ಬಂಧನಮುಕ್ತನೇ
ಬ್ರಾಹ್ಮಣ
ಯಾರು ಈ ಲೋಕದಲ್ಲಿ
ದುಕ್ಖ ಕ್ಷಯವನ್ನೇ
ಸಾಕ್ಷಾತ್ಕರಿಸಿರುವನೋ,
ತನ್ನ ಹೊರೆಯನ್ನು ಕೆಳಗೆ
ಇರಿಸಿರುವನೋ
ಬಂಧನಮುಕ್ತನೋ, ಆತನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ. (402)
ಗಾಥ ಪ್ರಸಂಗ 26.19
ಗುಲಾಮನು ಭವದಿಂದಲೇ
ಮುಕ್ತನಾದನು
ಬ್ರಾಹ್ಮಣನ ಗುಲಾಮ ಯುವಕನೊಬ್ಬನು ತನ್ನ ಗುಲಾಮಗಿರಿಯಿಂದ ಮುಕ್ತನಾಗಲು
ಅಲ್ಲಿಂದ ತಪ್ಪಿಸಿಕೊಂಡು ಓಡಿಹೋದನು. ನಂತರ ಆತನು ಸಂಘ ಸೇರಿ ಪರಿಶ್ರಮಪಟ್ಟು ಅರಹಂತನಾದನು.
ಇತ್ತ ಬ್ರಾಹ್ಮಣನು ಆ ಯುವ ಗುಲಾಮನನ್ನು ಹುಡುಕುತ್ತಲೇ ಇದ್ದನು.
ಒಂದುದಿನ ಆ ಯುವಕನು ಭಗವಾನರೊಂದಿಗೆ ನಗರವನ್ನು ಪ್ರವೇಶಿಸುತ್ತಿದ್ದಾಗ, ತಕ್ಷಣ ಆತನನ್ನು ಕಂಡು ಗುರುತು ಹಿಡಿದು ಆ ಬ್ರಾಹ್ಮಣನು ಆ ಯುವ
ಭಿಕ್ಷುವಿನ ಚೀವರವನ್ನು ಹಿಡಿದನು. ಆಗ ಭಗವಾನರು ಆ ಬ್ರಾಹ್ಮಣನನ್ನು ಹೀಗೆ ಕೇಳಿದರು:
“ಬ್ರಾಹ್ಮಣನೇ, ಏನಿದರ ಅರ್ಥ?”
“ಭಗವಾನ್, ಈತನು ನನ್ನ ಗುಲಾಮ.”
“ಆತನು ಹೊರೆಯನ್ನು ಇಳಿಸಿಕೊಂಡುಬಿಟ್ಟಿದ್ದಾನೆ ಬ್ರಾಹ್ಮಣ.”
“ಹೊರೆಯನ್ನು ಇಳಿಸಿಕೊಂಡಿರುವವನೇ, ಅಂದರೆ ಈತನು ಅರಹಂತನೇ?”
“ಹೌದು ಬ್ರಾಹ್ಮಣ, ಆತನ ಹೊರೆಯು
ಆತನಿಂದ ಇಳಿಸಲ್ಪಟ್ಟಿದೆ “
ಎಂದು ಹೇಳಿ ಈ ಮೇಲಿನ
ಗಾಥೆಯನ್ನು ನುಡಿದರು.
No comments:
Post a Comment