ಬಂಧನ ಕತ್ತರಿಸಿದವನೆ ಬ್ರಾಹ್ಮಣ
ಯಾರು (ದ್ವೇಷವೆಂಬ) ಚರ್ಮದ
ಪಟ್ಟಿಯನ್ನು,
(ತೃಷ್ಣೆಯ) ಲಗಾಮನ್ನು ಮತ್ತು
(ಮಿಥ್ಯಾದೃಷ್ಟಿಗಳ) ಹಗ್ಗಗಳನ್ನು,
(ಸುಪ್ತ ಪ್ರವೃತ್ತಿಗಳ) ಲೋಹಗಳ
ಕಟ್ಟಿನ ಉಪಕರಣಗಳನ್ನು ಕತ್ತರಿಸಿ,
(ಅವಿದ್ಯೆಯ) ಅಡ್ಡಗೋಲನ್ನು
ಎಸೆದು, ಜ್ಞಾನೋದಯ
ಪಡೆದಿರುವನೋ (ಬುದ್ಧ)
ಆತನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.
ಅಂತಹವನಿಗೆ ನಾನು ಬ್ರಾಹ್ಮಣ ಎನ್ನುತ್ತೇನೆ. (398)
ಗಾಥ ಪ್ರಸಂಗ 26.15
ಎಳೆತದ ಸ್ಪಧರ್ೆ
ಶ್ರಾವಸ್ತಿಯ ಇಬ್ಬರು ಬ್ರಾಹ್ಮಣರಿಗೆ ಒಂದೊಂದು ಎತ್ತುಗಳಿದ್ದವು.
ಅವುಗಳ ಹೆಸರು ಚುಲ್ಲರೋಹಿತ, ಮತ್ತೊಂದರ ಹೆಸರು
ಮಹಾರೋಹಿತ. ಒಂದುದಿನ ಅವರಲ್ಲಿ ತಮ್ಮ ಎತ್ತಿಗೆ ಮಾತ್ರ ಅಸಾಧಾರಣ ಶಕ್ತಿಯಿದೆ ಎಂಬ ವಾದ
ಆರಂಭವಾಯಿತು. ನನ್ನ ಎತ್ತು ಮಾತ್ರ ಬಲಿಷ್ಠವಾಗಿದೆ. ಇದೇರೀತಿ ವಾದದಲ್ಲಿ ಮುಂದುವರೆದು ಕೊನೆಗೆ
ಇದನ್ನು ವಾದದಲ್ಲಿ ಇತ್ಯರ್ಥ ಮಾಡದೆ ನೇರವಾಗಿ ಪರೀಕ್ಷಿಸೋಣ ಎಂದು ಅವರಿಬ್ಬರೂ ಅಚಿರಾವತಿ ನದಿಯ
ದಂಡೆಯ ಬಳಿ ಹೋದರು. ಆಗ ಅಲ್ಲಿ ಕೆಲವು ಭಿಕ್ಷುಗಳು ಸ್ನಾನಕ್ಕಾಗಿ ಬಂದಿದ್ದರು. ಆಗ ಆ
ಬ್ರಾಹ್ಮಣರು ಇಡೀ ಬಂಡಿಯನ್ನು ಮಣ್ಣಿನಿಂದ ತುಂಬಿಸಿ, ಎತ್ತಿಗೆ ಕಟ್ಟಿದರು. ಆದರೆ ಎತ್ತುಗಳು ಎಷ್ಟು ಪ್ರಯತ್ನಪಟ್ಟರು ಬಂಡಿಗಳು ಚಲಿಸಲಿಲ್ಲ.
ಬದಲಾಗಿ ಅವುಗಳಿಗೆ ಕಟ್ಟಿದಂತಹ ಚರ್ಮದ ಪಟ್ಟಿಗಳು ಮುರಿದವು.
ಈ ವಿಷಯವನ್ನು ಭಿಕ್ಷುಗಳು ಚಚರ್ಿಸುತ್ತಿರುವಾಗ ಅಲ್ಲಿಗೆ ಬಂದಂತಹ
ಭಗವಾನರು ಹೀಗೆ ಹೇಳಿದರು: ಭಿಕ್ಷುಗಳೇ, ಬಾಹ್ಯದ ಬಂಧನಗಳಾದ
ಚರ್ಮದ ಪಟ್ಟಿಗಳು ಇತ್ಯಾದಿಗಳನ್ನು ಕತ್ತರಿಸಬಹುದು, ಆದರೆ ಆಂತರ್ಯದ ಚರ್ಮದ ಪಟ್ಟಿಗಳಾದ ಕೋಪ, ತೃಷ್ಣೆಗಳ
ಬಂಧನವನ್ನು ಭಿಕ್ಷು ಕತ್ತರಿಸಬೇಕಾಗಿದೆ ಎಂದು ಈ ಮೇಲಿನ ಗಾಥೆ ನುಡಿದರು.
No comments:
Post a Comment