ಅಲ್ಪಾಹಾರಿ,
ಸದಾ ಧ್ಯಾನಿಯೇ ಬ್ರಾಹ್ಮಣ
ಹರಿದ ಬಟ್ಟೆಗಳಿಂದ
ಚೀವರ ಮಾಡಿ ಧರಿಸಿದಂತಹ,
ಕೃಶನಾಗಿರುವ, ನರಗಳು ಎದ್ದು ಕಾಣಿಸುವಂತಹ ಶರೀರದ,
ಏಕಾಂಗಿಯಾಗಿ
ವನದಲ್ಲಿ ಸದಾ ಧ್ಯಾನಿಸುವಂತಹವರನ್ನು
ನಾನು ಬ್ರಾಹ್ಮಣ
ಎನ್ನುತ್ತೇನೆ. (395)
ಗಾಥ ಪ್ರಸಂಗ 26.12
ಹಾರುವ ಅಸಮಾನ್ಯ ಶಕ್ತಿ
ಪಡೆದಿದ್ದ ಕಿಸಾಗೋತಮಿ
ಕಿಸಾಗೋತಮಿಯ ವಿಸ್ತಾರ ವಿವರಣೆಯು ಅಧ್ಯಾಯ-8ರಲ್ಲಿ 13ನೇ ಪ್ರಸಂಗದಲ್ಲಿ ಬರುವುದು
(ಗಾಥೆ 114).
ಒಂದು ರಾತ್ರಿ ಪ್ರಥಮ ಯಾಮದ ಅಂತ್ಯದ ಹೊತ್ತಿಗೆ (ರಾತ್ರಿ 10 ಗಂಟೆ) ಸಕ್ಕ ತನ್ನ ದೇವಗಣದೊಂದಿಗೆ ಭಗವಾನರ ಬಳಿಗೆ ಬಂದನು.
ಭಗವಾನರಿಗೆ ವಂದಿಸಿ, ಗೌರವದಿಂದ ಒಂದೆಡೆ ಕುಳಿತನು.
ನಂತರ ಧಮ್ಮೋಪದೇಶವನ್ನು ಆಲಿಸಿದನು. ಅದೇ ವೇಳೆಯಲ್ಲಿ ಕಿಸಾಗೋತಮಿಯು ಭಗವಾನರನ್ನು ನೋಡಲು
ಗಾಳಿಯಿಂದ ಹಾರುತ್ತಾ ಬಂದಳು. ಆದರೆ ಅಲ್ಲಿ ಸಕ್ಕ ಇತ್ಯಾದಿ ದೇವಗಣ ಇದ್ದುದನ್ನು ಕಂಡು ಆಕೆಯು
ಅಲ್ಲಿಂದಲೇ ಭಗವಾನರಿಗೆ ವಂದಿಸಿ, ಹಾಗೆಯೇ
ಹಿಂತಿರುಗಿದಳು. ಇದನ್ನು ಕಂಡು ಸಕ್ಕ ಭಗವಾನರಿಗೆ ಹೀಗೆ ಕೇಳಿದನು: ಭಗವಾನ್, ಯಾರದು? ಇಲ್ಲಿ ಬಂದು ಆಕಾಶ
ಮಾರ್ಗದಲ್ಲೇ ಹಾಗೆಯೇ ಹಿಂತಿರುಗಿದರು.
ಓಹ್ ದೇವೇಂದ್ರ, ಆಕೆ ನನ್ನ ಮಗಳು
ಕಿಸಾಗೋತಮಿ ಅರಹಂತಳು. ಚಿಂದಿ ವಸ್ತ್ರದಲ್ಲೇ ಸಂತೃಪ್ತಳಾಗಿರುವವರಲ್ಲಿ ಅಗ್ರಳು ಎಂದು ಹೇಳಿ ಈ
ಮೇಲಿನ ಗಾಥೆಯನ್ನು ನುಡಿದರು.
No comments:
Post a Comment