಡಿಗಳು ಆಡಲಾರನು. ಅರಹಂತರು ಪರರಿಗೆ ನೋವುಂಟುಮಾಡಲಾರರು. ಇದು ಕೇವಲ ಅಭ್ಯಾಸದ ಯಾಂತ್ರಿಕ
ಕ್ರಿಯೆಯಾಗಿದೆ ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು.
* * *
ಒಮ್ಮೆ ಮೆಣಸಿನ ವ್ಯಾಪಾರಿಯೊಬ್ಬನು ಬಂಡಿಗಳಲ್ಲಿ ತಿಪ್ಪಿಲಿಗಳನ್ನು
(ಉದ್ದ ಮೆಣಸು) ತುಂಬಿಸುತ್ತಿದ್ದನು. ಆ ಬೆಳಿಗ್ಗೆ ಈ ಪಿಲಿಂದವಚ್ಚನು ಈ ಬುಟ್ಟಿಗಳಲ್ಲಿ ಏನಿದೆ?
ಎಂದು ಪ್ರಶ್ನಿಸಿದನು.
ಇದರಲ್ಲಿ ಇಲಿಗಳ ತ್ರಾಜ್ಯವಿದೆ ಎಂದನು.
ಹಾಗೇ ಆಗಲಿ ಎನ್ನುತ್ತಾ ಅರಹಂತರು ಮುಂದೆ ಸಾಗಿದನು.
ಆದರೆ ಬುಟ್ಟಿಯನ್ನು ತೆರೆದಾಗ ನಿಜಕ್ಕೂ ಮೆಣಸುಗಳೆಲ್ಲಾ ಇಲಿಯ
ತ್ರಾಜ್ಯ (ಹಿಕ್ಕೆ)ಗಳಾಗಿದ್ದವು. ಇದೆಲ್ಲಾ ದೇವತೆಗಳ ಕ್ರಿಯೆಯಾಗಿತ್ತು. ದೇವತೆಗಳಿಗೆ ಅರಹಂತರು
ಅತ್ಯಂತ ಪ್ರಿಯರಾಗಿರುತ್ತಾರೆ. ಆಗ ಆ ವ್ಯಾಪಾರಿಗೆ ಅಪಾರ ನೋವಾಯಿತು. ಆತನಿಗೆ ತನ್ನ ಸರಕು
ಹೀಗಾಗುವುದಕ್ಕೆ ಕಾರಣ ತಿಳಿಯಲಿಲ್ಲ. ಆಗ ಆತನ ಜ್ಞಾನಿ ಮಿತ್ರನೊಬ್ಬನು ಆತನ ನೆನಪು ಕೆದಕಿ
ನಿಜವಾದ ಕಾರಣ ಹುಡುಕಿಕೊಟ್ಟನು.
ಮಾರನೆಯ ದಿನ ಪುನಃ ಪಿಲಿಂದವಚ್ಚನು ಮತ್ತೆ ಕೇಳಿದನು: ವ್ಯಾಪಾರಿಯೇ ಈ
ಬುಟ್ಟಿಗಳಲ್ಲಿ ಏನಿದೆ? ತಿಪ್ಪಿಲಿಗಳಿವೆ (ಉದ್ದವಾದ
ಮೆಣಸು).
ಹಾಗೇ ಆಗಲಿ ಎನ್ನುತ್ತಾ ಮುಂದೆ ನಡೆದನು. ಆಶ್ಚರ್ಯ! ಆ ಇಲಿಗಳ
ಮಲಗಳೆಲ್ಲಾ ಪುನಃ ಮೆಣಸಾಗಿತ್ತು. ಮುಂದೆ ಪಿಲಿಂದವಚ್ಚರು ಮಹಾ ಅರಹಂತನೆಂದು ಘೋಷಿಸಲ್ಪಟ್ಟರು.
No comments:
Post a Comment