Thursday, 8 October 2015

dhammapada/brahmanavagga/26.28/moggalana

ಅಮರತ್ವದ ಪ್ರಾಪ್ತಿ ಮಾಡಿರುವವನೇ ಬ್ರಾಹ್ಮಣ
ಯಾರಲ್ಲಿ ಅವಲಂಬನೆ ಕಾಣಲಾಗುವುದಿಲ್ಲವೋ,
ಪರಮಾರ್ಥದ ಪ್ರಜ್ಞೆಯಿಂದ ಸಂಶಯಗಳಿಂದ ಮುಕ್ತನೋ,
ಯಾರು ಅಮರತ್ವದ ಆಳಕ್ಕೆ ಮುಳುಗಿರುವನೋ
ಅಂತಹವನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.               (411)
ಗಾಥ ಪ್ರಸಂಗ 26.28
ಮೊಗ್ಗಲ್ಲಾನರವರನ್ನು ತಪ್ಪಾಗಿ ಭಾವಿಸಿದ ಭಿಕ್ಷುಗಳು

                ಒಮ್ಮೆ ಮೊಗ್ಗಲ್ಲಾನರು ವರ್ಷವಾಸಕ್ಕೆಂದು 600 ಭಿಕ್ಷುಗಳ ಸಹಿತ ವಿಹಾರವೊಂದರಲ್ಲಿ ನೆಲೆಸಿದರು. ಆಗ ಅವರನ್ನು ಗಮನಿಸಿದ ಉಪಾಸಕರು ಅವರಿಗೆ ಎಲ್ಲಾ ಪರಿಕರಗಳನ್ನು ಒದಗಿಸುವುದಾಗಿ ವಚನವಿತ್ತರು. ವಷರ್ಾವಾಸ ಕಳೆಯುತ್ತಿದ್ದರೂ ಎಲ್ಲಾ ಪರಿಕರಗಳು ಇನ್ನೂ ಬಂದಿರಲಿಲ್ಲ. ಹೀಗಾಗಿ ಅವರು ಬುದ್ಧರತ್ತ ಹೋಗುವಾಗ ಭಿಕ್ಷುಗಳಿಗೆ ಹೀಗೆ ಹೇಳಿದರು: ಉಪಾಸಕರು ಯುವ ಭಿಕ್ಷುಗಳಿಗೆ ಮತ್ತು ಸಾಮಣೇರರಿಗೆ ಪರಿಕರಗಳನ್ನು ನೀಡಿದರೆ ತೆಗೆದುಕೊಂಡು ಕಳುಹಿಸಿಕೊಡಿ, ಅವರು ನೀಡದಿದ್ದರೆ ನನಗೆ ಸಂದೇಶವನ್ನು ತಲುಪಿಸಿರಿ.
            ಆಗ ಭಿಕ್ಷುಗಳು ಇದರ ಬಗ್ಗೆ ಹೀಗೆ ಚಚರ್ಿಸಲಾರಂಭಿಸಿದರು: ಕೇಳಿದಿರಾ, ಮೊಗ್ಗಲ್ಲಾನರ ಮಾತನ್ನು, ಅವರಲ್ಲಿ ಇನ್ನೂ ಬಯಕೆಗಳಿವೆ, ಇಲ್ಲದಿದ್ದರೆ ಹಾಗೇಕೆ ಹೇಳುತ್ತಿದ್ದರು....

            ಆಗ ಅಲ್ಲಿಗೆ ಬಂದ ಭಗವಾನರು ಅವರು ಚಚರ್ಿಸುತ್ತಿದ್ದ ವಿಷಯವನ್ನು ಕೇಳಿದಾಗ, ಅವರು ಇಂತಹ ವಿಷಯವೆಂದು ತಿಳಿಸಿದಾಗ, ಭಗವಾನರು ಹೀಗೆ ನುಡಿದರು: ಭಿಕ್ಷುಗಳೇ, ನನ್ನ ಪುತ್ರನಾದ ಮೊಗ್ಗಲ್ಲಾನನು ಬಯಕೆಗಳನ್ನು ಹೊಂದಿಲ್ಲ, ಆತನು ಆ ರೀತಿಯ ಹೇಳುವಿಕೆಯ ಹಿಂದೆ ಇರುವ ಉದ್ದೇಶವೇನೆಂದರೆ ಜನರ ಪುಣ್ಯ ವ್ಯರ್ಥವಾಗದಿರಲಿ ಹಾಗೂ ಸಾಮಣೇರರಿಗೂ ಪರಿಕರ ಸಿಗಲಿ ಎಂದೇ ಆಗಿದೆ ಎಂದು ನುಡಿದು ಈ ಮೇಲಿನ ಗಾಥೆ ನುಡಿದರು.ತ್ತಾರೆ. ಆಗ ಭಗವಾನರು ಭಿಕ್ಷುಗಳಿಗೆ ಹಿಂದಿನಂತೆ ತಿದ್ದುತ್ತಾರೆ. ನಂತರ ಈ ಗಾಥೆಯನ್ನು ನುಡಿಯುತ್ತಾರೆ.

No comments:

Post a Comment