ಸರ್ವ ವಿಜಯಿಯೇ
ಬ್ರಾಹ್ಮಣ
ಭಯರಹಿತನು, ಉದಾತ್ತನು, ಪರಮವೀರನು,
ಮಹಷರ್ಿಯು, ಸರ್ವವಿಜಯಿಯು,
ಆಸೆರಹಿತನು (ದೋಷರಹಿತನು)
ಪರಿಶುದ್ಧನಾಗಿರುವವನು,
ಆರ್ಯಸತ್ಯಗಳನ್ನು ಅರಿತವನು
(ಬುದ್ಧ)
ಅಂತಹವನನ್ನು ನಾನು ಬ್ರಾಹ್ಮಣ
ಎನ್ನುತ್ತೇನೆ. (422)
ಗಾಥ ಪ್ರಸಂಗ 26.39
ಅಂಗುಲಿಮಾಲನ ನಿರ್ಭಯತೆ
(ಅಂಗುಲಿಮಾಲನ ಬಗ್ಗೆ ವಿಸ್ತ್ರತ ವಿವರಣೆ ಈಗಾಗಲೇ 13ನೇ ಅಧ್ಯಾಯದ 6ನೇಯ ಪ್ರಸಂಗದಲ್ಲಿ
ಬಂದಿದೆ (ಗಾಥಾ 173).
ಒಮ್ಮೆ ರಾಜ ಪಸೇನದಿಯು ಹಾಗು ರಾಣಿ ಮಲ್ಲಿಕಾಳು ಭಗವಾನರಿಗೆ ಹಾಗು
ಭಿಕ್ಷುಗಳಿಗೆ ಸರಿಸಾಟಿಯಿಲ್ಲದ ದಾನ ನೀಡಿದರು. (ಇದರ ಬಗ್ಗೆ ವಿವರಣೆಯು 13ನೇ ಅಧ್ಯಾಯದಲ್ಲಿ 10ನೇಯ ಪ್ರಸಂಗದಲ್ಲಿ
ಬಂದಿದೆ (ಗಾಥಾ 177).
ಆಗ ಪ್ರತಿ ಭಿಕ್ಷುವಿಗೂ ಆನೆಯು ಶ್ವೇತಛತ್ರಿಯನ್ನು ಹಿಡಿದು ನೆರಳನ್ನು
ನೀಡುತ್ತಿತ್ತು. ಆದರೆ ಆ ಆನೆಗಳಲ್ಲಿ ಒಂದು ತೀರ ಚಿಕ್ಕದಾಗಿತ್ತು. ಜೊತೆಗೆ ಆ ಆನೆಯು
ಪಳಗಿರಲಿಲ್ಲ. ಆ ಆನೆಯನ್ನು ಅಂಗುಲಿಮಾಲನಿಗೆ ಶ್ವೇತಛತ್ರಿಯನ್ನು ಹಿಡಿಯಲು ಮಾವುತರು
ನಿರ್ಧರಿಸಿದರು. ಪ್ರತಿಯೊಬ್ಬರೂ ಆ ಪಳಗಿಲ್ಲದ ಆನೆಯಿಂದ ತೊಂದರೆ ಬರಬಹುದೆಂದು
ನಿರೀಕ್ಷಿಸಿದ್ದರು. ಆದರೆ ಆ ಆನೆಯನ್ನು ಅಂಗುಲಿಮಾಲನ ಹತ್ತಿರ ತಂದೊಡನೆಯೇ ಆ ಆನೆಯೇ
ನಮ್ರವಾಯಿತು.
ನಂತರ ಈ ಘಟನೆ ಬಗ್ಗೆ ಅಂಗುಲಿಮಾಲನಿಗೆ ಭಿಕ್ಷುಗಳು ಆ ಆನೆಯನ್ನು ಕಂಡು
ಹೆದರಿದೆಯಾ? ಎಂದು ಕೇಳಿದಾಗ, ಅವನು ಇಲ್ಲವೆಂದನು. ಇದರ ಬಗ್ಗೆ ಭಗವಾನರಿಗೆ ಹೋಗಿ ತಿಳಿಸಿದಾಗ
ಭಗವಾನರು ಅಂಗುಲಿಮಾಲನನ್ನು ಅರಹಂತನೆಂದು ನುಡಿದು ಈ ಮೇಲಿನ ಗಾಥೆಯನ್ನು ಆತನ ಬಗ್ಗೆ ತಿಳಿಸಿದರು.
No comments:
Post a Comment